ಇರಾನ್‌ ಮೇಲೆ ಮರುದಾಳಿಗೆ ಸಜ್ಜಾಗಿದೆ ಅಮೆರಿಕ- ಇಸ್ರೇಲ್ ಯುದ್ಧಕೋರ ಜೋಡಿ

Date:

ಹಾರ್ಮುಜ್ ಜಲಸಂಧಿಯು ಜಾಗತಿಕ ಇಂಧನ ಪೂರೈಕೆಯ ರಕ್ತನಾಳವಿದ್ದಂತೆ. ಇರಾನ್ ಒಂದು ವಾರ ಕಾಲ ಈ ಜಲಸಂಧಿಯನ್ನು ಮುಚ್ಚಿದರೆ ತೈಲದ ಬೆಲೆಯಲ್ಲಿ ಭಾರೀ ಸ್ಫೋಟವಾಗಲಿದೆ. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ತಕ್ಷಣವೇ $150 ರಿಂದ $200 ದಾಟಬಹುದು. ಇದು ಇತಿಹಾಸದಲ್ಲೇ ಅತ್ಯಂತ ದೊಡ್ಡ ಬೆಲೆ ಏರಿಕೆ ಎನಿಸಲಿದೆ.

ಇರಾನ್ ಸುತ್ತಮುತ್ತಲ ಮಿಲಿಟರಿ ಘೇರಾವ್ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ. ಮಧ್ಯಪ್ರಾಚ್ಯ ಸೀಮೆ ಮತ್ತೊಮ್ಮೆ ಭೀಕರ ಯುದ್ಧದ ಅಂಚಿನಲ್ಲಿದೆ. ಇದೇ ಡಿಸೆಂಬರ್ ಆರಂಭದಿಂದಲೂ ಅಮೆರಿಕ ತನ್ನ ಯುರೋಪ್ ಮತ್ತು ಏಷ್ಯಾದ ಮಿಲಿಟರಿ ನೆಲೆಗಳಿಂದ ಭಾರೀ ಪ್ರಮಾಣದ ಯುದ್ಧೋಪಕರಣಗಳನ್ನು ಮಧ್ಯಪ್ರಾಚ್ಯಕ್ಕೆ ರವಾನಿಸುತ್ತಿದೆ. ಈ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ಸೇನಾ ಚಲನವಲನ ಕೇವಲ ಒಂದು ಪ್ರದರ್ಶನವಲ್ಲ, ಬದಲಿಗೆ ಅಮೆರಿಕವು ಇರಾನ್ ವಿರುದ್ಧ ನಿರ್ದಿಷ್ಟ ದಾಳಿಗೆ ನಡೆಸುತ್ತಿರುವ ಪೂರ್ವತಯಾರಿ. ಅಮೆರಿಕ ಅಧ್ಯಕ್ಷ ಟ್ರಂಪ್ ಕೇವಲ ಎರಡು ದಿನಗಳಲ್ಲಿ (ಶುಕ್ರವಾರದೊಳಗೆ) ಇರಾನ್‌ ಅನ್ನು ನೌಕಾ ದಿಗ್ಬಂಧನಕ್ಕೆ ಸಜ್ಜಾಗುವಂತೆ ನೀಡಿರುವ ಆದೇಶವು ಈ ಪ್ರದೇಶದಲ್ಲಿ “ಪೂರ್ಣ ಪ್ರಮಾಣದ ಯುದ್ಧ”ಆರಂಭವಾಗುವ ಮುನ್ಸೂಚನೆಗೆ ಪುಷ್ಠಿ ನೀಡಿದೆ.

