ಕಣ್ಣು ಕಾಣದ ಜಾಗಕ್ಕೂ ಹಾರುವ ಮೈಕ್ರೋಬೋಟ್;‌ ಜೀವರಕ್ಷಣಾ ಕ್ಷೇತ್ರದಲ್ಲಿ MITಯ ಮೈಲಿಗಲ್ಲು

Date:

ಭೂಕಂಪ, ಬಾಂಬ್‌ ದಾಳಿಗಳಂತಹ ಮಹಾ ಅವಘಡಗಳ ನಂತರ ಕಟ್ಟಡಗಳ ಅವಶೇಷಗಳಡಿ ಸಿಲುಕಿದ ಜೀವಗಳನ್ನು ರಕ್ಷಿಸುವುದಿರಲಿ ಅವನ್ನು ಪತ್ತೆ ಹಚ್ಚುವುದೂ ಕೂಡ ದೊಡ್ಡ ಸವಾಲಾಗಿತ್ತು. ರೋಬೋಟಿಕ್‌ ಕ್ಷೇತ್ರ ಬೆಳೆಯುತ್ತಿದ್ದರೂ, ದೊಡ್ಡ ಯಂತ್ರಗಳು, ರೋಬೋಟ್‌ಗಳು ಅಥವಾ ಮನುಷ್ಯರು ಪ್ರವೇಶಿಸಲು ಸಾಧ್ಯವಾಗದಷ್ಟು ಸಂಕೀರ್ಣ ಜಾಗಗಳಲ್ಲಿ ಸಿಕ್ಕಿಹಾಕಿಕೊಂಡವರನ್ನು ಕಂಡುಹಿಡಿಯಲು ಇದುವರೆಗೆ ಯಾವುದೇ ವಿಶ್ವಾಸಾರ್ಹ ಸಾಧನಗಳಿರಲಿಲ್ಲ. ಆದರೆ ಇದೀಗ ಅಮೆರಿಕದ MIT ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ನೂತನ ಏರಿಯಲ್‌ ಮೈಕ್ರೋಬೋಟ್‌ಗಳು ಕೀಟಗಳಷ್ಟು ಅದರಲ್ಲೂ ದುಂಬಿಯಷ್ಟು ಚಿಕ್ಕಗಾತ್ರದಲ್ಲಿ ಚುರುಕಾಗಿ, ವೇಗವಾಗಿ ಹಾರಬಲ್ಲ ಸಾಮರ್ಥ್ಯ ಹೊಂದಿದ್ದು, ಭವಿಷ್ಯದ ರಕ್ಷಣಾ ಕಾರ್ಯಾಚರಣೆಗೆ ಹೊಸ ದಿಕ್ಕು ತೋರಿಸುತ್ತಿವೆ.

