ಮೋದಿ-ಟ್ರಂಪ್ ವ್ಯಾಪಾರ ಒಪ್ಪಂದ: ರೈತರ ಬದುಕಿಗೆ ಕೊಡಲಿಯಾಗುವುದೇ?

Date:

ಮೋದಿ-ಟ್ರಂಪ್‌ ವ್ಯಾಪಾರ ಒಪ್ಪಂದದಿಂದಾಗಿ 140 ಕೋಟಿ ಭಾರತೀಯರ ಸಾರ್ವಭೌಮತ್ವವನ್ನು 35 ಕೋಟಿ ಅಮೆರಿಕದವರು ನಿರ್ಧರಿಸುವುದಾದರೆ, ಭಾರತ ವಿಶ್ವಗುರುವಾಗಿ ಉಳಿಯುವುದೇ? 'ವಿಕಸಿತ ಭಾರತ'ದ ಕನಸನ್ನು ನನಸಾಗಿಸಬಲ್ಲದೇ? 

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದೂರವಾಣಿ ಸಂಭಾಷಣೆಯ ನಂತರ ಫೆಬ್ರವರಿ ಮೊದಲ ವಾರದಲ್ಲಿ ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದ(interim trade framework) ಘೋಷಣೆಯಾಯಿತು. ಈ ಬಗ್ಗೆ ಟ್ರಂಪ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದು, ‘ಭಾರತದ ಸರಕುಗಳ ಮೇಲಿನ ಸುಂಕವನ್ನು ಶೇ.50ರಿಂದ ಶೇ.18ಕ್ಕೆ ಇಳಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಭಾರತ ಅಮೆರಿಕದ ಕೈಗಾರಿಕಾ ಸರಕುಗಳ ಮೇಲಿನ ಸುಂಕವನ್ನು ಶೂನ್ಯ ಅಥವಾ ಗಣನೀಯವಾಗಿ ಕಡಿಮೆ ಮಾಡುತ್ತದೆ. ಭಾರತ ಅಮೆರಿಕದಿಂದ $500 ಬಿಲಿಯನ್ ಮೌಲ್ಯದ ಉತ್ಪನ್ನಗಳನ್ನು(ಶಕ್ತಿ, ವಿಮಾನ, ತಂತ್ರಜ್ಞಾನ, ಕೃಷಿ ಉತ್ಪನ್ನಗಳು) ಐದು ವರ್ಷಗಳಲ್ಲಿ ಖರೀದಿಸುವುದಾಗಿ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಹಿನ್ನೆಲೆಯಲ್ಲಿ ರಷ್ಯಾದಿಂದ ತೈಲ ಖರೀದಿ ಕಡಿಮೆ ಮಾಡುವುದು ಅಥವಾ ನಿಲ್ಲಿಸುವುದು ಮುಖ್ಯ ಷರತ್ತಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ದೇಶದ ಸಾರ್ವಭೌಮತ್ವದ ಮೇಲಿನ ದಾಳಿ ಮತ್ತು ನಾಚಿಕೆಗೇಡಿನ ಶರಣಾಗತಿಯಾಗಿದೆ. ಮೋದಿ-ಟ್ರಂಪ್ ವ್ಯಾಪಾರ ಒಪ್ಪಂದವು ನಮ್ಮ ದೇಶದ ಸಾರ್ವಭೌಮತ್ವಕ್ಕೆ ಕೊಟ್ಟ ಪೆಟ್ಟಾಗಿದೆ ಎಂಬ ಖಂಡನೆಗಳು ವ್ಯಕ್ತವಾಗುತ್ತಿವೆ. ಏಕೆಂದರೆ ಅಮೆರಿಕವು ರಷ್ಯಾದಿಂದ ತೈಲ ಖರೀದಿಯ ನಿರ್ಧಾರಗಳನ್ನು ಒಳಗೊಂಡಂತೆ ನಮ್ಮ ವಿದೇಶಾಂಗ ನೀತಿಗಳನ್ನು ನಿರ್ದೇಶಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ ಕಾರ್ಯನಿರ್ವಾಹಕ ಆದೇಶವು ಈ ಆದೇಶಗಳೊಂದಿಗೆ ನಮ್ಮ ಅನುಸರಣೆಯನ್ನು ನಿರ್ಣಯಿಸಲು ಮೇಲ್ವಿಚಾರಣಾ ಕಾರ್ಯವಿಧಾನವನ್ನು ಸ್ಥಾಪಿಸುತ್ತದೆ ಮತ್ತು ಅವುಗಳನ್ನು ಉಲ್ಲಂಘಿಸಿದರೆ ಸುಂಕಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕುವ ಸಾಧ್ಯತೆ ಇದೆ.

