ಟ್ರಂಪ್‌ಗಿಲ್ಲ ನೊಬೆಲ್ ಶಾಂತಿ ಪ್ರಶಸ್ತಿ; ವೆನೆಜುವೆಲಾದ ಹೋರಾಟಗಾರ್ತಿ ಮಾರಿಯಾ ಮಚಾಡೊಗೆ ಸಂದ ಗೌರವ

Date:

ವೆನೆಜುವೆಲಾದ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊ ಅವರಿಗೆ 2025 ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ. ಮಾರಿಯಾ ಕೊರಿನಾ ಮಚಾಡೊ ಅವರು ತನ್ನ ದೇಶದಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳ ಪರ ಹೋರಾಟ ನಡೆಸಿದಕ್ಕೆ ಈ ಗೌರವ ಸಂದಿದೆ.

ಮಾರಿಯಾ 1967ರ ಅಕ್ಟೋಬರ್ 7ರಂದು ವೆನೆಜುವೆಲಾದ ಕ್ಯಾರಕಾಸ್‌ನಲ್ಲಿ ಜನಿಸಿದರು. ಅವರ ತಂದೆ ಹೆನ್ರಿಕ್ ಮಚಾಡೊ ಉಕ್ಕಿನ ವ್ಯಾಪಾರಿ, ತಾಯಿ ಕೊರಿನಾ ಪ್ಯಾರಿಸ್ಕಾ ಮನೋವಿಜ್ಞಾನಿ. ಅಮೆರಿಕಾದ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದಿಂದ ಕೈಗಾರಿಕಾ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಅವರು, ರಾಜಕೀಯದಲ್ಲಿ ತಮ್ಮ ವೃತ್ತಿಯನ್ನು ತೊಡಗಿಸಿಕೊಂಡರು.

2002ರಲ್ಲಿ ಮಾರಿಯಾ ‘ಸೂಮ್ಯಾಟೆ’ ಎಂಬ ಸಂಸ್ಥೆ ಸ್ಥಾಪಿಸಿ, ಚುನಾವಣೆಯಲ್ಲಿನ ವಂಚನೆಯನ್ನು ಬಯಲಿಗೆಳೆದರು. 2011-2014ರವರೆಗೆ ವೆನೆಜುವೆಲಾದ ರಾಷ್ಟ್ರೀಯ ಸಭೆಯ ಸದಸ್ಯರಾಗಿ, ಚಾವೆಜ್ ಮತ್ತು ಮಾಡುರೊ ಸರ್ಕಾರದ ವಿರುದ್ಧ ಧ್ವನಿಯಿತ್ತಿದರು. ವೆನೆಜುವೆಲಾದಲ್ಲಿ 1999ರಿಂದ ಆರ್ಥಿಕ ಕುಸಿತ, ಆಹಾರ-ಔಷಧ ಕೊರತೆ, ದಮನ ಜನರನ್ನು ಕಾಡಿತು. 70 ಲಕ್ಷಕ್ಕೂ ಹೆಚ್ಚು ಜನ ದೇಶ ಬಿಟ್ಟರು. ಇಂತಹ ಸಂಕಷ್ಟದಲ್ಲಿ ಮಾರಿಯಾ ಜನತಂತ್ರಕ್ಕಾಗಿ ಹೋರಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಂವಿಧಾನ ಬದಲಿಸುವ ಸನಾತನಿಗಳ ಹುನ್ನಾರಕ್ಕೆ ವಕೀಲರೇ ದಾಳ