ಮಹಾ ಅವಘಡಗಳ ನಂತರ ಅವಶೇಷಗಳಡಿ ಸಿಲುಕಿದವರನ್ನು ಪತ್ತೆಹಚ್ಚಲೆಂದೇ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯ ಮ್ಯಾಸಚೂಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (MIT) ಅಭಿವೃದ್ಧಿಪಡಿಸಿರುವ ಈ ಅತಿ ಸಣ್ಣ ಹಾರುವ ರೋಬೋಟ್‌ಗಳು ದೊಡ್ಡ ಯಂತ್ರಗಳು ಪ್ರವೇಶಿಸಲಾರದ ಸಣ್ಣ ಜಾಗಗಳಲ್ಲಿ ನುಸುಳಿ ಹೋಗಬಲ್ಲವು. ಅಲ್ಲಿನ ಯಾವುದೇ ಅಡಚಣೆಗಳಿಂದ ಸುಲಭವಾಗಿ ತಪ್ಪಿಸಿಕೊಂಡು ಚಲಿಸುವ ಸಾಮರ್ಥ್ಯ ಇವುಗಳಿಗಿದೆ. ಇದುವರೆಗೂ ಇದ್ದ ವೈಮಾನಿಕ ಮೈಕ್ರೋ ರೋಬೋಟ್‌ಗಳು ನಿಧಾನವಾಗಿ, ನೇರವಾದ ಮಾರ್ಗಗಳಲ್ಲಿ ಮಾತ್ರ ಹಾರಾಡುತ್ತಿದ್ದವು. ನಿಜವಾದ ಕೀಟಗಳ ವೇಗ, ಚುರುಕುತನವನ್ನು ಅವು ಅನುಕರಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೀಗ ದುಂಬಿಯಷ್ಟೇ ಸಲೀಸಾಗಿ ಚುರುಕಾಗಿ ದಶದಿಕ್ಕುಗಳತ್ತ ಗಿರಕಿ ಹೊಡೆದು ಮೇಲೆದ್ದು ಕೆಳಕ್ಕೆ ಹಾರಿ ಚಲಿಸಬಲ್ಲ ಚಾಣಾಕ್ಷತೆ ಈ ಏರಿಯಲ್‌ ಮೈಕ್ರೋಬೋಟ್‌ಗಳಿಗಿದೆ.

ಸಂಶೋಧಕರು ರೂಪಿಸಿರುವ ರೋಬೋಟ್‌ಗಳು ಸಂಪೂರ್ಣ ಎಐ ಆಧಾರಿತ ನಿಯಂತ್ರಣ ವ್ಯವಸ್ಥೆ (AI Controller)ಗೆ ಒಳಪಟ್ಟಿರುತ್ತವೆ. ಇವು ಜಿಮ್ನಾಸ್ಟಿಕ್‌ ಪರಿಣಿತರಂತೆ ಸರಾಗವಾದ ಹಾರಾಟ, ನಿರಂತರ ಫ್ಲಿಪ್‌ಗಳು, ಕಠಿಣ ತಿರುವುಗಳು ಹಾಗೂ ದೇಹವನ್ನು ಬದಲಾಯಿಸಿಕೊಂಡು ಕಾರ್ಯನಿರ್ವಹಿಸುತ್ತವೆ. ಎರಡು ಹಂತಗಳಲ್ಲಿ ಕಾರ್ಯನಿರ್ವಹಿಸುವ ಈ ನಿಯಂತ್ರಣ ವಿಧಾನವು ಅತ್ಯುತ್ತಮ ಕಾರ್ಯಕ್ರಮತೆ ಜೊತೆಗೆ ಕಡಿಮೆ ಕಂಪ್ಯೂಟಿಂಗ್‌ ಬಳಕೆಯನ್ನೂ ಹೊಂದಿದೆ. ಪರಿಣಾಮ ರೋಬೋಟ್‌ನ ವೇಗವು ಸುಮಾರು ಶೇ.450ರಷ್ಟು ಹೆಚ್ಚಾಗಿದ್ದು, ಅದರ ತ್ವರಿತಗತಿಯು ಶೇ.250 ರಷ್ಟು ಹೆಚ್ಚಾಗಿದೆ.  ಅಂದರೆ ಕೇವಲ 11 ಸೆಕೆಂಡ್‌ಗಳಲ್ಲಿ 10 ನಿರಂತರ ಸಮರ್‌ಸಾಲ್ಟ್‌ (ಲಯಬದ್ಧವಾದ ಲಾಗ ಅಥವಾ ಪಲ್ಟಿ) ಮಾಡುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
MIT MicroRobot demo
MIT Microbot demo

