ಮೂವರು ವಿಜ್ಞಾನಿಗಳಿಗೆ 2025ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

Date:

2025ನೇ ಸಾಲಿನ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದ ಸುಸುಮು ಕಿಟಗಾವಾ, ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವವಿದ್ಯಾಲಯದ ರಿಚರ್ಡ್ ರಾಬ್ಸನ್ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಒಮರ್ ಎಂ. ಯಾಘಿ ಎಂಬುವರಿಗೆ ಜಂಟಿಯಾಗಿ ನೀಡಲಾಗಿದೆ. ಮೆಟಲ್-ಆರ್ಗಾನಿಕ್ ಫ್ರೇಮ್‌ವರ್ಕ್ಸ್ (MOFs) ಎಂಬ ಹೊಸ ತರದ ಕ್ರಿಸ್ಟಲ್‌ ರಚನೆಗಳ ಅಭಿವೃದ್ಧಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಮೂವರು ವಿಜ್ಞಾನಿಗಳು ಲೋಹದ ಅಯಾನುಗಳನ್ನು ಸಾವಯವ ಅಣುಗಳೊಂದಿಗೆ ಸಂಯೋಜಿಸಿ, ಅತ್ಯಂತ ಸೂಕ್ಷ್ಮವಾದ ರಂಧ್ರಯುಕ್ತ ರಚನೆಯನ್ನು ಹೊಂದಿರುವ ಸ್ಫಟಿಕದಂತಹ ವಸ್ತುಗಳನ್ನು ರಚಿಸಿದ್ದಾರೆ. ಈ ವಸ್ತುಗಳನ್ನು “ರಸಾಯನಶಾಸ್ತ್ರದ ಕೊಠಡಿಗಳು” ಎಂದು ಕರೆಯಲಾಗುತ್ತದೆ, ಏಕೆಂದರೆ ಇವುಗಳು ಗಾಳಿಯಂತಹ ವಾಯುಗಳನ್ನು ಮತ್ತು ಅಣುಗಳನ್ನು ಸೆರೆಹಿಡಿಯಬಹುದು, ಸಂಗ್ರಹಿಸಬಹುದು ಮತ್ತು ನಿಯಂತ್ರಿಸಬಹುದು.

ವಿಜ್ಞಾನಿಗಳ ಸಂಶೋಧನೆಯು ಮೆಟಲ್-ಆರ್ಗಾನಿಕ್ ಫ್ರೇಮ್‌ವರ್ಕ್ಸ್ ಗಳು ಕಾರ್ಬನ್ ಡೈಆಕ್ಸೈಡ್, ಮೀಥೇನ್, ಅಥವಾ ನೀರಿನ ಆವಿಯಂತಹ ವಾಯುಗಳು ಈ ಸಣ್ಣ ರಂಧ್ರಗಳ ಮೂಲಕ ಒಳಗೆ-ಹೊರಗೆ ಸಂಚರಿಸಬಹುದು. ಈ ವಿಶೇಷ ಗುಣವು ಹಸಿರುಮನೆ ವಾಯುಗಳನ್ನು ಸೆರೆಹಿಡಿಯುವುದು, ನೀರನ್ನು ಶುದ್ಧೀಕರಿಸುವುದು, ರಾಸಾಯನಿಕ ಕ್ರಿಯೆಗಳನ್ನು ಉತ್ಪ್ರೇರಕವಾಗಿ ನಡೆಸುವುದು ಮತ್ತು ಹೈಡ್ರೋಜನ್ ಇಂಧನವನ್ನು ಸಂಗ್ರಹಿಸುವುದು ಸೇರಿದಂತೆ ಹಲವು ಕಾರ್ಯಗಳಿಗೆ ಉಪಯುಕ್ತವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆರ್‌ಎಸ್‌ಎಸ್‌ಗೆ ನೂರು, ನ್ಯಾಯಮೂರ್ತಿಗಳ ಮೇಲೆ ಶೂ ತೂರು

1989ರಲ್ಲಿ ರಿಚರ್ಡ್ ರಾಬ್ಸನ್ ತಾಮ್ರದ ಅಯಾನುಗಳು ಮತ್ತು ಸಂಕೀರ್ಣ ಸಾವಯವ ಅಣುಗಳನ್ನು ಬಳಸಿ ವಿಶಾಲವಾದ ಸ್ಫಟಿಕ ರಚನೆಗಳನ್ನು ರೂಪಿಸಿದರು. ಆರಂಭದಲ್ಲಿ ಈ ರಚನೆಗಳು ಸ್ಥಿರವಾಗಿರಲಿಲ್ಲ, ಆದರೆ ಇವರ ಕೆಲಸವು ಮುಂದಿನ ಸಂಶೋಧನೆಗೆ ಪ್ರೇರಣೆಯಾಯಿತು. 1990ರ ದಶಕದಲ್ಲಿ ಸುಸುಮು ಕಿಟಗಾವಾ ಈ ರಚನೆಗಳು ವಾಯುಗಳನ್ನು ಹೀರಿಕೊಳ್ಳಬಹುದು ಮತ್ತು ಬಿಡುಗಡೆ ಮಾಡಬಹುದು ಎಂದು ತೋರಿಸಿದರು. ತದನಂತರ ಒಮರ್ ಎಂ. ಯಾಘಿ ಅವರು ಸ್ಥಿರವಾದ ಮೆಟಲ್-ಆರ್ಗಾನಿಕ್ ಫ್ರೇಮ್‌ವರ್ಕ್ಸ್ ಗಳನ್ನು ರೂಪಿಸಿ, ಅವುಗಳ ಗುಣಲಕ್ಷಣಗಳನ್ನು ಕಾಲಾನುಗುಣವಾಗಿ ವಿನ್ಯಾಸಗೊಳಿಸುವ ವಿಧಾನವನ್ನು ಪರಿಚಯಿಸಿದರು.

ನೊಬೆಲ್ ಸಮಿತಿಯ ಅಧ್ಯಕ್ಷ ಹೈನರ್ ಲಿಂಕೆ ಪ್ರಕಾರ, “ಮೆಟಲ್-ಆರ್ಗಾನಿಕ್ ಫ್ರೇಮ್‌ವರ್ಕ್ಸ್‌ನಿಂದ ಹೊಸದಾದ ಮತ್ತು ಕಸ್ಟಮೈಸ್ಡ್ ವಸ್ತುಗಳನ್ನು ರಚಿಸಲು ಅಪಾರ ಸಾಧ್ಯತೆಗಳಿವೆ. ಈ ಆವಿಷ್ಕಾರದಿಂದ ಕಾರ್ಬನ್ ಡೈಆಕ್ಸೈಡ್ ಸೆರೆಹಿಡಿಯುವಿಕೆ, ವಿಷಕಾರಕ ಕಲ್ಮಶಗಳನ್ನು ಫಿಲ್ಟರ್ ಮಾಡುವುದು, ಮರುಭೂಮಿಯ ಗಾಳಿಯಿಂದ ನೀರನ್ನು ತೆಗೆಯುವುದು ಮತ್ತು ರಾಸಾಯನಿಕ ಪರಿವರ್ತನೆಯನ್ನು ಸಮರ್ಥವಾಗಿ ನಡೆಸುವುದು ಸಾಧ್ಯವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...