ಇರಾನ್‌ ಹಂಗಾಮಿ ಸರ್ವೋಚ್ಚ ನಾಯಕರಾಗಿ ಅಯಾತುಲ್ಲಾ ಅಲಿರೆಜಾ ಅರಾಫಿ ನೇಮಕ

Date:

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಹತ್ಯೆಯಾದ ಬಳಿಕ, ಹಿರಿಯ ಶಿಯಾ ಧರ್ಮಗುರು ಅಯಾತುಲ್ಲಾ ಅಲಿರೆಜಾ ಅರಾಫಿ ಅವರನ್ನು ಇರಾನ್‌ನ ಹಂಗಾಮಿ ಸರ್ವೋಚ್ಚ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ‘ಐಆರ್‌ಎನ್‌ಎ’ ಇಂದು (ಭಾನುವಾರ) ವರದಿ ಮಾಡಿದೆ.

​ಖಮೇನಿ ಅವರ ಉತ್ತರಾಧಿಕಾರಿಯ ಅಧಿಕೃತ ನೇಮಕವಾಗುವವರೆಗೆ ಸರ್ವೋಚ್ಚ ನಾಯಕನ ಜವಾಬ್ದಾರಿಗಳನ್ನು ನಿರ್ವಹಿಸಲು ತಾತ್ಕಾಲಿಕ ನಾಯಕತ್ವ ಮಂಡಳಿಯನ್ನು ರಚಿಸಲಾಗಿದೆ. 67 ವರ್ಷದ ಅರಾಫಿ ಅವರು ಇರಾನ್‌ನ ಪ್ರಭಾವಿ ‘ಗಾರ್ಡಿಯನ್ ಕೌನ್ಸಿಲ್’ನ ಸದಸ್ಯರಾಗಿದ್ದು, ಈ ತಾತ್ಕಾಲಿಕ ಮಂಡಳಿಯಲ್ಲಿ ನ್ಯಾಯಶಾಸ್ತ್ರಜ್ಞ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹಂಗಾಮಿ ಮಂಡಳಿಯಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಮುಖ್ಯ ನ್ಯಾಯಮೂರ್ತಿ ಗುಲಾಮ್-ಹೊಸೇನ್ ಮೊಹ್ಸೇನಿ-ಎಜೆ ಮತ್ತು ಗಾರ್ಡಿಯನ್ ಕೌನ್ಸಿಲ್‌ನ ಮತ್ತೊಬ್ಬ ಧರ್ಮಗುರುಗಳು ಒಳಗೊಂಡಿದ್ದಾರೆ.

​ಯಾರು ಈ ಅಯಾತುಲ್ಲಾ ಅಲಿರೆಜಾ ಅರಾಫಿ?
ಅರಾಫಿ ಅವರು 1959ರಲ್ಲಿ ಇರಾನ್‌ನ ಯಾಜ್ಡ್ ಪ್ರಾಂತ್ಯದ ಮೇಬೋಡ್‌ನಲ್ಲಿ ಧಾರ್ಮಿಕ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದರು. ಇರಾನ್‌ನ ಮೂಲಗಳ ಪ್ರಕಾರ, ಇವರ ವಂಶಾವಳಿಯು 19ನೇ ಶತಮಾನದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಪಾರ್ಸಿ ಸಮುದಾಯಕ್ಕೆ ಸೇರಿದೆ. ಇವರ ತಂದೆ ಅಯಾತುಲ್ಲಾ (ಶೇಖ್ ಹಾಜಿ) ಮೊಹಮ್ಮದ್ ಇಬ್ರಾಹಿಂ ಅರಾಫಿ ಅವರು, 1979ರ ಕ್ರಾಂತಿಯ ನಂತರ ಇಸ್ಲಾಮಿಕ್ ಗಣರಾಜ್ಯದ ಸಂಸ್ಥಾಪಕರಾದ ರುಹೊಲ್ಲಾ ಖೊಮೇನಿ ಅವರ ಆಪ್ತರಾಗಿದ್ದರು ಎಂದು ಸರ್ಕಾರಿ ಮಾಧ್ಯಮಗಳು ತಿಳಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ತಾನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ: ಅಫ್ಘಾನ್ ಜೊತೆ ಪಾಕ್ ದೋಸ್ತಿ ಹಳಸಿದ್ದೆಲ್ಲಿ?

​ಖಮೇನಿ ಅವರಂತೆಯೇ ಇವರೂ ಸಹ ಹಿರಿಯ ಇಸ್ಲಾಮಿಕ್ ವಿದ್ವಾಂಸ (ಮುಜ್ತಾಹಿದ್) ಎಂಬುದನ್ನು ಸೂಚಿಸುವ ‘ಅಯಾತುಲ್ಲಾ’ ಎಂಬ ಬಿರುದನ್ನು ಹೊಂದಿದ್ದಾರೆ. ‘ಗಾರ್ಡಿಯನ್ ಕೌನ್ಸಿಲ್’ ಜೊತೆಗೆ, ಇವರು ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ನ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ಈ ಅಸೆಂಬ್ಲಿಯ ಎರಡನೇ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

​ಇದಕ್ಕೂ ಮುನ್ನ ಅರಾಫಿ ಅವರು ‘ಅಲ್-ಮುಸ್ತಫಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ’ದ ಅಧ್ಯಕ್ಷರಾಗಿದ್ದರು. ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಇವರು, ಇರಾನ್‌ನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಮತ್ತು ಅದನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದವರಾಗಿದ್ದಾರೆ.

​ಇರಾನ್‌ನ ಕ್ರಾಂತಿಕಾರಿ ಧರ್ಮಗುರುಗಳ ಮೊದಲ ತಲೆಮಾರು ತೆರೆಯಮರೆಗೆ ಸರಿಯುತ್ತಿರುವ ಈ ಸಂದರ್ಭದಲ್ಲಿ, ಇರಾನ್‌ನ ಬದಲಾಗುತ್ತಿರುವ ಅಧಿಕಾರ ರಚನೆಯಲ್ಲಿ ಉನ್ನತ ಸ್ಥಾನಕ್ಕೇರಲು ಅಗತ್ಯವಿರುವ ಅರ್ಹತೆ ಮತ್ತು ಸಂಪರ್ಕಗಳನ್ನು ಹೊಂದಿರುವ ಪ್ರಮುಖ ನಾಯಕರಾಗಿ ಅರಾಫಿ ಗುರುತಿಸಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್‌ ಮೇಲೆ ಇರಾನ್ ದಾಳಿ; 50ಕ್ಕೂ ಹೆಚ್ಚು ಸಾವು, ಇಂಟರ್‌ಸೆಪ್ಟರ್ ನಾಶ

ಇಸ್ರೇಲ್‌ನ ಪರಮಾಣು ಚಟುವಟಿಕೆಗಳ ಪ್ರಮುಖ ಕೇಂದ್ರವೆಂದೇ ಗುರುತಿಸಲ್ಪಟ್ಟಿರುವ ದಕ್ಷಿಣದ ಡಿಮೋನಾ ನಗರದ...

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...