ಮಾರಿಯಾ ಕೊರಿನಾ ಮಚಾಡೊ ಅವರು 2023ರಲ್ಲಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಗೆದ್ದರೂ, ಮಾಡುರೊ ಸರ್ಕಾರ ಅವರನ್ನು ಚುನಾವಣೆಯಿಂದ ತಡೆಯಿತು. 2024ರ ಚುನಾವಣೆಯಲ್ಲಿ ವಿರೋಧ ಪಕ್ಷ ಶೇ. 67 ರಷ್ಟು ಮತ ಪಡೆದರೂ, ಮಾಡುರೊ ಫಲಿತಾಂಶವನ್ನು ಒಪ್ಪಲಿಲ್ಲ. ಮಾರಿಯಾ, ಜೀವ ಭಯದ ನಡುವೆಯೂ ಜನರನ್ನು ಒಗ್ಗೂಡಿಸಿ, ಚುನಾವಣಾ ದಾಖಲೆಗಳನ್ನು ಕಾಪಾಡಿದರು. ಈಗಲೂ ಅವರು ವಿಪಕ್ಷ ನಾಯಕಿಯಾಗಿದ್ದಾರೆ.

ಮಾರಿಯಾ ಕೊರಿನಾ ಮಚಾಡೊ ಅವರು 2024ರಲ್ಲಿ ಐರೋಪ್ಯ ಸಂಸತ್‌ನಿಂದ ಸಾಖಾರೊವ್ ಪ್ರಶಸ್ತಿ, 2018ರಲ್ಲಿ ಬಿಬಿಸಿಯ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ, 2025ರಲ್ಲಿ ಟೈಮ್‌ನ 100 ಪ್ರಭಾವಿ ವ್ಯಕ್ತಿಗಳ ಪಟ್ಟಿ ಮತ್ತು ಜಾರ್ಜಿಯಾ ಟೆಕ್‌ನಿಂದ ಸಾಮಾಜಿಕ ಸಾಹಸ ಪ್ರಶಸ್ತಿ ಲಭಿಸಿದವು.

ನೊಬೆಲ್ ಸಮಿತಿಯ ಅಧ್ಯಕ್ಷ ಜೊರ್ಗೆನ್ ವಾಟ್‌ಹೊಲ್ಟ್, “ಮಾರಿಯಾ ಅವರ ಧೈರ್ಯದ ಹೋರಾಟ ಜನತಂತ್ರದ ಆಶಯಗಳ ಕಿರಣ” ಎಂದು ಹೇಳಿದ್ದಾರೆ. ಡಿಸೆಂಬರ್ 10ರಂದು ಓಸ್ಲೋದಲ್ಲಿ 10 ಲಕ್ಷ ಡಾಲರ್‌ನೊಂದಿಗೆ ಶಾಂತಿ ಪ್ರಶಸ್ತಿಯನ್ನು ನೀಡಲಾಗುವುದು.

ಮಾರಿಯಾ ಅವರ ಹೋರಾಟ ಜಗತ್ತಿನ ಜನತಂತ್ರ ಚಳವಳಿಗಳಿಗೆ ಮಾದರಿ. ಭಾರತದಲ್ಲಿ ಅವರನ್ನು ಮಹಾತ್ಮ ಗಾಂಧೀಜಿಯಂತೆ ಕಾಣಲಾಗುತ್ತದೆ. ಈ ಪ್ರಶಸ್ತಿ ವೆನೆಜುವೆಲಾದ ಜನರಿಗೆ ಹೊಸ ಆಶಯವನ್ನು, ಜಗತ್ತಿಗೆ ಜನತಂತ್ರದ ಸಂದೇಶವನ್ನು ನೀಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್‌ ಮೇಲೆ ಇರಾನ್ ದಾಳಿ; 50ಕ್ಕೂ ಹೆಚ್ಚು ಸಾವು, ಇಂಟರ್‌ಸೆಪ್ಟರ್ ನಾಶ

ಇಸ್ರೇಲ್‌ನ ಪರಮಾಣು ಚಟುವಟಿಕೆಗಳ ಪ್ರಮುಖ ಕೇಂದ್ರವೆಂದೇ ಗುರುತಿಸಲ್ಪಟ್ಟಿರುವ ದಕ್ಷಿಣದ ಡಿಮೋನಾ ನಗರದ...

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...