MIT ವಿವಿಯ EECS ವಿಭಾಗದ ಸಹ ಪ್ರಾಧ್ಯಾಪಕ ಹಾಗೂ RLE ಸಂಸ್ಥೆಯ Soft and Micro Robotics Lab ಮುಖ್ಯಸ್ಥ ಕೆವಿನ್ ಚೆನ್ ಈ ಯೋಜನೆಯ ಹಿರಿಯ ಸಂಶೋಧಕರಲ್ಲಿ ಒಬ್ಬರು. “ಪಾರಂಪರಿಕ ಕ್ವಾಡ್‌ಕಾಪ್ಟರ್‌ಗಳು ಹೋಗಲಾರದ ಜಾಗಗಳಿಗೆ ಇವು ಪ್ರವೇಶಿಸಲಿ, ನಿಜವಾದ ಕೀಟಗಳಂತೆ ಹಾರಲಿ ಎಂಬುದು ನಮ್ಮ ಗುರಿ. ಈಗ ನಮ್ಮ ಹೊಸ ನಿಯಂತ್ರಣ ವಿಧಾನದಿಂದ ಅಸಲು ಕೀಟಗಳಂತೆ ವೇಗ, ತ್ವರಿತಗತಿ, ದೇಹ ತಿರುಗಿಸುವ ಕೋನ ಎಲ್ಲವನ್ನೂ ರೋಬೋಟ್‌ಗೆ ಅಳವಡಿಸುವಲ್ಲಿ ಯಶಸ್ವಿಯಾಗಿದ್ದೇವೆ” ಎಂದು ಹೇಳಿದ್ದಾರೆ. ಈ ಸಂಶೋಧನೆಯಲ್ಲಿ MITಯ ಹಲವು ವಿಭಾಗಗಳ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಭಾಗವಹಿಸಿದ್ದು, ಇದರ ವಿವರಗಳು Science Advances ಪತ್ರಿಕೆಯಲ್ಲಿ ಪ್ರಕಟವಾಗಿವೆ ಎಂದು ಎಂಐಟಿ ತನ್ನ ವರದಿಯಲ್ಲಿ ಹೇಳಿದೆ.

ಕೆಲ ವರ್ಷಗಳಿಂದ ಕೀಟದ ಗಾತ್ರದ ರೋಬೋಟ್‌ಗಳನ್ನು ತಯಾರಿಸುತ್ತಿರುವ ಚೆನ್ ಅವರ ತಂಡ ಇತ್ತೀಚೆಗೆ ಪೇಪರ್ ಕ್ಲಿಪ್‌ಗಿಂತ ಕಡಿಮೆ ತೂಕದ ಸದೃಢವಾದ ರೋಬೋಟ್‌ ಮಾದರಿಯನ್ನು ಅಭಿವೃದ್ಧಿಪಡಿಸಿತ್ತು. ಸುರುಳಿ ರಬ್ಬರ್‌ ತಂತ್ರಜ್ಞಾನದಂತಹ ಕೃತಕ ಮಾಂಸಖಂಡಗಳು ಅತಿ ವೇಗದಲ್ಲಿ ರೆಕ್ಕೆಗಳನ್ನು ಬಲಪಡಿಸುತ್ತವೆ. ಆದರೆ ಇದುವರೆಗೂ ರೋಬೋಟ್‌ಗಳ ನಿಯಂತ್ರಣ ಮಾನವರ ಕೈಲಿತ್ತು. ಇದು ರೋಬೋಟ್‌ಗೆ ಕೀಟದಂತೆ ಸರಾಗವಾಗಿ, ಚುರುಕಾಗಿ ಹಾರಲು ಮಿತಿ ಹಾಕಿತ್ತು. ಅನಿಶ್ಚಿತತೆಯಲ್ಲೂ ಕ್ಷಿಪ್ರವಾಗಿ ಕೆಲಸ ಮಾಡಬಲ್ಲ ಬಲಿಷ್ಠ AI ನಿಯಂತ್ರಣದ ಅವಶ್ಯಕತೆ ಇತ್ತು.

