ನಾಸಾದಲ್ಲಿ ಗಗನಯಾತ್ರಿಯಾಗಿ ಯಶಸ್ಸು ಕಂಡಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ನಿವೃತ್ತಿ ಡೆದಿದ್ದಾರೆ. ಅವರು ಕಳೆದ ವರ್ಷ ಡಿಸೆಂಬರ್ 27 ನಿವೃತ್ತರಾಗಿದ್ದಾರೆಂದು ಇದೀಗ ನಾಸಾ ಮಾಹಿತಿ ನೀಡಿದೆ.
ಸುನೀತಾ ಅವರು 27 ವರ್ಷಗಳ ಕಾಲ ನಾಸಾದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ವರ್ಷ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅಲ್ಲಿಯೇ ಸಿಲುಕಿದ್ದರು. ಬರೋಬ್ಬರಿ 9 ತಿಂಗಳುಗಳ ಬಳಿಕ ಅವರನ್ನು ಮರಳಿ ಭೂಮಿಗೆ ಕರೆತರಲಾಗಿತ್ತು.
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳಷ್ಟು ಸೇವೆ ಸಲ್ಲಿಸಿರುವ ಅವರು, ಚಂದ್ರ ಮತ್ತು ಮಂಗಳ ಗ್ರಹಕ್ಕೂ ಗಗನಯಾತ್ರಿಯಾಗಿ ತೆರಳಿದ್ದರು. ಅವರ ಸಾಧನೆಗಳನ್ನು ಶ್ಲಾಘಿಸಿರುವ ನಾಸಾದ ಆಡಳಿತಾಧಿಕಾರಿ ಜಾರೆಡ್ ಐಸಾಕ್‌ಮ್ಯಾನ್, “ಸುನೀತಾ ಅವರ ಕೊಡುಗೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಿವೆ. ನಾಸಾ ಮತ್ತು ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಅವರಿಗೆ ಧನ್ಯವಾದಗಳು” ಎಂದಿದ್ದಾರೆ.
ಸುನಿತಾ ವಿಲಿಯಮ್ಸ್ ಅವರು 1998ರಲ್ಲಿ ನಾಸಾ ಸೇರಿದರು. ಅವರು 2006, 2022 ಮತ್ತು 2024ರಲ್ಲಿ ಮೂರು ಬಾಹ್ಯಾಕಾಶ ಮಿಷನ್‌ಗಳನ್ನು ಪೂರೈಸಿದ್ದು 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.
ಸುನಿತಾ ಅವರ ತಂದೆ ದೀಪಕ್ ಪಾಂಡ್ಯ ಅವರು ಮೂಲತಃ ಗುಜರಾತ್‌ನ ಮೆಹಸಾನಾ ಜಿಲ್ಲೆಯ ಜುಲಾಸನ್ ಗ್ರಾಮದವರು. ಅವರು 1957ರಲ್ಲಿ ಅಮೆರಿಕ ತೆರಳಿದ್ದರು. ಅಲ್ಲಿಯೇ, ಉರ್ಸುಲಿನ್ ಬೊನ್ನಿ ಝಲೊಕಾರ್ ಅವರನ್ನು ವಿವಾಹವಾಗಿ, ಅಮೆರಿಕದಲ್ಲೇ ನೆಲೆಸಿದರು. ಈ ದಂಪತಿಗಳಿಗೆ 1965ರಲ್ಲಿ ಸುನೀತಾ ಜನಿಸಿದರು.