ಅಮೆರಿಕ ರಕ್ಷಣಾ ಪೂರೈಕೆಗಳ ಮೇಲಿನ ಅವಲಂಬನೆಯನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿರುವುದು ಅತ್ಯಂತ ಶೋಚನೀಯವಾಗಿದ್ದು, ಇದು ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿದೆ. ಪ್ರಧಾನಿ ಮೋದಿ ಮತ್ತೊಮ್ಮೆ ಟ್ರಂಪ್ ಆಡಳಿತದ ಮುಂದೆ ಶರಣಾಗಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆರ್ಥಿಕ ಸಾರ್ವಭೌಮತ್ವ ಎಂದರೆ ನಾವು ಯಾರೊಂದಿಗೆ ವ್ಯಾಪಾರ ಮಾಡುತ್ತೇವೆ, ಏನು ಖರೀದಿಸುತ್ತೇವೆ, ಎಷ್ಟು ಖರೀದಿಸುತ್ತೇವೆ ಎಂಬುದನ್ನು ನಾವೇ ನಿರ್ಧರಿಸುವುದು ಭಾರತ ಸರ್ಕಾರ ಮತ್ತು ಭಾರತೀಯ ಜನರ ಸಾರ್ವಭೌಮತ್ವವಾಗಿದೆ. ಆದರೆ ಅಮೆರಿಕದ ಒತ್ತಾಯದ ಮೇರೆಗೆ, ನಾವು ಎಲ್ಲಿಂದ ತೈಲ ಖರೀದಿಸುತ್ತೇವೆ, ಎಷ್ಟು ಖರೀದಿಸುತ್ತೇವೆ ಮತ್ತು ಯಾರಿಂದ ಖರೀದಿಸಬಾರದು ಎಂಬುದನ್ನು ಅಮೆರಿಕ ಸರ್ಕಾರ ನಿರ್ಧರಿಸಲು ಪ್ರಾರಂಭಿಸಿದರೆ, ಇದು ಸಂಪೂರ್ಣ ತ್ಯಾಗ ಮತ್ತು ಭಾರತದ ಆರ್ಥಿಕ ಸಾರ್ವಭೌಮತ್ವವನ್ನೇ ಬುಡಮೇಲು ಮಾಡಿದಂತಾಗುತ್ತದೆ.

ಏಕೆಂದರೆ, ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕ ರಹಿತ ಅಡೆತಡೆಗಳನ್ನು ತೆಗೆದುಹಾಕಲು ಸರ್ಕಾರ ಒಪ್ಪಿಕೊಂಡಿದ್ದು, ಇದು ಭಾರತೀಯ ರೈತರಿಗೆ ಬೆಂಬಲ ನಿರಾಕರಿಸಿದೆ. ಅಲ್ಲದೆ ಸ್ಥಳೀಯ ರೈತರ ಸಬ್ಸಿಡಿಗಳನ್ನು ಹಿಂತೆಗೆದುಕೊಳ್ಳುವ ಮೂಲಕ, ಭಾರೀ ಸಬ್ಸಿಡಿ ಹೊಂದಿರುವ ಅಮೆರಿಕದ ಕೃಷಿ ಉತ್ಪನ್ನಗಳೊಂದಿಗೆ ಸ್ಪರ್ಧೆಗೆ ಇಳಿಯುವಂತೆ ಮಾಡುತ್ತದೆ. ಇದು ಭಾರತೀಯ ಕೃಷಿಯನ್ನು ಹೆಚ್ಚೆಚ್ಚು ಅಶಕ್ತಗೊಳಿಸುತ್ತದೆ.