ಹಾಗಾಗಿ, ಚೆನ್ ಮತ್ತು ಏರ್ ಅಸ್ಟ್ರೋ ವಿಭಾಗದ ಪ್ರಾಧ್ಯಾಪಕ ಜೋನಾಥನ್ ಹೌ ಅವರ ತಂಡಗಳು ಸೇರಿಕೊಂಡು ಎರಡು ಹಂತದ AI ನಿಯಂತ್ರಣ ವಿಧಾನವನ್ನು ಸಿದ್ಧಪಡಿಸಿದರು. ಮೊದಲ ಹಂತದಲ್ಲಿ, ಮಾದರಿ–ಅನುಮಾನಕ ನಿಯಂತ್ರಣ (Model Predictive Control) ಬಳಸಿ ರೋಬೋಟ್‌ ಯಾವ ದಿಕ್ಕಿನಲ್ಲಿ ಹಾರಬೇಕು, ಯಾವ ಬಲಗಳನ್ನು ಬಳಸಬೇಕು ಎಂಬುದನ್ನು ಗಣಿತೀಯವಾಗಿ ಪೂರ್ವಾಹ್ನದಲ್ಲಿ ತೀರ್ಮಾನಿಸುವ ‘ತಜ್ಞ’ ನಿಯಂತ್ರಕವನ್ನು ಬಳಸಲಾಗಿದೆ. ಇದು ಗಗನದಲ್ಲಿ ತೀವ್ರ ತಿರುಗಾಟಗಳು, ವೇಗದ ತಿರುವುಗಳು, ನಿರಂತರ ಫ್ಲಿಪ್‌ಗಳು ಮುಂತಾದ ಸಂಕೀರ್ಣ ಚಲನೆಗಳಿಗೆ ಸೂಕ್ತವಾಗಿದೆ. ನಂತರ, ಈ ತಜ್ಞ ನಿಯಂತ್ರಕವನ್ನು ಬಳಸಿ ‘ಇಮಿಟೇಶನ್ ಲರ್ನಿಂಗ್’ ಮೂಲಕ ಅತ್ಯಲ್ಪ ಗಣಕಶಕ್ತಿಯನ್ನು ಬೇಕಾಗುವ ವೇಗದ AI ‘ಪಾಲಿಸಿ’ ಅನ್ನು ತರಬೇತುಗೊಳಿಸಲಾಗಿದೆ. ಈ ಪಾಲಿಸಿಯೇ ರೋಬೋಟ್‌ಗೆ ನಿಜವಾದ ಸಮಯದಲ್ಲಿ ಹೇಗೆ ಚಲಿಸಬೇಕು ಎಂದು ತಿಳಿಸುತ್ತದೆ.

Gemini Generated Image gyzaszgyzaszgyza
pc: AI

ಹಾಗಾಗಿ, ಚೆನ್ ಮತ್ತು ಪ್ರಾಧ್ಯಾಪಕ ಜೋನಾಥನ್ ಹೌ ಅವರ ತಂಡಗಳು ಸೇರಿಕೊಂಡು ಎರಡು ಹಂತದ AI ನಿಯಂತ್ರಣ ವಿಧಾನವನ್ನು ಸಿದ್ಧಪಡಿಸಿದರು. ಮೊದಲ ಹಂತದಲ್ಲಿ, ಮಾದರಿ–ಮುನ್ಸೂಚಕ ನಿಯಂತ್ರಣ (Model Predictive Control) ಬಳಸಿ ರೋಬೋಟ್‌ ಯಾವ ದಿಕ್ಕಿನಲ್ಲಿ ಹಾರಬೇಕು, ಯಾವ ಬಲಗಳನ್ನು ಬಳಸಬೇಕು ಎಂಬುದನ್ನು ತೀರ್ಮಾನಿಸುವ ‘ತಜ್ಞ’ ನಿಯಂತ್ರಕವನ್ನು ಬಳಸಿದರು. ಇದು ಗಗನದಲ್ಲಿ ತೀವ್ರ ತಿರುಗಾಟಗಳು, ವೇಗದ ತಿರುವುಗಳು, ನಿರಂತರ ಫ್ಲಿಪ್‌ಗಳು ಮುಂತಾದ ಸಂಕೀರ್ಣ ಚಲನೆಗಳಿಗೆ ಸೂಕ್ತವಾಗಿದೆ. ನಂತರ, ಈ ತಜ್ಞ ನಿಯಂತ್ರಕವನ್ನು ಬಳಸಿ ‘ಇಮಿಟೇಶನ್ ಲರ್ನಿಂಗ್’ ಮೂಲಕ ಅತ್ಯಲ್ಪ ಗಣಕಶಕ್ತಿ ಬೇಕಾಗುವ ವೇಗದ AI ಪಾಲಿಸಿಯನ್ನು ತರಬೇತುಗೊಳಿಸಲಾಗಿದೆ. ಈ ಪಾಲಿಸಿಯೇ ರೋಬೋಟ್‌ಗೆ ನಿಜವಾದ ಸಮಯದಲ್ಲಿ ಹೇಗೆ ಚಲಿಸಬೇಕು ಎಂದು ತಿಳಿಸುತ್ತದೆ.

