ಟ್ರಂಪ್‌ 2.0ಗೆ ಒಂದು ವರ್ಷ: 7.5 ಲಕ್ಷ ಸಾವುಗಳಿಗೆ ಕಾರಣವಾಗಿದೆ ಅಮಾನವೀಯ ನಿರ್ಧಾರ

Date:

ಒಂದು ವರ್ಷದ ಹಿಂದೆ ಪ್ರಾರಂಭವಾದ ಟ್ರಂಪ್‌ ಅವರ 2ನೇ ಅವಧಿಯ ಆಡಳಿತವು ಅಮೆರಿಕದ ವಿದೇಶಿ ನೆರವನ್ನು ರದ್ದುಗೊಳಿಸಿತ್ತು. ಟ್ರಂಪ್ ಘೋಷಿಸಿದ ಆ ನಿರ್ಧಾರವು ಜಗತ್ತಿನಲ್ಲಿ ತಡೆಗಟ್ಟಬಹುದಾಗಿದ್ದ ಸುಮಾರು 7.5 ಲಕ್ಷ ಸಾವುಗಳಿಗೆ ಕಾರಣವಾಗಿದೆ. ಈ ಪ್ರಮಾಣದ ಸಾವುಗಳಿಗೆ ಟ್ರಂಪ್ ಅವರ ಅಮಾನವೀಯ ನಿರ್ಧಾರವೇ ಕಾರಣವೆಂದು ಸಂಶೋಧಕರು ಹೇಳಿದ್ದಾರೆ.

2025ರ ಜನವರಿ 20ರಂದು ಟ್ರಂಪ್ ಅವರು 2ನೇ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಆ ತಕ್ಷಣವೇ ಅವರು, ಜಗತ್ತಿನ ಬಡ ರಾಷ್ಟ್ರಗಳಿಗೆ ನೀಡಲಾಗುತ್ತಿದ್ದ ಅಮೆರಿಕದ ಮಾನವೀಯ ನೆರವನ್ನು ಸ್ಥಗಿತಗೊಳಿಸಿದರು.ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಸಲಹೆ ಮೇರೆಗೆ ಟ್ರಂಪ್ ಈ ನಿರ್ಧಾರ ಘೋಷಿಸಿದ್ದರು. ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (ಯುಎಸ್‌ಎಐಡಿ) ಅಡಿಯಲ್ಲಿನ ಮಾನವೀಯ ನೆರವು ಯೋಜನೆಗಳಲ್ಲಿ 83% ಕಾರ್ಯಕ್ರಮಗಳನ್ನು ರದ್ದುಗೊಳಿಸಿದರು.

ಟ್ರಂಪ್ ನಿರ್ಧಾರವು ತಾತ್ಕಾಲಿಕವೆಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಅದು ಸಂಪೂರ್ಣವಾಗಿ ನಿಂತುಹೋಯಿತು. ಪರಿಣಾಮ, ವಿಶ್ವದ ಕೆಲವು ಬಡ ರಾಷ್ಟ್ರಗಳಲ್ಲಿ ಎಚ್‌ಐವಿ, ಮಲೇರಿಯಾ ಹಾಗೂ ಕ್ಷಯರೋಗದಂತಹ ರೋಗಗಳ ವಿರುದ್ಧದ ಹೋರಾಟಕ್ಕೆ ತೀವ್ರ ಅಡ್ಡಿಯುಂಟಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಬೆನ್ನಲ್ಲೇ, ಬ್ರಿಟನ್, ಫ್ರಾನ್ಸ್ ಹಾಗೂ ಜರ್ಮನಿ ಸೇರಿದಂತೆ ಇತರ ಪ್ರಮುಖ ಪಾಶ್ಚಿಮಾತ್ಯ ರಾಷ್ಟ್ರಗಳು ಕೂಡ ತಮ್ಮದೇ ಆದ ನೆರವು ಬಜೆಟ್‌ಗಳನ್ನು ಕಡಿತಗೊಳಿಸಿದವು. ಇದು, ಈಗಾಗಲೇ ಕುಸಿಯುತ್ತಿದ್ದ ಮಾನವೀಯ ನೆರವು ಪ್ರಯತ್ನಗಳಿಗೆ ಹಣಕಾಸಿನ ಕೊರತೆಯನ್ನು ಮತ್ತಷ್ಟು ಹೆಚ್ಚಿಸಿತು.