ಅಮೆರಿಕಾದ ಈ ಯುದ್ಧ ತಯಾರಿ- ವಿನಾಶಕಾರಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಮೆರಿಕ ನೌಕಾಪಡೆಯ ‘ಸ್ಟ್ರೈಕ್ ಗ್ರೂಪ್‌’ನ ನೇತೃತ್ವ ವಹಿಸಿರುವ, ಪರಮಾಣು ಚಾಲಿತ ವಿಮಾನವಾಹಕ ನೌಕೆ ಅಬ್ರಹಾಂ ಲಿಂಕನ್ ಗ್ರೂಪ್ ಅರಬ್ಬಿ ಸಮುದ್ರದಲ್ಲಿದ್ದರೆ, ಡ್ವೈಟ್ ಐಸೆನ್‌ಹೋವರ್ ಕೆಂಪು ಸಮುದ್ರದಲ್ಲಿದೆ. ಕಳೆದ ಎರಡು ವಾರಗಳಲ್ಲಿ, ಅಮೆರಿಕವು ಜೋರ್ಡಾನ್‌ನ ಮುವಾಫಕ್ ಸಾಲ್ಟಿ ಮತ್ತು ಕತಾರ್‌ನ ಅಲ್ ಉದೈದ್‌ನಂತಹ ವಾಯುನೆಲೆಗಳಲ್ಲಿ F-15E ವಿಮಾನಗಳ ಸಂಖ್ಯೆಯನ್ನು 36ಕ್ಕೆ ಹೆಚ್ಚಿಸಿದೆ. ಮಾತ್ರವಲ್ಲದೆ, ಅಲ್ಲಿನ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಕೂಡ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳಿಸಲಾಗಿದೆ. ಇವು ಇಂಧನ ಮರುಪೂರಣದ ಅಗತ್ಯವಿಲ್ಲದೆಯೇ ನೇರವಾಗಿ ಇರಾನ್ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ.

ಹೆಚ್ಚುವರಿ ಪೇಟ್ರಿಯಾಟ್ (Patriot) ಮತ್ತು ಥಾಡ್ (THAAD) ಬ್ಯಾಟರಿಗಳನ್ನು ಇಸ್ರೇಲ್ ಮತ್ತು ಪರ್ಷಿಯನ್ ಕೊಲ್ಲಿಯಲ್ಲಿರುವ ಅಮೆರಿಕದ ನೆಲೆಗಳಲ್ಲಿ ನಿಯೋಜಿಸಲಾಗಿದೆ. ವೈಮಾನಿಕ ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಹತ್ತಿಕ್ಕಲು ವಿನ್ಯಾಸಗೊಳಿಸಲಾದ ಅಮೆರಿಕದ ಏರೋಸ್ಪೇಸ್ ಫೋರ್ಸ್‌ನ A-10 ಥಂಡರ್ಬೋಲ್ಟ್ II ದಾಳಿ ವಿಮಾನಗಳನ್ನು ಸಹ ಅಲ್ಲಿ ನಿಯೋಜಿಸಲಾಗಿದೆ.

WhatsApp Image 2026 01 29 at 2.29.43 PM1
WhatsApp Image 2026 01 29 at 2.29.43 PM5

