ಇಸ್ರೇಲ್‌- ಇರಾನ್‌ ಸಂಘರ್ಷ | ಅಮೆರಿಕ ಅಧಿಕೃತ ಪ್ರವೇಶ? ಅಲಿ ಖಮೇನಿಗೆ ಶರಣಾಗಲು ಟ್ರಂಪ್‌ ಎಚ್ಚರಿಕೆ

Date:

ಇಸ್ರೇಲ್‌- ಇರಾನ್‌ ನಡುವಿನ ಸಂಘರ್ಷಕ್ಕೆ ಅಮೆರಿಕ ಅಧಿಕೃತ ಪ್ರವೇಶ ಪಡೆದಂತೆ ಕಾಣುತ್ತಿದೆ. ಜಿ7 ದೇಶಗಳ ಶೃಂಗಸಭೆ ವೇಳೆ ಅರ್ಧಕ್ಕೆ ಹೊರ ಬಂದಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‌ ಮಾಡಿ, ಅಲಿ ಖಮೇನಿಗೆ ಶರಣಾಗುವಂತೆ ಸೂಚಿಸಿದ್ದಾರೆ.

ಇರಾನ್‌ನ ಸುಪ್ರೀಂ ಲೀಡರ್ ಎಂದು ಕರೆಯಲ್ಪಡುವ ಅಲಿ ಖಮೇನಿ ವ್ಯಕ್ತಿ ಎಲ್ಲಿ ಅಡಗಿದ್ದಾನೆ ಎನ್ನುವುದು ನಮಗೆ ನಿಖರವಾಗಿ ತಿಳಿದಿದೆ. ಆದರೆ, ಆತನನ್ನು ನಾವು ಹತ್ಯೆ ಮಾಡುವುದಿಲ್ಲ. ನಾಗರಿಕರು ಅಥವಾ ಅಮೇರಿಕನ್ ಸೈನಿಕರ ಮೇಲೆ ಕ್ಷಿಪಣಿಗಳು ಹಾರಿಸುವುದನ್ನು ನಾವು ಬಯಸುವುದಿಲ್ಲ. ನಮ್ಮ ಸಹನೆಯನ್ನು ಪರೀಕ್ಷೆ ಮಾಡುವುದು ಬೇಡ. ಬದಲಾಗಿ ಅಲಿ ಖಮೇನಿ ಶರಣಾಗಬೇಕು” ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

“ಇರಾನ್‌ ಶರಣಾಗತಿ ಘೋಷಿಸಿ ಪರಮಾಣು ಒಪ್ಪಂದ ಮಾತುಕತೆಗೆ ಮುಂದಾಗಬೇಕು ಎಂಬುದು ನಮ್ಮ ಬಯಕೆ. ಈ ಗುರಿಯನ್ನು ಸಾಧಿಸಲು ನಾವು ಜಂಟಿ ಪ್ರಯತ್ನಗಳನ್ನು ಮುಂದುವರೆಸುತ್ತೇವೆ. ಇರಾನ್‌ ಇಷ್ಟೊತ್ತಿಗೆ ಪರಮಾಣು ಒಪ್ಪಂದ ಮಾತುಕತೆಗೆ ಸಿದ್ಧವಾಗಬೇಕಿತ್ತು. ನಾನು ಹಲವಾರು ಬಾರಿ ಈ ಕುರಿತು ಇರಾನ್‌ ಉನ್ನತ ರಾಜಕೀಯ ನಾಯಕತ್ವಕ್ಕೆ ಮನವಿ ಮಾಡಿದ್ದೇನೆ. ಆದರೆ, ಆಗೆಲ್ಲಾ ಏರು ಧ್ವನಿಯಲ್ಲಿ ಗುಡುಗುತ್ತಿದ್ದ ಇರಾನ್‌ ನಾಯಕರು, ಈಗ ಆತ್ಮರಕ್ಷಣೆಗಾಗಿ ಬಂಕರ್‌ನಲ್ಲಿ ಅಡಗಿ ಕುಳಿತಿದ್ದಾರೆ. ನಮ್ಮ ತಾಳ್ಮೆ ಕ್ಷೀಣಿಸುತ್ತಿದೆ” ಎಂದು ಎಚ್ಚರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಇರಾನ್-ಇಸ್ರೇಲ್‌ ಸಂಘರ್ಷ | ಈವರೆಗೂ 224 ಮಂದಿ ಮೃತ, 1,277ಕ್ಕೂ ಹೆಚ್ಚು ಜನರಿಗೆ ಗಾಯ

