ಹಾರ್ಮುಜ್‌ ಬಳಸಲು ಇರಾನ್‌ ಭರವಸೆ: ಭಾರತದ ಆರ್ಥಿಕ ಜೀವನಾಡಿ ಅತಂತ್ರ!

Date:

ಭಾರತ ಮತ್ತು ಇರಾನ್‌ನ ವಿದೇಶಾಂಗ ಸಚಿವರ ನಡುವೆ ಫೋನ್‌ ಸಂಭಾಷಣೆ ನಡೆದಿದ್ದು, ಹಾರ್ಮುಜ್‌ ಜಲಸಂಧಿಯ ಮೂಲಕ ಭಾರತದ ಸರಕು ಸಾಗಿಸಲು ಇರಾನ್‌ ಅನುಮತಿಸಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, 5ನೇ ದೊಡ್ಡ ಆರ್ಥಿಕ ಶಕ್ತಿ, ಪರಮಾಣು ಶಕ್ತಿ ಮತ್ತು ಪ್ರಬಲ ಮಿಲಿಟರಿ ಶಕ್ತಿ ಹೊಂದಿರುವ, 85% ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಭಾರತ ಇರಾನ್‌ಗೆ ಫೋನಾಯಿಸಿ ಅಂತಾರಾಷ್ಟ್ರೀಯ ಜಲಮಾರ್ಗವನ್ನು ಬಳಸಿಕೊಳ್ಳಲು ವಿನಾಯಿತಿ ನೀಡಿ ಎಂದು ಮನವಿ ಮಾಡಿದೆ.

ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಒಂದು ಕೋಟಿ ಭಾರತೀಯರು, ಅಲ್ಲಿಂದ ಬರುವ ಆದಾಯ ಹಾಗೂ ದೇಶದ ರೈತರಿಗೆ ಬೇಕಾದ ಗೊಬ್ಬರದಲ್ಲಿ 70% ಗೊಬ್ಬರ ಹಾಗೂ ಭಾರತಕ್ಕೆ ಬೇಕಾಗಿರುವ ಎಲ್‌ಎನ್‌ಜಿ ಅನಿಲವೂ ಹಾರ್ಮುಜ್‌ ಜಲಮಾರ್ಗದ ಮೂಲಕವೇ ಬರಬೇಕಾಗಿದೆ. ಇದು ಕೇವಲ ಸರಕು ಸಾಗಾಣೆಯ ಮಾರ್ಗವಲ್ಲ ಬದಲಿಗೆ ಭಾರತದ ಬಹುಪಾಲು ಆಮದಿನ ಜೀವದ್ವಾರ.

ಈ ಜಲಮಾರ್ಗವನ್ನು ವಿಶ್ವ ಸಂಸ್ಥೆಯ 1994ರ ಸಮುದ್ರ ಕಾನೂನು ನಿಯಮಗಳ ಪ್ರಕಾರ ಎಲ್ಲ ದೇಶಗಳು ಮುಕ್ತವಾಗಿ ಬಳಸಬಹುದು. ಆದಾಗ್ಯೂ, ಈ ಜಲಮಾರ್ಗವನ್ನು ಬಳಸಿಕೊಳ್ಳುವ ಮುನ್ನ ಇರಾನಿನ ಆಡಳಿತಕ್ಕೆ ಮುಂಚಿತವಾಗಿ ಸೂಚನೆ ನೀಡಬೇಕು ಎಂಬ ಷರತ್ತೂ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇರಾನ್‌ ಹಾರ್ಮುಜ್‌ ಜಲಸಂಧಿಯಲ್ಲಿ ನೌಕೆಗಳು ಸಂಚರಿಸಲು ಸಾಗಾಣೆ ಪರವಾನಗಿ ನೀಡುತ್ತಿರುವುದು, ಗಡಿ ಪ್ರಾಧಿಕಾರಗಳು ವಿಮಾನ ನಿಲ್ದಾಣಗಳಲ್ಲಿ ವೀಸಾ ನೀಡುವ ಪದ್ಧತಿಯ ಹಾಗೆ ಗೋಚರಿಸುತ್ತದೆ. ಚೀನಾ ತನ್ನ ಸರಕುಗಳನ್ನು ಯಾವುದೇ ಪರವಾನಗಿಯ ಹಂಗಿಲ್ಲದೆ, ಶ್ಯಾಡೋ ಪ್ಲೀಟ್‌ ಮೂಲಕ ಐಆರ್‌ಜಿಸಿಯ ರಕ್ಷಣೆಯೊಂದಿಗೆ ಯಾರ ಸಮ್ಮತಿಯೂ ಪಡೆಯದೆ ಈ ಜಲಮಾರ್ಗದ ಮೂಲಕ ತೈಲ ಆಮದು ಮಾಡಿಕೊಳ್ಳುತ್ತಿದೆ.

