ಬಾಂಗ್ಲಾದೇಶ, ಪಾಕಿಸ್ತಾನ ಕರೆನ್ಸಿಯಲ್ಲ ಏಷ್ಯಾದಲ್ಲಿಯೇ ಅತಿ ಕಳಪೆ ಪ್ರದರ್ಶನ ತೋರಿದ್ದು ಭಾರತದ ರೂಪಾಯಿ!

Date:

2025ರಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಕರೆನ್ಸಿಗಳ ಪ್ರದರ್ಶನವು ಕಳಪೆಯಾಗಿದೆ. ಅಲ್ಲಿನ ಆರ್ಥಿಕ ಸ್ಥಿತಿ, ಬಿಕ್ಕಟ್ಟು ಎಲ್ಲವೂ ತಿಳಿದಿರುವುದು. ಅದನ್ನೂ ಮೀರಿ ಭಾರತೀಯ ರೂಪಾಯಿಯು 2025ರಲ್ಲಿ ಏಷ್ಯಾದಲ್ಲಿಯೇ ಅತಿ ಕಳಪೆ ಪ್ರದರ್ಶನ ತೋರಿದ ಕರೆನ್ಸಿ ಎನಿಸಿಕೊಂಡಿದೆ.

2025ರಲ್ಲಿ ಅಮೆರಿಕಾ ಡಾಲರ್(ಯುಎಸ್‌ಡಿ) ಎದುರು ಭಾರತೀಯ ರೂಪಾಯಿ ಸುಮಾರು ಶೇ.4.7ರಿಂದ ಶೇ.6ರಷ್ಟು ಮೌಲ್ಯವನ್ನು ಕಳೆದುಕೊಂಡಿದೆ. ವರ್ಷದ ಅಂತ್ಯಕ್ಕೆ 89.88 ರೂಪಾಯಿಗೆ ತಲುಪಿದೆ. ನಡುವೆ 90ರ ಗಡಿಯನ್ನೂ ದಾಟಿತ್ತು.

ಇದನ್ನು ಓದ್ದೀದಿರಾ? ಯುಎಸ್‌ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ: 1947ರಿಂದ 2025ರವರೆಗೆ ನಡೆದಿದ್ದೇನು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಲೇಷಿಯಾದ ರಿಂಗಿಟ್ (MYR) 2025ರಲ್ಲಿ ಏಷ್ಯಾದ ಅತ್ಯಂತ ಬಲವಾಗಿ ಪ್ರದರ್ಶನ ನೀಡಿದ ಕರೆನ್ಸಿಯಾಗಿದ್ದರೆ, ಜಪಾನಿನ ಯೆನ್ (JPY), ದಕ್ಷಿಣ ಕೊರಿಯಾದ ವೋನ್ (KRW), ಚೈನೀಸ್ ಯುವಾನ್ (CNY), ಇಂಡೋನೇಷಿಯನ್ ರುಪಿಯಾ (IDR) ಡಾಲರ್ ಎದುರು ತನ್ನ ಮೌಲ್ಯವನ್ನು ಕಳೆದುಕೊಂಡಿದೆ.

ಆದರೆ ಶ್ರೀಲಂಕಾ(ಶ್ರೀಲಂಕನ್ ರೂಪಾಯಿ), ಬಾಂಗ್ಲಾದೇಶ(ಟಾಕಾ), ಪಾಕಿಸ್ತಾನದ(ಪಾಕಿಸ್ತಾನಿ ರೂಪಾಯಿ) ಕರೆನ್ಸಿಗಳಿಗೂ ಅಧಿಕ ಮೌಲ್ಯವನ್ನು ಭಾರತೀಯ ರೂಪಾಯಿ ಕಳೆದುಕೊಂಡಿದೆ. ಈಗಾಗಲೇ ನೆರೆಯ ಈ ಮೂರು ದೇಶಗಳು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದೆ. ಇದೀಗ ಅಂತಾರಾಷ್ಟ್ರೀಯ, ಏಷ್ಯಾ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಕಳಪೆ ಪ್ರದರ್ಶನವು ಮುಂದೆ ಭಾರತದ ಸ್ಥಿತಿಯೂ ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾದಂತಾಗುವ ಆತಂಕ ಸೃಷ್ಟಿಸಿದೆ.

