ಭಾರತದಂತೆಯೇ ಮಾಲ್ಡೀವ್ಸ್‌ನಲ್ಲೂ ಮಾಧ್ಯಮದ ಮೇಲೆ ಸರ್ಕಾರದ ಸವಾರಿ; ಮಾಧ್ಯಮ ನಿಯಂತ್ರಣ ಮಸೂದೆ ಅಂಗೀಕಾರ

Date:

ಭಾರತವು ಐಟಿ ನಿಯಮಗಳು ಮತ್ತು ಪ್ರಸಾರ ಸೇವೆಗಳ (ನಿಯಂತ್ರಣ) ಕಾಯ್ದೆ-2021ರ ರೀತಿಯಲ್ಲಿಯೇ ಮಾಲ್ಡೀವ್ಸ್‌ ಕೂಡ, ಮಾಧ್ಯಮ ನಿಯಂತ್ರಣ ಮಸೂದೆಯನ್ನು ಜಾರಿಗೆ ತಂದಿದೆ. ಮುಖ್ಯವಾಹಿನಿಯ ಮಾಧ್ಯಮಗಳನ್ನು ತನ್ನ ಜೀತದ ನಾಯಿಗಳನ್ನಾಗಿ ಮಾಡಿಕೊಂಡಿರುವ ಮೋದಿ ಸರ್ಕಾರವು ಡಿಜಿಟಲ್ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳನ್ನು ನಿಯಂತ್ರಿಸಲು 2021ರಲ್ಲಿ ಕಾಯ್ದೆಯನ್ನು ರೂಪಿಸಿತು. ತನ್ನ ವಿರುದ್ಧ ಯಾವುದೇ ವೇದಿಕೆಗಳಲ್ಲೂ ಜನಾಭಿಪ್ರಾಯ ರೂಪುಗೊಳ್ಳದಂತೆ ತಡೆಯುವ ಕುತಂತ್ರ ಹೆಣೆಯಿತು. ಇದೀಗ, ಭಾರತದ ಮೋದಿ ಸರ್ಕಾರದ ಹಾದಿಯಲ್ಲಿಯೇ ಮಾಲ್ಡೀವ್ಸ್‌ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝ್ಝು ನೇತೃತ್ವದ ಸರ್ಕಾರವು ಸಾಗಲಾರಂಭಿಸಿದೆ. ಅಲ್ಲಿನ ಮಾಧ್ಯಮಗಳನ್ನು ನಿಯಂತ್ರಿಸಲು ಹೊಸ ಮಸೂದೆಯನ್ನು ಅಂಗೀಕರಿಸಿದೆ. ಮಸೂದೆಯ ವಿರುದ್ಧ ಮಾಲ್ಡೀವ್ಸ್‌ನಾಧ್ಯಂತ ಭಾರೀ ಆಕ್ರೋಶ-ಪ್ರತಿಭಟನೆಗಳು ಭುಗಿಲೆದ್ದಿವೆ.

ಮಾಲ್ಡೀವ್ಸ್‌ನ ಸರ್ಕಾರವು ‘ಮಾಧ್ಯಮ ನಿಯಂತ್ರಣ ಮಸೂದೆ’ಯನ್ನು ಅಂಗೀಕರಿಸಿದ್ದು, ‘ಮಾಧ್ಯಮ ಮತ್ತು ಪ್ರಸಾರ ಆಯೋಗ’ (Media and Broadcasting Commission) ರಚನೆಯ ಮೂಲಕ ಮಾಧ್ಯಮಗಳನ್ನು ನಿಯಂತ್ರಿಸಲು ಮುಂದಾಗಿದೆ. ಸುಳ್ಳು ಸುದ್ದಿಗಳನ್ನು ತಡೆಗಟ್ಟುವುದು, ಜನರ ಗೌಪ್ಯತೆಯನ್ನು ರಕ್ಷಿಸುವುದು ಹಾಗೂ ಜವಾಬ್ದಾರಿಯುತ ಪತ್ರಿಕೋದ್ಯಮವನ್ನು ಉತ್ತೇಜಿಸುವುದು ಮಸೂದೆಯ ಉದ್ದೇಶವೆಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಈ ಮಸುದೆ ಮಾಲ್ಡೀವ್ಸ್‌ನಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಸೀಮಿತಗೊಳಿಸುವ ದುರುದ್ದೇಶವನ್ನು ಹೊಂದಿದೆ. ಡಿಜಿಟಲ್ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಸ್ವತಂತ್ರ ಪತ್ರಕರ್ತರನ್ನು ದಮನಿಸುವ ಹುನ್ನಾರವಿದೆ ಎಂಬುದು ಅಲ್ಲಿನ ಜನರ ಆರೋಪ.

