ಇರಾನ್- ಇಸ್ರೇಲ್-ಅಮೆರಿಕ ನಡುವಿn ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ನಡೆದ ಗಂಭೀರ ಬಿಕ್ಕಟ್ಟುಗಳಲ್ಲಿಒಂದಾಗಿ ಪರಿಣಮಿಸಿದೆ. ತೀವ್ರತರವಾಗಿ ಹರಡುತ್ತಿರುವ ಯುದ್ಧ ಜ್ವಾಲೆಯಲ್ಲಿ ಅಪಾರ ಸಾವು-ನೋವು ಸಂಭವಿಸಿದೆ. ಜೊತೆಗೆ, ಜಗತ್ತಿನಾದಂತ್ಯ ಇಂಧನ ಅಭಾವ ಸೃಷ್ಟಿಯಾಗಿದೆ. ಫೆಬ್ರವರಿ 28 ರಂದು ಶುರುವಾದ ಈ ಯುದ್ಧ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ವೈಮಾನಿಕ ದಾಳಿಯಿಂದ ಪ್ರಾರಂಭವಾಯಿತು.ಇರಾನಿನ ಪರಮೋಚ್ಚ ನಾಯಕ ಅಲಿ ಖಮೇನಿಯನ್ನು ಕೊಂದು ಇರಾನಿನ ವ್ಯಾಪಕ ಸೇಡಿನ ಪ್ರತಿಕ್ರಿಯೆಗೆ ಕಾರಣವಾಯಿತು.
ಈ ಸಂಘರ್ಷವು ಜಾಗತಿಕ ಆರ್ಥಿಕತೆಗೆ ತೀವ್ರ ಹಾನಿ ಉಂಟು ಮಾಡುತ್ತದೆ ಎಂದು ಇರಾನ್ ಎಚ್ಚರಿಸಿದೆ. ಹಾರ್ಮುಜ್ ಜಲಸಂಧಿಯ ಮೇಲೆ ಸತತ ಹಿಡಿತ ಸಾಧಿಸಿಕೊಂಡಿರುವ ಇರಾನ್, ಇಸ್ರೇಲ್ ಮತ್ತು ಅಮೆರಿಕಕ್ಕೆ ಸಂಬಂಧಿಸಿದ ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿ ಪಡಿಸುವ ಬೆದರಿಕೆ ಒಡ್ಡಿದೆ. ಈ ಮಧ್ಯೆ ಇರಾನ್ ಸಂಸತ್ತಿನ ಸಭಾಪತಿ ಮೊಹಮ್ಮದ್ ಘಾಲಿಬಾಫ್ ಅವರ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ. ಇರಾನ್ ಮೇಲೆ ನಡೆಯುತ್ತಿರುವ ದಾಳೀಗಳ ತೀವ್ರತೆಯನ್ನು ಪ್ರಸ್ತಾಪಿಸಿದ ಅವರು, ‘ಇನ್ನು ಮುಂದೆ ಅಮೆರಿಕ-ಇಸ್ರೇಲ್ ನಡುವೆ ಇರಾನಿನ ಇಸ್ಲಾಮಿಕ್ ರಿಪಬ್ಲಿಕ್ ಯಾವುದೇ ಭೇದವನ್ನು ಕಾಣುವುದಿಲ್ಲ’ ಎಂದು ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ವಂಚಿಸಿದ್ದಾರೆ ಎಂದ ಅವರು, “ಇಸ್ರೇಲ್ ತನ್ನ ಲಾಭಕ್ಕಾಗಿ ಟ್ರಂಪ್‌ರನ್ನು ಬಳಸಿಕೊಂಡಿದೆ. ಟ್ರಂಪ್ ಅವರ ದಾರಿ ತಪ್ಪಪಿಸಿದ ಇಸ್ರೇಲ್ ಯುದ್ದಕ್ಕೆ ಪ್ರಚೋದನೆ ನೀಡಿದೆ. ಟ್ರಂಪ್ ಈಗ ನೆತನ್ಯಾಹು ನಿಯಂತ್ರಣದಲ್ಲಿ ಇದ್ದಾರೆ” ಎಂದು ಘಾಲಿಬಾಪ್ ಹೇಳಿದ್ದಾರೆ.
ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ಸ್, ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ಮೇಲೆ ಸರಣಿ ಪ್ರತಿ ದಾಳಿಗಳನ್ನು ನಡೆಸಿದೆ. ಎದುರಾಳಿಗಳ ಆಲೋಚನಾ ಶೈಲಿ ಬದಲಾಗುವವರೆಗೂ ಈ ಯದ್ಧ ಮುಂದುವರೆಯುತ್ತದೆ ಎಂದು ಇರಾನ್ ಹೇಳಿದೆ.
ಇಸ್ರೇಲ್ ಪ್ರಧಾನಿ ಕಚೇರಿಯನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸಿದ ದಾಳಿಯಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಹತ್ಯೆಯಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದಾಗ್ಯೂ, ಈ ಕುರಿತ ಅಧಿಕೃತ ಮಾಹಿತಿ ಈವರೆಗೂ ಲಭ್ಯವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬೆಂಜಮಿನ್ ನೆತನ್ಯಾಹು ಮಾತನಾಡಿರುವ ವಿಡಿಯೋ ತುಣುಕುಗಳಿದ್ದು, ಅವುಗಳನ್ನು ಎಐ ಮೂಲಕ ಸೃಷ್ಟಿಸಲಾಗಿದೆ ಎಂಬ ಗುಮಾನಿಯೂ ಸುದ್ದಿಯಲ್ಲಿದೆ. ನೆತನ್ಯಾಹು ಆರು ಬೆರಳುಗಳನ್ನು ಹೊಂದಿದ್ದು, ಈ ವಿಡಿಯೊದಲ್ಲಿ ಐದು ಬೆರಳುಗಳಷ್ಟೆ ಇರುವುದು ಇಸ್ರೇಲ್ ಪ್ರಧಾನಿ ಹತ್ಯೆಯಾಗಿರಬಹುದು ಮತ್ತು ಅದನ್ನು ಮರೆಮಾಚಲು ಇಸ್ರೇಲ್ ಈ ಕಸರತ್ತು ಮಾಡುತ್ತಿದೆ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.





