ವಿಮಾನ ಅಪಘಾತದಲ್ಲಿ ಆಫ್ರಿಕಾ ಖಂಡದ ಮಲಾವಿ ದೇಶದ ಉಪಾಧ್ಯಕ್ಷ ಸೇರಿ 9 ಮಂದಿ ಮೃತರಾಗಿದ್ದಾರೆ ಎಂದು ಇಂದು ರಾಷ್ಟ್ರಧ್ಯಕ್ಷ ತಿಳಿಸಿದ್ದಾರೆ.
ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಅವರು ಮಿಲಿಟರಿ ವಿಮಾನದಲ್ಲಿ ಮಲಾವಿಯ ರಾಜಧಾನಿ ಲಿಲೋಗ್ವಿಯಿಂದ 370 ಕಿಮೀ ದೂರದಲ್ಲಿರುವ ಮುಜುಜುಗೆ ಇಂದು ಬೆಳಿಗ್ಗೆ ಪ್ರಯಾಣಿಸುತ್ತಿದ್ದರು. ವಿಮಾನ ಟೇಕ್‌ಆಫ್ ಆದ 45 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿದ್ದು, ಅಪಘಾತವಾದ ವಿಮಾನ ಕಣಿವೆ ಪ್ರದೇಶಗಳಲ್ಲಿ ಪತ್ತೆಯಾಗಿದೆ.
ಪತ್ತೆ ಕಾರ್ಯದಲ್ಲಿ ನೂರಾರು ಸೈನಿಕರು, ಪೊಲೀಸ್ ಅಧಿಕಾರಿಗಳು ಹಾಗೂ ಅರಣ್ಯಾಧಿಕಾರಿ ಪಾಲ್ಗೊಂಡಿದ್ದರು. ಘಟನೆಯಲ್ಲಿ ಯಾರೊಬ್ಬರು ಬದುಕುಳಿದಿಲ್ಲ ಎಂದು ಅಧ್ಯಕ್ಷರಾದ ಲಜಾರಸ್ ಚಕ್ವೇರಾ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ
ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ ಸೌಲೋಸ್ ಚಿಲಿಮಾ ಅವರು ವಿಮಾನ ಕೆಟ್ಟ ಹವಾಮಾನ ಹಾಗೂ ಕಳಪೆ ಗೋಚರತೆ ಕಾರಣದಿಂದ ರಾಜಧಾನಿ ಮುಜುಜು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಗ್ ಮಾಡಲು ಸಾಧ್ಯವಾಗಲಿಲ್ಲ. ನಂತರದಲ್ಲಿ ವಿಮಾನದ ಸಂಪರ್ಕವನ್ನು ಕಳೆದುಕೊಳ್ಳಬೇಕಾಯಿತು.
ವಿಮಾನದಲ್ಲಿ 7 ಪ್ರಯಾಣಿಕರು ಹಾಗೂ ಮೂವರು ಮಿಲಿಟರಿ ಸಿಬ್ಬಂದಿ ಇದ್ದರು. ಸೌಲೋಸ್ ಚಿಲಿಮಾ ಅವರು ಮಲಾವಿಯಲ್ಲಿ ಎರಡನೇ ಬಾರಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. 2019ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಪರಾಭವಗೊಂಡಿದ್ದರು. ಕೆಲ ತಿಂಗಳ ಹಿಂದ ಚಿಲಿಮಾ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತಾದರೂ ನ್ಯಾಯಾಲಯದಲ್ಲಿ ಸಾಬೀತಾಗಿರಲಿಲ್ಲ





