ಭಾರತದಲ್ಲಿ ಭಯವಿದೆ ಎಂದು ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿದ್ದ 97 ಸಾವಿರ ಭಾರತೀಯರ ಬಂಧನ

Date:

ಅಕ್ಟೋಬರ್ 2022 ಮತ್ತು ಸೆಪ್ಟೆಂಬರ್ 2023 ರ ನಡುವೆ ಅಮೆರಿಕ ದೇಶಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿದ್ದ ಸುಮಾರು 96,917 ಭಾರತೀಯರನ್ನು ಬಂಧಿಸಲಾಗಿದೆ ಎಂದು ಅಮೆರಿಕದ ಇತ್ತೀಚಿನ ಕಸ್ಟಮ್ಸ್ ಮತ್ತು ಗಡಿ ಸಂರಕ್ಷಣಾ ವಿಭಾಗ ತನ್ನ ಅಂಕಿಅಂಶ ಬಹಿರಂಗಪಡಿಸಿದೆ.

ಕಾನೂನುಬಾಹಿರವಾಗಿ ಅಮೆರಿಕ ಗಡಿಯನ್ನು ಪ್ರವೇಶಿಸುತ್ತಿದ್ದಾಗ ಬಂಧಿತರಾದ ಭಾರತೀಯರು ಕಳೆದ ವರ್ಷಗಳಲ್ಲಿ ಐದು ಪಟ್ಟು ಹೆಚ್ಚಳವನ್ನು ಕಂಡಿದ್ದಾರೆ ಎಂದು ಅಂಕಿಅಂಶಗಳಲ್ಲಿ ವರದಿಯಾಗಿದೆ.

2019-20ರಲ್ಲಿ 19,883, 2020-21ರಲ್ಲಿ 30,662, 2021-22ರಲ್ಲಿ ಈ ಸಂಖ್ಯೆ 63,927 ಏರಿಕೆಯಾಗಿತ್ತು ಎಂದು ಅಂಕಿಅಂಶಗಳು ತಿಳಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಕ್ಟೋಬರ್ 2022 ಮತ್ತು ಸೆಪ್ಟೆಂಬರ್ ನಡುವೆ ಬಂಧಿಸಲಾದ 96,917 ಭಾರತೀಯರಲ್ಲಿ 30,010 ಕೆನಡಾದ ಗಡಿಯಲ್ಲಿ ಮತ್ತು 41,770 ಮೆಕ್ಸಿಕೊ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಬಂಧಿತರನ್ನು ಅಪ್ರಾಪ್ತ ವಯಸ್ಕರು, ಕುಟುಂಬ ಹೊಂದಿರುವ ವಯಸ್ಕರು, ಒಂಟಿಯಾಗಿರುವ ವಯಸ್ಕರು ಮತ್ತು ಮಕ್ಕಳು ಹೊಂದಿಲ್ಲದ ವಯಸ್ಕರು ಎಂದು ನಾಲ್ಕು ವರ್ಗಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.

ಒಂಟಿಯಾಗಿರುವ ವಯಸ್ಕರು ದೊಡ್ಡ ವರ್ಗದಲ್ಲಿದ್ದಾರೆ. 2023 ರ ಆರ್ಥಿಕ ವರ್ಷದಲ್ಲಿ, 84,000 ಭಾರತೀಯ ವಯಸ್ಕರು ಅಕ್ರಮವಾಗಿ ಅಮೆರಿಕವನ್ನು ದಾಟಿದ್ದಾರೆ.

ಬಂಧಿತರಲ್ಲಿ 730 ಅಪ್ರಾಪ್ತ ವಯಸ್ಕರು ಸೇರಿದ್ದಾರೆ. ಅಮೆರಿಕ ಫೆಡರಲ್ ಸರ್ಕಾರದ ಹಣಕಾಸಿನ ವರ್ಷವು ಅಕ್ಟೋಬರ್ 1 ರಿಂದ ಸೆಪ್ಟೆಂಬರ್ 30 ರವರೆಗೆ ನಡೆಯುತ್ತದೆ.

