ಗಾಝಾದ ನೆರವಿಗೆ ಹೊರಟಿದ್ದ ‘ಸುಮುದ್ ಫ್ಲೋಟಿಲ್ಲಾ’ಗೆ ಇಸ್ರೇಲ್ ತಡೆ; ಹಲವು ಹೋರಾಟಗಾರರ ಬಂಧನ

Date:

ಕಳೆದ ಮೂರು ವರ್ಷಗಳಿಂದ ಇಸ್ರೇಲ್‌ನ ಕ್ರೌರ್ಯಕ್ಕೆ ತುತ್ತಾಗಿರುವ ಗಾಝಾಗೆ ಮಾನವೀಯ ನೆರವು ಹೊತ್ತು ಹೊರಟಿದ್ದ ‘ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ’ ತಂಡವನ್ನು ಇಸ್ರೇಲ್ ತಡೆದಿದೆ. ತಂಡದಲ್ಲಿದ್ದ ಗ್ರೇಟಾ ಥನ್‌ಬರ್ಗ್ ಸೇರಿದಂತೆ ಹಲವು ಹೋರಾಟಗಾರರನ್ನು ಬಂಧಿಸಿದೆ ಎಂದು ‘ಅಲ್‌-ಜಝೀರಾ’ ವರದಿ ಮಾಡಿದೆ.

ಆರಂಭದಲ್ಲಿ ಗಾಝಾ ಕರಾವಳಿಯಿಂದ ಸುಮಾರು 75 ನಾಟಿಕಲ್ ಮೈಲಿ ದೂರದಲ್ಲಿ ಸುಮುದ್ ಫ್ಲೋಟಿಲ್ಲಾ ತಂಡದ ಎರಡು ಹಡಗುಗಳನ್ನು ಇಸ್ರೇಲ್‌ ವಶಕ್ಕೆ ಪಡೆದಿತ್ತು. ಬಳಿಕ ಆಶ್ಡೋದ್ ಬಂದರಿನಲ್ಲಿ ಗ್ರೇಟಾ ಅವರನ್ನು ಬಂಧಿಸಿದೆ. ಈ ವೇಳೆ ಅವರು ಫ್ಲೋಟಿಲ್ಲಾದ ಅಲ್ಮಾ ಹಡಗಿನಲ್ಲಿದ್ದರು. ಇತ್ತೀಚಿನ ಮಾಹಿತಿ ಪ್ರಕಾರ, ಸಿರಸ್, ಅಲ್ಮಾ, ಸ್ಪೆಕ್ಟ್ರಾ, ಹೋಗಾ, ಅದಾರ ಮತ್ತು ಡೀರ್ ಯಾಸಿನ್ ಸೇರಿದಂತೆ ಫ್ಲೋಟಿಲ್ಲಾದ 6 ಹಡಗುಗಳನ್ನು ಇಸ್ರೇಲ್ ವಶಕ್ಕೆ ಪಡೆದಿದೆ.

ಗ್ರೇಟಾ ಥನ್‌ಬರ್ಗ್ ಬಂಧನದ ವಿಡಿಯೋವನ್ನು ಇಸ್ರೇಲ್ ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದೆ. “ಈಗಾಗಲೇ ಹಮಾಸ್-ಸುಮುದ್ ಫ್ಲೋಟಿಲ್ಲಾದ ಹಲವಾರು ಹಡಗುಗಳನ್ನು ಸುರಕ್ಷಿತವಾಗಿ ತಡೆಯಲಾಗಿದೆ ಮತ್ತು ಅವುಗಳಲ್ಲಿದ್ದ ಪ್ರಯಾಣಿಕರನ್ನು ಇಸ್ರೇಲಿ ಬಂದರಿಗೆ ಸ್ಥಳಾಂತರಿಸಲಾಗುತ್ತಿದೆ. ಗ್ರೇಟಾ ಮತ್ತು ಆಕೆಯ ಸ್ನೇಹಿತರು ಸುರಕ್ಷಿತ ಮತ್ತು ಆರೋಗ್ಯವಾಗಿದ್ದಾರೆ” ಎಂದು ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಶ್ವಸಂಸ್ಥೆಯ ವಿಶೇಷ ವರದಿಗಾರ ಫ್ರಾನ್ಸೆಸ್ಕಾ ಅಲ್ಬನೀಸ್ ಮತ್ತು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರು ಫ್ಲೋಟಿಲ್ಲಾಗೆ ಹಾನಿ ಮಾಡದೆ, ಅವುಗಳು ಗಾಝಾಗೆ ನೆರವು ತಲುಪಿಸಲು ಅನುವು ಮಾಡಿಕೊಡಬೇಕು ಎಂದು ಬುಧವಾರ ಆಗ್ರಹಿಸಿದ್ದರು.

ಇಸ್ರೇಲ್ ದಾಳಿ ಮಾಡುವ ಮುನ್ಸೂಚನೆ ಸಿಕ್ಕಿದ ಹಿನ್ನೆಲೆ, ಗಾಝಾ ಸಮೀಪಿಸುತ್ತಿದ್ದಂತೆ ಸುಮುದ್ ಫ್ಲೋಟಿಲ್ಲಾ ತಂಡ ತಮ್ಮ ಪ್ರಯಾಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರದಿಂದ ನೇರ ಪ್ರಸಾರ ಮಾಡಿತ್ತು.

ಫ್ಲೋಟಿಲ್ಲಾ ತಂಡವನ್ನು ತಡೆಯುವುದಾಗಿ ಇಸ್ರೇಲ್ ಈಗಾಗಲೇ ಹೇಳಿತ್ತು. ಆದರೆ, ಫ್ಲೋಟಿಲ್ಲಾ ತಂಡ ಇಸ್ರೇಲ್ ದಿಗ್ಬಂಧನ ಮುರಿದು ಗಾಝಾಗೆ ನೆರವು ತಲುಪಿಸುವ ಶಪಥ ಮಾಡಿತ್ತು.

‘ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ ಎನ್ನುವುದು ಇಸ್ರೇಲ್‌ ಗಾಝಾ ಮೇಲೆ ವಿಧಿಸಿರುವ ದಿಗ್ಭಂಧನವನ್ನು ಭೇದಿಸುವ ಗುರಿಯನ್ನು ಹೊಂದಿರುವ ಒಂದು ಪ್ರಮುಖ ಅಂತಾರಾಷ್ಟ್ರೀಯ ಮಿಷನ್ ಆಗಿದೆ. ಈ ಫ್ಲೋಟಿಲ್ಲಾದಲ್ಲಿ 45 ರಿಂದ 50 ಹಡಗುಗಳು ಇದ್ದು, ಇವು ಮಾನವೀಯ ನೆರವುಗಳಾದ ಆಹಾರ, ಔಷಧ ಮತ್ತು ಇತರ ಅಗತ್ಯ ವಸ್ತುಗಳನ್ನು ಒಯ್ಯುತ್ತಿವೆ. ಜೊತೆಗೆ, ವಿಶ್ವದ ವಿವಿಧ ಭಾಗಗಳ ನೂರಾರು ಪ್ರತಿನಿಧಿಗಳು ಈ ಮಿಷನ್‌ನ ಭಾಗವಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...