ಯಾತ್ರಿಕರ ಸಂಖ್ಯೆ ಹೆಚ್ಚಳ: ಮೆಕ್ಕಾದ ಪವಿತ್ರ ಮಸೀದಿಯ ಆವರಣದಲ್ಲೇ ‘ಮೊಬೈಲ್ ಬಾರ್ಬರ್’ ಸೇವೆ ಆರಂಭಿಸಿದ ಸೌದಿ ಅರೇಬಿಯಾ

Date:

ಮುಸ್ಲಿಮರ ಪವಿತ್ರ ರಮಝಾನ್ ತಿಂಗಳ ಉಪವಾಸವು ಮಾ.1ರಿಂದ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾಗಿರುವ ಸೌದಿ ಅರೇಬಿಯಾದ ಮೆಕ್ಕಾ ಹಾಗೂ ಮದೀನಾಕ್ಕೆ ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳಿಂದ ಉಮ್ರಾ ಯಾತ್ರೆ ನಿರ್ವಹಿಸಲು ಬರುವವರ ಸಂಖ್ಯೆಯೂ ಹೆಚ್ಚಳವಾಗಿದೆ. ಹೀಗಾಗಿ, ಯಾತ್ರಿಕರ ಅನುಕೂಲಕ್ಕಾಗಿ ಸೌದಿ ಅರೇಬಿಯಾ ಸರ್ಕಾರವು, ಮೆಕ್ಕಾದ ಪವಿತ್ರ ಮಸೀದಿಯ ಆವರಣದಲ್ಲೇ ಮೊದಲ ಬಾರಿಗೆ ‘ಮೊಬೈಲ್ ಬಾರ್ಬರ್’ ಸೇವೆಯನ್ನು ಆರಂಭಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮೆಕ್ಕಾ ಹಾಗೂ ಮದೀನಾದ ಪವಿತ್ರ ಮಸೀದಿಗಳ ವ್ಯವಹಾರ ನೋಡಿಕೊಳ್ಳುವ ಸೌದಿ ಅರೇಬಿಯಾದ ಅಧಿಕಾರಿಗಳು, ‘ಮಸ್ಜಿದ್ ಅಲ್ ಹರಮ್‌ನಲ್ಲಿ ಮೊದಲ ಬಾರಿಗೆ ಎಂಬಂತೆ ಮೊಬೈಲ್ ಕ್ಷೌರ ಅಂಗಡಿಯನ್ನು ಪ್ರಾರಂಭಿಸಿದ್ದೇವೆ. ರಮಝಾನ್ ಉಪವಾಸ ಹಿಡಿದು ಬರುವ ಯಾತ್ರಿಕರಿಗೆ ದೀರ್ಘ ದೂರ ನಡೆಯುವುದನ್ನು ತಪ್ಪಿಸಲು ನೆರವಾಗುವ ಉದ್ದೇಶದಿಂದ ಈ ಸೇವೆಯನ್ನು ಉಚಿತವಾಗಿ ಆರಂಭಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಮುಸ್ಲಿಮರು ಮೆಕ್ಕಾದಲ್ಲಿ ಪವಿತ್ರಾ ಉಮ್ರಾ ಯಾತ್ರೆಯನ್ನು ಮುಗಿಸಿ, ಮದೀನಾ ಕಡೆಗೆ ಹೋಗುವುದಕ್ಕೂ ಮುನ್ನ ಸಂಪೂರ್ಣ ಕೇಶಮುಂಡನ ಅಥವಾ ಕೂದಲು ಕತ್ತರಿಸುವ ಸಂಪ್ರದಾಯವಿದೆ. ಯಾತ್ರೆಯ ಭಾಗವಾಗಿ ಮುಸ್ಲಿಮರು ಈ ಪ್ರಕ್ರಿಯೆಯನ್ನು ನಡೆಸುತ್ತಾರೆ. ಆದರೆ, ಈ ಸೇವೆಯನ್ನು ಪಡೆದುಕೊಳ್ಳಬೇಕಾದರೆ ಮಸೀದಿಯ ಹೊರಗಡೆ ಬರಬೇಕಿತ್ತು. ರಮಝಾನ್ ಉಪವಾಸ ಹಿಡಿದು, ನಡೆಯುವುದನ್ನು ತಪ್ಪಿಸಿ, ದಣಿವಾಗದಂತೆ ನೋಡಿಕೊಳ್ಳಲು ಮೆಕ್ಕಾದ ಮಸೀದಿಯಲ್ಲಿ ಇದೇ ಮೊದಲ ಬಾರಿಗೆ ‘ಮೊಬೈಲ್ ಬಾರ್ಬರ್’ ಸೇವೆಯನ್ನು ಆರಂಭಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ನೂತನ ಸೇವೆಯು ಯಾತ್ರಿಕರಿಗೆ ಸ್ಥಳದಲ್ಲೇ ಹೇರ್ ಕಟ್ ಸೇವೆಗಳನ್ನು ನೀಡುವ ಮೂಲಕ ದೀರ್ಘ ನಡಿಗೆ ಮತ್ತು ದೀರ್ಘ ಸರತಿ ಸಾಲುಗಳನ್ನು ತಪ್ಪಿಸಲು ಅನುವು ಮಾಡಿಕೊಡುತ್ತಿದೆ. ಈ ಸೇವೆಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸೌದಿ ಅರೇಬಿಯಾ ಸರ್ಕಾರವು ಆರಂಭಿಸಿರುವ ಈ ‘ಮೊಬೈಲ್ ಬಾರ್ಬರ್’ ಸೇವೆಯನ್ನು ನೀಡಲು ಈಗಾಗಲೇ ತರಬೇತಿ ಪಡೆದ ಸಿಬ್ಬಂದಿ ಆರೋಗ್ಯಕರ ಮತ್ತು ಪರಿಣಾಮಕಾರಿ ರೀತಿಯಲ್ಲಿ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಮೆಕ್ಕಾದಲ್ಲಿ ಕ್ಷೌರದ ಸೇವೆಗೆ 10 ಸೌದಿ ರಿಯಾಲ್(ಭಾರತದ ರೂಪಾಯಿ ಮೌಲ್ಯ 200ರಿಂದ 250₹) ನೀಡಬೇಕಿದೆ. ಈಗ ಉಚಿತ ಸೇವೆ ಆರಂಭಿಸಿರುವುದಕ್ಕೆ ಉಮ್ರಾ ಯಾತ್ರಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ರಮಝಾನ್ ತಿಂಗಳಿಗೆ ಮಾತ್ರ ಸೀಮಿತಗೊಳಿಸಲು ವಿನಂತಿ

‘ಸೌದಿ ಅರೇಬಿಯಾ ಸರ್ಕಾರ‌ ಆರಂಭಿಸಿರುವ ಈ ಉಚಿತ ಸೇವೆಯು ಒಳ್ಳೆಯದೇ. ಆದರೆ, ಈ ಉಚಿತ ಸೇವೆಯಿಂದ ಮಸೀದಿಯ ಹೊರಗಡೆ ಇರುವ ಕ್ಷೌರದ ಅಂಗಡಿಗಳ ವ್ಯಾಪಾರಸ್ಥರಿಗೆ ಹಾಗೂ ನೌಕರರಿಗೆ ಉದ್ಯೋಗ ಇಲ್ಲದಂತಾಗಬಹುದು. ಹಾಗಾಗಿ, ಈ ಸೇವೆಯನ್ನು ರಮಝಾನ್ ಉಪವಾಸದ ತಿಂಗಳಲ್ಲಿ ಮಾತ್ರವೇ ನೀಡಿ’ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾಗಳಲ್ಲಿ ಸೌದಿ ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...