ಜಾಗತಿಕ ನೆರವಿನಲ್ಲಿ 40%ಗೂ ಹೆಚ್ಚು ಕೊಡುಗೆ ನೀಡುತ್ತಿದ್ದ ಅಮೆರಿಕದ ನೆರವು ಸ್ಥಗಿತವು, ಈವರೆಗೆ ಸುಮಾರು 7,50,000ಕ್ಕೂ ಹೆಚ್ಚು ಸಾವುಗಳು ಕಾರಣವಾಗಿದೆ. ಮೃತದಲ್ಲಿ 5,00,000 ಹೆಚ್ಚು ಮಕ್ಕಳೇ ಆಗಿದ್ದಾರೆ ಎಂದು ಇಂಪ್ಯಾಕ್ಟ್ ಕೌಂಟರ್ ವೆಬ್‌ಸೈಟ್ ಅಂದಾಜಿಸಿದೆ. ಈ ಸಂಖ್ಯೆಯನ್ನು ವಿಶ್ಲೇಷಿಸಿದರೆ, ಪ್ರತಿ ಗಂಟೆಗೆ ಸರಾಸರಿ 88 ಮಂದಿ ಮೃತಪಟ್ಟಿದ್ದಾರೆ ಎಂದು ಬೋಸ್ಟನ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ತಜ್ಞ ಮಾಡೆಲರ್ ಬ್ರೂಕ್ ನಿಕೋಲ್ಸ್ ಹೇಳಿದ್ದಾರೆ.

ಬಾರ್ಸಿಲೋನಾ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ (ಐಎಸ್‌ಗ್ಲೋಬಲ್) ನಡೆಸಿದ ಸಂಶೋಧನೆಯು ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳ ನೆರವು ಕಡಿತದಿಂದಾಗಿ 2030ರ ವೇಳೆಗೆ 2.2 ಕೋಟಿಗಿಂತಲೂ ಹೆಚ್ಚು ಜನರು ತಡೆಗಟ್ಟಬಹುದಾದ ರೋಗಗಳಿಗೆ ಬಲಿಯಾಗಬಹುದು ಎಂದು ಅಂದಾಜಿಸಿದೆ.

ಅಮೆರಿಕ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವಾಲ್ಯೂಷನ್ ನಡೆಸಿದ ಮತ್ತೊಂದು ಸಂಶೋಧನೆಯು ಕಳೆದ ತಿಂಗಳು ಗಂಭೀರ ಎಚ್ಚರಿಕೆಯನ್ನು ನೀಡಿದೆ. ನೆರವು ಕಡಿತವು ಶಾಶ್ವತವಾದರೆ 2045ರ ವೇಳೆಗೆ ಐದು ವರ್ಷದೊಳಗಿನ 1.6 ಕೋಟಿಗೂ ಹೆಚ್ಚು ಮಕ್ಕಳು ಸಾಯುತ್ತಾರೆ ಎಂದು ಹೇಳಿದೆ.

ಎಚ್‌ಐವಿ ತಡೆ ಹೋರಾಟಕ್ಕೆ ಹಿನ್ನಡೆ
ಯುಎಸ್‌ನ ಹಣಕಾಸಿನ ಕಡಿತವು ದಶಕಗಳಲ್ಲಿ ಎಚ್‌ಐವಿ ವಿರುದ್ಧದ ಹೋರಾಟದಲ್ಲಿ ಅತ್ಯಂತ ಗಮನಾರ್ಹ ಹಿನ್ನಡೆಯಾಗಿದೆ ಎಂದು ಯುಎನ್‌ಎಐಡಿಎಸ್ ಎಚ್ಚರಿಸಿದೆ.