ಇರಾನ್‌ ರಾಜಧಾನಿ ಟೆಹರಾನ್‌ ತೊರೆಯುವಂತೆ ಅಲ್ಲಿನ ನಿವಾಸಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕರೆ ನೀಡಿದ ಬಳಿಕ ಇರಾನ್ ಮೇಲೆ ಇಸ್ರೇಲ್​ ದಾಳಿ ತೀವ್ರಗೊಂಡಿದೆ. ಟೆಹ್ರಾನ್ ನಿವಾಸಿಗಳು ಗುಂಪು ಗುಂಪಾಗಿ ಮನೆಗಳನ್ನು ತೊರೆದಿದ್ದಾರೆ.

ಸತತ 5 ದಿನಗಳಿಂದ ನಡೆಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಇರಾನ್‌ ನ ಪರಮಾಣು ಯೋಜನೆಗಳ ವಿವಿಧ ಘಟಕಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ಆದರೆ, ಫೋರ್ಡೋ ಯುರೇನಿಯಂ ಸಂವರ್ಧನ ಘಟಕದ ಮೇಲೆ ಮಾತ್ರ ದಾಳಿ ನಡೆಸಲು ಇಸ್ರೇಲ್‌ಗೆ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಫೋರ್ಡೋ ಘಟಕವು ಭೂಮಿಯ ಆಳದಲ್ಲಿದೆ (ಸುಮಾರು 300 ಅಡಿ). ಅದನ್ನು ನಾಶ ಮಾಡಲು ಇಸ್ರೇಲ್‌ಗೆ ಬರೋಬ್ಬರಿ 14 ಸಾವಿರ ಕೆ.ಜಿ. ಜಿಬಿಯು-57 ಬೃಹತ್ ಆರ್ಡನನ್ಸ್ ಪೆನೆಟ್ರೇಟರ್‌ನ ಅಗತ್ಯವಿದೆ.

ಭೂಮಿಯನ್ನು ಸೀಳಿ ಆಳದಲ್ಲಿರುವ ಗುರಿಯನ್ನು ತಲುಪಬಲ್ಲಂಥ ಬಾಂಬ್ ಅಥವಾ ಕ್ಷಿಪಣಿಯ ಭಾಗವನ್ನು ಆರ್ಡನನ್ಸ್ ಪೆನೆಟ್ರೇಟರ್ ಎನ್ನುತ್ತಾರೆ. ಎಂತಹ ಸುರಕ್ಷಿತ ಜಾಗದಲ್ಲಿದ್ದರೂ ಅದನ್ನು ತಲುಪಿ ಗುರಿಯನ್ನು ಧ್ವಂಸಗೊಳಿಸುವ ಸಾಮರ್ಥ್ಯ ಇದಕ್ಕಿರುತ್ತದೆ. ಇದು ಉಕ್ಕು-ಮಿಶ್ರಲೋಹದ ಕವಚವನ್ನು ಹೊಂದಿರುತ್ತದೆ. ಈ ಪೆನೆಟ್ರೇಟರ್ ಅನ್ನು ಬಿ-2 ಸ್ಟೆಲ್ತ್ ಬಾಂಬರ್ ಮೂಲಕ ರವಾನಿಸಲಾಗುತ್ತದೆ. ಯಾವುದೇ ರೇಡಾರ್ ಅಥವಾ ಇತರ ಸೆನ್ಸರ್‌ಗಳ ಕಣ್ಣು ತಪ್ಪಿಸಿ ಸಾಗುವ ಸಾಮರ್ಥ್ಯ ಈ ನ್ವೆಲ್ತ್ ಬಾಂಬರ್‌ಗಿದೆ. ಈ ಬಾಂಬ್ ಅಮೆರಿಕದ ಬಳಿ ಮಾತ್ರವೇ ಇದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...