ಕೃಷಿ ಕ್ಷೇತ್ರದ ಮೇಲೆ ಕರಿನೆರಳು

ಈ ಒಪ್ಪಂದದಲ್ಲಿ ಭಾರತವು ಅಮೆರಿಕದಿಂದ ಆಮದಾಗುವ ಎಲ್ಲ ಕೈಗಾರಿಕಾ ಸರಕುಗಳು ಮತ್ತು ಹಲವು ಆಹಾರ ಹಾಗೂ ಕೃಷಿ ಉತ್ಪನ್ನಗಳ ಮೇಲಿನ ಸುಂಕಗಳನ್ನು ತೆಗೆದುಹಾಕುತ್ತದೆ ಅಥವಾ ಕಡಿಮೆಗೊಳಿಸುವುದರಿಂದ ಡಿಡಿಜಿ(ಗೋವಿನ ಜೋಳ)ಗಳು, ಕೆಂಪು ಸೋರ್ಘಮ್, ಸ್ವದೇಶಿ ಬೀಜಗಳ ಸಂಸ್ಕರಣೆ(ಕುಲಾಂತರಿ ಬೀಜ), ಒಣ ಹಣ್ಣುಗಳು, ಸೋಯಾಬೀನ್ ಎಣ್ಣೆ, ಆಲೂಗಡ್ಡೆ, ಸೇಬು, ವೈನ್ ಮತ್ತು ಸ್ಪಿರಿಟ್‌ಗಳಂತಹ ಉತ್ಪನ್ನಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿ, ಭಾರತದ ರೈತರಿಗೆ, ಪಶು ಆಹಾರ ಉದ್ಯಮಕ್ಕೆ ಹಾನಿಯುಂಟು ಮಾಡುತ್ತವೆ. ಅಲ್ಲದೆ ಈ ಒಪ್ಪಂದವು ಎಲ್ಲ ರಕ್ಷಣೆಯನ್ನು ತೆಗೆದುಹಾಕಿ, ಅಮೆರಿಕದ ಕೃಷಿಯೊಂದಿಗೆ ಭಾರತೀಯ ರೈತರನ್ನು ನೇರ ಸ್ಪರ್ಧೆಗೆ ತಳ್ಳುವ ಮೂಲಕ, ಕೃಷಿಗೆ ಮರಣದಂಡನೆ ವಿಧಿಸಿದಂತೆ ಇದೆ.

ಒಪ್ಪಂದದಲ್ಲಿ ಕೃಷಿ ಮತ್ತು ಹೈನು ಉತ್ಪನ್ನಗಳಿಗೆ ರಕ್ಷಣೆ ಒದಗಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಒಪ್ಪಂದದಿಂದ ಭಾರತದ ಕೆಲವು ವಲಯಗಳಿಗೆ ಲಾಭವಾಗುತ್ತದೆಯಾದರೂ ಕೆಲವು ವಲಯಗಳಲ್ಲಿ ಬಿಕ್ಕಟ್ಟು ಸೃಷ್ಟಿಯಾಗಲಿದೆ. ಭಾರತದಲ್ಲಿ ಹೆಚ್ಚಾಗಿ ಡ್ರೈ ಫ್ರೂಟ್‌ ಬೆಳೆಯದ ಕಾರಣ ಅದರ ಮೇಲಿನ ಸುಂಕ ಕಡಿತ ಅಥವಾ ಶೂನ್ಯ ಸುಂಕದ ಕ್ರಮವು ಭಾರತದ ಕೃಷಿ ವಲಯದ ಮೇಲೆ ಹೆಚ್ಚೇನೂ ಪರಿಣಾಮಬೀರದು. ಆದರೆ, ಮುಸುಕಿನ ಜೋಳ, ಸೋಯಾಬೀನ್ ಎಣ್ಣೆ ಮತ್ತು ಪಶು ಆಹಾರದಲ್ಲಿ ಬಳಸುವ ಇತರ ಕೃಷಿ ಉತ್ಪನ್ನಗಳ ಬೆಲೆಯ ಮೇಲೆ ಈ ಒಪ್ಪಂದವು ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಗೋವಿನ ಜೋಳದ ಜತೆಗೆ ಮುಸುಕಿನ ಜೋಳವನ್ನು ಡಿಡಿಜಿಎಸ್ ವಿಭಾಗದ ಅಡಿಯಲ್ಲೇ ಮಾರಲಾಗುತ್ತದೆ. ಅಮೆರಿಕದಿಂದ ಮುಸುಕಿನ ಜೋಳ, ಸೋಯಾಬೀನ್, ಹತ್ತಿ ಈಗಾಗಲೇ ಭಾರತಕ್ಕೆ ಆಮದಾಗುತ್ತಿದ್ದು, ಗೋಧಿಯನ್ನು ಕೆ.ಜಿಗೆ ₹18.50ಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದು ಭಾರತದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದರೆ, ಭಾರತದ ರೈತರ ಪಾಲಿಗೆ ಮರಣಶಾಸನವಾಗಲಿದೆ, ಭಾರತದ ಪಶು ಆಹಾರ ಕ್ಷೇತ್ರವು ಅಮೆರಿಕದ ಹಿಡಿತಕ್ಕೆ ಹೋಗಲಿದೆ.

