ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಅಬ್ಬರ ಬ್ಯಾಟಿಂಗ್ ಮಾಡಿದ್ದು, ವಿಶ್ವ ದಾಖಲೆಯನ್ನು ಮುರಿದು, ಬೃಹತ್ ದಾಖಲೆ ಸೃಷ್ಟಿಸಿದೆ. 204 ರನ್‌ಗಳನ್ನು ಬೆನ್ನತ್ತಿದ ಪಾಕ್ ಬ್ಯಾಟರ್‌ಗಳು ಕೇವಲ 16 ಓವರ್‌ಗಳಲ್ಲಿಯೇ 207 ರನ್ ಬಾರಿಸಿ, ಪಂದ್ಯ ಗೆಲ್ಲುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಟಿ20 ಪಂದ್ಯಾವಳಿ ನಡೆಯುತ್ತಿದೆ. ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 19.5 ಓವರ್‌ಗಳಲ್ಲಿ 204 ರನ್ ಗಳಿಸಿ ಆಲ್‌ಔಟ್ ಆಗಿತ್ತು. ಪಾಕ್ ತಂಡಕ್ಕೆ 205 ರನ್‌ಗಳ ಗೆಲುವಿನ ಗುರಿ ನೀಡಿತ್ತು. ನಂತರ, ಬ್ಯಾಟಿಂಗ್‌ಗೆ ಇಳಿದ ಪಾಕ್ ತಂಡ ಕೇವಲ 16 ಓವರ್‌ಗಳಲ್ಲಿಯೇ 207 ರನ್ ಗಳಿಸಿದೆ. ಪಂದ್ಯವನ್ನು ಗೆದ್ದಿದೆ. ಮಾತ್ರವಲ್ಲದೆ, ಹೊಸ ದಾಖಲೆ ಸೃಷ್ಟಿಸಿದೆ.
ನ್ಯೂಜಿಲೆಂಡ್ ಪರವಾಗಿ ಬ್ಯಾಟಿಂಗ್ ಮಾಡಿದ ಮಾರ್ಕ್ ಚಾಪ್ಮನ್ 44 ಎಸೆತಗಳಲ್ಲಿ 4 ಸಿಕ್ಸ್, 11 ಫೋರ್ಗಳೊಂದಿಗೆ 94 ರನ್ ಬಾರಿಸಿದ್ದರು. ತಂಡವು 200 ರನ್‌ಗಳನ್ನು ದಾಟಲು ನೆರವಾದರು.
ಆದಾಗ್ಯೂ, ಕಠಿಣ ಸವಾಲಿನ ರನ್‌ಗಳ ಬೆನ್ನತ್ತಿದ ಪಾಕ್ ತಂಡದ ಆರಂಭಿಕ ಆಟಗಾರ ಹಸನ್ ನವಾಝ್ ಅಜೇಯರಾಗಿ ಉಳಿದು, ಕೇವಲ 45 ಎಸೆತಗಳಲ್ಲಿ 7 ಸಿಕ್ಸ್ ಮತ್ತು 10 ಫೋರ್ಗಳೊಂದಿಗೆ 105 ರನ್ ಬಾರಿಸಿದರು. ಉಳಿದ ಜೊತೆ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಪರಿಣಾಮವಾಗಿ, 16 ಓವರ್‌ಗಳಲ್ಲಿಯೇ ಪಾಕ್ ಪಡೆ ಪಂದ್ಯವನ್ನು ಗೆದ್ದು ಬೀಗಿದೆ.
ಟಿ20 ಕ್ರಿಕೆಟ್ ಇತಿಹಾಸದಲ್ಲೇ 200+ ರನ್‌ಗಳ ಟಾರ್ಗೆಟ್ಅನ್ನು ಅತೀ ಕಡಿಮೆ ಓವರ್‌ಗಳಲ್ಲಿ ಚೇಸ್ ಮಾಡಿದ ತಂಡ ಎಂಬ ಹೆಗ್ಗಳಿಕೆಗೆ ಪಾಕ್ ತಂಡ ಭಾಜನವಾಗಿದೆ.
ಈ ಹಿಂದೆ, 2007ರಲ್ಲಿ ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ನಡುವೆ ನಡೆದಿದ್ದ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ದಾಖಲೆ ಬರೆದಿತ್ತು. ಆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 17.4 ಓವರ್‌ಗಳಲ್ಲಿ 206 ರನ್‌ಗಳನ್ನು ಚೇಸ್ ಮಾಡಿ, ಗೆದ್ದಿತ್ತು. ಅದೇ ವಿಶ್ವ ದಾಖಲೆಯಾಗಿತ್ತು. ಆದರೆ, ಈಗ ಪಾಕ್ ತಂಡ ಆ ದಾಖಲೆಯನ್ನು ಮುರಿದಿದೆ.
ಸದ್ಯ, 200+ ರನ್‌ಗಳನ್ನು ಚೇಸ್ ಮಾಡಿ, ಗೆದ್ದ ತಂಡಗಳ ಪಟ್ಟಿಯಲ್ಲಿ ಭಾರತ ತಂಡ 3ನೇ ಸ್ಥಾನದಲ್ಲಿದೆ. 2019ರಲ್ಲಿ ವೆಸ್ಟ್ ಇಂಡಿಯಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭಾರತ ತಂಡವು 18.4 ಓವರ್‌ಗಳಲ್ಲಿ 209 ರನ್‌ಗಳನ್ನು ಚೇಸ್ ಮಾಡಿ, ಗೆಲುವು ಸಾಧಿಸಿತ್ತು.




