ವಿಸ್ಮಯ | 2ನೇ ಮಹಡಿಯಿಂದ ಬಿದ್ದ ಮಹಿಳೆಯ ಜೀವ ಉಳಿಸಿತ್ತು ಈ ಪುಟ್ಟ ಹಕ್ಕಿ!

Date:

ಕೆಲವೊಮ್ಮೆ ಸಣ್ಣ ಸಹಾಯವೂ ದೊಡ್ಡ ವಿಸ್ಮಯವಾಗಿಬಿಡುತ್ತವೆ. ಅಂಥದ್ದೇ ವಿಸ್ಮಯಕಾರಿ ಘಟನೆಯಲ್ಲಿ ಮಹಿಳೆಯೊಬ್ಬರನ್ನು ಪುಟ್ಟ ಪಕ್ಷಿ ರಕ್ಷಿಸಿತ್ತು. ಆಕೆಯ ಜೀವ ಉಳಿಸಿತ್ತು ಎಂದರೆ ನಂಬಲು ಸಾಧ್ಯವಾಗದೇ ಇರಬಹುದು. ಆದರೂ, ಇದು ಸತ್ಯ.

ಪುಟ್ಟ ಪಕ್ಷಿ 68 ವರ್ಷದ ಮಹಿಳೆಯ ಜೀವ ಉಳಿಸಿದ ಘಟನೆ ನಡೆದದ್ದು ಆಸ್ಟ್ರೇಲಿಯಾದಲ್ಲಿ, 2020ರಲ್ಲಿ. ಆಸ್ಟ್ರೇಲಿಯಾದ ಎಸ್ಪರೆನ್ಸ್‌ನ ನಿವಾಸಿ ಸ್ಯಾಂಡಿ ಗಿಲ್ಲಾರ್ಡ್‌ ಅವರು ತಮ್ಮ ಮನೆಯ 2ನೇ ಮಹಡಿಯಲ್ಲಿ ತನ್ನ ಮೊಮ್ಮಗನೊಂದಿಗೆ ಆಟವಾಡುತ್ತಿದ್ದಾಗ, ತೆರೆದ ಕಿಟಕಿಯಿಂದ ಬಿದ್ದಿದ್ದರು. ಅವರು ಪ್ರಜ್ಞೆಯನ್ನೂ ಕಳೆದುಕೊಂಡಿದ್ದರು. ಅವರ ತೆಲೆಗೆ ಪೆಟ್ಟುಬಿದ್ದಿತ್ತು. ಕೈ-ಕಾಲು ಕೂಡ ಮುರಿದಿತ್ತು. ಆಗ, ಆಕೆಯ ನೆರವಿಗೆ ಯಾರೂ ಬಾರದಿದ್ದರೆ, ಆಕೆ ಇಂದು ಬದುಕಿರುತ್ತಿರಲಿಲ್ಲ.