rupee value 1
ಸಂಜು ಎನ್‌ ಜೆ: ‘ಈ ದಿನ’ ಸಂಶೋಧನಾ ತಂಡ

ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಆರಂಭಿಕವಾಗಿ ರೂಪಾಯಿ ವಾಸ್ತವವಾಗಿ ಬಲಗೊಂಡಿತ್ತು. ಆದರೆ 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ರೂಪಾಯಿ ಮೌಲ್ಯ 48ಕ್ಕೆ ಇಳಿಯಿತು. 2012-2013ರ ಯುಪಿಎ ಎರಡನೇ ಅವಧಿಯ ಅಂತ್ಯದ ವೇಳೆಗೆ, ವಿಶೇಷವಾಗಿ 2013ರಲ್ಲಿ ರೂಪಾಯಿ ಮೌಲ್ಯ ಅತಿ ಹೆಚ್ಚು ಕುಸಿದು 69ಕ್ಕೆ ತಲುಪಿತ್ತು. ಜಾಗತಿಕ, ದೇಶೀಯ ಆರ್ಥಿಕ ಸ್ಥಿತಿಯಿಂದಾಗಿ ಈ ಬದಲಾವಣೆ ಉಂಟಾಗಿತ್ತು.

ಇದನ್ನೇ ಮುಂದಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರಚಾರವನ್ನು ಮಾಡಿತ್ತು. ಪಾಕಿಸ್ತಾನ, ಶ್ರೀಲಂಕಾ ಅಥವಾ ಬಾಂಗ್ಲಾದೇಶದ ಕರೆನ್ಸಿಗಳಿಗಿಂತ ಭಾರತೀಯ ರೂಪಾಯಿ ವೇಗವಾಗಿ ಕುಸಿಯುತ್ತಿದೆ ಎಂದು ಹೇಳಿದ್ದರು. ನಾವು ಗೆದ್ದರೆ ಒಂದು ಡಾಲರ್ ಮೌಲ್ಯವು 15 ರೂಪಾಯಿಗೆ ಬರಲಿದೆ ಎಂದು ಬಿಜೆಪಿ ನಾಯಕರುಗಳು ಭರವಸೆ ನೀಡಿ ಚುನಾವಣೆಯನ್ನೂ ಗೆದ್ದಿದ್ದರು. ಆದರೆ ಇದೀಗ ಭಾರತೀಯ ರೂಪಾಯಿ ಏಷ್ಯಾದಲ್ಲೇ ಏಷ್ಯಾದಲ್ಲಿಯೇ ಅತಿ ಕಳಪೆ ಪ್ರದರ್ಶನ ತೋರಿರುವ ಕರೆನ್ಸಿಯಾಗಿದ್ದು, ವಿಪಕ್ಷಗಳು ಸರ್ಕಾರವನ್ನು ಟೀಕಿಸುತ್ತಿದೆ.

2025ರ ಅಂತ್ಯದ ವೇಳೆಗೆ, ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಆದರೆ ರೂಪಾಯಿ ಮೌಲ್ಯ ಮಾತ್ರ ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿರುವುದು ಆರ್ಥಿಕತೆ ದೃಷ್ಟಿಯಿಂದ ಉತ್ತಮ ಸೂಚಕವಲ್ಲ. ಈಗಾಗಲೇ ಭಾರತದ ವ್ಯಾಪಾರ ಕೊರತೆಯು(ಆಮದು ಮೌಲ್ಯ ರಫ್ತು ಮೌಲ್ಯಕ್ಕಿಂತ ಹೆಚ್ಚಾಗಿರುವುದು-Trade Deficit) $41.68 ಬಿಲಿಯನ್‌ನಷ್ಟು ಗರಿಷ್ಠ ಮಟ್ಟಕ್ಕೆ ತಲುಪಿದೆ. ಹೀಗಿರುವಾಗ ರೂಪಾಯಿ ದುರ್ಬಲಗೊಂಡಂತೆ ಆಮದು ಮೌಲ್ಯವೂ ಹೆಚ್ಚಾಗಿ ಕೊರತೆ ಇನ್ನಷ್ಟು ಹೆಚ್ಚಾಗಲಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಗ್ರಾಹಕರಿಗೆ ಬಂಪರ್‌ ಆಫರ್! ಗ್ರಾಂ ಚಿನ್ನಕ್ಕೆ ₹8-10 ಸಾವಿರ?

ದಿನೇ ದಿನೇ ಏರುತ್ತಲೇ ಇದ್ದ ಚಿನ್ನದ ದರ ಕಳೆದ ಒಂದು ವಾರದಿಂದ...