ರೋಬೋಟ್ ತನ್ನ ಮಾರ್ಗದಿಂದ ಕೇವಲ 4–5 ಸೆಂ.ಮೀ ಮಾತ್ರ ಬದಲಾಗುವುದರಿಂದ ಇದರ ನಿಖರತೆಯೂ ಅದ್ಭುತವಾಗಿದೆ. ಸಂಶೋಧಕರು ಕೀಟಗಳಲ್ಲಿ ಕಂಡುಬರುವ ‘ಸ್ಯಾಕೇಡ್’ (ತೀವ್ರವಾಗಿ ದೇಹವನ್ನು ತಿರುಗಿಸಿ, ಒಂದು ಬಿಂದುವಿಗೆ ಕ್ಷಿಪ್ರವಾಗಿ ಹಾರಿ, ಮತ್ತೆ ತಿರುಗಿ ನಿಲ್ಲುವ ಈ ಚಲನೆ ಕೀಟಗಳು ತಮ್ಮ ಸುತ್ತಮುತ್ತಲನ್ನು ಗುರುತಿಸಿಕೊಳ್ಳಲು ಬಳಸುವ ತಂತ್ರವಾಗಿದೆ.) ಎಂಬ ಅತಿ ವೇಗದ ಚಲನೆಯನ್ನು ಸಹ ರೋಬೋಟ್‌ನಲ್ಲಿ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಮಹಿಳೆಯರಿಗೆ ಆನ್‌ಲೈನ್‌ ಕಿರುಕುಳ; ಇದು ಡಿಜಿಟಲ್‌ ಭೂತಗಳ ಬೆನ್ನಟ್ಟುವ ಕಾಲ!

ಮುಂದಿನ ಹಂತದಲ್ಲಿ, ಈ ರೋಬೋಟ್‌ಗಳಿಗೆ ಕ್ಯಾಮೆರಾ ಹಾಗೂ ಸಂವೇದಕಗಳನ್ನು ಅಳವಡಿಸಿ, ಸ್ವತಂತ್ರವಾಗಿ ಹಾರಬಲ್ಲ ವ್ಯವಸ್ಥೆಯನ್ನು ರೂಪಿಸುವುದು ಸಂಶೋಧಕರ ಗುರಿಯಾಗಿದೆ. ಜೊತೆಗೆ, ಒಂದಕ್ಕೊಂದು ಡಿಕ್ಕಿಯಾಗದಂತೆ, ಗುಂಪಾಗಿ ಹಾರುವುದನ್ನು ಕಲಿಸಲಾಗುತ್ತದೆ. ತಯಾರಿಕಾ ಮಟ್ಟದಲ್ಲಿ ಉಂಟಾಗುವ ಸಣ್ಣ ತಪ್ಪುಗಳು, ಹೆಚ್ಚು ಗಾಳಿಯ ಒತ್ತಡ, ತಂತಿ ಗುದ್ದಿಕೊಳ್ಳುವಂತಹ ಅಡಚಣೆಗಳ ನಡುವೆಯೂ ರೋಬೋಟ್‌ಗಳು ನಿಖರವಾಗಿ ಕಾರ್ಯನಿರ್ವಹಿಸಿರುವುದು ಸಂಶೋಧಕರಿಗೆ ಮತ್ತಷ್ಟು ವಿಶ್ವಾಸ ಕೊಟ್ಟಿದೆ.