ಈ ಸುದ್ದಿ ಓದಿದ್ದೀರಾ? ಕೇರಳ ಸಿಎಂಗೆ ಜೀವ ಬೆದರಿಕೆಯೊಡ್ಡಿದ 12 ವರ್ಷ ಬಾಲಕನ ಪೋಷಕರು ಹೇಳಿದ್ದೇನು ಗೊತ್ತೆ?

ಸೆನೆಟರ್ ಜೇಮ್ಸ್ ಲ್ಯಾಂಕ್‌ಫೋರ್ಡ್ ಗುರುವಾರ ಸೆನೆಟ್‌ನಲ್ಲಿ ಮಾತನಾಡಿ, ಈ ಜನರು ಹತ್ತಿರದ ವಿಮಾನ ನಿಲ್ದಾಣದ ಮೂಲಕ ಮೆಕ್ಸಿಕೊಕ್ಕೆ ತೆರಳಲು ಫ್ರಾನ್ಸ್‌ನಂತಹ ದೇಶಗಳಿಗೆ ಹೋಗುವುದಾಗಿ ಹೇಳಿ ಸುಮಾರು ನಾಲ್ಕು ವಿಮಾನಗಳನ್ನು ತೆಗೆದುಕೊಳ್ಳುತ್ತಾರೆ. ನಂತರ ಗಡಿಯವರೆಗೆ ಬಾಡಿಗೆಗೆ ಪಡೆದ ಬಸ್ ಅನ್ನು ಪಡೆದು ಅಂತಿಮ ಪ್ರದೇಶದವರೆಗೂ ಪ್ರಯಾಣಿಸುತ್ತಾರೆ.

“ಅವರು ಸಿಕ್ಕಿಬಿದ್ದಾಗ ಹೇಳುವ ಮಾತು ನನ್ನ ದೇಶದಲ್ಲಿ ನನಗೆ ಭಯವಿದೆ” ಎಂದು ಲ್ಯಾಂಕ್‌ಫೋರ್ಡ್ ಹೇಳಿದರು.

“ಈ ವರ್ಷ ಇಲ್ಲಿಯವರೆಗೆ ಭಾರತದಿಂದ 45,000 ಜನರು ನಮ್ಮ ದಕ್ಷಿಣದ ಗಡಿಯ ಮೂಲಕ ಭದ್ರತಾ ಅಧಿಕಾರಿಗಳಿಗೆ ಹಣವನ್ನು ನೀಡಿ ದಾಟಿದ್ದಾರೆ. ಅವರು ಸಿಕ್ಕಿಬಿದ್ದಾಗ ಭಾರತದಿಂದ ತಮಗೆ ಭಯವಿದೆ ಎಂದು ಹೇಳಿದರು” ಎಂದು ಲ್ಯಾಂಕ್‌ಫೋರ್ಡ್ ತಿಳಿಸಿದ್ದಾರೆ.

“ನಾವು ಪ್ರಪಂಚದಾದ್ಯಂತದ ಆಗಮಿಸುವ ನಿರಾಶ್ರಿತರನ್ನು ಮೆಕ್ಸಿಕೊ ಗಡಿಯಿಂದ ಕರೆದೊಯ್ಯುತ್ತೇವೆ. ಆಶ್ರಯ ಪಡೆಯುವವರು ತಾವು ನಿರಾಶ್ರಿತರು ಎಂಬ ಮಾನದಂಡ ಹೊಂದಿರುತ್ತಾರೆ. ಅವರು ಮುಂದಿನ ಸುರಕ್ಷಿತ ಸ್ಥಳಕ್ಕೆ ಹೋಗಬೇಕು, ಅಲ್ಲಿಗೆ ಹೋಗಿ ಆಶ್ರಯವನ್ನು ಪಡೆದುಕೊಳ್ಳಬೇಕು. ಇದು ಅಂತಾರಾಷ್ಟ್ರೀಯ ಮಾನದಂಡವಾಗಿದೆ” ಎಂದು ಲ್ಯಾಂಕ್‌ಫೋರ್ಡ್ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...