ವಿಶ್ವ ಸಮುದ್ರ | ಟ್ರಂಪ್ ಪರಮಾಣು ಜಲಾಂತರ್ಗಾಮಿ ನೌಕೆಗೆ ಸೆಡ್ಡು ಹೊಡೆಯುತ್ತಿವೆ ರಷ್ಯಾದ ಸಬ್‌ಮೆರಿನ್‌ಗಳು

Date:

ಎತ್ತರದ ಸಮುದ್ರದಲ್ಲಿ ರಷ್ಯಾವನ್ನು ಎದುರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ಅಮೇರಿಕನ್ ಜಲಾಂತರ್ಗಾಮಿ ನೌಕೆಗಳನ್ನು (ಸಬ್‌ಮೆರಿನ್) ಕಳಿಸಿದ್ದಾರೆ. ಅವುಗಳನ್ನು ನಿಭಾಯಿಸಲು ಸಮುದ್ರದಲ್ಲಿ ರಷ್ಯಾದ ಸಾಕಷ್ಟು ಪರಮಾಣು ಸಬ್‌ಮೆರಿನ್‌ ನೌಕೆಗಳಿವೆ ಎಂದು ರಷ್ಯಾ ಸಂಸತ್ತಿನಲ್ಲಿ ರಷ್ಯಾದ ಹಿರಿಯ ಶಾಸಕ ವಿಕ್ಟರ್ ವೊಡೊಲಾಟ್ಸ್ಕಿ ಹೇಳಿದ್ದಾರೆ.

ಶುಕ್ರವಾರ, ತಮ್ಮ ಟ್ರುತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಟ್ರಂಪ್‌, “ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರ ಅತ್ಯಂತ ಪ್ರಚೋದನಕಾರಿ ಹೇಳಿಕೆಗಳ ಕಾರಣದಿಂದಾಗಿ ಸೂಕ್ತ ಪ್ರದೇಶಗಳಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಗಳನ್ನು ಮರು ನಿಯೋಜಿಸಲು ಆದೇಶಿಸಿದ್ದೇನೆ” ಎಂದು ಘೋಷಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೊಡೊಲಾಟ್ಸ್ಕಿ, “ವಿಶ್ವದ ಸಾಗರಗಳಲ್ಲಿ ರಷ್ಯಾದ ಪರಮಾಣು ಜಲಾಂತರ್ಗಾಮಿ ನೌಕೆಗಳ ಸಂಖ್ಯೆ ಅಮೆರಿಕದ ಸಬ್‌ಮೆರಿನ್‌ಗಳಿಗಿಂತ ಹೆಚ್ಚಿವೆ. ಅಮೆರಿಕಾದ ಸಬ್‌ಮೆರಿನ್‌ಗಳು ಈಗಾಗಲೇ ನಮ್ಮ ನಿಯಂತ್ರಣದ ವ್ಯಾಪ್ತಿಯಲ್ಲಿವೆ. ಅವುಗಳ ವಿಚಾರವಾಗಿ ಯಾವುದೇ ಆತಂಕವಿಲ್ಲ. ಆದ್ದರಿಂದ, ಅಮೆರಿಕ ಅಧ್ಯಕ್ಷರು ಕಳಿಸಿರುವ ಸಬ್‌ಮೆರಿನ್‌ಗಳ ಬಗ್ಗೆ ರಷ್ಯಾ ಒಕ್ಕೂಟದಿಂದ ಯಾವುದೇ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಇಡೀ ಜಗತ್ತು ಶಾಂತವಾಗಿರುವಂತೆ ನೋಡಿಕೊಳ್ಳಲು ಮತ್ತು ಮೂರನೇ ಮಹಾಯುದ್ಧದ ಆರಂಭದ ಬಗ್ಗೆ ಮಾತನಾಡುವುದನ್ನು ತಡೆಯಲು ರಷ್ಯಾ ಮತ್ತು ಅಮೆರಿಕ ನಡುವೆ ಒಂದು ಮೂಲಭೂತ ಒಪ್ಪಂದ ನಡೆಸಬೇಕು” ಎಂದು ಅವರು ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಹೆಣ್ಣು ಮಕ್ಕಳ ಸುರಕ್ಷತೆಗೆ ‘ಶಕ್ತಿಶ್ರೀ’ ಸಾಕೇ?

ಏತನ್ಮಧ್ಯೆ, ‘ಗ್ಲೋಬಲ್ ಅಫೇರ್ಸ್’ ನಿಯತಕಾಲಿಕಗೆ ಹೇಳಿಕೆ ನೀಡಿರುವ ರಷ್ಯಾದ ಪ್ರಧಾನ ಸಂಪಾದಕ ಫ್ಯೋಡರ್ ಲುಕ್ಯಾನೋವ್, “ಟ್ರಂಪ್ ಅವರ ಪರಮಾಣು ಜಲಾಂತರ್ಗಾಮಿ ಹೇಳಿಕೆಯನ್ನು ಸದ್ಯಕ್ಕೆ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ” ಎಂದಿದ್ದಾರೆ.

“ನಮಗೆ ತಿಳಿದಿರುವಂತೆ, ಟ್ರಂಪ್ ಅವರು ತಮ್ಮದೇ ಆದ ಚಾನೆಲ್ಅನ್ನು ನಡೆಸುತ್ತಾರೆ. ಭಾವನಾತ್ಮಕವಾಗಿ, ಮಾನವೀಯವಾಗಿ ಹಾಗೂ ಸ್ವಯಂಪ್ರೇರಿತವಾಗಿ ಪ್ರತಿಕ್ರಿಯಿಸುತ್ತಾರೆ. ಇದನ್ನು ಅಮೆರಿಕದ ಸಶಸ್ತ್ರ ಪಡೆಗಳು, ನೌಕಾ ಪಡೆಗಳು ಬಹಳ ಆಶ್ಚರ್ಯದಿಂದ ಗಮನಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಟ್ರಂಪ್ ಅವರ ಹೇಳಿಕೆಗಳು ಹೀಗೆಯೇ ಮುಂದುವರೆದರೆ, ಮುಂದಿನ ದಿನಗಳಲ್ಲಿ ಅಮೆರಿಕ ಸೇನೆಯು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನನ್ನ ಅಭಿಪ್ರಾಯದಲ್ಲಿ, ಇಲ್ಲಿಯವರೆಗೆ ಟ್ರಂಪ್ ಹೇಳಿಕೆಗಳು ಕೇವಲ ಪದಗಳಿಗೆ ಸೀಮಿತವಾಗಿವೆ” ಎಂದು ಲುಕ್ಯಾನೋವ್ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...