ಇಂಗ್ಲೆಂಡ್ ಸಂಸದೀಯ ಚುನಾವಣೆ: ರಿಶಿ ಸುನಕ್ ಪಕ್ಷಕ್ಕೆ ಭಾರಿ ಸೋಲು, ಕೀರ್ ಸ್ಟಾರ್ಮರ್ ನೂತನ ಪ್ರಧಾನಿ!

Date:

ಇಂಗ್ಲೆಂಡ್‌ ಸಂಸದೀಯ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಪ್ರಧಾನಿ ರಿಶಿ ಸುನಕ್ ಅವರ ಆಡಳಿತರೂಢ ಕನ್ಸ್‌ರ್‌ವೇಟೀವ್‌ ಪಕ್ಷ ಭಾರಿ ಸೋಲಿನತ್ತ ಸಾಗುತ್ತಿದೆ. ಈಗಾಗಲೇ ಬಹುಮತದ ಸಂಖ್ಯೆಗೂ ಮೀರಿ 346 ಸ್ಥಾನಗಳನ್ನು ಗೆದ್ದಿರುವ ಕೀರ್‌ ಸ್ಟಾರ್ಮರ್‌ ನೇತೃತ್ವದ ಲೇಬರ್‌ ಪಕ್ಷ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಕೀರ್‌ ಸ್ಟಾರ್ಮರ್‌ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ.

14 ವರ್ಷಗಳಲ್ಲಿಯೇ ಮೊದಲ ಬಾರಿಗೆ ರಿಶಿ ಸುನಕ್‌ ಅವರ ಕನ್ಸರ್ವ್‌ವೇಟಿವ್‌ ಪಕ್ಷ ಭಾರಿ ಸೋಲಿನ ಆಘಾತ ಅನುಭವಿಸಿದೆ. ಇತ್ತೀಚಿನ ಫಲಿತಾಂಶಗಳಂತೆ ಒಟ್ಟು 650 ಸ್ಥಾನಗಳಲ್ಲಿ ಲೇಬರ್‌ ಪಕ್ಷ 346, ಕನ್ಸ್‌ರ್‌ವೇಟೀವ್‌ ಪಕ್ಷ 76, ಲಿಬರಲ್‌ ಡೆಮಾಕ್ರಾಟಿಕ್ಸ್ 21 ಹಾಗೂ ಇತರೆ ಪಕ್ಷಗಳು 10 ಸ್ಥಾನಗಳಲ್ಲಿ ಜಯಗಳಿಸಿವೆ.

ತಮ್ಮ ಪಕ್ಷದ ಸೋಲನ್ನು ಒಪ್ಪಿಕೊಂಡಿರುವ ಇಂಗ್ಲೆಂಡ್‌ ಪ್ರಧಾನಿ ರಿಶಿ ಸುನಕ್‌, ಸಾರ್ವರ್ತಿಕ ಚುನಾವಣೆಗಳಲ್ಲಿ ಲೇಬರ್‌ ಪಕ್ಷ ಗೆಲುವು ಸಾಧಿಸಿದೆ. ಗೆಲುವು ಸಾಧಿಸಿರುವ ಕೀರ್‌ ಸ್ಟಾರ್ಮರ್‌ ನೇತೃತ್ವದ ಪಕ್ಷಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲ ಕಡೆ ಸದುದ್ದೇಶದೊಂದಿಗೆ ಇಂದು ಅಧಿಕಾರವು ಶಾಂತಿಯುತವಾಗಿ ಹಾಗೂ ಕ್ರಮಬದ್ಧವಾಗಿ ಬದಲಾವಣೆಯಾಗಲಿದೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಮೆಕ್ಕಾದಲ್ಲಿ ಮೃತಪಟ್ಟ 1300 ಹಜ್ ಯಾತ್ರಿಗಳಲ್ಲಿ ಶೇ.83 ಮಂದಿಗೆ ಅಧಿಕೃತ ಅನುಮತಿಯಿರಲಿಲ್ಲ

“ನಮ್ಮ ದೇಶದ ಭದ್ರತೆ ಹಾಗೂ ಭವಿಷ್ಯಕ್ಕೆ ನಮಗೆ ಎಲ್ಲ ರೀತಿಯ ವಿಶ್ವಾಸವನ್ನು ಒದಗಿಸುವ ಅಗತ್ಯ ಒದಗಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ನನ್ನನ್ನು ಕ್ಷಮಿಸಿ, ಸೋಲಿನ ಹೊಣೆಯನ್ನು ನಾನೆ ಹೊರುತ್ತೇನೆ” ಎಂದು ರಿಶಿ ಸುನಕ್‌ ಹೇಳಿದ್ದಾರೆ.

ಲೇಬರ್‌ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಮುಂಚೂಣಿ ನಾಯಕ ಕೀರ್‌ ಸ್ಟಾರ್ಮರ್‌, ದೇಶ ಮೊದಲು ಪಕ್ಷ ನಂತರ ಇಂಗ್ಲೆಂಡ್‌ ಮತ್ತೆ ತನ್ನ ಭವಿಷ್ಯಕ್ಕೆ ಮರಳಲಿದೆ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್‌ ಚುನಾವಣೆಗಳು ಮುಗಿದ ನಂತರ ಚುನಾವಣೋತ್ತರ ಸಮೀಕ್ಷೆ ಕೂಡ ಲೇಬರ್‌ ಪಕ್ಷ 410 ಸ್ಥಾನ ಹಾಗೂ ಕನ್ಸರ್ವ್‌ವೇಟಿವ್‌ ಪಕ್ಷ 131 ಸ್ಥಾನಗಳಲ್ಲಿ ಗೆಲುವುಗಳಿಸುತ್ತದೆ ಎಂದು ಭವಿಷ್ಯ ನುಡಿದಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...