ಗಾಜಾದ ನಿರಾಶ್ರಿತ ಕ್ರೈಸ್ತ, ಮುಸ್ಲಿಮರು ಆಶ್ರಯ ಪಡೆದಿದ್ದ ಚರ್ಚ್ ಮೇಲೆ ಇಸ್ರೇಲ್ ದಾಳಿ; ನೂರಾರು ಸಾವು ಶಂಕೆ

Date:

ಇಸ್ರೇಲ್‌ ವಾಯು ದಾಳಿಗೆ ಗಾಜಾದಲ್ಲಿ ಸುಮಾರು 500 ಪ್ಯಾಲಿಸ್ತೀನ್ ಕ್ರೈಸ್ತರು ಹಾಗೂ ಮುಸ್ಲಿಮರು ಆಶ್ರಯ ಪಡೆದಿದ್ದ ಆರ್ಥೊಡಾಕ್ಸ್‌ ಗ್ರೀಕ್‌ ಚರ್ಚ್‌ ನಾಶಗೊಂಡಿದೆ ಎಂದು ಹಮಾಸ್‌ ನಿಯಂತ್ರಿತ ಗಾಜಾದ ಆಂತರಿಕ ಸಚಿವಾಲಯ ಹೇಳಿದೆ.

ಈ ದಾಳಿಗೆ ಇಸ್ರೇಲ್‌ ಕಾರಣ ಎಂದು ಚರ್ಚ್‌ ಆಡಳಿತವೂ ಹೇಳಿದ್ದು, ದಾಳಿಯಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ. ಆದರೆ ಸಾವಿನ ಪ್ರಮಾಣ ನೂರಕ್ಕು ಹೆಚ್ಚಿದೆ ಎಂದು ವರದಿಗಳು ಹೇಳುತ್ತಿವೆ.

ಈ ಗ್ರೀಕ್‌ ಆರ್ಥೊಡಾಕ್ಸ್‌ ಸೈಂಟ್‌ ಪೊರ್ಫಿರಿಯಸ್‌ ಚರ್ಚ್‌ ಗಾಜಾದಲ್ಲಿನ ಅತ್ಯಂತ ಹಳೆಯ ಚರ್ಚ್‌ ಆಗಿದೆ. ಅಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರೂ ಆಶ್ರಯ ಪಡೆದಿರುವುದರಿಂದ ಚರ್ಚ್‌ಅನ್ನು ಗುರಿ ಮಾಡುವ ಸಾಧ್ಯತೆಯಿದೆ ಎಂದು ಅಲ್ಲಿನ ಧರ್ಮಗುರುಗಳು ಈ ಹಿಂದೆಯೇ ಆತಂಕ ವ್ಯಕ್ತಪಡಿಸಿದ್ದರು. ಈ ಚರ್ಚ್‌ ಮೇಲೆ ದಾಳಿ ನಡೆದರೆ ಅದು ಧರ್ಮದ ಮೇಲಿನ ದಾಳಿ ಮಾತ್ರವಲ್ಲದೆ ಮನುಕುಲದ ಮೇಲೆ ದಾಳಿ ನಡೆಸಿದಂತೆ ಎಂದು ಹೇಳಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಇಂಡಿಯಾಗೆ ಸಣ್ಣ ಶಾಕಿಂಗ್ ಸುದ್ದಿ: ನ್ಯೂಜಿಲೆಂಡ್ ಪಂದ್ಯಕ್ಕೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಇಲ್ಲ!

ಈ ಚರ್ಚ್‌ಗೆ ಸಂಬಂಧಿಸಿದ ಆರ್ಡರ್‌ ಆಫ್‌ ಸೈಂಟ್‌ ಜಾರ್ಜ್‌ ಹೇಳಿಕೆ ಬಿಡುಗಡೆಗೊಳಿಸಿ ದಾಳಿಯಿಂದ ಚರ್ಚ್‌ ನಾಶವಾಗಿದೆ ಎಂದು ದೃಢಪಡಿಸಿದೆ. ಆರ್ಚ್‌ ಬಿಷಪ್‌ ಅಲೆಕ್ಸಿಯೋಸ್‌ ಅವರನ್ನು ಪತ್ತೆಹಚ್ಚಲಾಗಿದ್ದು ಅವರು ಜೀವಂತವಾಗಿದ್ದಾರೆ. ಅವರು ಗಾಯಗೊಂಡಿದ್ದಾರೆಯೆ ಎಂದು ತಿಳಿದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಲ್ಲಿದ್ದ 500ಕ್ಕೂ ಹೆಚ್ಚು ಮಂದಿಯ ಬಗ್ಗೆ ಏನೂ ತಿಳಿದಿಲ್ಲ ಎಂದು ಅದು ಹೇಳಿದೆ. ಮಕ್ಕಳು, ಶಿಶುಗಳು ಸಹಿತ ನಿರಾಶ್ರಿತರು ಮಲಗಿದ್ದ ಸಂದರ್ಭ ಚರ್ಚಿನ ಎರಡು ಗೋಡೆಗಳಿಗೆ ಬಾಂಬ್‌ ಬಿದ್ದಿದೆ. ಸುಮಾರು 150-200 ಜನರು ಸಾವಿಗೀಡಾಗಿರುವ ಸಾಧ್ಯತೆಯಿದೆ ಎಂದು ಆರ್ಡರ್‌ ಆಫ್‌ ಸೈಂಟ್‌ ಜಾರ್ಜ್‌ ಹೇಳಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...