‘ತನ್ನ ಕಾಲಿಗೆ ತಾನೇ ಗುಂಡು ಹಾರಿಸಿಕೊಂಡ ಟ್ರಂಪ್’; ಆಮದು ಸುಂಕದಲ್ಲಿ 96% ಹೊರೆ ಅಮೆರಿಕನ್ನರೇ ಹೊರುತ್ತಿದ್ದಾರೆ!

Date:

‘ಕೀಲ್ ಇನ್‌ಸ್ಟಿಟ್ಯೂಟ್‌ ಫಾರ್‌ ದಿ ವರ್ಲ್ಡ್‌ ಎಕಾನಮಿ’ ಸಂಸ್ಥೆ ನಡೆಸಿರುವ ಇತ್ತೀಚಿನ ಅಧ್ಯಯನವು ಟ್ರಂಪ್ ಅವರ ತುಘಲಕ್ ನಿರ್ಧಾರಗಳಿಂದ ಅಮೆರಿಕನ್ನರೇ ಹೆಚ್ಚು ಸಂಕಷ್ಟ ಎದುರಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಭಾರತ, ಬ್ರೆಜಿಲ್ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ಟ್ರಂಪ್ ಹೇರಿರುವ ಆಮದು ಸುಂಕಗಳ ಬಹುತೇಕ ಸಂಪೂರ್ಣ, 96% ಹೊರೆಯನ್ನು ಅಮೆರಿಕದ ಗ್ರಾಹಕರೇ ಪಾವತಿಸುವಂತಾಗಿದೆ. ಹೆಚ್ಚಿನ ಸುಂಕವು ಅಮೆರಿನ್ನರನ್ನೇ ಬಾಧಿಸುತ್ತಿದೆ ಎಂದು ಅಧ್ಯಯನವು ವಿವರಿಸಿದೆ.

ಅಮರಿಕಗೆ ತಮ್ಮ ಸರಕುಗಳನ್ನು ರಫ್ತು ಮಾಡುತ್ತಿರುವ ರಾಷ್ಟ್ರಗಳು, ತಮ್ಮ ರಫ್ತು ಪ್ರಮಾಣವನ್ನು ಕಡಿಮೆ ಮಾಡಿವೆ. ಅಲ್ಲದೆ, ಅಮೆರಿಕ ವಿಧಿಸುತ್ತಿರುವ ಸುಂಕವನ್ನೂ ಸರಕುಗಳ ಬೆಲೆಯಲ್ಲಿಯೇ ಸೇರಿಸಿ ಮಾರಾಟ ಮಾಡುತ್ತಿದ್ದು, ಸುಂಕದ ಹೊರೆಯನ್ನು ಅಮೆರಿಕದ ಗ್ರಾಹಕರಿಗೆ ವರ್ಗಾಯಿಸುತ್ತಿವೆ. ಪರಿಣಾಮ, ಸುಂಕದ ಆರ್ಥಿಕ ಹೊರೆಯನ್ನು ಅಮೆರಿಕದ ಜನರು ಪಾವತಿಸುತ್ತಿದ್ದಾರೆ. ಇದು, ವಿದೇಶಿ ರಾಷ್ಟ್ರಗಳು ಹೆಚ್ಚುವರಿ ಸುಂಕದ ವೆಚ್ಚವನ್ನು ಭರಿಸುತ್ತವೆ ಎಂಬ ಟ್ರಂಪ್ ವಾದಕ್ಕೆ ತದ್ವಿರುದ್ಧವಾಗಿದೆ ಎಂದು ವರದಿ ತೋರಿಸಿದೆ.