ಫೆಬ್ರವರಿ 28ರವರೆಗೂ 11.7 ಬ್ಯಾರೆಲ್‌ ತೈಲವನ್ನು ಸಾಗಿಸಿರುವ ಚೀನಾ, ಇರಾನಿಗೆ ಅವಶ್ಯವಿರುವ ಯುದ್ದೋಪಕರಣಗಳಿಗೆ ಬೇಕಿದ್ದ ಹಣಕಾಸು ಒದಗಿಸಿದೆ. ಇನ್ನೂ ಬಾಂಗ್ಲಾದೇಶವು ಮಾರ್ಚ್‌ 10ರಂದು ಇರಾನ್‌ ಬಳಿ ಹಾರ್ಮುಜ್ ಮುಖೇನ ಸಂಚರಿಸಲು ಅನುಮತಿ ಕೇಳಿದೆ. ಮಾರ್ಚ್‌ 11 ರಂದು ಭಾರತ ಕೂಡ ಕಚ್ಚಾ ತೈಲ ಸಾಗಣಿಕೆ ಮಾಡಲು ವಿನಾಯಿತಿ ನೀಡಿ ಎಂದು ಮನವಿ ಮಾಡಿದೆ. ಥೈಲಾಂಡ್‌ ಈ ಯಾವ ಮಾನದಂಡಗಳಿಗೂ ಒಳಗಾಗದೆ ತೈಲ ಸಾಗಣೆಗೆ ಯತ್ನಿಸಿದ್ದು, ಅದರ ಮಯೂರಿ ನಾರಿ ಹಡಗು ಇರಾನ್‌ ದಾಳಿಗೆ ತುತ್ತಾಗಿದೆ. ಭಾರತಕ್ಕೆ ಸರಕು ಸಾಮಾನು ಹೊತ್ತು ತರುತ್ತಿದ್ದ ಮಯೂರಿ ನಾರಿ ನೌಕೆಯಲ್ಲಿದ್ದ ಇಬ್ಬರು ನಾವಿಕರಲ್ಲಿ ಓರ್ವ ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ಇರಾನ್‌ನ ನಾಲ್ಕು ಶ್ರೇಣಿಯ ಪ್ರವೇಶ ಸೂಚಿಯು ಈಗ 33 ಕಿಲೋಮೀಟರ್‌ನ ಅಂತಾರಾಷ್ಟ್ರೀಯ ಜಲಮಾರ್ಗವನ್ನು ನಿಯಂತ್ರಿಸುತ್ತದೆ.
ಮೊದಲ ಶ್ರೇಣಿ: ಚೀನ – ಯುದ್ದೋಪಕರಣಕ್ಕೆ ಅಗತ್ಯ ನೆರವು ಕಲ್ಪಿಸುತ್ತಿರುವುದರಿಂದ ಇತರೆ ರಾಷ್ಟ್ರಗಳಿಗೆ ಇರುವ ನಿರ್ಭಂದಗಳಿಂದ ಚೀನಾ ಮುಕ್ತವಾಗಿದೆ.
ಶ್ರೇಣಿ ಎರಡು: ಭಾರತ ಮತ್ತು ಬಾಂಗ್ಲಾದೇಶ – ಈ ಎರಡೂ ದೇಶಗಳು  ರಿಯಾಯಿತಿ ಬೇಡಿರುವುದರಿಂದ ಹಾಗೂ, ಇರಾನಿನ ಷರತ್ತುಗಳಿಗೆ ಸಮ್ಮತಿ ನೀಡಿರುವುದರಿಂದ ಹಾರ್ಮಜ್‌ ಜಲಮಾರ್ಗ ಬಳಸಬಹುದಾಗಿ  ಎಂದು ಇರಾನ್‌ ಹೇಳಿದೆ.
ಶ್ರೇಣಿ ಮೂರು: ಇಸ್ರೇಲ್‌ ಅಮೆರಿಕ ಅಥವಾ ಈ ದೇಶಗಳೊಂದಿಗೆ ಮೈತ್ರಿ ಮಾಡಿಕೊಂಡ ಯಾವುದೇ ರಾಷ್ಟ್ರಗಳಾದರು ಅವು ನಮ್ಮ ಕಾನೂನುಬದ್ಧ ಗುರಿ ಎಂದು ಇರಾನ್‌ ಹೇಳಿದೆ. ಹಾಗಾಗಿ ಈ ಶ್ರೇಣಿಯಡಿ ಬರುವ ರಾಷ್ಟ್ರಗಳಿಗೆ ಸಾಗಾಣೆಗೆ ಅನುಮತಿ ಇಲ್ಲ.
ಶ್ರೇಣಿ ನಾಲ್ಕು: ಪ್ರವೇಶ ನಿರ್ಬಂಧವನ್ನು ಅನುಸರಿಸದ ಉಳಿದ ಎಲ್ಲ ರಾಷ್ಟ್ರಗಳು ಇರಾನಿನ ದಾಳಿಗೆ ಗುರಿಯಾಗುತ್ತವೆ. ಇಲ್ಲಿ ಧ್ವಜ ಪರಿಗಣನೆ ಮಾಡದೆ, ಉಪಸ್ಥಿತಿಯಿಂದಲೇ ದಾಳಿಗೆ ಗುರಿಯಾಗಬಹುದು.