ಟ್ರಂಪ್ ಆಡಳಿತವು ತನ್ನ ಪಿಇಪಿಎಫ್‌ಎಆರ್ ಕಾರ್ಯಕ್ರಮದ ಅಡಿಯಲ್ಲಿ ನಿರ್ಣಾಯಕ ಎಚ್‌ಐವಿ ತಡೆ ಸೇವೆಗಳನ್ನು ಪುನರಾರಂಭಿಸಿರುವುದಾಗಿ ಹೇಳಿದ್ದರೂ, ಈವರೆಗೆ ಅದು ಕಾರ್ಯಗತವಾಗಿಲ್ಲ. ಪರಿಣಾಮ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಎಚ್‌ಐವಿ ಸೋಂಕಿನಿಂದ ಬಳಲುತ್ತಿರುವವರು ‘ಆಂಟಿರೆಟ್ರೋವೈರಲ್‌’ಗಳಂತಹ ಜೀವ ಉಳಿಸುವ ಎಚ್‌ಐವಿ ಔಷಧಿ ಮತ್ತು ‘ಪ್ರೆಪ್‌’ ಎಂಬ ಎಚ್‌ಐವಿ ಹರಡುವಿಕೆಯ್ನು ತಡೆಯುವ ಔಷಧಿಗಳನ್ನು ಪಡೆಯಲಾಗುತ್ತಿಲ್ಲ ಎಂದು ಹೇಳಿದೆ.

ಪಿಇಪಿಎಫ್‌ಎಆರ್ ನಿಧಿಯಲ್ಲಿನ ಕಡಿತದಿಂದಾಗಿ 47 ದೇಶಗಳಲ್ಲಿ 16,000ಕ್ಕೂ ಹೆಚ್ಚು ಶಿಶುಗಳು ಸೇರಿದಂತೆ 1,70,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಇಂಪ್ಯಾಕ್ಟ್ ಕೌಂಟರ್ ಅಂದಾಜಿಸಿದೆ.

ಇತರ ರೋಗಗಳ ವಿರುದ್ಧ ಹೋರಾಟಕ್ಕೂ ಹಿನ್ನಡೆ
ನೆರವು ಕಡಿತದಿಂದಾಗಿ 48,000ಕ್ಕೂ ಹೆಚ್ಚು ಜನರು ಈಗಾಗಲೇ ಕ್ಷಯರೋಗದಿಂದ ಸಾವನ್ನಪ್ಪಿದ್ದಾರೆ ಎಂದು ಇಂಪ್ಯಾಕ್ಟ್ ಕೌಂಟರ್ ಅಂದಾಜಿಸಿದೆ. ಸಾವಿನ ಸಂಖ್ಯೆಯು 2030ರ ವೇಳೆಗೆ 22 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ವಿವರಿಸಿದೆ.

ಕಡಿತದ ಪರಿಣಾಮವಾಗಿ 1,60,000ಕ್ಕೂ ಹೆಚ್ಚು ಮಕ್ಕಳು ನ್ಯುಮೋನಿಯಾದಿಂದ, 1,50,000 ಮಕ್ಕಳು ಅಪೌಷ್ಟಿಕತೆಯಿಂದ ಹಾಗೂ 1,25,000 ಮಕ್ಕಳು ಅತಿಸಾರದಿಂದ ಸಾವನ್ನಪ್ಪಿದ್ದಾರೆ ಎಂದು ಇಂಪ್ಯಾಕ್ಟ್‌ ಕೌಂಟರ್‌ ಹೇಳಿದೆ.

ಅಲ್ಲದೆ, ಮಲೆರಿಯಾದಿಂದ 70,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ, ಮುಕ್ಕಾಲು ಭಾಗದಷ್ಟು ಮಕ್ಕಳೇ ಆಗಿದ್ದಾರೆ ಎಂದು ವಿವರಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...