ಅದೃಷ್ಟವಶಾತ್ ಆಕೆಯ ನೆರವಿಗೆ ಮೊದಲು ಧಾವಿಸಿದ್ದು ಪುಟ್ಟ ಹಕ್ಕಿ ಜೆಲ್ಲಿಬೀನ್. ತಲೆಗೆ ಪೆಟ್ಟು ಬಿದ್ದು ಪ್ರಜ್ಞಾಹೀನರಾಗಿದ್ದ ಸ್ಯಾಂಡಿ ಗಿಲ್ಲಾರ್ಡ್‌ ಅವರು ಮರಳಿ ಪ್ರಜ್ಞಾಸ್ಥಿತಿಗೆ ಬರುವಂತೆ ಮಾಡಿದ್ದು ಜೆಲ್ಲಿಬೀನ್ ಹಕ್ಕಿ. ಸ್ಯಾಂಡಿ ಅವರು ಕಣ್ಣು ತೆರೆದು ನೋಡಿದಾಗ, ಆಕೆಯ ಹಣೆಯನ್ನು ಜೆಲ್ಲಿಬೀನ್ ಹಕ್ಕಿ ತಟ್ಟುನಿತ್ತು. ತನ್ನ ಕೊಕ್ಕಿನಿಂದ ಆಕೆಯನ್ನು ಎಬ್ಬಿಸಲು ಯತ್ನಿಸುತ್ತಿತ್ತು. ಹಕ್ಕಿಯ ನಿರಂತರ ತಟ್ಟುವಿಕೆ ಮತ್ತು ಮೃದು ಕರೆಯಿಂದ ಪ್ರಜ್ಞೆಗೆ ಮರಳಿದ ಸ್ಯಾಂಡಿ ಹೇಗೋ ತನ್ನ ಪತಿಗೆ ಕರೆ ಮಾಡಿದರು. ಬಳಿಕ, ಆ್ಯಂಬುಲೆನ್ಸ್‌ನಲ್ಲಿ ಆಕೆಯನ್ನು ಆಸ್ಪತ್ರೆಗೆ ರವಾನಿಸಲಾಯಿತು. ಸ್ವಲ್ಪ ತಡವಾಗಿದ್ದರೂ ಆಕೆ ಬದುಕುತ್ತಿರಲಿಲ್ಲವೆಂದು ಆಸ್ಪತ್ರೆಯಲ್ಲಿ ವೈದ್ಯರು ಹೇಳಿದರು. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆತಿದ್ದರ ಪರಿಣಾಮ ಸ್ಯಾಂಡಿ ಅವರು ಬದುಕುಳಿದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಕೆಗೆ ಪ್ರಜ್ಞೆ ಮರಳಿ ಬರುವಲ್ಲಿ ಮತ್ತು ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯುವಲ್ಲಿ ಆ ಪುಟ್ಟ ಹಕ್ಕಿ ಜೆಲ್ಲಿಬೀನ್ ಮಾಡಿದ ಚಿಕ್ಕ ಪ್ರಯತ್ನವೇ ದೊಡ್ಡದು.

ಅಂದಹಾಗೆ, ಇದೇ ಜೆಲ್ಲಿಬೀನ್ ಹಕ್ಕಿಯನ್ನು ಘಟನೆಗೂ ಮುನ್ನ ಸ್ಯಾಂಡಿ ಅವರು ರಕ್ಷಿಸಿದ್ದರು. ಸ್ಯಾಂಡಿ ಅವರು ಪ್ರಾಣಿ-ಪಕ್ಷಿಗಳನ್ನು ಪೋಷಿಸುವ ಹವ್ಯಾಸ ಹೊಂದಿದ್ದರು. ಯಾವುದೋ ಸಂದರ್ಭದಲ್ಲಿ ಹಾರಲು ಸಾಧ್ಯವಾಗದೆ, ಒದ್ದಾಡುತ್ತಿದ್ದ ಜೆಲ್ಲಿಬೀನ್ಅನ್ನು ರಕ್ಷಿಸಿ, ತನ್ನ ಮನೆಗೆ ಕರೆ ತಂದು ಪೋಷಿಸಿದ್ದರು. ಜೆಲ್ಲಿಬೀನ್ ದೊಡ್ಡದಾದ ಬಳಿಕ ಅದನ್ನು ವಿಶಾಲ ಆಗಸದಲ್ಲಿ ಹಾರಲು ಬಿಟ್ಟಿದ್ದಾರೆ. ಆ ಪಕ್ಷಿ ತಮ್ಮೊಂದಿಗಿಲ್ಲ ಎಂಬ ಬೇಸರ ಸ್ಯಾಂಡಿ ಅವರಲ್ಲಿದ್ದರೂ, ಅದು ಸ್ವತಂತ್ರವಾಗಿ ಬದುಕುತ್ತಿದೆ ಎಂಬ ತೃಪ್ತಿ ಅವರಲ್ಲಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...