ಅಕ್ಟೋಬರ್ 7ರಿಂದ ನಡೆಯುತ್ತಿರುವ ಇಸ್ರೇಲ್-ಹಮಾಸ್ ನಡುವಿನ ಸಂಘರ್ಷಕ್ಕೆ ಸದ್ಯ ಒತ್ತೆಯಾಳುಗಳ ಬಿಡುಗಡೆಗಾಗಿ ಕದನ ವಿರಾಮ ನಿರ್ಧಾರಕ್ಕೆ ಒಪ್ಪಂದ ಏರ್ಪಟ್ಟ ಹಿನ್ನೆಲೆಯಲ್ಲಿ ಹಮಾಸ್‌ನಿಂದ 24 ಮಂದಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದರೆ, ಇಸ್ರೇಲ್‌ನ ಜೈಲಿನಲ್ಲಿ ಬಂಧಿತರಾಗಿದ್ದ 39 ಮಂದಿ ಪ್ಯಾಲೆಸ್ತೀನಿಯರನ್ನು ಬಿಡುಗಡೆಗೊಳಿಸಲಾಗಿದೆ.
ಇಸ್ರೇಲ್‌ನ ಇತಿಹಾಸದಲ್ಲಿ ನಡೆದ ಅತ್ಯಂತ ಭೀಕರ ದಾಳಿಯಲ್ಲಿ ಹಮಾಸ್ ವಶಪಡಿಸಿಕೊಂಡ ಒತ್ತೆಯಾಳುಗಳ ಮೊದಲ ತಂಡವನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಈ ಮೊದಲು ಕೆಲವು ಹಿರಿಯ ಜೀವಗಳನ್ನು ಮಾನವೀಯ ಕಾರಣಕ್ಕೆ ಹಮಾಸ್ ಬಿಡುಗಡೆಗೊಳಿಸಿತ್ತು.
ಪ್ಯಾಲೆಸ್ತೀನ್ ಗಡಿಯಾಚೆಗಿನ ದಾಳಿಯ ಸಮಯದಲ್ಲಿ ಸೆರೆಹಿಡಿಯಲಾಗಿದ್ದವರ ಪೈಕಿ 24 ಮಂದಿಯನ್ನು ಹಮಾಸ್ ಬಿಡುಗಡೆಗೊಳಿಸಿದೆ. ಈ 24ರಲ್ಲಿ ಹತ್ತು ಧಾಯ್‌ಲ್ಯಾಂಡ್ ಪ್ರಜೆಗಳು, ಒಬ್ಬ ಫಿಲಿಫೈನ್ ಹಾಗೂ 13 ಇಸ್ರೇಲಿ ಒತ್ತೆಯಾಳುಗಳು ಎಂದು ಗುರುತಿಸಲಾಗಿದೆ. ಈ ಮಾಹಿತಿಯನ್ನು ಹಮಾಸ್ ಹಾಗೂ ಇಸ್ರೇಲ್ ಸೇನೆ ಕೂಡ ಖಚಿತಪಡಿಸಿದೆ.
BREAKING: HAMAS TREATING ISRAELI HOSTAGES WELL DURING THE PASSOVER pic.twitter.com/q4Z71Pb6Fz
— Sulaiman Ahmed (@ShaykhSulaiman) November 24, 2023
ಹಮಾಸ್‌ನಿಂದ ಬಿಡುಗಡೆಯಾದ ಒತ್ತೆಯಾಳುಗಳು ತಮ್ಮ ಕುಟುಂಬಗಳೊಂದಿಗೆ ಮತ್ತೆ ಸೇರುವ ಮೊದಲು ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.
RELEASED FEMALE HOSTAGE HANAN BARGHOUTI MAKES STATEMENT M
“We tell the children of #Gaza that we will meet in heaven and victory is yours.” pic.twitter.com/u0Mng5IkHG
— Sulaiman Ahmed (@ShaykhSulaiman) November 25, 2023
ಬಿಡುಗಡೆಯಾದವರ ಪೈಕಿ ನಾಲ್ವರು ಮಕ್ಕಳು ಮತ್ತು ಆರು ವೃದ್ಧ ಮಹಿಳೆಯರು ಸೇರಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ತಿಳಿಸಿದೆ.
