ಟಿ20 ವಿಶ್ವಕಪ್ | ಬಾಂಗ್ಲಾ ಬೆನ್ನಲ್ಲೇ ಪಾಕಿಸ್ತಾನವೂ ಹೊರಹೋಗುವ ಸಾಧ್ಯತೆ!

Date:

ಬಾಂಗ್ಲಾದೇಶವನ್ನು ಐಸಿಸಿ ಅತ್ಯಂತ ತುಚ್ಛವಾಗಿ ನಡೆಸಿಕೊಂಡಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ನಡೆಯುವ 2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುವ ಕುರಿತು ಸರ್ಕಾರವು ನಿರ್ಧಾರ ತೆಗೆದುಕೊಳ್ಳುತ್ತದೆ. ಸರ್ಕಾರದ ನಿರ್ಧಾರದಂತೆ ಪಾಕ್ ತಂಡದ ಮುಂದಿನ ಹೆಜ್ಜೆ ಇರಲಿದೆ ಎಂದು ಹೇಳಿದ್ದಾರೆ. ಅವರ ಹೇಳಿಕೆ ಬೆನ್ನಲ್ಲೇ, ವಿಶ್ವಕಪ್ ಪಂದ್ಯಾವಳಿಯಿಂದ ಪಾಕಿಸ್ತಾನ ತಂಡವೂ ಹೊರಗುಳಿಯಬಹುದು ಎಂಬ ಚರ್ಚೆ ನಡೆಯುತ್ತಿದೆ.

ಕೆಕೆಆರ್ ತಂಡದ ಭಾಗವಾಗಿದ್ದ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಟ್ಟ ಬಳಿಕ, ಬಾಂಗ್ಲಾದೇಶವು ತಮ್ಮ ತಂಡವನ್ನು ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಘೋಷಿಸಿತು. ಭದ್ರತಾ ಕಾಳಜಿಯು ತಮ್ಮ ನಿರ್ಧಾರಕ್ಕೆ ಮೂಲ ಕಾರಣವೆಂದು ಹೇಳಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ತಮ್ಮ ತಂಡದ ಆಟಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಐಸಿಸಿಗೆ ಕೇಳಿತು. ಆದರೆ, ಬದಲಾವಣೆ ಮಾಡಲು ಐಸಿಸಿ ನಿರಾಕರಿಸಿದೆ. ಪರಿಣಾಮ, ಬಾಂಗ್ಲಾದೇಶವು 2026 ರ ಟಿ20 ವಿಶ್ವಕಪ್ಅನ್ನು ಬಹಿಷ್ಕರಿಸಿದೆ. ಇದೀಗ, ಬಾಂಗ್ಲಾ ಜಾಗದಲ್ಲಿ ಸ್ಕಾಟ್ಲೆಂಡ್‌ಅನ್ನು ಆಡಸಲು ಐಸಿಸಿ ನಿರ್ಧರಿಸಿದೆ.

ಬಾಂಗ್ಲಾ ತಂಡದ ಬದಲಿಗೆ ಸ್ಕಾಟ್ಲೆಂಡ್‌ಅನ್ನು ಸೇರಿಸಿದ ಬಳಿಕ, ಐಸಿಸಿ ನಿರ್ಧಾರದ ವಿರುದ್ಧ ಮೊಹ್ಸಿನ್ ನಖ್ವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಐಸಿಸಿ ದ್ವಿಮುಖ ನೀತಿಗಳನ್ನು ಹೊಂದಿರಲು ಸಾಧ್ಯವಿಲ್ಲ. ಬಾಂಗ್ಲಾದೇಶವನ್ನು ಪಂದ್ಯಾವಳಿಯಲ್ಲಿ ಭಾಗವಹಿಸಲು ಅನುಮತಿಸಬೇಕು” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಬಾಂಗ್ಲಾದೇಶವನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗಿದೆ. ಐಸಿಸಿ ಸಭೆಯಲ್ಲಿಯೂ ನಾನು ಅದನ್ನೇ ಹೇಳಿದ್ದೇನೆ. ನೀವು ದ್ವಿಮುಖ ನೀತಿಗಳನ್ನು ಹೊಂದಲು ಸಾಧ್ಯವಿಲ್ಲ. ಒಂದು ದೇಶವು ಯಾವಾಗ ಬೇಕಾದರೂ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ, ಇನ್ನೊಂದು ದೇಶಕ್ಕೆ ಅಂತಹ ಅವಕಾಶವೇ ಇಲ್ಲದಂತೆ ಸಂಪೂರ್ಣ ವಿರುದ್ಧವಾಗಿ ವರ್ತಿಸಲಾಗುತ್ತದೆ. ಬಾಂಗ್ಲಾದೇಶಕ್ಕೆ ಅನ್ಯಾಯ ಮಾಡಲಾಗುತ್ತಿದೆ” ಎಂದಿದ್ದಾರೆ.

ಪಾಕಿಸ್ತಾನವು ಬಾಂಗ್ಲಾದೇಶದಂತೆಯೇ ಟಿ20 ವಿಶ್ವಕಪ್‌ಅನ್ನು ಬಹಿಷ್ಕರಿಸುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಖ್ವಿ, “ಈ ಬಗ್ಗೆ ಪಾಕಿಸ್ತಾನ ಸರ್ಕಾರದ ಸೂಚನೆಗಳನ್ನು ಪಿಸಿಬಿ ಅನುಸರಿಸುತ್ತದೆ. ಪ್ರಧಾನಿ ಈಗ ಪಾಕಿಸ್ತಾನದಲ್ಲಿಲ್ಲ. ಅವರು ಹಿಂತಿರುಗಿದ ಬಳಿಕ, ಅವರೊಂದಿಗೆ ಚರ್ಚಿಸಿ ನಮ್ಮ ಅಂತಿಮ ನಿರ್ಧಾರವನ್ನು ತಿಳಿಸುತ್ತೇವೆ. ಅದು ಸರ್ಕಾರದ ನಿರ್ಧಾರ. ನಾವು ಅವರ ನಿರ್ಧಾರವನ್ನು ಪಾಲಿಸುತ್ತೇವೆ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುದ್ಧ ಪರಿಣಾಮ: ಶ್ರೀಲಂಕಾದಲ್ಲಿ ಇಂಧನ ದರ 25% ಏರಿಕೆ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ತೀವ್ರ ಪರಿಣಾಮವು ಭಾರತವನ್ನು ಮಾತ್ರವಲ್ಲದೆ, ಶ್ರೀಲಂಕಾವನ್ನೂ ಕಾಡುತ್ತಿದೆ....

ಇಸ್ರೇಲ್‌ ಮೇಲೆ ಇರಾನ್ ದಾಳಿ; 50ಕ್ಕೂ ಹೆಚ್ಚು ಸಾವು, ಇಂಟರ್‌ಸೆಪ್ಟರ್ ನಾಶ

ಇಸ್ರೇಲ್‌ನ ಪರಮಾಣು ಚಟುವಟಿಕೆಗಳ ಪ್ರಮುಖ ಕೇಂದ್ರವೆಂದೇ ಗುರುತಿಸಲ್ಪಟ್ಟಿರುವ ದಕ್ಷಿಣದ ಡಿಮೋನಾ ನಗರದ...

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...