2026ರ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ಇತಿಹಾಸ ನಿರ್ಮಿಸಿದೆ, ಆಸ್ಟ್ರೇಲಿಯಾ ತಂಡದ ವಿರುದ್ಧ ಬರೋಬ್ಬರಿ 19 ವರ್ಷಗಳ ಬಳಿಕ ಮತ್ತೆ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡಿದೆ.
ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾವನ್ನು ಜಿಂಬಾಬ್ವೆ ಮಣಿಸಿದೆ. ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 169 ರನ್‌ಗಳನ್ನು ಕಲೆ ಹಾಕಿತ್ತು. ಈ ರನ್‌ಗಳ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 146ರ ರನ್‌ಗಳಿಗೆ ಆಲ್‌ಔಟ್ ಆಗಿದೆ. 23 ರನ್‌ಗಳಿಂದ ಜಿಂಬಾಬ್ವೆ ಗೆದ್ದುಬೀಗಿದೆ. ಈ ಪಂದ್ಯದ ಸೋಲು ಆಸ್ಟ್ರೇಲಿಯಾದ ಸೂಪರ್ 8 ಅರ್ಹತೆಯನ್ನು ಕಷ್ಟಕರವಾಗಿಸಿದೆ. ‘ಗ್ರೂಪ್ ಬಿ’ನ ಅಂಕಪಟ್ಟಿಯಲ್ಲಿ ಆಸಿಸ್ ತಂಡ 3ನೇ ಸ್ಥಾನಕ್ಕೆ ಕುಸಿದಿದೆ.
ಪಂದ್ಯದಲ್ಲಿ ಜಿಂಬಾಬ್ವೆ ತಂಡ 2 ವಿಕೆಟ್ ನಷ್ಟದೊಂದಿಗೆ 169 ರನ್‌ಗಳಿಸಿದ್ದರು. ಈ ಮೊತ್ತವನ್ನು ನಿರಾಯಾಸವಾಗಿ ಬೆನ್ನತ್ತಬಹುದೆಂದು ಆಸ್ಟ್ರೇಲಿಯಾ ತಂಡ ಭಾವಿಸಿತ್ತು. ಆದರೆ, ಮೊದಲ ಐದು ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 29 ರನ್‌ಗಳನ್ನು ಮಾತ್ರವೇ ಗಳಿಸಿತು. ಇದು ಆಸಿಸ್ ತಂಡಕ್ಕೆ ಗೆಲುವು ದುಃಸ್ವಪ್ನದಂತೆ ಕಾಣಲಾರಂಭಿಸಿತು. ಆದಾಗ್ಯೂ, 146 ರನ್‌ಗಳಿಸಿ, ಸೋಲುಂಡಿತು.





