ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ನೆದರ್‌ಲ್ಯಾಂಡ್‌; ಮಾರ್ಕ್ಸ್‌ ಅಬ್ಬರಕ್ಕೆ ಸ್ಕಾಟ್‌ ತತ್ತರ

Date:

ಐಸಿಸಿ ಕ್ರಿಕೆಟ್‌ ವಿಶ್ವಕಪ್ ಲೀಗ್‌-2ರಲ್ಲಿ ಸ್ಕಾಟ್‌ಲ್ಯಾಂಡ್‌ ಮತ್ತು ನೆದರ್‌ಲ್ಯಾಂಡ್‌ ನಡುವೆ ನಡೆದ ಪಂದ್ಯದಲ್ಲಿ ನೆದರ್‌ಲ್ಯಾಂಡ್‌ ಗೆದ್ದು ಬೀಗಿದೆ. ಮಾತ್ರವಲ್ಲದೆ, ಹೊಸ ಇತಿಹಾಸ ನಿರ್ಮಿಸಿದೆ. 369 ರನ್‌ಗಳನ್ನು ಬೆನ್ನಟ್ಟಿ ಗೆಲ್ಲುವ ಮೂಲಕ ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಧಿಕ ರನ್‌ಗಳನ್ನು ಚೇಸ್‌ ಮಾಡಿ ಗೆದ್ದ 3ನೇ ತಂಡವೆಂದು ಖ್ಯಾತಿ ಪಡೆದಿದೆ. ಇತಿಹಾಸ ಸೃಷ್ಟಿಸಿದೆ.

ಪಂದ್ಯದಲ್ಲಿ ಸ್ಕಾಟ್‌ಲ್ಯಾಂಡ್‌ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟದೊಂದಿಗೆ 369 ರನ್‌ಗಳನ್ನು ಕಲೆ ಹಾಕಿತ್ತು. ನೆದರ್‌ಲ್ಯಾಂಡ್‌ಗೆ ಗೆಲುವಿಗೆ 370 ರನ್‌ಗಳ ಗುರಿ ನೀಡಿತ್ತು. ಬೃಹತ್ ಮೊತ್ತದ ಬೆನ್ನತ್ತಿನ ಬೆದರ್‌ಲ್ಯಾಂಡ್‌ ತಂಡವು ಇನ್ನೂ 4 ಬಾಲ್‌ಗಳು ಇರುವಂತೆಯೇ 374 ರನ್‌ಗಳನ್ನು ಗಳಿಸಿ, ಗೆಲವು ಸಾಧಿಸಿದೆ. ಅಧಿಕ ರನ್‌ಗಳನ್ನು ಚೇಸ್ ಮಾಡಿದ 3ನೇ ತಂಡವಾಗಿ ಪಟ್ಟಿಯಲ್ಲಿ ಹೊರಹೊಮ್ಮಿದೆ.

ಈ ಹಿಂದೆ, 2006ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 435 ರನ್‌ಗಳನ್ನು ಚೇಸ್‌ ಮಾಡಿ ಗೆಲುವು ಸಾಧಿಸಿತ್ತು. ಆ ಮೂಲಕ, ಚೇಸಿಂಗ್‌ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಅಗ್ರ ಸ್ಥಾನದಲ್ಲಿದೆ. ಮಾತ್ರವಲ್ಲ, 2ನೇ ಸ್ಥಾನದಲ್ಲಿಯೂ ದಕ್ಷಿಣ ಆಫ್ರಿಯಾ ತಂಡವೇ ಇದೆ. 2016ರಲ್ಲಿ ಇದೇ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡವು 372 ರನ್‌ಗಳನ್ನು ಚೇಸ್‌ ಮಾಡುವ ಮೂಲಕ, ಮತ್ತೊಂದು ದಾಖಲೆ ಬರೆದುಕೊಂಡಿತ್ತು. ಇದೀಗ, 370 ರನ್‌ಗಳ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿರುವ ನೆದರ್‌ಲ್ಯಾಂಡ್‌ ತಂಡವು 3ನೇ ಸ್ಥಾನಕ್ಕೇರಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪಂದ್ಯದಲ್ಲಿ, ನೆದರ್‌ಲ್ಯಾಂಡ್‌ ತಂಡದ ನಾಯಕ ಮ್ಯಾಕ್ಸ್ ಒ’ಡೌಡ್ ಉತ್ತಮ ಪ್ರದೇಶ ನೀಡಿದ್ದು, ಗೆಲುವಿನ ರೂವಾರಿ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ. 130 ಬಾಲ್‌ಗಳನ್ನು ಎದುರಿಸಿದ ಮ್ಯಾಕ್ಸ್‌ 13 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳೊಂದಿಗೆ ಔಟಾಗದೇ 158 ರನ್‌ಗಳನ್ನು ಗಳಿಸಿದರು.

ಅಂತೆಯೇ, ಸ್ಕಾಟ್‌ಲ್ಯಾಂಡ್‌ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಾರ್ಜ್ ಮುನ್ಶೆ ಅವರು 191 ರನ್‌ಗಳಿಸಿದ್ದಾರೆ. 9 ರನ್‌ಗಳ ಅಂತರದಲ್ಲಿ ದ್ವಿಶತಕದಿಂದ ವಂಚಿತರಾಗಿದ್ದಾರೆ. ಅವರು ಪಂದ್ಯದಲ್ಲಿ 150 ಎಸೆತಗಳನ್ನು ಎದುರಿಸಿ 14 ಬೌಂಡರಿ ಮತ್ತು 11 ಸಿಕ್ಸರ್‌ಗಳೊಂದಿಗೆ 191 ರನ್ ಕಲೆಹಾಕಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುದ್ಧ ಪರಿಣಾಮ: ಶ್ರೀಲಂಕಾದಲ್ಲಿ ಇಂಧನ ದರ 25% ಏರಿಕೆ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ತೀವ್ರ ಪರಿಣಾಮವು ಭಾರತವನ್ನು ಮಾತ್ರವಲ್ಲದೆ, ಶ್ರೀಲಂಕಾವನ್ನೂ ಕಾಡುತ್ತಿದೆ....

ಇಸ್ರೇಲ್‌ ಮೇಲೆ ಇರಾನ್ ದಾಳಿ; 50ಕ್ಕೂ ಹೆಚ್ಚು ಸಾವು, ಇಂಟರ್‌ಸೆಪ್ಟರ್ ನಾಶ

ಇಸ್ರೇಲ್‌ನ ಪರಮಾಣು ಚಟುವಟಿಕೆಗಳ ಪ್ರಮುಖ ಕೇಂದ್ರವೆಂದೇ ಗುರುತಿಸಲ್ಪಟ್ಟಿರುವ ದಕ್ಷಿಣದ ಡಿಮೋನಾ ನಗರದ...

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...