ವರ್ಣಭೇದ | ಕಪ್ಪು ಮುಖದ ಚಿತ್ರ ಹಂಚಿಕೊಂಡಿದ್ದ ಕ್ರಿಕೆಟ್ ಟೀಂ-ಇಂಗ್ಲೆಂಡ್ ನಾಯಕಿಗೆ ₹11 ಲಕ್ಷ ದಂಡ

Date:

12 ವರ್ಷಗಳ ಹಿಂದೆ ಕಪ್ಪು ಮುಖದ ಚಿತ್ರ ಹಂಚಿಕೊಂಡು ವರ್ಣಭೇದ ಧೋರಣೆ ಮೆರೆದಿದ್ದ ಇಂಗ್ಲೆಂಡ್ ಕ್ರಿಕೆಟ್‌ ತಂಡದ ಹಾಲಿ ನಾಯಕಿ ಹೀದರ್ ನೈಟ್‌ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) 1,000 ಪೌಂಡ್ (11 ಲಕ್ಷ ರೂ.) ದಂಡ ವಿಧಿಸಿದೆ. 2012ರಲ್ಲಿ ತಾವು ಎಸಗಿದ ತಪ್ಪನ್ನು ಅವರು ಒಪ್ಪಿಕೊಂಡಿದ್ದು, ಅವರಿಗೆ ದಂಡ ವಿಧಿಸಲಾಗಿದೆ.

2012ರಲ್ಲಿ ಇಂಗ್ಲೆಂಡ್‌ನ ಕೆಂಟ್‌ನಲ್ಲಿರುವ ಕ್ರಿಕೆಟ್‌ ಕ್ಲಬ್‌ನಲ್ಲಿ ನಡೆದಿದ್ದ ಫ್ಯಾನ್ಸಿ ಡ್ರೆಸ್‌ ಪಾರ್ಟಿಯಲ್ಲಿ ಹೀದರ್ ನೈಟ್ ಭಾಗವಹಿಸಿದ್ದರು. ಅಲ್ಲಿ, ಅವರು ತಮ್ಮ ಮುಖವನ್ನು ಕಪ್ಪಾಗಿ ‘ಮೇಕಪ್’ ಮಾಡಿಕೊಂಡು, ಕಾಣಿಸಿಕೊಂಡಿದ್ದರು. ಅಲ್ಲದೆ, ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಅಪಹಾಸ್ಯ ಮಾಡಿದ್ದರು.

ಅವರ ಹಂಚಿಕೊಂಡಿದ್ದ ಚಿತ್ರಗಳು ಜನಾಂಗೀಯತೆ, ವರ್ಣ ತಾರತಮ್ಯವನ್ನು ಉತ್ತೇಜಿಸುತ್ತವೆ. ಅಲ್ಲದೆ, ಒಂದು ಸಮುದಾಯದ ವಿರುದ್ಧ ಆಕ್ರಮಣಿಕಾರಿಯಾಗಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀದರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅವರು ಕಪ್ಪು ಮುಖದ ಚಿತ್ರವನ್ನು ಹಂಚಿಕೊಂಡಿದ್ದದ್ದು, ಆಕ್ರಮಣಕಾರಿ ಎಂದು ಪರಿಗಣಿಸಿದ್ದ ಇಸಿಬಿ, “ಹೀದರ್ ಧೋರಣೆ ಇಸಿಬಿ ನಿರ್ದೇಶನ 3.3ಅನ್ನು ಉಲ್ಲಂಘಿಸಿದೆ. ಮಾತ್ರವಲ್ಲದೆ, ಅವರ ಧೋರಣೆಯು ಕ್ರಿಕೆಟ್‌ನ ಹಿತಾಸಕ್ತಿಗಳಿಗೆ ಪೂರ್ವಾಗ್ರಹ ಪೀಡಿತ, ಕ್ರಿಕೆಟ್‌ ಆಟ ಮತ್ತು ಆಟಗಾರರಿಗೆ ಅಪಖ್ಯಾತಿಯನ್ನು ತರುವಂತಹ ಕೃತ್ಯವಾಗಿದೆ” ಎಂದು ಹೇಳಿದೆ. 1,000 ಪೌಂಡ್ ದಂಡವಿಧಿಸಿದ್ದು, ಹೀದರ್‌ಗೆ ಎಚ್ಚರಿಕೆಯನ್ನೂ ನೀಡಿದೆ.

ತಮ್ಮ ತಪ್ಪಿನ ಬಗ್ಗೆ ಒಪ್ಪಿಕೊಂಡಿರುವ ಹೀದರ್, “2012ರಲ್ಲಿ ನಾನು ಎಸಗಿದ ತಪ್ಪಿಗೆ ನಿಜವಾಗಿಯೂ ವಿಷಾದಿಸುತ್ತೇನೆ. ನನ್ನಿಂದ ತಪ್ಪಾಗಿದೆ. ಆದರೆ, ಘಟನೆ ನಡೆದಾಗ ನನಗೆ ಯಾವುದೇ ಜನಾಂಗೀಯ ಅಥವಾ ತಾರತಮ್ಯ ಧೋರಣೆ ಮೆರೆಯುವ ಉದ್ದೇಶವಿರಲಿಲ್ಲ. ಆಗ ನಾನು 21 ವರ್ಷ ವಯಸ್ಸಿನವಳಾಗಿದ್ದೆ. ಈ ಬಗ್ಗೆ ನನಗೆ ಹೆಚ್ಚಿನ ಅರಿವು ಇರಲಿಲ್ಲ. ತಪ್ಪಿಗಾಗಿ ವಿಷಾಧಿಸುತ್ತೇನೆ. ನಾನು ಅಂದು ಮಾಡಿದ ತಪ್ಪನ್ನು ಈಗ ಸರಿಪಡಿಸಲು ಸಾಧ್ಯವಿಲ್ಲ.ಆದರೆ, ಇಂತಹ ಘಟನೆಗಳ ವಿರುದ್ಧ ಧ್ವನಿಯೆತ್ತಲು ನಾನು ಬದ್ಧನಾಗಿದ್ದೇನೆ” ಎಂದು ತಿಳಿಸಿದ್ದಾರೆ.

ಹೀದರ್ ಅವರು 2016ರಿಂದ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕಿಯಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುದ್ಧ ಪರಿಣಾಮ: ಶ್ರೀಲಂಕಾದಲ್ಲಿ ಇಂಧನ ದರ 25% ಏರಿಕೆ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ತೀವ್ರ ಪರಿಣಾಮವು ಭಾರತವನ್ನು ಮಾತ್ರವಲ್ಲದೆ, ಶ್ರೀಲಂಕಾವನ್ನೂ ಕಾಡುತ್ತಿದೆ....

ಇಸ್ರೇಲ್‌ ಮೇಲೆ ಇರಾನ್ ದಾಳಿ; 50ಕ್ಕೂ ಹೆಚ್ಚು ಸಾವು, ಇಂಟರ್‌ಸೆಪ್ಟರ್ ನಾಶ

ಇಸ್ರೇಲ್‌ನ ಪರಮಾಣು ಚಟುವಟಿಕೆಗಳ ಪ್ರಮುಖ ಕೇಂದ್ರವೆಂದೇ ಗುರುತಿಸಲ್ಪಟ್ಟಿರುವ ದಕ್ಷಿಣದ ಡಿಮೋನಾ ನಗರದ...

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...