ಸಮಾಜ ಸೇವೆಯ ಉದ್ದೇಶಕ್ಕಾಗಿ ನಝಾಫಾ ಸಂಸ್ಥೆಯ ವತಿಯಿಂದ ಸೂಪರ್ ಸಿಕ್ಸ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ನವೆಂಬರ್ 27ರ ಗುರುವಾರದಂದು ಸೌದಿ ಅರೇಬಿಯಾದ ಜುಬೈಲ್ನ ಅಲ್ ಫಲಾ ಅರೇನಾದಲ್ಲಿ ಆಯೋಜಿಸಲಾಗಿದೆ.
7ಆಟಗಾರರ ಸಾಲಿನ ತಂಡ, ಸ್ಟ್ರೈಟ್ ಸಿಕ್ಸ್ – ಓವರ್ಆರ್ಮ್ ನಾಕೌಟ್ ವಿಧಾನದ ಈ ಟೂರ್ನಮೆಂಟ್ಗೆ ಮುಖ್ಯ ಪ್ರಾಯೋಜಕತ್ವವನ್ನು ಕ್ಲೌಡ್ ಸೆವೆನ್, ಜೆಕೆ ಸ್ಪೋರ್ಟ್ಸ್, ಜೆಕೆ ಸ್ಟ್ರೈಕರ್ಸ್ ಮತ್ತು ಆಸೆಂಟ್ ವಹಿಸಿಕೊಂಡಿವೆ.
ಟೂರ್ನಮೆಂಟ್ನಲ್ಲಿ ವಿಜೇತ ತಂಡಕ್ಕೆ ಟ್ರೋಫಿ ಮತ್ತು ಆಕರ್ಷಕ ಬಹುಮಾನಗಳು ಮತ್ತು ಪಂದ್ಯದ ಶ್ರೇಷ್ಠ ಆಟಗಾರ, ಶ್ರೇಷ್ಠ ಬ್ಯಾಟ್ಸ್ಮನ್, ಶ್ರೇಷ್ಠ ಬೌಲರ್ಗಳಿಗೆ ವಿಶೇಷ ಪ್ರಶಸ್ತಿಗಳು ಕೂಡ ದೊರೆಯಲಿದೆ ಎಂದು ಟೂರ್ನಮೆಂಟ್ನ ಸಂಘಟಕರು ತಿಳಿಸಿದ್ದಾರೆ.
ಸಮಾಜ ಸೇವಾ ಕಾರ್ಯಕ್ಕಾಗಿ ಆಯೋಜಿಸಲಾದ ಈ ಕ್ರಿಕೆಟ್ ಟೂರ್ನಮೆಂಟ್ಗೆ ಕ್ರಿಕೆಟ್ ಪ್ರೇಮಿಗಳು ಬೃಹತ್ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ಆಯೋಜಕರು ಪ್ರಕಟಣೆಯ ಮೂಲಕ ಕೋರಿದ್ದಾರೆ.