ಅಮೆರಿಕ ಡೊನಾಲ್ಡ್‌ ಟ್ರಂಪ್ ಅವರು 2025ರ ಏಪ್ರಿಲ್‌ನಲ್ಲಿ ತಮ್ಮ ‘ಲಿಬರೇಷನ್ ಡೇ’ (ವಿಮೋಚನಾ ದಿನ) ಘೋಷಣೆಯ ಸಂದರ್ಭದಲ್ಲಿ ಹಲವು ರಾಷ್ಟ್ರಗಳ ಮೇಲೆ ಆಮದು ಸುಂಕ ಘೋಷಿಸಿದರು. ‘ಹಲವು ರಾಷ್ಟ್ರಗಳು ಅಮೆರಿಕದ ಉತ್ನನ್ನಗಳ ಮೇಲೆ ಹೆಚ್ಚು ಆಮದು ಸುಂಕವನ್ನು ಹೇರುತ್ತಿವೆ. ಅಮೆರಿಕವನ್ನು ಅನ್ಯಾಯವಾಗಿ ನಡೆಸಿಕೊಳ್ಳುತ್ತಿವೆ. ಆದ್ದರಿಂದ, ನಾವೂ ಆಮದು ಸುಂಕವನ್ನು ಹೆಚ್ಚಿಸುತ್ತೇವೆ’ ಎಂದು ಪ್ರತಿಪಾದಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭಾರತದ ಮೇಲೆ 25% ಸುಂಕ ಹೇರುವುದರ ಜೊತೆಗೆ, ಚೀನಾ — 34%, ಯುರೋಪಿಯನ್ ಒಕ್ಕೂಟ — 20%, ಜಪಾನ್ — 24%, ಕಾಂಬೋಡಿಯಾ — 49%, ಬಾಂಗ್ಲಾದೇಶ್ — 37%, ಅಂಗೋಲಾ — 32%, ಅಲ್ಜೀರಿಯಾ — 30% ಹಾಗೂ ಇತರೆ ಹಲವು ದೇಶಗಳ ಮೇಲೆ 11% ರಿಂದ 50%ವರೆಗೆ ಸುಂಕ ಘೋಷಿಸಿದ್ದರು. ಇತ್ತೀಚೆಗೆ, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಕಾರಣಕ್ಕಾಗಿ ಭಾರತದ ಮೇಲೆ ದಂಡವನ್ನು 25% ಹೆಚ್ಚುವರಿ ಸುಂಕದೊಂದಿಗೆ 50%ಗೆ ಸುಂಕವನ್ನು ಹೆಚ್ಚಿಸಿದ್ದಾರೆ. ಅಲ್ಲದೆ, ಗ್ರೀನ್‌ಲ್ಯಾಂಡ್‌ ವಿಚಾರವಾಗಿ ನಡೆಯುತ್ತಿರುವ ವಿವಾದದಲ್ಲಿ ಅಮೆರಿಕವನ್ನು ವಿರೋಧಿಸುವ ರಾಷ್ಟ್ರಗಳ ಮೇಲೆ 25% ತೆರಿಗೆ ಹೇರುವುದಾಗಿಯೂ ಟ್ರಂಪ್ ಘೋಷಿಸಿದ್ದಾರೆ.

ಈ ಪ್ರಮಾಣದ ಸುಂಕವನ್ನು ಅಮೆರಿಕಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುವ ರಾಷ್ಟ್ರಗಳೇ ಭರಿಸುತ್ತವೆ. ಈ ಸುಂಕಗಳು ಆಯಾ ರಾಷ್ಟ್ರಗಳಿಗೆ ಹೊರೆಯಾಗುತ್ತದೆ ಎಂದು ಟ್ರಂಪ್ ಭಾವಿಸಿದ್ದರು. ಆದರೆ, ಅಧ್ಯಯನ ವರದಿಯು ವ್ಯತಿರಿಕ್ತ ಸಂಗತಿಯನ್ನು ಬಹಿರಂಗಪಡಿಸಿದೆ. ಟ್ರಂಪ್ ಹೇರಿಸುವ ಸುಂಕದಲ್ಲಿ 96% ಹೊರೆಯನ್ನು ರಫ್ತು ಮಾಡುವ ರಾಷ್ಟ್ರಗಳ ಬದಲಿಗೆ ಅಮೆರಿಕದ ಗ್ರಾಹಕರೇ ಭರಿಸುತ್ತಿದ್ದಾರೆ ಎಂದು ತಿಳಿಸಿದೆ.