ಮಸೂದೆಯು ಪ್ರಧಾನವಾಗಿ ‘ಮಾಧ್ಯಮ ಆಯೋಗ’ದ ರಚನೆಯ ಉದ್ದೇಶವನ್ನು ಹೇಳಿಕೊಂಡಿದೆ. ಮಾಧ್ಯಮ ಆಯೋಗವು ಅಧ್ಯಕ್ಷರಿಂದ ಆಯ್ಕೆಯಾದ ಮೂವರು ಸದಸ್ಯರು ಮತ್ತು ಮಾಧ್ಯಮ ಪ್ರತಿನಿಧಿಗಳಿಂದ ಆಯ್ಕೆಯಾದ ಇತರ ನಾಲ್ವರು ಸದಸ್ಯರು – ಒಟ್ಟು ಏಳು ಮಂದಿ ಸದಸ್ಯರನ್ನು ಒಳಗೊಂಡಿರುತ್ತದೆ. ಈ ಆಯೋಗವು ಮಾಧ್ಯಮ ಸಂಸ್ಥೆಗಳು, ಸಾಮಾಜಿಕ ಜಾಲತಾಣ ವೇದಿಕೆಗಳು ಹಾಗೂ ಆನ್‌ಲೈನ್ ‘ಕಂಟೆಂಟ್‌ ಕ್ರಿಯೇಟರ್‌’ಗಳು ರೂಪಿಸುವ ವಿಷಯಗಳ ಮೇಲೆ ಕಾಣ್ಗಾವಲು ಇಡಲಿದೆ. ಮಾತ್ರವಲ್ಲದೆ, ಅವರನ್ನು ಶಿಕ್ಷಿಸುವ ಅಧಿಕಾರವನ್ನೂ ಹೊಂದಿರಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಸೂದೆಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ವಿಷಯಗಳನ್ನು ಪ್ರಚಾರ/ಪ್ರಸಾರ ಮಾಡಿದರೆ, ಅವರಿಗೆ ದಂಡ, ಜೈಲು ಅಥವಾ ಪರವಾನಗಿ ರದ್ದತಿಯಂತಹ ಕ್ರಮಗಳನ್ನು ಕೈಗೊಳ್ಳುವುದಾಗಿ ಸರ್ಕಾರ ವಿವರಿಸಿದೆ.

ಈ ಮಸೂದೆಯು ಮಾಲ್ಡೀವ್ಸ್‌ನಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಗಂಭೀರವಾಗಿ ಸೀಮಿತಗೊಳಿಸುವ ಆತಂಕವಿದೆ. ಸ್ವತಂತ್ರ ಪತ್ರಕರ್ತರು ಮತ್ತು ಡಿಜಿಟಲ್ ಕಂಟೆಂಟ್‌ ಕ್ರಿಯೇಟರ್‌ಗಳು ಸರ್ಕಾರದ ಒತ್ತಡಕ್ಕೆ ಒಳಗಾಗುವ ಬೆದರಿಕೆ ಇದೆ. ಮಾತ್ರವಲ್ಲದೆ, ಮಾಧ್ಯಮಗಳು ಭಾರತದ ರೀತಿಯಲ್ಲಿ ಸರ್ಕಾರದ ಪರವಾಗಿ ತುತ್ತೂರಿ ಊದುವಂತೆಯೂ, ವಿಪಕ್ಷಗಳನ್ನು ಗುರಿಯಾಗಿಸಿಕೊಂಡು ಸುದ್ದಿ ಮಾಡುವಂತೆ ಒತ್ತಡಕ್ಕೆ ಒಳಗಾಗುವ ಅಪಾಯವಿದೆ. ಜೊತೆಗೆ, ವಿಪಕ್ಷಗಳು ಸಾಮಾಜಿಕ ಮಾಧ್ಯಮಗಳ ಮೂಲಕವೂ ಜನರನ್ನು ತಲುಪದಂತೆ ನಿಯಂತ್ರಿಸುವ ಹುನ್ನಾರಹೊಂದಿದೆ.

ಸರ್ಕಾರದ ವಿರುದ್ಧ ಜನರು ತಮ್ಮ ಆಕ್ರೋಶ/ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಾಗದಂತೆ ಜನರ ದನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಮಸೂದೆ ಅಂಗೀಕಾರದ ವೇಳೆ, ಪ್ರಮುಖ ವಿರೋಧ ಪಕ್ಷ ‘ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷ’ದ 12 ಸಂಸದರಲ್ಲಿ ಏಳು ಮಂದಿ ಮಸೂದೆಯ ವಿರುದ್ಧ ಸಂಸತ್‌ನಲ್ಲಿ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ, ಅವರನ್ನು ಸದನದಿಂದ ಹೊರಹಾಕಲಾಯಿತು. ಇದೆಲ್ಲದರ ನಡುವೆ, ಸ್ಥಳೀಯ ಮಾಧ್ಯಮಗಳು, ವಿರೋಧ ಪಕ್ಷದ ನಾಯಕರು ಹಾಗೂ ಮಾನವ ಹಕ್ಕುಗಳ ಗುಂಪುಗಳು ಮಸೂದೆಯ ವಿವಿಧ ಅಂಶಗಳ ವಿರುದ್ಧ ನಿರಂತರ ಪ್ರತಿಭಟನೆಗಳನ್ನು ನಡೆಸುತ್ತಿವೆ. ಮುಯಿಝು ಅವರ ಸರ್ಕಾರವು ‘ಮಾಧ್ಯಮಗಳ ಬಾಯಿ ಮುಚ್ಚಿಸಲು ಹವಣಿಸುತ್ತಿದೆ’ ಎಂದು ಮಾಲ್ಡೀವ್ಸ್ ಪತ್ರಕರ್ತರ ಸಂಘ ಹೇಳಿದೆ.

