ಜಪಾನ್, ಅಮೆರಿಕದ ವಿಜ್ಞಾನಿಗಳಿಗೆ 2025ನೇ ಸಾಲಿನ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ ಪ್ರಕಟ

Date:

ಜಪಾನ್‌ನ ಶಿಮೋನ್ ಸಾಕಾಗುಚಿ ಹಾಗೂ ಅಮೆರಿಕದ ಮೇರಿ ಇ. ಬ್ರಂಕೋ ಮತ್ತು ಫ್ರೆಡ್ ರಾಮ್ಸ್ಡೆಲ್ ಅವರಿಗೆ 2025 ನೇ ಸಾಲಿನ ವೈದ್ಯಕೀಯ ವಿಭಾಗದ ನೊಬೆಲ್ ಪುರಸ್ಕಾರ ಘೋಷಿಸಲಾಗಿದೆ. ದೇಹದ ರಕ್ಷಣಾ ವ್ಯವಸ್ಥೆ ತನ್ನದೇ ಅಂಗಾಂಗಗಳ ಮೇಲೆ ದಾಳಿ ಮಾಡದಂತೆ ಹೇಗೆ ನಿಯಂತ್ರಣದಲ್ಲಿರುತ್ತದೆ ಎಂಬ ಮಹತ್ವದ ಪ್ರಶ್ನೆಗೆ ಸಂಶೋಧನೆ ಮೂಲಕ ತಿಳಿಯಪಡಿಸಿದ ಈ ಮೂವರಿಗೆ ವಿಶ್ವದ ಅತ್ಯುನ್ನತ ವಿಜ್ಞಾನ ಗೌರವ ಲಭಿಸಿದೆ.

ಇವರ ಸಂಶೋಧನೆ “ಪೆರಿಫೆರಲ್ ಇಮ್ಯೂನ್ ಟಾಲರೆನ್ಸ್” ಎಂಬ ತತ್ವವನ್ನು ವಿವರಿಸಿದ್ದು, “ರೆಗ್ಯುಲೇಟರಿ ಟಿ ಸೆಲ್‌ಗಳು” ಎಂಬ ವಿಶಿಷ್ಟ ಕೋಶಗಳು ದೇಹದ ಸ್ವಂತ ಅಂಗಾಂಗಗಳ ಮೇಲೆ ರಕ್ಷಣಾ ವ್ಯವಸ್ಥೆ ದಾಳಿ ಮಾಡದಂತೆ ತಡೆಯುತ್ತವೆ ಎಂಬುದು ಬಹಿರಂಗವಾಯಿತು..

ಶಿಮೋನ್ ಸಾಕಾಗುಚಿ ಅವರು 1995ರಲ್ಲಿ ಪ್ರಚಲಿತ ವೈಜ್ಞಾನಿಕ ನಿಲುವಿಗೆ ಸವಾಲು ಹಾಕಿ, ರಕ್ಷಣಾ ನಿಯಂತ್ರಣವು ಕೇವಲ ಥೈಮಸ್‌ನಲ್ಲಿ(central tolerance) ಮೂಲಕವಷ್ಟೆ ನಡೆಯುವುದಲ್ಲದೆ ದೇಹದ ಹೊರಾಂಗಣ ಭಾಗಗಳಲ್ಲಿಯೂ ನಿಯಂತ್ರಣ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸಿದರು. ಅವರು ಹೊಸ ರೀತಿಯ ಕೋಶಗಳಾದ “ರೆಗ್ಯುಲೇಟರಿ ಟಿ ಸೆಲ್‌ಗಳು” ದೇಹವನ್ನು ಸ್ವಯಂ ದಾಳಿಯಿಂದ ಕಾಪಾಡುತ್ತವೆ ಎಂಬುದನ್ನು ಗುರುತಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದಿಂದ ಬಿಹಾರಕ್ಕೆ ಬಿಜೆಪಿಯ ಬದಲಾದ ನಿಲುವು

