ಸಿರಿಯಾದ ಹಂಗಾಮಿ ಪ್ರಧಾನಿಯಾಗಿ ಮೊಹಮ್ಮದ್ ಅಲ್ ಬಶೀರ್ ನೇಮಕ

Date:

ಸಿರಿಯಾದ ಹಂಗಾಮಿ ಪ್ರಧಾನಿಯಾಗಿ ಮೊಹಮ್ಮದ್ ಅಲ್ ಬಶೀರ್ ಅವರನ್ನು ನೇಮಿಸಲಾಗಿದೆ. ಬಶೀರ್ ಅವರು 2025ರ ಮಾರ್ಚ್ 1ರವರೆಗೆ ಹಂಗಾಮಿ ಪ್ರಧಾನಿಯಾಗಿರಲಿದ್ದಾರೆ ಎಂದು ಸಿರಿಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಅಲ್ ಬಶೀರ್ ಡಮಾಸ್ಕಸ್‌ನ ಸ್ವಾಧೀನಕ್ಕೆ ಪಡೆದಿರುವ ಹಯಾತ್ ತಹ್ರೀರ್ ಅಲ್-ಶಮ್ಸ್‌ನೊಂದಿಗೆ (ಎಚ್‌ಟಿಎಸ್‌) ನಿಕಟ ಸಂಬಂಧ ಹೊಂದಿದ್ದಾರೆ. ಸಿರಿಯನ್ ಸರ್ಕಾರವನ್ನು ಮುನ್ನಡೆಸುತ್ತಾರೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನು ಓದಿದ್ದೀರಾ? ಸಿರಿಯಾ ಸರ್ಕಾರ ಪತನ: ಅಮೆರಿಕ – ಇಸ್ರೇಲ್‌ ದಾಹಕ್ಕೆ ಮತ್ತೊಂದು ರಾಷ್ಟ್ರ ಬಲಿಯಾಯಿತೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಶೀರ್ 1983ರಲ್ಲಿ ಇಡ್ಲಿಬ್ ಪ್ರಾಂತ್ಯದಲ್ಲಿರುವ ಜಬಲ್ ಅಲ್-ಜವಿಯಾದಲ್ಲಿ ಜನಿಸಿದರು. ಇದು ಇತ್ತೀಚೆಗೆ ಎಚ್‌ಟಿಎಸ್‌ ಮತ್ತು ಇತರೆ ಮಿತ್ರ ಪಕ್ಷಗಳಿಂದ ನಿಯಂತ್ರಿಸಲ್ಪಡುತ್ತಿರುವ ಪ್ರದೇಶವಾಗಿದೆ.

ಬಶೀರ್ ಅಲೆಪ್ಪೊ ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದು, ಇಡ್ಲಿಬ್ ವಿಶ್ವವಿದ್ಯಾನಿಲಯದಲ್ಲಿ ಇಸ್ಲಾಮಿಕ್ ಮತ್ತು ಸಿವಿಲ್ ಕಾನೂನನ್ನು ಅಧ್ಯಯನ ಮಾಡಿದರು. ಈ ಹಿಂದೆ ಸಿರಿಯಾದ ರಾಜ್ಯ ಅನಿಲ ಕಂಪನಿಯಲ್ಲಿ ಕೆಲಸ ಮಾಡಿದ್ದರು ಎಂದು ವರದಿಯಾಗಿದೆ.

ಜನವರಿಯಿಂದ, ಅವರು ಬಂಡಾಯ ಆಡಳಿತದ ‘ಸಾಲ್ವೇಶನ್ ಗವರ್ನ್‌ಮೆಂಟ್’ (ಮುಕ್ತಿ ಸರ್ಕಾರ) ಎಂದು ಕರೆಯಲ್ಪಡುವ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಅಭಿವೃದ್ಧಿ ಸಚಿವರಾಗಿದ್ದರು.

ಇದನ್ನು ಓದಿದ್ದೀರಾ? ದೇಶ ತೊರೆದ ಸಿರಿಯಾ ಅಧ್ಯಕ್ಷ: ಅಸ್ಸಾದ್ ಕುಟುಂಬದ 50 ವರ್ಷಗಳ ಆಡಳಿತ ಅಂತ್ಯ

ಇತ್ತೀಚೆಗೆ ಸಿರಿಯಾ ಬಂಡುಕೋರರು ಸರ್ಕಾರ ಪತನಗೊಂಡಿದೆ ಎಂದು ಘೋಷಿಸಿದ್ದಾರೆ. ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಕುಟುಂಬ ಸಮೇತ ದೇಶ ತೊರೆದಿದ್ದು ಈ ಮೂಲಕ ಸಿರಿಯಾದಲ್ಲಿ ಅಸಾದ್ ಕುಟುಂಬದ 50 ವರ್ಷಗಳ ಆಡಳಿತ ಅಂತ್ಯವಾಗಿದೆ.

ಡಮಾಸ್ಕಸ್ ದಿಗ್ವಿಜಯ ಎಂಬ ಹೆಸರಿನಲ್ಲಿ ಸಿರಿಯಾ ಸರ್ಕಾರ ವಿರುದ್ಧ ಬಂಡಾಯ ಎದ್ದಿರುವ ಗುಂಪು “ಈಗ ದೇಶ ಸ್ವತಂತ್ರವಾಗಿದೆ. ಎಲ್ಲ ನಾಗರಿಕರು, ಬಂಡಾಯ ಹೋರಾಟಗಾರರು ಸ್ವತಂತ್ರ ಸಿರಿಯಾವನ್ನು ರಕ್ಷಿಸಿಕೊಳ್ಳೋಣ” ಎಂದು ಕರೆ ನೀಡಿದ್ದಾರೆ.

ಪದಚ್ಯುತ ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಮತ್ತು ಕುಟುಂಬವು ಮಾಸ್ಕೋಗೆ ಪಲಾಯನಗೊಂಡಿದೆ. ಅವರಿಗೆ ಆಶ್ರಯ ನೀಡಲಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...