ಇತ್ತೀಚಿನ ವರ್ಷಗಳಲ್ಲಿ ಸೋಯಾಬೀನ್ ಬೆಲೆ ಕುಸಿದಿದ್ದು, ಮಧ್ಯಪ್ರದೇಶ, ಮಹಾರಾಷ್ಟ್ರ ತೆಲಂಗಾಣ ಮತ್ತು ರಾಜಸ್ಥಾನದ ರೈತರು ಈಗಾಗಲೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗ ಸೋಯಾಬೀನ್ ಎಣ್ಣೆ ಆಮದು ಮಾಡಿಕೊಂಡರೆ, ಬೆಲೆಗಳು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.

ಕುಲಾಂತರಿ ಬೀಜಗಳ ಅಪಾಯ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಆಹಾರ ಉತ್ಪನ್ನಗಳಿಗೆ ಸಂಬಂಧಿಸಿದ 24 ಬೆಳೆಗಳು ಕುಲಾಂತರಿ ಮುಕ್ತ ಪ್ರಮಾಣ ಪತ್ರ ಹೊಂದಿದ್ದರೆ ಮಾತ್ರವೇ ಅವು ಭಾರತಕ್ಕೆ ಆಮದಾಗಲು ಅರ್ಹವಾಗುತ್ತವೆ. ಆದರೆ, ಅಮೆರಿಕದ ಡಿಡಿಜಿಎಸ್‌ನಲ್ಲಿ ಕುಲಾಂತರಿ ಧಾನ್ಯಗಳನ್ನು ಬಳಸಲಾಗುತ್ತಿದೆ. ಈ ಮೂಲಕ ಪರೋಕ್ಷವಾಗಿ ಕುಲಾಂತರಿ ಉತ್ಪನ್ನಗಳು ಭಾರತ ಪ್ರವೇಶಿಸಲಿವೆ.

ಭಾರತವು ಕುಲಾಂತರಿ ಬೀಜಗಳಿಗೆ ನಿರ್ಬಂಧ ವಿಧಿಸಿರುವುದರ ಬಗ್ಗೆ ಅಮೆರಿಕ ಆಕ್ಷೇಪಣೆ ಎತ್ತುತ್ತಲೇ ಬಂದಿತ್ತು. ಆದರೆ ಈಗ ಪರೋಕ್ಷವಾಗಿ ಅವುಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕುಲಾಂತರಿ ತಳಿಗಳ ಬೀಜಗಳು ಮತ್ತು ಆಹಾರ ಉತ್ಪನ್ನಗಳು ನಮ್ಮ ಕೃಷಿ ಭೂಮಿಯ ಫಲವತ್ತತೆಯನ್ನು ಹಾಳು ಮಾಡಿ ಧಾನ್ಯ, ಬೇಳೆಕಾಳು ಮತ್ತು ಎಣ್ಣೆಬೀಜಗಳ ಮಾರುಕಟ್ಟೆಗೆ ಹಾನಿ ಮಾಡಲಿವೆ. ಸೋಯಾಬೀನ್ ಎಣ್ಣೆಯಂತಹ ಉತ್ಪನ್ನಗಳ ಮೇಲಿನ ಸುಂಕವನ್ನು ಮತ್ತಷ್ಟು ಕಡಿತಗೊಳಿಸುವುದರಿಂದ, ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

