ʼಚೆʼ ನಾಡು ಕತ್ತಲಲ್ಲಿ; ಬೀದಿಗಿಳಿದ ಕ್ರಾಂತಿ ಕಿಡಿಗಳು!

Date:

ʼಜಗದ ಯಾವುದೇ ಮೂಲೆಯಲ್ಲಿ ನಡೆವ ಅನ್ಯಾಯದ ವಿರುದ್ಧ ನೀ ದನಿಯೆತ್ತಿದರೆ ನೀನು ನನ್ನ ಸಂಗಾತಿʼ ಇದು ಕ್ಯೂಬಾ ಎಂಬ ಪುಟ್ಟ ರಾಷ್ಟ್ರವನು ಕಟ್ಟಿದ, ದುಷ್ಟ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಜೀವ ಪಣಕಿಟ್ಟು ಹೋರಾಡಿದ ʼಚೆ ಗುವೆರʼ ಜಗತ್ತಿನಾದ್ಯಂತ ಇರುವ ತನ್ನ ಸಂಗಾತಿಗಳಿಗೆ ಕೊಟ್ಟ ಕರೆ.

ಮತ್ತದೇ ಸಾಮ್ರಾಜ್ಯಶಾಹಿಗಳ ದರ್ಪಕ್ಕೆ ನಲುಗಿದೆ ಕ್ಯೂಬಾ. ಮೂರು ತಿಂಗಳಿನಿಂದ ಯಾವುದೇ ಇಂಧನ ಪೂರೈಕೆ ಇಲ್ಲದೆ, ಕಳೆದೆರೆಡು ದಿನಗಳಿಂದ ವಿದ್ಯುತ್‌ ಸಂಪರ್ಕವಿಲ್ಲದೆ ಕತ್ತಲಲ್ಲಿದೆ. ಸೋಮವಾರ ದೇಶದ ವಿದ್ಯುತ್‌ ಸಂಪರ್ಕ ಜಾಲದಲ್ಲಿ ವ್ಯತ್ಯಯವಾಗಿದ್ದು, ಕ್ಯೂಬಾದ ಜನರು ಪುಟ್ಟ ಬ್ಯಾಟರಿಗಳು, ಲ್ಯಾಂಪ್‌ಗಳನ್ನು ಬೆಳಕಿಗಾಗಿ ಅವಲಂಬಿಸಿದ್ದಾರೆ. ಮಂಗಳವಾರ ಮುಂಜಾನೆಯಿಂದ ಯು.ಎನ್‌.ಇ ಹಂತ ಹಂತವಾಗಿ ಎಲ್ಲಾ ಪ್ರಾಂತ್ಯಗಳಿಗೂ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಡುತ್ತಿದೆ.

000 744K8HN

ಧೀರ್ಘ ಕಾಲದ ಇಂಧನ ಬಿಕ್ಕಟ್ಟಿನಿಂದ ಹಾಗೂ ಅಮೆರಿಕ ವಿಧಿಸಿರುವ ತೈಲ ಆಮದಿನ ಮೇಲಿನ ನಿರ್ಬಂಧದಿಂದ ತತ್ತರಿಸಿರುವ ಕೆರೆಬಿಯನ್‌ ದ್ವೀಪರಾಷ್ಟ್ರ ಈಗ ಹಳೆಯದಾದ ತನ್ನ ವಿದ್ಯುತ್‌ ಜಾಲದಿಂದ ಪದೇ ಪದೇ ವಿದ್ಯುತ್‌ ವ್ಯತ್ಯಯ ಹಾಗೂ ಇಂಧನ ಬ್ಲಾಕ್‌ಔಟ್‌ ಸಮಸ್ಯೆಗಳಿಗೆ ತುತ್ತಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದರ ಬೆನ್ನಲ್ಲೇ ಆಹಾರ ಮತ್ತು ಔಷದ ಪೂರೈಕೆಯಾಗದೆ ಆಕ್ರೋಶಗೊಂಡ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಹವಾನಾದ ಮಧ್ಯಭಾಗದಲ್ಲಿ ಪ್ರತಿಭಟನೆಗೆ ಸೇರಿದ ಜನರನ್ನು ಬಂಧಿಸಲಾಗಿದೆ. ಕ್ಯೂಬಾದಲ್ಲಿ ಅನುಮತಿಯಿಲ್ಲದೆ ಪ್ರತಿಭಟನೆ ಕೈಗೊಳ್ಳುವುದನ್ನು ಅಪರಾಧವೆಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗುತ್ತಿದೆ.

