ಕೋವಿಡ್ ವ್ಯಾಕ್ಸಿನ್ | 217 ಡೋಸ್ ಪಡೆದ ವೃದ್ಧ; ತಜ್ಞರು ಹೇಳುವುದೇನು?

Date:

ಜರ್ಮನಿಯಲ್ಲಿ 62 ವಯಸ್ಸಿನ ವೃದ್ಧರೊಬ್ಬರು ಕಳೆದ 29 ತಿಂಗಳಲ್ಲಿ ಬರೋಬ್ಬರಿ 217 ಕೋವಿಡ್ ಲಸಿಕೆ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಈ ಲಸಿಕೆ ಪಡೆದಿರುವುದು ಯಾವುದೇ ವೈದ್ಯಕೀಯ ಪ್ರಯೋಗವಾಗಿರಲಿಲ್ಲ. ಈ ವ್ಯಕ್ತಿಯು ತನ್ನ ‘ಖಾಸಗಿ ಕಾರಣಕ್ಕಾಗಿ’ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಜೂನ್ 2021ರಿಂದ ನವೆಂಬರ್ 2023ರವರೆಗೆ ಕೋವಿಡ್ ಲಸಿಕೆಯ 217 ಡೋಸ್‌ಗಳನ್ನು ಪಡೆದಿದ್ದಾರೆ. ಆದರೆ ಖಾಸಗಿ ಹಕ್ಕು ಕಾರಣ ಈ ವ್ಯಕ್ತಿಯ ಹೆಸರು, ಇತರೆ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಒಟ್ಟು 217 ಡೋಸ್‌ಗಳಲ್ಲಿ 134 ಅಧಿಕೃತವಾಗಿ ಪಡೆದಿದ್ದರೆ, ಇನ್ನುಳಿದ ಡೋಸ್‌ಗಳನ್ನು ಸ್ವತಃ ಹಾಕಿಕೊಂಡಿದ್ದಾರೆ.

ಇನ್ನು ಈ ವ್ಯಕ್ತಿ ನಿರಂತರವಾಗಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿರುವುದು ಮಾತ್ರವಲ್ಲದೆ ಕಳೆದ 29 ತಿಂಗಳ ಅವಧಿಯಲ್ಲಿ ಪದೇ ಪದೇ ಕೋವಿಡ್ ಪರೀಕ್ಷೆಯನ್ನು ಮಾಡಿಸಿದ್ದಾರೆ. ಈವರೆಗೂ ಈ ಲಸಿಕೆ ಸಂಬಂಧಿತ ಯಾವುದೇ ಅಡ್ಡ ಪರಿಣಾಮಗಳು ಈ ವ್ಯಕ್ತಿಯಲ್ಲಿ ಕಂಡುಬಂದಿಲ್ಲ ಮತ್ತು ಈ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಜ್ಞರು ಹೇಳುವುದೇನು?

“ಇದು ಅಸಾಮಾನ್ಯ ಪ್ರಕರಣವಾಗಿದೆ. ಇಷ್ಟೊಂದು ಡೋಸ್‌ಗಳನ್ನು ಪಡೆದುಕೊಳ್ಳಲು ಯಾವುದೇ ಮಾರ್ಗಸೂಚಿಯಿಲ್ಲ. ಮೊದಲ ಮೂರು ಡೋಸ್‌ ಪಡೆದ ಬಳಿಕ ಈ ವ್ಯಕ್ತಿಯಲ್ಲಿ ಕೋವಿಡ್ ಪ್ರತಿರೋಧಕ ಶಕ್ತಿ ಹೆಚ್ಚಾದ ಕಾರಣ ಕೋವಿಡ್ ಬಂದಿರದೆ ಇರಬಹುದು. ಈ ವ್ಯಕ್ತಿಯ ನಡವಳಿಕೆ ಬಗ್ಗೆ ತಿಳಿದಿರದ ಕಾರಣ ಏನೇ ಬದಲಾವಣೆಯಾದರೂ ನಮಗೆ ತಿಳಿಯುತ್ತಿಲ್ಲ,” ಎಂದು ಸಿಎನ್‌ಎನ್‌ಗೆ ಅಲ್ಬರ್ಟ್ ಐನ್‌ಸ್ಟೀನ್ ವೈದ್ಯಕೀಯ ಕಾಲೇಜಿನ ಡಾ ಎಮಿಲಿ ಹ್ಯಾಪಿ ಮಿಲ್ಲರ್ ತಿಳಿಸಿದ್ದಾರೆ.

ಇನ್ನು ಫ್ರೆಡ್‌ರಿಚ್‌-ಅಲೆಕ್ಸಾಂಡರ್ ವಿಶ್ವವಿದ್ಯಾನಿಲಯದ ಸಂಶೋಧಕಿ ಡಾ ಕಿಲಿಯಾನ್ ಸೋಬರ್ ಹೇಳುವಂತೆ, “ನಾವು ಮೂರು ಬಾರಿ ಡೋಸ್ ಪಡೆದರೂ 200 ಬಾರಿ ಡೋಸ್ ಪಡೆದರೂ ಪ್ರಯೋಜನವೇನು ಬದಲಾಗುವುದಿಲ್ಲ.”

ಈ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಂಶೋಧಕರು 2022ರ ಮೇ ತಿಂಗಳಲ್ಲಿ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ. ಆ ಸಂದರ್ಭದಲ್ಲಾಗಲೇ ವೃದ್ಧ 213 ಕೋವಿಡ್‌ ಡೋಸ್‌ಗಳನ್ನು ಪಡೆದುಕೊಂಡಿದ್ದರು. ಈ ವ್ಯಕ್ತಿ ತನ್ನ ವೈದ್ಯಕೀಯ ಮಾಹಿತಿ, ಪರೀಕ್ಷೆಗಾಗಿ ರಕ್ತ, ಇತರೆ ದಾಖಲೆಗಳನ್ನು ನೀಡಲು ಒಪ್ಪಿಕೊಂಡಿದ್ದರು. ಈ ಪರೀಕ್ಷೆಗಳ ಸಂದರ್ಭದಲ್ಲೇ ವ್ಯಕ್ತಿ ಮತ್ತೆ ನಾಲ್ಕು ಕೋವಿಡ್‌ ಡೋಸ್ ಪಡೆದುಕೊಂಡಿದ್ದಾರೆ.

ಈ ವ್ಯಕ್ತಿ ನೀಡಿದ ರಕ್ತವನ್ನು ಮೂರು ಕೋವಿಡ್ ಲಸಿಕೆ ಡೋಸ್‌ಗಳನ್ನು ಪಡೆದಿರುವ 29 ಜನರ ರಕ್ತದೊಂದಿಗೆ ಪರೀಕ್ಷೆ ಮಾಡಲಾಗಿದೆ. ಈ ವ್ಯಕ್ತಿಯ 214 ಮತ್ತು 215ನೇ ಲಸಿಕೆ ಡೋಸ್ ಬಳಿಕ ದೇಹದಲ್ಲಿ ಪ್ರತಿರೋಧಕ ಶಕ್ತಿಯು ತೀವ್ರವಾಗಿ ಹೆಚ್ಚಾಗಿರುವುದು ತಿಳಿದುಬಂದಿದೆ. ಇಷ್ಟೊಂದು ಡೋಸ್‌ಗಳನ್ನು ಪಡೆದಿದ್ದರೂ ಕೂಡಾ ಯಾವುದೇ ದುಷ್ಪರಿಣಾಮಗಳು ಕಂಡುಬಂದಿಲ್ಲ.

 

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...