ಹಮಾಸ್ ಒತ್ತೆಯಾಳುಗಳನ್ನು ಮಾನವೀಯ ಸಂಘಟನೆಗೆ ಹಸ್ತಾಂತರಿಸಿದ ನಂತರ ರೆಡ್ ಕ್ರಾಸ್ ವಾಹನಗಳ ಬೆಂಗಾವಲು ಗಾಜಾ ಮತ್ತು ಈಜಿಪ್ಟ್ ನಡುವಿನ ಗಡಿಯನ್ನು ದಾಟುತ್ತಿರುವ ದೃಶ್ಯ ವೈರಲ್ ಆಗಿದೆ. ಈ ವೇಳೆ ಕೆಲವು ಪ್ರಯಾಣಿಕರು ಕೈ ಬೀಸುತ್ತಿರುವ ದೃಶ್ಯವೂ ಇದೆ.
Watch: The meeting of freed prisoners with their family after the release in the exchange deal #hamas #Israel pic.twitter.com/Kc4lpIiTNr
— THE HINDUSTAN GAZETTE (@THGEnglish) November 25, 2023
ಹಮಾಸ್ 24 ಮಂದಿಯನ್ನು ಬಿಡುಗಡೆಗೊಳಿಸುತ್ತಿದ್ದಂತೆಯೇ ಜೈಲಿನಲ್ಲಿ ಬಂಧಿತರಾಗಿದ್ದ ಮೂವತ್ತೊಂಬತ್ತು ಪ್ಯಾಲೆಸ್ತೀನಿಯನ್ನರನ್ನು ಇಸ್ರೇಲ್ ಸೇನೆಯು ಬಿಡುಗಡೆಗೊಳಿಸಿದೆ.
ನಾಲ್ಕು ದಿನಗಳ ಕದನ ವಿರಾಮದ ಎರಡನೇ ದಿನವಾದ ಶನಿವಾರ ಬಿಡುಗಡೆ ಮಾಡಲು ಬಂಧಿತರ ಪಟ್ಟಿಯನ್ನು ಸ್ವೀಕರಿಸಲಾಗಿದೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಹೇಳಿದೆ.
ಕತಾರ್, ಈಜಿಪ್ಟ್ ಮತ್ತು ಅಮೆರಿಕ ಜೊತೆಗೂಡಿ ಮಾತುಕತೆಯ ನಂತರದ ಒಪ್ಪಂದದ ಅಡಿಯಲ್ಲಿ ಇಸ್ರೇಲ್ ವಶಪಡಿಸಿಕೊಂಡಿದ್ದ ಪ್ಯಾಲೆಸ್ತೀನಿಯನ್ ಕೈದಿಗಳು, ಮಹಿಳೆಯರು ಮತ್ತು ಹದಿಹರೆಯದ ಹುಡುಗರನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.
ಹಮಾಸ್ ಶುಕ್ರವಾರ ಒಟ್ಟು 24 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಇಸ್ರೇಲ್ ತನ್ನ ಜೈಲುಗಳಿಂದ 39 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಿದೆ ಎಂದು ಪ್ರಮುಖ ಮಧ್ಯವರ್ತಿ ಕತಾರ್ ದೃಢಪಡಿಸಿದೆ.
ಇಸ್ರೇಲ್‌ನ ಜೈಲಿನಿಂದ ಬಿಡುಗಡೆಗೊಂಡವರನ್ನು ಸ್ವಾಗತಿಸಲು ವೆಸ್ಟ್ ಬ್ಯಾಂಕ್‌ನಲ್ಲಿ ಸಾವಿರಾರು ಮಂದಿ ಸೇರಿದ್ದಲ್ಲದೇ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ಅದರ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
BREAKING: THOUSANDS OF PALESTINIANS WELCOME BACK THE WOMEN AND CHILDREN KEPT HOSTAGE BY THE ISRAELIS pic.twitter.com/PTBWhleRIN
— Sulaiman Ahmed (@ShaykhSulaiman) November 24, 2023