‌ನೀರು ಸಿಗುತ್ತಿಲ್ಲ ಕಾರಣ ವಿದ್ಯುತ್‌ ಕೊರತೆ, ವಿದ್ಯುತ್‌ ಸ್ಥಗಿತವೂ  ಕ್ಯೂಬಾದ ನೀರು ಸರಬರಾಜು, ಆಹಾರ ಮತ್ತು ಇಂಧನ ಲಭ್ಯತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಹೆಚ್ಚುತ್ತಿರುವ ಸಾರಿಗೆ ವೆಚ್ಚದಿಂದ ಖಾಸಗಿ ವಲಯದ ಸರಕು ಸೇವೆಗಳಲ್ಲಿ ಬೆಲೆ ಏರಿಕೆಯಾಗಿದ್ದು, ಸಾಮಾನ್ಯರ ಬದುಕು ಬೇದಿಗೆ ಬಂದಿದೆ, ಇದು ಹವಾನಾದ ನಿವಾಸಿ ಲಾಜಾರೊ ಹರ್ನಾಂಡೆಜ್ ಸುದ್ದಿಗಾರರೊಂದಿಗೆ ಹಂಚಿಕೊಂಡ ಇಂದಿನ ಕ್ಯೂಬಾದ ಸ್ಥಿತಿಗತಿ.

ಹವಾನಾದ ಮತ್ತೊಬ್ಬ ನಿವಾಸಿ, 26 ವರ್ಷದ ಡಯಾನಾ ಮಚಿನ್ ಅವರಿಗೆ ಈ ವಿದ್ಯುತ್ ಸ್ಥಗಿತ ಅಚ್ಚರಿ ತಂದಿಲ್ಲ. “ನಾವು ಈಗಾಗಲೇ ಇಂತಹ ಪರಿಸ್ಥಿತಿಯಲ್ಲಿ ಬದುಕಲು ಅಭ್ಯಾಸ ಮಾಡಿಕೊಂಡಿದ್ದೇವೆ” ಎಂದು ಅವರು ಹೇಳಿದ್ದಾರೆ.

ಕ್ಯೂಬಾದ ತೈಲಬಿಕ್ಕಟ್ಟು ಮತ್ತು ವೆನೆಜುವೆಲಾ:
ಸುಮಾರು 1 ಕೋಟಿ ಜನಸಂಖ್ಯೆ ಹೊಂದಿರುವ ಕ್ಯೂಬಾ ದೇಶವು ಇಂಧನ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. ಕ್ಯೂಬಾದ ಮಿತ್ರರಾಷ್ಟ್ರವಾದ ವೆನೆಜುವೆಲಾವು ಪ್ರತಿದಿನ ಸುಮಾರು 35,000 ಬ್ಯಾರೆಲ್ ತೈಲವನ್ನು ಕಳುಹಿಸುತ್ತಿತ್ತು (ಇದು ಕ್ಯೂಬಾದ ಅಗತ್ಯದ ಅರ್ಧದಷ್ಟು). ಆದರೆ, ಜನವರಿ ಆರಂಭದಲ್ಲಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಬಂಧಿಸಿದ ನಂತರ ಇಂಧನ ಪೂರೈಕೆ ಸ್ಥಗಿತಗೊಂಡಿದೆ.