“ಮಾಲ್ಡೀವ್ಸ್‌ನ ಪತ್ರಕರ್ತರು ಮಾಧ್ಯಮವನ್ನು ನಿಯಂತ್ರಿಸುವ, ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸರ್ಕಾರದ ಧೋರಣೆಯ ವಿರುದ್ಧ ಒಟ್ಟಾಗಿ ನಿಲ್ಲುತ್ತಾರೆ. ಈ ಅಸಂವಿಧಾನಿಕ ಮಸೂದೆಯನ್ನು ತಕ್ಷಣ ಹಿಂಪಡೆಯುವಂತೆ ನಾವು ಒತ್ತಾಯಿಸುತ್ತೇವೆ” ಎಂದು ಸಂಘವು ಹೇಳಕೊಂಡಿದೆ.

ಈ ಲೇಖನ ಓದಿದ್ದೀರಾ?: NSD ಹೊಸ ಶುಲ್ಕ: ಇದು ವಿದ್ಯಾದ್ರೋಹ, ಕಲಾದ್ರೋಹ, ದೇಶದ್ರೋಹದ ಕೆಲಸ

ಮಾಲೆಯಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಕೂಡ ಪ್ರತಿಭಟನೆಯನ್ನು ಬೆಂಬಲಿಸಿದೆ. ‘ಮಾಲ್ಡೀವ್ಸ್ ಸರ್ಕಾರವು ಭಿನ್ನಾಭಿಪ್ರಾಯ ಮತ್ತು ವಿರೋಧ ಪಕ್ಷದ ಧ್ವನಿಗಳು ಸೇರಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ನೀಡಬೇಕು’ ಎಂದು ಹೇಳಿದೆ.

“ಪತ್ರಕರ್ತರು ಸೇರಿದಂತೆ ಪ್ರತಿಯೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೂಲಭೂತ ಸ್ವಾತಂತ್ರ್ಯವೆಂದು ಅಮೆರಿಕ ಬೆಂಬಲಿಸುತ್ತದೆ. ಭಿನ್ನಾಭಿಪ್ರಾಯ ಮತ್ತು ವಿರೋಧ ಪಕ್ಷಗಳ ಧ್ವನಿಗಳು ಸೇರಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ಎತ್ತಿಹಿಡಿಯಲು ನಾವು ಮಾಲ್ಡೀವ್ಸ್ ಮತ್ತು ಎಲ್ಲ ದೇಶಗಳನ್ನು ಒತ್ತಾಯಿಸುತ್ತೇವೆ” ಎಂದು ಹೇಳಿಕೊಂಡಿದೆ.

ವಿಪಕ್ಷ ‘ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷ’ದ ಸಂಸದ ಮೀಕೈಲ್ ನಸೀಮ್ ಅವರ ಪ್ರಕಾರ, “ಮಂಗಳವಾರ ಸಂಸತ್ ಕಲಾಪ ಆರಂಭವಾದ ಕೆಲವು ನಿಮಿಷಗಳ ಬಳಿಕ, ಮಸೂದೆಯ ಪ್ರತಿಯನ್ನು ಎಲ್ಲ ಸದಸ್ಯರಿಗೆ ಹಂಚಲಾಯಿತು. ಹೆಚ್ಚಿನ ಚರ್ಚೆಗೂ ಆಸ್ಪದ ಕೊಡಲಿಲ್ಲ. ಮಸೂದೆಯನ್ನು ಪ್ರತಿಭಟಿಸಿದ ಸಂಸದರನ್ನು ಸದನದಿಂದ ಹೊರಹಾಕಲಾಯಿತು” ಎಂದು ಹೇಳಿದ್ದಾರೆ.

ಮಾಜಿ ಅಧ್ಯಕ್ಷ, ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷದ ನಾಯಕ ಇಬ್ರಾಹಿಂ ಸೋಲಿಹ್ ಅವರು “ಈ ಮಸೂದೆಯು ಮಾಲ್ಡೀವ್ಸ್ ಪತ್ರಿಕಾ ಸ್ವಾತಂತ್ರ್ಯದ ಅಂತ್ಯವನ್ನು ಸೂಚಿಸುತ್ತದೆ. ಇದನ್ನು ಅಂಗೀಕರಿಸಿದ ದಿನವು ಪ್ರಜಾಪ್ರಭುತ್ವದಲ್ಲಿ ಕರಾಳ ದಿನವಾಗಿ ಉಳಿಯುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...