ಕೀಟಗಳ ಚಲನೆಯನ್ನು ಅನುಕರಿಸುವ ಈ ಅತಿಸೂಕ್ಷ್ಮ ರೋಬೋಟ್‌ಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಹೆಮ್ಮೆಯ ಸಾಧನೆ. ಅವು ಜೀವ ಉಳಿಸುವ ಭವಿಷ್ಯದ ಹೊಸ ಭರವಸೆ. ತೀವ್ರ ಚುರುಕುತನ, ನಿಖರ ನಿಯಂತ್ರಣ ಮತ್ತು ವೇಗವನ್ನು ಒಟ್ಟುಗೂಡಿಸಿರುವ ಈ ಹೊಸ ನಿಯಂತ್ರಣ ತಂತ್ರಜ್ಞಾನವು ಮೈಕ್ರೋ ರೋಬೋಟಿಕ್ಸ್‌ ಕ್ಷೇತ್ರದಲ್ಲಿ ಮಹತ್ತರ ತಿರುವು ತಂದುಕೊಟ್ಟಿದೆ. ಮುಂದಿನ ವರ್ಷಗಳಲ್ಲಿ ಇದಕ್ಕೆ ಸಂವೇದಕಗಳು ಮತ್ತು ಕ್ಯಾಮೆರಾಗಳು ಸೇರಿಕೊಂಡಾಗ, ಮಾನವ ಜೀವ ರಕ್ಷಣೆ, ಅನ್ವೇಷಣೆ, ಪರಿಸರ ಮಾನಿಟರಿಂಗ್ ಮತ್ತು ಅಪಾಯ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಬಲ್ಲ ಹೊಸ ಯುಗದ ರೋಬೋಟ್‌ಗಳನ್ನು ನಾವು ಎದುರು ನೋಡುವುದು ಖಚಿತ.

ಮಾಹಿತಿ ಕೃಪೆ: MIT

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್‌ ಮೇಲೆ ಇರಾನ್ ದಾಳಿ; 50ಕ್ಕೂ ಹೆಚ್ಚು ಸಾವು, ಇಂಟರ್‌ಸೆಪ್ಟರ್ ನಾಶ

ಇಸ್ರೇಲ್‌ನ ಪರಮಾಣು ಚಟುವಟಿಕೆಗಳ ಪ್ರಮುಖ ಕೇಂದ್ರವೆಂದೇ ಗುರುತಿಸಲ್ಪಟ್ಟಿರುವ ದಕ್ಷಿಣದ ಡಿಮೋನಾ ನಗರದ...

ಅಸ್ಸಾಂ ಅಖಾಡ: ಬಿಜೆಪಿ ಮಿತ್ರಪಕ್ಷ ಎಜಿಪಿಯಿಂದ ಶೇ. 50 ಮುಸ್ಲಿಂ ಅಭ್ಯರ್ಥಿಗಳು; ಏನಿದು ‘ಕಮಲ’ದ ಹೊಸ ರಣತಂತ್ರ?

ತಾನು ತನ್ನ ಸೈದ್ಧಾಂತಿಕ ನಿಲುವಿನಂತೆ ಮುಸ್ಲಿಮರಿಗೆ ಟಿಕೆಟ್ ನಿರಾಕರಿಸಿದರೂ, ಅಧಿಕಾರ ಹಿಡಿಯುವ...

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...