ಅಮೆರಿಕದ ಎಚ್ಚರಿಕೆ:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಯೂಬಾಕ್ಕೆ ತೈಲ ಪೂರೈಸುವ ಯಾವುದೇ ದೇಶದ ಮೇಲೆ ಹೆಚ್ಚಿನ ತೆರಿಗೆ (Tariffs) ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕಳೆದ ಮೂರು ತಿಂಗಳಿನಿಂದ ದೇಶಕ್ಕೆ ಯಾವುದೇ ತೈಲದ ರವಾನೆ ಬಂದಿಲ್ಲ ಎಂದು ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಿಯಾಜ್-ಕಾನೆಲ್ ತಿಳಿಸಿದ್ದಾರೆ.

ಕ್ಯೂಬ

ಟ್ರಂಪ್ ಅವರ ಹೇಳಿಕೆ:
ಸೋಮವಾರ ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, “ಕ್ಯೂಬಾವನ್ನು ವಶಪಡಿಸಿಕೊಳ್ಳುವುದು ತನಗೆ ಘನತೆ” ಎಂಬ ಹೇಳಿಕೆ ನೀಡಿದ್ದು, ಮುಕ್ತಗೊಳಿಸುವ  ಅಥವಾ ವಶಪಡಿಸಿಕೊಳ್ಳುವ ಎಲ್ಲಾ ಆಧಿಕಾರ ತನಗಿದೆ, ʼಸದ್ಯ ಅದೊಂದು ದುರ್ಬಲ ದೇಶʼ ಅದರ ಅಸ್ಮಿತೆ ಉಳಿಯಬೇಕಾದರೆ ಅಮೆರಿಕದೊಡನೆ ಕ್ಯೂಬಾ ಒಪ್ಪಂದ ಮಾಡಿಕೊಳ್ಳಲೇಬೇಕು ಎಂಬ ಗರ್ವದ ಹೇಳಿಕೆ ನೀಡಿದ್ದಾರೆ.

ಚರ್ಚೆ ಮತ್ತು ಸದ್ಭಾವನೆ:
ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಟ್ರಂಪ್ ಸರ್ಕಾರದೊಂದಿಗೆ ಆರಂಭಿಕ ಹಂತದ ಮಾತುಕತೆ ನಡೆಸುತ್ತಿರುವುದಾಗಿ ಡಿಯಾಜ್-ಕಾನೆಲ್ ಕಳೆದ ವಾರ ಖಚಿತಪಡಿಸಿದ್ದಾರೆ. ಇದೇ ವೇಳೆ, ಕ್ಯೂಬಾ ಸರ್ಕಾರವು ತನ್ನ ‘ಸದ್ಭಾವನೆಯ’ ಸಂಕೇತವಾಗಿ 51 ಕೈದಿಗಳನ್ನು ಬಿಡುಗಡೆ ಮಾಡಿದೆ.

ಪರ್ಯಾಯ ಕ್ರಮಗಳು ಮತ್ತು ಪ್ರತಿಭಟನೆ:
ತೀವ್ರ ಇಂಧನ ಕೊರತೆಯನ್ನು ನಿಭಾಯಿಸಲು ಕ್ಯೂಬಾ ದೇಶೀಯವಾಗಿ ಕಚ್ಚಾ ತೈಲ, ಅನಿಲ ಮತ್ತು ಸೌರಶಕ್ತಿಯ ಉತ್ಪಾದನೆಯನ್ನು ಹೆಚ್ಚಿಸಿದೆ. ಆದರೂ, ನಿರಂತರ ವಿದ್ಯುತ್ ಕಡಿತದಿಂದ ರೋಸಿಹೋದ ಜನರ ಪ್ರತಿಭಟನೆಯನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಶನಿವಾರ ಮೊರಾನ್ ನಗರದಲ್ಲಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಸಣ್ಣ ಗುಂಪೊಂದು ಸ್ಥಳೀಯ ಕಮ್ಯುನಿಸ್ಟ್ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...