ಈ ಕುರಿತ ಸುದ್ದಿ ಹೊರಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ʼಭಾರತ ಯಾವ ರಾಷ್ಟ್ರಗಳನ್ನು ಅವಲಂಬಿಸಿಲ್ಲʼ ಎಂಬ ಹೇಳಿಕೆ ನೀಡಿತು. ಇದು ಚರ್ಚೆಗೆ ಗ್ರಾಸವಾಗಿದೆ.

ಭಾರತ ಯಾವ ದೇಶಗಳ ಮೇಲೂ ಅವಲಂಬಿಸಿಲ್ಲ ಎಂದಾದರೆ ರಷ್ಯಾದಿಂದ ತೈಲ ಖರೀದಿಸಲು ಅಮೆರಿಕದ ಸಮ್ಮತಿ ಯಾಕೆ, ಅದಲ್ಲದೆ ಯಾವುದೇ ಕಚ್ಚಾ ತೈಲಗಳನ್ನು ಹಾರ್ಮುಜ್‌ ಮಾರ್ಗದ ಮೂಲಕ ತಂದುಕೊಳ್ಳಲು ಇರಾನಿನ ಬಳಿ ಅನುಮತಿ ಪಡೆಯಲು ಮುಂದಾದ್ದು ಅವಲಂಬನೆಯ ಸಂಕೇತವಲ್ಲವೆ? ಎಂಬ ಟೀಕೆಗಳು ವ್ಯಕ್ತವಾಗಿವೆ.

ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳದಂತೆ ಅಮೆರಿಕ ವಿಧಿಸಿದ ಷರತ್ತುಗಳನ್ನು ತಳ್ಳಿಹಾಕುವ ಹಾಗೂ ಗಲ್ಫ್‌ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಇರಾನ್‌ ವಿಧಿಸಿದ ಷರತ್ತನ್ನು ಒಪ್ಪಿಕೊಳ್ಳುವ ಇಬ್ಬಗೆಯ ನೀತಿ ಭಾರತವು ಭೌಗೋಳಿಕ ರಾಜಕೀಯದಲ್ಲಿ ಯಾವುದೇ ಶಕ್ತಿಯುತ ಸ್ಥಾನ ಕಾಯ್ದುಕೊಂಡಿಲ್ಲ ಎನ್ನುವುದಕ್ಕೆ ಸಾಕ್ಷಿ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...