ಡಾಲರ್ ಎದುರು ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

Date:

ಡಾಲರ್ ಎದುರು ರೂಪಾಯಿ ಸೋಮವಾರ ದಾಖಲೆ ಮಟ್ಟಕ್ಕೆ ಕುಸಿದಿದ್ದು, ಪ್ರತಿ ಡಾಲರ್ ಗೆ 84.73 ರೂಪಾಯಿ ಆಗಿದೆ. ಸೋಮವಾರ ರೂಪಾಯಿ ಮೌಲ್ಯ ಶೇಕಡ 0.2ರಷ್ಟು ಕುಸಿತ ಕಂಡಿದ್ದು, ಕಳೆದ ಜೂನ್ 4ರ ಬಳಿಕ ಇದು ಒಂದೇ ದಿನದಲ್ಲಿ ದಾಖಲಾದ ಅತಿದೊಡ್ಡ ಕುಸಿತವಾಗಿದೆ.

ಸೋಮವಾರ ರೂಪಾಯಿ ಮೌಲ್ಯ ಶೇಕಡ 0.2ರಷ್ಟು ಕುಸಿತ ಕಂಡಿದ್ದು, ಕಳೆದ ಜೂನ್ 4ರ ಬಳಿಕ ಇದು ಒಂದೇ ದಿನದಲ್ಲಿ ದಾಖಲಾದ ಅತಿದೊಡ್ಡ ಕುಸಿತವಾಗಿದೆ. ದಿನದ ಮಧ್ಯಂತರದಲ್ಲಿ 84.73 ರೂಪಾಯಿಗೆ ಕುಸಿದಿದ್ದ ಮೌಲ್ಯ ದಿನದ ಅಂತ್ಯಕ್ಕೆ 84.70ರಲ್ಲಿ ಕೊನೆಗೊಂಡಿತು.

ಇದು ಶುಕ್ರವಾರದ ಮೌಲ್ಯಕ್ಕೆ ಹೋಲಿಸಿದರೆ 14 ಪೈಸೆಯಷ್ಟು ಕಡಿಮೆ. ಎರಡನೇ ತ್ರೈಮಾಸಿಕದ ಪ್ರಗತಿಯ ಚಿತ್ರಣ ನಿರೀಕ್ಷೆಗಿಂತ ದುರ್ಬಲವಾಗಿ, ಡಾಲರ್‌ಗೆ ನಾನ್ ಡೆಲಿವರೇಬಲ್ ಫಾರ್ವರ್ಡ್ ಮಾರುಕಟ್ಟೆಯಲ್ಲಿ ಪ್ರಬಲ ಬೇಡಿಕೆ ಕಂಡುಬಂದಿರುವುದು ಈ ಕುಸಿತಕ್ಕೆ ಕಾರಣ. ಆರ್‌ಬಿಐ ಮಧ್ಯಪ್ರವೇಶದಿಂದಾಗಿ ಮತ್ತಷ್ಟು ನಷ್ಟವಾಗುವುದು ತಪ್ಪಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಳಿಗೆ ಬಂದ ಸರ್ಕಾರ: ಆಡಳಿತ ಚುರುಕುಗೊಳ್ಳಲಿ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿ

ರೂಪಾಯಿ ಮೌಲ್ಯ ಕುಸಿತಕ್ಕೆ ಜಾಗತಿಕ ಅಂಶಗಳು ಕೂಡಾ ಇತ್ತೀಚಿನ ದಿನಗಳಲ್ಲಿ ಕಾರಣವಾಗಿವೆ. ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು, ಡಾಲರ್‌ಗೆ ಪರ್ಯಾಯವನ್ನು ಸೃಷ್ಟಿಸುವುದಾಗಿ ಬ್ರಿಕ್ಸ್ ದೇಶಗಳು ಪ್ರಸ್ತಾವ ಮುಂದಿಟ್ಟಿರುವ ವಿರುದ್ಧ ಎಚ್ಚರಿಕೆ ನೀಡಿ, ಶೇ.100ರ ಸುಂಕ ವಿಧಿಸುವುದಾಗಿ ಹೇಳಿದ್ದಾರೆ.

ಈ ಭೌಗೋಳಿಕ-ರಾಜಕೀಯ ಬಿಕ್ಕಟ್ಟು, ಯೆನ್ ಅಪಮೌಲ್ಯಗೊಳಿಸುವ ಸಂಭಾವ್ಯ ಚೀನಿ ಪ್ರತಿರೋಧ ಮತ್ತಿತರ ಅಂಶಗಳು ಮಾರುಕಟ್ಟೆ ಅನಿಶ್ಚಿತತೆಗೆ ಕಾರಣವಾಗಿವೆ. ಇದರ ನಡುವೆಯೂ ಎಫ್ಐಐ ಹೊರಮುಖ ಹರಿವನ್ನು ವಿಶ್ಲೇಷಕರು ಅಂದಾಜಿಸಿದ್ದಾರೆ.

“ರೂಪಾಯಿ ಮೌಲ್ಯವನ್ನು ಇದೀಗ ಕೇವಲ ವಿಸ್ತೃತ ಆರ್ಥಿಕ ಅಂಶಗಳು ಮಾತ್ರ ನಿರ್ಧರಿಸುವುದಿಲ್ಲ.ಇದು ರಾಜಕೀಯ-ಭೌಗೋಳಿಕ ಅಂಶಗಳನ್ನೂ ಒಳಗೊಂಡಿದೆ. ಜತೆಗೆ ವ್ಯಾಪಾರಕ್ಕೆ ಕುರಿತ ಅಮೆರಿಕದ ಹೊಸ ಆಡಳಿತದ ನಿಲುವನ್ನೂ ಅವಲಂಬಿಸಿದೆ. ಡಾಲರ್‌ಗೆ ಪರ್ಯಾಯ ವ್ಯವಸ್ಥೆಯಲ್ಲಿ ಬ್ರಿಕ್ಸ್ ಮಾಡಿಕೊಂಡರೆ ಶೇ. 100ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದು, ಇದು ರೂಪಾಯಿ ಮೇಲೆ ಪರಿಣಾಮ ಬೀರಿದೆ ಎಂದು ಡಿಬಿಎಸ್ ಬ್ಯಾಂಕ್‌ನ ಖಜಾನೆ ಮುಖ್ಯಸ್ಥ ಆಶೀಶ್ ವೈದ್ಯ ಅಭಿಪ್ರಾಯಪಟ್ಟಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...