ಎರಡು ಪವಿತ್ರ ಮಸೀದಿಗಳ ಉಸ್ತುವಾರಿ ರಾಜ ಸಲ್ಮಾನ್ ಅವರು ಮದೀನಾದಲ್ಲಿರುವ ಕಿಬ್ಲಾ ಮಸೀದಿಯನ್ನು ದಿನದ 24 ಗಂಟೆಗಳ ಕಾಲ ವಿಶ್ವಾಸಿಗಳಿಗಾಗಿ ತೆರೆದಿರಲು ಆದೇಶಿಸಿದ್ದಾರೆ.
ಮದೀನಾದಲ್ಲಿರುವ ಕಿಬ್ಲಾ ಮಸೀದಿ (ಎರಡು ಕಿಬ್ಲಾಗಳನ್ನು ಹೊಂದಿರುವ ಮಸೀದಿ) ಇಸ್ಲಾಮಿಕ್ ಇತಿಹಾಸದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಜೆರುಸಲೆಮ್‌ನಲ್ಲಿರುವ ಅಲ್-ಅಕ್ಸಾ ಮಸೀದಿಯಿಂದ ಮೆಕ್ಕಾದ ಕಾಬಾಗೆ ಪ್ರಾರ್ಥನೆಯ ದಿಕ್ಕನ್ನು (ಕಿಬ್ಲಾ) ಬದಲಾಯಿಸಲು ಪ್ರವಾದಿ ಮುಹಮ್ಮದ್ (ಸ) ಅಲ್ಲಾಹನ ಆಜ್ಞೆಯನ್ನು ಇಲ್ಲಿ ಪಡೆದಿದ್ದರು.
ಇದನ್ನು ಓದಿದ್ದೀರಾ? ಸೌದಿ ಅರೇಬಿಯಾ | ಉಮ್ರಾ ವೀಸಾ ನಿಯಮಗಳಲ್ಲಿ ಬದಲಾವಣೆ: ಇಕಾಮಾ ಹೊಂದಿರುವವರಿಗೆ ಹೊಸ ಅವಕಾಶ
ಪ್ರವಾದಿ ಪೈಗಂಬರರು ಒಂದು ಪ್ರಾರ್ಥನೆಯಲ್ಲಿ ಮೊದಲ ಎರಡು ರಕ್ಅತ್‌ಗಳನ್ನು ಹಳೆಯ ಕಿಬ್ಲಾ (ಅಲ್-ಅಕ್ಸಾ ಮಸೀದಿ) ಕಡೆಗೆ ಮತ್ತು ಕೊನೆಯ ಎರಡು ರಕ್ಅತ್‌ಗಳನ್ನು ಹೊಸ ಕಿಬ್ಲಾ (ಮೆಕ್ಕಾದ ಕಾಬಾ) ಕಡೆಗೆ ಮುಖ ಮಾಡಿ ನಮಾಝ್ ನಿರ್ವಹಿಸಿರುವುದರಿಂದ ಈ ಮಸೀದಿಗೆ “ಮಸ್ಜಿದ್ ಅಲ್-ಕಿಬ್ಲತೈನ್” (ಎರಡು ಕಿಬ್ಲಾಗಳ ಮಸೀದಿ) ಎಂದು ಹೆಸರಿಸಲಾಯಿತು.
ವರದಿ: ಎಸ್ ಎ ರಹಿಮಾನ್ ಮಿತ್ತೂರು