2001ರಲ್ಲಿ ಅಮೆರಿಕಾದ ವಿಜ್ಞಾನಿಗಳು ಮೇರಿ ಬ್ರಂಕೋ ಮತ್ತು ಫ್ರೆಡ್ ರಾಮ್ಸ್ಡೆಲ್ ಅವರು ಫಾಕ್ಸ್‌ಪಿ3 (Foxp3) ಎಂಬ ಪ್ರಮುಖ ಜೀನನ್ನು ಪತ್ತೆಹಚ್ಚಿದರು. ಈ ಜೀನಿನ ದೋಷವು ದೇಹದ ರಕ್ಷಣಾ ವ್ಯವಸ್ಥೆಯ ನಿಯಂತ್ರಣ ಕಳೆದು ತೀವ್ರ ಸ್ವಯಂ ರೋಗಗಳಿಗೆ ಕಾರಣವಾಗುತ್ತದೆ ಎಂಬುದನ್ನು ಅವರು ಸಾಬೀತುಪಡಿಸಿದರು. ಇದೇ ಜೀನಿನ ಬದಲಾವಣೆ ಮಾನವರಲ್ಲಿ IPEX ಸಿಂಡ್ರೋಮ್ ಎನ್ನುವ ಅಪರೂಪದ ರೋಗಕ್ಕೆ ಕಾರಣವಾಗುತ್ತದೆ ಎಂಬುದನ್ನೂ ಕಂಡುಹಿಡಿದರು.

2003ರಲ್ಲಿ ಸಾಕಾಗುಚಿ ಅವರು ಫಾಕ್ಸ್‌ಪಿ3 ಜೀನ್‌ ಮತ್ತು ರೆಗ್ಯುಲೇಟರಿ ಟಿ ಸೆಲ್‌ಗಳ ಅಭಿವೃದ್ಧಿಯ ನಡುವೆ ನೇರ ಸಂಬಂಧವಿದೆ ಎಂಬುದನ್ನು ದೃಢಪಡಿಸಿದರು. ಇದರ ಮೂಲಕ ರಕ್ಷಣಾ ವ್ಯವಸ್ಥೆ ಹೇಗೆ “ತನ್ನದೇ ದೇಹದ” ಮೇಲೆ ದಾಳಿ ಮಾಡದೆ “ವಿದೇಶಿ ಶತ್ರುಗಳನ್ನು” ಮಾತ್ರ ಗುರಿಯಾಗಿಸುತ್ತದೆ ಎಂಬುದು ಸ್ಪಷ್ಟವಾಯಿತು.

ನೊಬೆಲ್ ಸಮಿತಿಯ ಅಧ್ಯಕ್ಷ ಒಲ್ಲೆ ಕ್ಯಾಂಪೆ ಅವರು “ಈ ಸಂಶೋಧನೆಗಳು ಮಾನವ ದೇಹದ ರಕ್ಷಣಾ ವ್ಯವಸ್ಥೆಯ ಸಮತೋಲನವನ್ನು ಅರ್ಥಮಾಡಿಕೊಳ್ಳುವಲ್ಲಿ ನಿರ್ಣಾಯಕವಾದ ಪಾತ್ರ ವಹಿಸಿವೆ” ಎಂದು ಹೇಳಿದರು.

ಈ ಕ್ರಾಂತಿಕಾರಿ ಸಂಶೋಧನೆ ಈಗ ಕ್ಯಾನ್ಸರ್ ಚಿಕಿತ್ಸೆ, ಸ್ವಯಂ ರೋಗಗಳ ನಿಯಂತ್ರಣ ಹಾಗೂ ಅಂಗಾಂಗ ಮಾರ್ಪಡಿಸುವ ಶಸ್ತ್ರಚಿಕಿತ್ಸೆಗಳಲ್ಲಿ ಹೊಸ ದಿಕ್ಕು ತೋರಿಸುತ್ತಿದ್ದು, ಕೋಟ್ಯಂತರ ಜನರಿಗೆ ಹೊಸ ಆಶಾಕಿರಣವನ್ನು ನೀಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...