ಉಕ್ರೇನ್ ಯುದ್ಧ ಟೀಕಿಸಿದ ರಷ್ಯಾದ ಪತ್ರಕರ್ತನಿಗೆ 8 ವರ್ಷ ಜೈಲು ಶಿಕ್ಷೆ!

Date:

ಉಕ್ರೇನ್‌ನಲ್ಲಿ ನಾಗರಿಕರ ಮೇಲೆ ರಷ್ಯಾ ನಡೆಸಿದ ದಾಳಿಯ ಕುರಿತು ತನ್ನ ಪತ್ರಿಕೆಯಲ್ಲಿ ವರದಿ ಮಾಡಿದ ರಷ್ಯಾದ ಪತ್ರಕರ್ತರೊಬ್ಬರನ್ನು ಶುಕ್ರವಾರ ಸೈಬೀರಿಯಾದ ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿದೆ. ಜೊತೆಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಗೊರ್ನೊ-ಅಲ್ಟೈಸ್ಕ್ ನಗರದ ನ್ಯಾಯಾಲಯವು ಅಲ್ಟಾಯ್‌ನ ಸೈಬೀರಿಯನ್ ಪ್ರದೇಶದ ಪತ್ರಕರ್ತ, ಲೀಫ್ಲೆಟ್ ಪತ್ರಿಕೆ ಪ್ರಕಾಶಕ ಸೆರ್ಗೆಯ್ ಮಿಖೈಲೋವ್ ಅವರನ್ನು ರಷ್ಯಾದ ಸೈನ್ಯದ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡಿದ ಅಪರಾಧಿ ಎಂದು ತೀರ್ಪು ನೀಡಿದೆ.

ಇದನ್ನು ಓದಿದ್ದೀರಾ? ರಷ್ಯಾ ಉಕ್ರೇನ್ ಯುದ್ಧ: ರಷ್ಯಾ ಸೇನಾ ಶಿಬಿರದಲ್ಲಿದ್ದ ಭಾರತೀಯ ಶೆಲ್ ದಾಳಿಗೆ ಬಲಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2022ರ ಫೆಬ್ರವರಿಯಲ್ಲಿ ಮಾಸ್ಕೋ ಉಕ್ರೇನ್ ಅನ್ನು ಆಕ್ರಮಿಸಿದ ದಿನಗಳ ನಂತರ ಅಳವಡಿಸಿಕೊಂಡ ಹೊಸ ಕಾನೂನಿನ ಪ್ರಕಾರ, ರಷ್ಯಾದಲ್ಲಿ ಯುದ್ಧವನ್ನು ಟೀಕಿಸುವುದು ಕ್ರಿಮಿನಲ್ ಅಪರಾಧವಾಗಿದೆ. ಅನೇಕ ಪತ್ರಕರ್ತರು ಸೇರಿದಂತೆ ನೂರಾರು ರಷ್ಯನ್ನರನ್ನು ಈ ಕಾನೂನಿನಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

2022ರ ಫೆಬ್ರವರಿಯಿಂದ ಈವರೆಗೆ ಯುದ್ಧ-ವಿರೋಧಿ ನಿಲುವಿನ ಮೇಲೆ 1,000ಕ್ಕೂ ಹೆಚ್ಚು ಜನರು ಕ್ರಿಮಿನಲ್ ಪ್ರಕರಣಕ್ಕೆ ಒಳಗಾಗಿದ್ದಾರೆ. ನೆಟ್ ಫ್ರೀಡಮ್ಸ್ ಪ್ರಕಾರ, ಉಕ್ರೇನ್‌ನಲ್ಲಿ ನಾಗರಿಕರ ಮೇಲೆ ರಷ್ಯಾದ ದಾಳಿಯ ಕುರಿತು ವರದಿ ಮಾಡಿದ ಕಾರಣ 2022ರ ಏಪ್ರಿಲ್‌ನಲ್ಲಿ ಮಿಖೈಲೋವ್ ಅವರನ್ನು ಬಂಧಿಸಲಾಗಿದೆ. ಆದರೆ ಮಿಖೈಲೋವ್ ಮಾತ್ರ ಈ ಆರೋಪವನ್ನು ತಿರಸ್ಕರಿಸುತ್ತಾ ಬಂದಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...