ಕೀಲ್ ಅಧ್ಯಯನವು 2024ರ ಜನವರಿಯಿಂದ 2025ರ ನವೆಂಬರ್‌ವರೆಗಿನ ಸುಮಾರು 4 ಲಕ್ಷ ಕೋಟಿ ಡಾಲರ್ (366 ಲಕ್ಷ ಕೋಟಿ ರೂ.) ಮೌಲ್ಯದ 2.5 ಕೋಟಿಗೂ ಹೆಚ್ಚು ಸರಕು ರವಾನೆಯ ದಾಖಲೆಗಳನ್ನು ವಿಶ್ಲೇಷಿಸಿದೆ. ಈ ವಿಶ್ಲೇಷಣೆಯಿಂದ ಕಂಡುಕೊಂಡ ಪ್ರಮುಖ ಅಂಶಗಳು ಹೀಗಿವೆ;

  • ಅಮೆರಿಕಗೆ ರಫ್ತು ಮಾಡುವ ಬೆಲೆಗಳು ಸ್ಥಿರವಾಗಿದ್ದರೂ, ಒಟ್ಟಾರೆ ವ್ಯಾಪಾರ ಪ್ರಮಾಣವು ಗಣನೀಯವಾಗಿ ಕುಸಿದಿದೆ.
  • ಭಾರತದ ಮೇಲೆ 50% ಸುಂಕ ಹೇರಿದ ನಂತರ, ಅಮೆರಿಕಗೆ ಆಗುತ್ತಿದ್ದ ರಫ್ತು ಪ್ರಮಾಣವು 24%ರಷ್ಟು ಕಡಿಮೆಯಾಗಿದೆ.
  • ರಫ್ತುದಾರರು ತಮ್ಮ ಮಾರಾಟ ಮತ್ತು ಬೆಲೆಗೆ ಧಕ್ಕೆಯಾಗದಂತೆ ತಡೆಯಲು ತಮ್ಮ ಸರಕುಗಳನ್ನು ಇತರ ಮಾರುಕಟ್ಟೆಗಳಿಗೆ ತಿರುಗಿಸುತ್ತಿದ್ದಾರೆ.
  • ಅಮೆರಿಕದಲ್ಲಿ ಮಾರಾಟವಾಗುವ ಇತರ ದೇಶಗಳ ಸರಕುಗಳ ಬೆಲೆಯಲ್ಲಿಯೇ ಅಮೆರಿಕದ ಸುಂಕವನ್ನೂ ಸೇರಿಸಿ ಮಾರಾಟ ಮಾಡುತ್ತಿದ್ದಾರೆ.
  • ಅಮೆರಿಕದಲ್ಲಿ ಬೇಡಿಕೆ-ಪೂರೈಕೆಯ ನಡುವಿನ ಅಂತರ ಹೆಚ್ಚಾಗಿ, ಸ್ಥಳೀಯವಾಗಿ ಹಲವು ಸರಕುಗಳ ಅಲಭ್ಯವಾಗಿವೆ. ಜೊತೆಗೆ, ಬೆಲೆಯೂ ಏರುತ್ತಿದೆ.  

“ವಿದೇಶಿಯರು ಸುಂಕದ ರೂಪದಲ್ಲಿ ಅಮೆರಿಕಕ್ಕೆ ಸಂಪತ್ತನ್ನು ವರ್ಗಾಯಿಸುತ್ತಿದ್ದಾರೆ ಎಂಬುದು ಸುಳ್ಳು. ಅಮೆರಿಕಗೆ ಸರಕು ರಫ್ತು ಮಾಡುವ ರಾಷ್ಟ್ರಗಳು ಕೇವಲ 4%ರಷ್ಟು ಸುಂಕದ ವೆಚ್ಚವನ್ನು ಮಾತ್ರವೇ ಭರಿಸುತ್ತಿದ್ದಾರೆ. ಉಳಿದ 96% ವೆಚ್ಚವು ಅಮೆರಿಕದ ಗ್ರಾಹಕರ ಮೇಲೆ ಬಿದ್ದಿದೆ. ಅಲ್ಲಿನ ಜನರೇ ಈ ಪ್ರಮಾಣದ ಮೊತ್ತವನ್ನು ಪಾವತಿಸುತ್ತಿದ್ದಾರೆ. ಪರಿಣಾಮ, ಅಮೆರಿಕನ್ನರ ಜೀವನ ವೆಚ್ಚವು ಗಣನೀಯವಾಗಿ ಹೆಚ್ಚಾಗಿದೆ” ಎಂದು ಕೀಲ್ ಸಂಸ್ಥೆಯ ಸಂಶೋಧನಾ ನಿರ್ದೇಶಕ ಜೂಲಿಯನ್ ಹಿಂಜ್ ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಗಾಜಾ ಶಾಂತಿ ಮಂಡಳಿ | ಭಕ್ಷಕನೇ ರಕ್ಷಕನ ರೂಪದಲ್ಲಿರುವುದು ಎಷ್ಟು ಸರಿ?

