ಪಾಕಿಸ್ತಾನ ಮತ್ತು ಅಘ್ಘಾನಿಸ್ತಾನದ ತಾಲಿಬಾನಿಗಳ ನಡುವೆ ಗಡಿ ಘರ್ಷಣೆಯಲ್ಲಿ ಈವರೆಗೆ 40ಕ್ಕೂ ಅಧಿಕ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ. ಈ ಪೈಕಿ 12 ಮಂದಿ ನಾಗರಿಕರು ಎಂದು ಅಪ್ಘಾನಿಸ್ತಾನ ಆಡಳಿತವು ಹೇಳಿಕೊಂಡಿದೆ. ಈ ನಡುವೆ ಪಾಕಿಸ್ತಾನದಲ್ಲಿ ದಾಳಿಗಳನ್ನು ನಡೆಸುತ್ತಿರುವ ಅಫ್ಘಾನ್‌ನ ಭಯೋತ್ಪಾದಕರ ವಿರುದ್ಧ ಕ್ರಮಕೈಗೊಳ್ಳುವಂತೆ ಅಘ್ಘಾನ್ ತಾಲಿಬಾನ್ ಆಡಳಿತವನ್ನು ಪಾಕಿಸ್ತಾನ ಆಗ್ರಹಿಸಿದೆ.
ತಾಲಿಬಾನ್ ಮಾತ್ರ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರು ಇದ್ದಾರೆ ಎಂಬ ಪಾಕಿಸ್ತಾನದ ಆರೋಪವನ್ನು ಅಲ್ಲಗಳೆದಿದೆ. ಹಾಗೆಯೇ ಅಫ್ಘಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಪಾಕಿಸ್ತಾನ ಪಡೆಯು ದಾಳಿ ನಡೆಸಿದ್ದು 12 ನಾಗರಿಕರನ್ನು ಕೊಂದಿದೆ. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸುಡಾನ್ ಸಂಘರ್ಷ | ಘರ್ಷಣೆಯಲ್ಲಿ ಸಿಲುಕಿರುವ 31 ಕನ್ನಡಿಗರು; ನೆರವಿಗಾಗಿ ಮನವಿ
ಈ ನಡುವೆ ಪಿಟಿಐ ಹೆಚ್ಚುವರಿ ಸಾವಿನ ಬಗ್ಗೆ ವರದಿ ಮಾಡಿದೆ. ಪಾಕಿಸ್ತಾನ ಸೇನೆಯ ಮಾಹಿತಿ ಉಲ್ಲೇಖಿಸಿರುವ ಸುದ್ದಿ ಸಂಸ್ಥೆ 40 ಮಂದಿಯ ಹತ್ಯೆ ನಡೆದಿದೆ ಎಂದಿದೆ.
ಕಳೆದ ವಾರ ಪಾಕಿಸ್ತಾನದ ಬೆಹ್ರಾಂಪುರ ಜಿಲ್ಲೆಯ ಡುರಾಂಡ್ ಲೈನ್ ಬಳಿ ದಾಳಿ ನಡೆಸಿ ಕನಿಷ್ಠ 58 ಪಾಕಿಸ್ತಾನಿ ಸೈನಿಕರನ್ನು ಕೊಲ್ಲಲಾಗಿದೆ. 30 ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.