“ಸೇಬುಗಳಂತಹ ಅಗ್ಗದ ಆಮದುಗಳಿಂದ ದೇಶೀಯ ಸೇಬು ಬೆಳೆಗಾರರು ಬೆಳೆದ ಉತ್ಪಾದನೆಯ ಮೇಲೆ ಭೀಕರ ಪರಿಣಾಮಗಳನ್ನು ಬೀರಬಹುದು. ಆಮದು ಕೋಟಾಗಳು ಅಥವಾ ಸೇಬು ಸೇರಿದಂತೆ ಸರಕುಗಳಿಗೆ ಕನಿಷ್ಠ ಆಮದು ಬೆಲೆಗಳಂತಹ ಒಪ್ಪಂದದಲ್ಲಿ ಸೇರಿಸಲಾದ ಸುರಕ್ಷತಾ ಕ್ರಮಗಳು ವಿದೇಶಿ ಸ್ಪರ್ಧೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಭಾರತೀಯ ಕೃಷಿ ಜಮೀನುಗಳು ತುಂಬಾ ಚಿಕ್ಕದಾಗಿದ್ದು, ಅವು ನಿಜವಾಗಿಯೂ ಹೆಚ್ಚಿನ ಸಬ್ಸಿಡಿ ಹೊಂದಿರುವ ಅಮೆರಿಕದ ಕೃಷಿಯೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ” ಎಂದು ಕೃಷಿ ಸಚಿವಾಲಯದ ಮಾಜಿ ಉನ್ನತ ಅಧಿಕಾರಿ ಸಿರಾಜ್ ಹುಸೇನ್ ಹೇಳಿದ್ದಾರೆ.

ಒಪ್ಪಂದದ ಬಗ್ಗೆ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(CPI)ದ ನಾಯಕ ಡಿ. ರಾಜಾ ಖಂಡನೆ ವ್ಯಕ್ತಪಡಿಸಿದ್ದು, “ಅಮೆರಿಕಾದಿಂದ ಭಾರತದ ರಫ್ತುಗಳ ಮೇಲಿನ ಸುಂಕ ಕಡಿತಗೊಳಿಸುವುದನ್ನು(50% ರಿಂದ 18%ಗೆ ಇಳಿಸುವುದು) ದೊಡ್ಡ ಗೆಲುವು ಎಂದು ತೋರಿಸಲಾಗುತ್ತಿದೆ. ಆದರೆ ಇದು ಶರತ್ತುಬದ್ಧ ಮತ್ತು ಮಿತಿಯುಳ್ಳದ್ದಾಗಿದೆ. ಇದಕ್ಕೆ ವಿರುದ್ಧವಾಗಿ, ಭಾರತವನ್ನು ದೊಡ್ಡ ಪ್ರಮಾಣದ ಆಮದು ಬದ್ಧತೆಗಳ ಕಡೆಗೆ ತಳ್ಳಲಾಗುತ್ತಿದೆ. ಇದು ಪ್ರಸ್ತುತ ವ್ಯಾಪಾರ ಪ್ರಮಾಣಕ್ಕಿಂತ ಹೆಚ್ಚು ಮತ್ತು ರಾಷ್ಟ್ರೀಯ ಆದ್ಯತೆಗಳನ್ನು ವಿಕೃತಗೊಳಿಸುತ್ತದೆ” ಎಂದಿದ್ದಾರೆ.

“ಹಿಂಬಾಗಿಲಿನಿಂದ ನಡೆಯುವ ಇಂತಹ ಏರ್ಪಾಡುಗಳಿಂದ ಪಾರದರ್ಶಕತೆ, ಪ್ರಜಾಪ್ರಭುತ್ವದ ಪರಿಶೀಲನೆ ಮತ್ತು ಆರ್ಥಿಕ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತವೆ. ಅಲ್ಲದೆ ಈ ಒಪ್ಪಂದದ ಗಂಭೀರ ಪರಿಣಾಮಗಳನ್ನು ಭಾರತದ ರೈತರು ಮತ್ತು ಕೃಷಿ ಕಾರ್ಮಿಕರು ಎದುರಿಸಬೇಕಾಗುತ್ತದೆ” ಎಂದು ಆರೋಪಿಸಿದ್ದಾರೆ.‌