ಕೀಲ್ ಸಂಸ್ಥೆಯ ವಿಶ್ಲೇಷಣೆಯು, ಟ್ರಂಪ್ ವಾದಿಸುತ್ತಿದ್ದ ‘ಆಮದು ಸುಂಕಗಳು ಅಮೆರಿಕದ ಉತ್ಪಾದನಾ ವಲಯಕ್ಕೆ ಮರುಜೀವ ನೀಡುತ್ತವೆ’ ಎಂಬ ಪ್ರತಿಪಾದನೆಯನ್ನು ಅಲ್ಲಗಳೆದಿದೆ. 2025ರ ಏಪ್ರಿಲ್ ಮತ್ತು ನವೆಂಬರ್ ನಡುವೆ ಅಮೆರಿಕವು 60,000 ಉತ್ಪಾದನಾ ಉದ್ಯೋಗಗಳನ್ನು (Manufacturing jobs) ಕಳೆದುಕೊಂಡಿದೆ ಎಂಬ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದೆ. ಟ್ರಂಪ್ ಅವರ ದುಬಾರಿ ಸುಂಕ ಹೇರುವ ಕ್ರಮಗಳು ಮುಂದುವರೆದರೆ, ಟ್ರಂಪ್ ಅವರ ಆಡಳಿತ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಇದು, ಕಳೆದ ವರ್ಷ ಅಮೆರಿಕದ ಕಸ್ಟಮ್ಸ್ ಆದಾಯವು ಸುಮಾರು 200 ಬಿಲಿಯನ್ ಡಾಲರ್‌ನಷ್ಟು ಹೆಚ್ಚಾಗಿದ್ದರೂ, ಅದರ ಹೊರೆಯನ್ನು ಗ್ರಾಹಕರೇ ಹೊತ್ತಿದ್ದಾರೆ. 2025ರ ಡಿಸೆಂಬರ್‌ನಲ್ಲಿ ಅಮೆರಿಕದ ಹಣದುಬ್ಬರವು 2.7% ತಲುಪಿದೆ. ‘ಅಮೆರಿಕದ ಹಣದುಬ್ಬರ ಸ್ಥಿತಿ ಹೆಚ್ಚುತ್ತಿರುವುದಕ್ಕೆ ಟ್ರಂಪ್ ಅವರ ಸುಂಕ ನೀತಿಗಳೇ ಪ್ರಮುಖ ಕಾರಣ’ಎಂದು ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪವೆಲ್ ಹೇಳಿದ್ದಾರೆ.

ಸದ್ಯಕ್ಕೆ, ಟ್ರಂಪ್‌ ಹೇರಿರುವ ಸುಂಕದ ವಿಚಾರವು ಅಮೆರಿಕದ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಟ್ರಂಪ್ ಆಡಳಿತವು ‘ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ’ಯಡಿ ತನಗಿರುವ ಹಕ್ಕು ಮತ್ತು ತಾವು ತೆಗೆದುಕೊಂಡಿರುವ ನಿರ್ಧಾರಗಳನ್ನು ಸಮರ್ಥಿಸಿಕೊಂಡಿದೆ. ಆದರೆ, ಟ್ರಂಪ್ ಆಡಳಿತದ ವಾದದ ಕುರಿತು ನ್ಯಾಯಾಧೀಶರೊಬ್ಬರು ಸಂಶಯ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯವು ಯಾವ ತೀರ್ಪು ನೀಡಲಿದೆ ಎಂದು ಹಲವು ರಾಷ್ಟ್ರಗಳು ಎದುರು ನೋಡುತ್ತಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...