ಇರಾನ್‌ನ ರಕ್ಷಣಾ ಮಂಡಳಿಯ ಸಭೆಯನ್ನು ಗುರಿಯಾಗಿಸಿಕೊಂಡು ನಡೆದ ವಾಯುದಾಳಿಯಲ್ಲಿ ಇರಾನ್‌ನ ಸೇನಾ ಮುಖ್ಯಸ್ಥ ಮತ್ತು ರಕ್ಷಣಾ ಸಚಿವರು ಸಾವನ್ನಪ್ಪಿದ್ದಾರೆ ಎಂದು ಇರಾನ್ ರಾಜ್ಯ ಟಿವಿ ಭಾನುವಾರ ವರದಿ ಮಾಡಿದೆ.
ಇರಾನ್‌ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್‌ನ ಮುಖ್ಯಸ್ಥ ಮತ್ತು ಭದ್ರತಾ ಸಲಹೆಗಾರ ಅಲಿ ಶಮ್ಖಾನಿ ಅವರೊಂದಿಗೆ ಸಭೆ ನಡೆಸುತ್ತಿದ್ದ ಜನರಲ್ ಅಬ್ದುಲ್ ರಹೀಮ್ ಮೌಸವಿ ಮತ್ತು ರಕ್ಷಣಾ ಸಚಿವ ಜನರಲ್ ಅಜೀಜ್ ನಾಸಿರ್ಜಾದೆ ಹತರಾಗಿದ್ದಾರೆ ಎಂದು ಇರಾನ್ ಘೋಷಿಸಿದೆ.
ಇದನ್ನು ಓದಿದ್ದೀರಾ? ನಾಚಿಕೆಗೇಡು: ಇಸ್ರೇಲ್‌ಗೆ ಮೋದಿ ಭೇಟಿ ನೀಡಿದ ಎರಡು ದಿನದಲ್ಲೇ ಇರಾನ್ ಮೇಲೆ ದಾಳಿ; ಕಾಂಗ್ರೆಸ್ ಟೀಕೆ
ಇನ್ನು ಈಗಾಗಲೇ ದಾಳಿಯಲ್ಲಿ ಇರಾನ್‌ನ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ. ಖಮೇನಿಯವರ ಉನ್ನತ ಸಲಹೆಗಾರ ಅಲಿ ಶಮ್ಖಾನಿಯೂ ಹತರಾಗಿದ್ದಾರೆ ಎಂದು ಈ ಹಿಂದೆಯೇ ವರದಿಯಾಗಿದೆ.
ಇದಾಗುತ್ತಿದ್ದಂತೆ ಇರಾನ್‌ನ ಸೇನೆ ‘ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್’ ಅತ್ಯಂತ ಕಠಿಣ ಪ್ರತಿಜ್ಞೆ ಮಾಡಿದೆ. ‘ಖಮೇನಿ ಹಂತಕರನ್ನು ಶಿಕ್ಷಿಸುತ್ತೇವೆ’ ಎಂದು ಘೋಷಿಸಿದೆ.
ಈ ನಡುವೆ ಇರಾನ್ ಸತತವಾಗಿ ದಾಳಿಗಳನ್ನು ಮುಂದುವರಿಸಿದರೆ, ಟೆಹ್ರಾನ್ ಮೇಲೆ ‘ಇದುವರೆಗೆ ಎಂದೂ ಕಾಣದಂತಹ’ ಭೀಕರ ಶಕ್ತಿಯೊಂದಿಗೆ ದಾಳಿ ಮಾಡುತ್ತೇವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.