ಕೆಪಿಆರ್‌ ಕಲಬುರಗಿ ಜಿಲ್ಲಾ ಮುಖಂಡ ಶರಣಬಸಪ್ಪ ಮಮಶೆಟ್ಟಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸರ್ಕಾರಗಳು ದೇಶದ ರೈತರ ಬೆಳೆಗಳ ಖರೀದಿಗೆ ಎಂಎಸ್‌ಪಿ ನೀಡುವುದಾಗಲಿ, ರೈತರ ಸಾಲ ಮನ್ನಾ ಮಾಡುವುದಾಗಲಿ ಅಥವಾ ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವುದಾಗಲಿ ಮಾಡುತ್ತಿಲ್ಲ. ಈಗಾಗಲೇ ಭಾರತೀಯ ರೈತರು ಬೆಳೆಗಳಿಗೆ ಸೂಕ್ತ ಬೆಲೆಗಳಿಲ್ಲದೆ ನಿತ್ಯವೂ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಬೀದಿಗೆ ಸುರಿದು ಹೋರಾಡುತ್ತಿದ್ದಾರೆ. ಹೀಗಿರುವಾಗ ಆಮದು ಸುಂಕವಿಲ್ಲದೆ, ವಿದೇಶಿ ಉತ್ಪನ್ನಗಳು ನಮ್ಮ ದೇಶಕ್ಕೆ ಲಗ್ಗೆಯಿಟ್ಟರೆ, ಈ ನೆಲದ ರೈತರ ಅಸ್ತಿತ್ವ ಉಳಿಯಲು ಸಾಧ್ಯವೇ? ಅತೀವೃಷ್ಟಿಯಿಂದ ಹಾನಿಯಾಗಿರುವ ಬೆಳೆಗಳಿಗೆ ಪರಿಹಾರವೇ ಸಿಗದಿರುವ ಇಂಥ ಹೊತ್ತಿನಲ್ಲಿ ವಿದೇಶಿ ಕೃಷಿ ಉತ್ಪನ್ನಗಳು ದೇಶೀಯ ರೈತರನ್ನು ನುಂಗುತ್ತವೆಯೇ ಹೊರತು ಇನ್ನೇನೂ ಬದಲಾಗಲು ಸಾಧ್ಯವಿಲ್ಲ. ಹಾಗಾಗಿ ಇಂಥ ಒಪ್ಪಂದವನ್ನು ಹಿಂತೆಗೆದುಕೊಳ್ಳುವಂತೆ ಫೆಬ್ರವರಿ 12ರಂದು ದೇಶಾದ್ಯಂತ ಮುಷ್ಕರ ನಡೆಸಲು ಮುಂದಾಗಿದ್ದೇವೆ”ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿದ್ದೀರಾ? ಉತ್ತರ ಕನ್ನಡ | ಹಸಿರು ಜಿಲ್ಲೆಯಲ್ಲಿ ಅನ್ನದಾತನ ಅಳಲು; ರೈತರ ಸರಣಿ ಆತ್ಮಹತ್ಯೆ ಕೇಳುವುದೇನು?

ಈ ಒಪ್ಪಂದ ಭಾರತದ ರಫ್ತು ಮತ್ತು ಉದ್ಯಮ ಕ್ಷೇತ್ರಗಳಿಗೆ ದೊಡ್ಡ ಅವಕಾಶ ತೆರೆಯಬಹುದಾದರೂ ಕೃಷಿ ಕ್ಷೇತ್ರದಲ್ಲಿ ಸ್ಥಳೀಯ ರೈತರನ್ನು ರಕ್ಷಿಸದಿದ್ದರೆ, ದೀರ್ಘಕಾಲದಲ್ಲಿ ಗ್ರಾಮೀಣ ಆರ್ಥಿಕತೆಗೆ ಭಾರೀ ಹೊಡೆತ ಬೀಳುತ್ತದೆ. ಸರ್ಕಾರ ರೈತರ ಆತಂಕಗಳನ್ನು ಗಂಭೀರವಾಗಿ ಪರಿಗಣಿಸಿ, ಪಾರದರ್ಶಕ ಚರ್ಚೆ ನಡೆಸಿ, ಅಗತ್ಯ ರಕ್ಷಣಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಇದು ಕೇವಲ ವ್ಯಾಪಾರ ಒಪ್ಪಂದವಾಗದೆ, ದೇಶದ ಕೋಟ್ಯಂತರ ರೈತರ ಭವಿಷ್ಯದ ಪ್ರಶ್ನೆಯಾಗಿ ಪರಿಣಮಿಸಬಹುದು.

ಮೋದಿ-ಟ್ರಂಪ್‌ ವ್ಯಾಪಾರ ಒಪ್ಪಂದದಿಂದಾಗಿ 140 ಕೋಟಿ ಭಾರತೀಯರ ಸಾರ್ವಭೌಮತ್ವವನ್ನು 35 ಕೋಟಿ ಅಮೆರಿಕದವರು ನಿರ್ಧರಿಸುವುದಾದರೆ, ಭಾರತ ವಿಶ್ವಗುರುವಾಗಿ ಉಳಿಯುವುದೇ? ‘ವಿಕಸಿತ ಭಾರತ’ದ ಕನಸನ್ನು ನನಸಾಗಿಸಬಲ್ಲದೇ?

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....