ಅಬುಧಾಬಿ | ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದ್ರಸ ಜಾರಿಗೆಬೈಲು ಗಲ್ಫ್ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ

Date:

ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ)ಪರಿಮ, ಜಾರಿಗೆಬೈಲು ಗಲ್ಫ್ ಸಮಿತಿಯ 2025-26ನೇ ಮಹಾಸಭೆಯು ಅ.20,202ರಂದು ಅಬುಧಾಬಿಯಲ್ಲಿರುವ ಖಾಲಿದಿಯ್ಯಾ ಇಮ್ರಾನ್ ಎನ್‌ಪಿ ನಾಳ ಅವರ ಮನೆಯಲ್ಲಿ ನಡೆಯಿತು.

ಮಹಾಸಭೆಗೆ ಗಲ್ಫ್ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು. ಉಸ್ತಾದ್ ಹಸನ್ ದಾರಿಮಿ ಕಬಕ ಇವರ ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. ಹಸನ್ ದಾರಿಮಿ ಉಸ್ತಾದರು ಒಂದು ಸಂಸ್ಥೆಯೊಂದಿಗೆ ತನ್ನನ್ನು ಯಾವ ರೀತಿಯಲ್ಲಿ ಸಮರ್ಪಿಸಿಕೊಳ್ಳಬೇಕು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಮಾಡುವ ಸಹಾಯವೂ ಅದು ಯಾವುದೇ ರೀತಿಯಲ್ಲೂ ಸೃಷ್ಟಿಕರ್ತನು ಅದರ ಪ್ರತಿಫಲವನ್ನು ನೀಡುತ್ತಾನೆ, ಸಮಸ್ತದ ಅಧೀನದಲ್ಲಿರುವ ಮದರಸದ ಅಭಿವೃದ್ಧಿಗೆ ತಾವೆಲ್ಲರೂ ಶಕ್ತಿಮೀರಿ ಪ್ರಯತ್ನಿಸಬೇಕು ಎಂದರು.

ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ)ಪರಿಮ ಜಾರಿಗೆಬೈಲು ಗಲ್ಫ್ ಕಮಿಟಿಯ ಕಾರ್ಯ ವೈಖರಿಯನ್ನು ಶ್ಲಾಘಿಸಿ ಗಲ್ಫ್ ಸಮಿತಿಯ ಸದಸ್ಯರನ್ನು ಅಭಿನಂದಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Jarigebail

ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ) ಪರಿಮ ಜಾರಿಗೆಬೈಲು ಗಲ್ಫ್ ಸಮಿತಿಯ 2024-25ನೇ ಸಾಲಿನ ಒಂದು ವರ್ಷದ ಎಲ್ಲಾ ದಾಖಲೆಗಳನ್ನು ಮಹಾ ಸಭೆಯಲ್ಲಿ ಅಧ್ಯಕ್ಷರಾಗಿದ್ದ ಇಮ್ರಾನ್ ಎನ್ ಪಿ ನಾಳರವರು ಸದಸ್ಯರೆಲ್ಲರ ಗಮನಕ್ಕೆ ತರಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಲಾಯಿತು.

ನೂತನ ಗಲ್ಫ್ ಸಮಿತಿಯ ಗೌರವಾಧ್ಯಕ್ಷರಾಗಿ ಮಜೀದ್ ಪರಿಮ ಅವರನ್ನು ಆಯ್ಕೆ ಮಾಡಿ ಘೋಷಿಸಲಾಯಿತು. ನೂತನ ಅಧ್ಯಕ್ಷರಾಗಿ ಇಮ್ರಾನ್ ಎನ್‌ಪಿ ನಾಳ, ಉಪಾಧ್ಯಕ್ಷರಾಗಿ ಮುಸ್ತಫಾ ಅಚಾರಿಬೊಟ್ಟು ಅವರನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಹಂಝತ್ ಅಲಿ ಕೆಪಿ ನಾಳ, ಜೊತೆ ಕಾರ್ಯದರ್ಶಿಯಾಗಿ ನಿಯಾಝ್ ಜಾರಿಗೆಬೈಲು, ಕೋಶಾಧಿಕಾರಿಯಾಗಿ ಅಶ್ರಫ್ ಪರಿಮ ಮತ್ತು ಹಮೀದ್ ಕುಕ್ಕುಡಿ ಅವರನ್ನು ಆಯ್ಕೆ ಮಾಡಲಾಯಿತು.

ಸಮಿತಿ

ಉಳಿದಂತೆ ಸಮಿತಿಯ ಸದಸ್ಯರನ್ನಾಗಿ ಝಾಯಿದ್ ಪರಿಮ, ಫಯಾಝ್, ಶಾಹಿದ್ ಅಲಿ ಕೆಪಿ, ಜುನೈದ್ ಎನ್ ಪಿ, ಸಮದ್, ನೌಫಲ್ ಪರಿಮ, ನವಾಝ್, ಬಾಸಿತ್ ಅಲಿ ಕೆಪಿ ಆಯ್ಕೆ ಮಾಡಲಾಯಿತು.

ಇದನ್ನು ಓದಿದ್ದೀರಾ? ಅಮೆರಿಕ | 88 ಲಕ್ಷ ರೂ. H-1B ವೀಸಾ ಶುಲ್ಕ: ಯಾರಿಗೆ ವಿನಾಯಿತಿ, ಅನ್ವಯ?

ಮಹಾಸಭೆಯ ಅಧ್ಯಕ್ಷತೆಯನ್ನು ಇಮ್ರಾನ್ ಎನ್ ಪಿಯವರು ವಹಿಸಿ ನೂತನ ಸಾರಥಿಗಳು ಉತ್ತಮ ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ) ಇದರ ಅಭಿವೃದ್ಧಿ ಕೆಲಸಗಳಲ್ಲಿ ಗಲ್ಫ್ ಸಮಿಯು ಸಂಪೂರ್ಣ ಸಹಕಾರ ಕೊಡಬೇಕೆಂದು ತಿಳಿಸಿ ನೂತನ ಸಾರಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು. ಸಭೆಯಲ್ಲಿ ಹಂಝತ್ ಕೆಪಿಯವರು ಹಸನ್ ದಾರಿಮಿ ಉಸ್ತಾದ್ ಮತ್ತು ನೂತನ ಸಾರಥಿಗಳನ್ನು ಅಭಿನಂದಿಸಿ ಧನ್ಯವಾದ ತಿಳಿಸಿದರು.

eedina 6
ಈದಿನ NRI ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ದುಬೈ ರನ್’ನಲ್ಲಿ ಮಿಂಚಿದ ಬ್ಯಾರಿಗಳು: ಅತಿ ಉದ್ದನೆಯ ಯುಎಇ ಧ್ವಜದ ದೃಶ್ಯ ಹಂಚಿಕೊಂಡ ರಾಜಕುಮಾರ ಶೇಖ್ ಹಮ್ದಾನ್

ಆರೋಗ್ಯ, ಫಿಟ್‌ನೆಸ್ ಮತ್ತು ಮನರಂಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾನುವಾರ ದುಬೈನ...

ಸೌದಿ ಅರೇಬಿಯಾ | ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ಪೂರ್ಣಗೊಳಿಸಲು ಆರೋಗ್ಯ ಸಚಿವಾಲಯ ಸೂಚನೆ

ಕೋವಿಡ್-19 ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಎಲ್ಲ ವಯಸ್ಸಿನ ನಿವಾಸಿಗಳು ಮತ್ತು ವಲಸಿಗರು...