ಕೆನಡಾ | ಪಂಜಾಬಿ ಗಾಯಕ ತೇಜಿ ಕಹ್ಲೋನ್ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ರೋಹಿತ್ ಗೋದಾರ ಗ್ಯಾಂಗ್

Date:

ಕೆನಡಾದಲ್ಲಿ ಪಂಜಾಬಿ ಗಾಯಕ ತೇಜಿ ಕಹ್ಲೋನ್‌ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಗ್ಯಾಂಗ್‌ಸ್ಟರ್ ರೋಹಿತ್ ಗೋದಾರಾ ತಂಡವು ಈ ದಾಳಿಯ ಹೊಣೆಯನ್ನು ಹೊತ್ತಿದೆ. ಸದ್ಯ ಈ ದಾಳಿ ಬಗ್ಗೆ ಕೆನಡಾದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಗ್ಯಾಂಗ್‌ಸ್ಟರ್ ರೋಹಿತ್ ಗೋದಾರಾ ತಂಡದ ಭಾಗವಾಗಿರುವ ಮಹೇಂದರ್ ಸರನ್ ದಿಲಾನಾ ಪೋಸ್ಟ್ ಮಾಡಿದ್ದು, “ರಾಹುಲ್ ರಿನೌ ಮತ್ತು ವಿಕಿ ಫಲ್ವಾನ್ ಎಂಬವರು ಕೆನಡಾದಲ್ಲಿ ಕಹ್ಲೋನ್ ಮೇಲೆ ನಡೆದ ದಾಳಿಯ ಹೊಣೆಯನ್ನು ಹೊತ್ತಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಗದಗ | ಪರಾರಿಯಾಗಲು ಯತ್ನಿಸಿದ ಆರೋಪಿಗೆ ಪೊಲೀಸರಿಂದ ಗುಂಡಿನ ದಾಳಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇನ್ನು ಪ್ರತಿಸ್ಪರ್ಧಿ ಗ್ಯಾಂಗ್‌ಗಳಿಗೆ ಶಸ್ತ್ರಾಸ್ತ್ರ, ಹಣವನ್ನು ಪೂರೈಸಿದ್ದಕ್ಕೆ ಮತ್ತು ಅವರ ಮಾಹಿತಿದಾರನಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಕಹ್ಲೋನ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.

“ನಾವು ಕೆನಡಾದಲ್ಲಿ ತೇಜಿ ಕಹ್ಲೋನ್‌ ಮೇಲೆ ಗುಂಡು ಹಾರಿಸಿದೆವು. ಹೊಟ್ಟೆಗೆ ಗುಂಡು ಹಾರಿಸಲಾಗಿದೆ. ಆತ ಅರ್ಥಮಾಡಿಕೊಂಡರೆ ಸರಿ. ಇಲ್ಲದಿದ್ದರೆ, ಮುಂದಿನ ಬಾರಿ ನಾವು ಆತನ ಕತೆ ಮುಗಿಸುತ್ತೇವೆ” ಎಂದೂ ಪೋಸ್ಟ್‌ನಲ್ಲಿ ಬೆದರಿಕೆ ಹಾಕಲಾಗಿದೆ.

ಹಾಗೆಯೇ, ಉದ್ಯಮಿಗಳು, ಬಿಲ್ಡರ್‌ಗಳು ಮತ್ತು ಹಣಕಾಸು ಮಧ್ಯವರ್ತಿಗಳು ಸೇರಿದಂತೆ ಇತರರಿಗೆ ಪ್ರತಿಸ್ಪರ್ಧಿ ಗ್ಯಾಂಗ್‌ಗಳಿಗೆ ಸಹಾಯ ಮಾಡದಂತೆ ಈ ಪೋಸ್ಟ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಸಹಾಯ ಮಾಡಿದರೆ ಇದೇ ಗತಿ ಬರುತ್ತದೆ ಎಂದು ಗ್ಯಾಂಗ್ ಬೆದರಿಕೆ ಹಾಕಿದೆ.

ಇದನ್ನು ಓದಿದ್ದೀರಾ? ಸರ್ಬಿಯಾ | ಮತ್ತೊಂದು ಗುಂಡಿನ ದಾಳಿಗೆ 8 ಮಂದಿ ಸಾವು

“ಯಾರಾದರೂ ತಪ್ಪಿ ನಮ್ಮ ಶತ್ರುಗಳನ್ನು ಬೆಂಬಲಿಸಿದರೂ ಅಥವಾ ಅವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿದರೂ ನಾವು ಅವರ ಕುಟುಂಬವನ್ನು ಬಿಡಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. ನಾವು ಅವರನ್ನು ನಾಶಪಡಿಸುತ್ತೇವೆ. ಈ ಘಟನೆಯು ಎಲ್ಲಾ ಸಹೋದರರು, ಉದ್ಯಮಿಗಳು, ಬಿಲ್ಡರ್‌ಗಳು, ಹವಾಲಾ ನಿರ್ವಾಹಕರು ಮತ್ತು ಬೇರೆಯವರಿಗೆ ನೀಡುವ ಎಚ್ಚರಿಕೆ. ಯಾರಾದರೂ ಸಹಾಯ ಮಾಡಿದರೆ, ಅವರೂ ನಮ್ಮ ಶತ್ರುಗಳಾಗುತ್ತಾರೆ. ಇದು ಕೇವಲ ಆರಂಭ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಿ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ರಾವತ್ರಮ್ ಸ್ವಾಮಿ ಎಂದೂ ಕರೆಯಲ್ಪಡುವ ರೋಹಿತ್ ಗೋದಾರ, ರಾಜಸ್ಥಾನದ ಬಿಕಾನೇರ್‌ನಲ್ಲಿರುವ ಲುಂಕರಾನ್ಸರ್‌ನ ಕುಖ್ಯಾತ ದರೋಡೆಕೋರ. ಇತ್ತೀಚೆಗೆ, ಲಾರೆನ್ಸ್ ಬಿಷ್ಣೋಯ್ ಆಪ್ತ ಸಹಾಯಕ ಹರಿ ಬಾಕ್ಸರ್ ಮೇಲೆ ಅಮೆರಿಕದಲ್ಲಿ ಗುಂಡಿನ ದಾಳಿ ನಡೆದಿದೆ. ಆ ದಾಳಿಯ ಹೊಣೆಯನ್ನೂ ಗ್ಯಾಂಗ್‌ಸ್ಟರ್ ರೋಹಿತ್ ಗೋದಾರ ಗ್ಯಾಂಗ್ ಹೊತ್ತುಕೊಂಡಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...