ಬ್ರಿಟನ್ ಮತ್ತು ಜರ್ಮನಿಯಿಂದ ಜೋರ್ಡಾನ್ ಮತ್ತು ಕತಾರ್‌ಗೆ ಫೈಟರ್ ಮತ್ತು ಬಾಂಬರ್ ವಿಮಾನಗಳಿಗೆ ಅಗತ್ಯವಿರುವ ಭಾರೀ ಯುದ್ಧಸಾಮಗ್ರಿಗಳನ್ನು ಪೂರೈಸಲು C-17 ಗ್ಲೋಬ್‌ಮಾಸ್ಟರ್ III ಭಾರೀ ಮಿಲಿಟರಿ ಸಾರಿಗೆ ವಿಮಾನಗಳು ಈಗಾಗಲೇ ಎರಡು ಡಜನ್‌ಗಿಂತಲೂ ಹೆಚ್ಚು ಹಾರಾಟ ನಡೆಸಿವೆ. ಹತ್ತು B-2 ಸ್ಪಿರಿಟ್ ಮತ್ತು B-52 ಭಾರೀ ಬಾಂಬರ್‌ಗಳು ಹಾಗೂ KC-135 ಟ್ಯಾಂಕರ್‌ಗಳನ್ನು ಹಿಂದೂ ಮಹಾಸಾಗರದ ಡಿಯಾಗೋ ಗಾರ್ಸಿಯಾ ವಾಯುನೆಲೆಯಲ್ಲಿ ಇರಿಸಲಾಗಿದೆ. ಇಲ್ಲಿಂದಲೇ ಜೂನ್ 2025ರಲ್ಲಿ ಇರಾನ್ ಮೇಲೆ ದಾಳಿಗಳನ್ನು ನಡೆಸಲಾಗಿತ್ತು. ಬ್ರಿಟನ್ ಕನಿಷ್ಠ 12 ಯೂರೋಫೈಟರ್ ಟೈಫೂನ್ ಯುದ್ಧ ವಿಮಾನಗಳನ್ನು ಕತಾರ್‌ನಲ್ಲಿ ನಿಯೋಜಿಸಿದೆ.

ಇರಾನ್ ಸಂಸತ್ತಿನ ಸ್ಪೀಕರ್ ಅವರ ಸಲಹೆಗಾರರಾದ ಮೆಹದಿ ಮೊಹಮ್ಮದಿ (Mehdi Mohammadi) ಅವರು ನೀಡಿರುವ ಈ ಹೇಳಿಕೆಯು ಇರಾನ್‌ನ ಸಮರ ಸನ್ನದ್ಧತೆಯನ್ನು ಮತ್ತು ಅವರ ಪ್ರತಿರೋಧದ ತಂತ್ರವನ್ನು ಬಹಳ ಸ್ಪಷ್ಟವಾಗಿ ವಿವರಿಸುತ್ತದೆ. ನಮ್ಮ ಮೇಲೆ ನಡೆಯುವ ಯಾವುದೇ ದಾಳಿಗೆ ನಾವು ಬೃಹತ್ತಾದ ಪ್ರತಿಕ್ರಿಯೆ ನೀಡುತ್ತೇವೆ. “ಸೀಮಿತ ದಾಳಿ” ಎನ್ನುವುದು ಯಾವುದೂ ಇರುವುದಿಲ್ಲ; ನಮ್ಮ ಪ್ರತಿಕ್ರಿಯೆಯ ವ್ಯಾಪ್ತಿ ಮತ್ತು ಅವಧಿ ಎರಡೂ ಬಹಳ ದೊಡ್ಡದಾಗಿರಲಿದೆ. ನಾವು ದೀರ್ಘಕಾಲದ ಸಂಘರ್ಷಕ್ಕೆ ಸಿದ್ಧರಿದ್ದೇವೆ. ನಮಗೆ ಯುದ್ಧ ಬೇಕಿಲ್ಲ ಮತ್ತು ಇರಾನ್‌ನಲ್ಲಿ ಯಾರೂ ಯುದ್ಧವನ್ನು ಬಯಸುವುದಿಲ್ಲ. ಆದರೆ ನಮ್ಮ ಮೇಲೆ ಯುದ್ಧವನ್ನು ಹೇರಿದರೆ ಮತ್ತು ನಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದರೆ, ಈ ಯುದ್ಧವೇ ಕೊನೆಯ ಯುದ್ಧವೆನಿಸುವ ರೀತಿಯಲ್ಲಿ ನಾವು ಹೋರಾಡುತ್ತೇವೆ. (ಅಯತೊಲ್ಲಾ) ಖಮೇನಿ ಅವರಿಗೆ ಬೆದರಿಕೆ ಹಾಕಿದರೆ, ಆ ಬೆದರಿಕೆಯೊಂದೇ ಈ ಸಂಘರ್ಷವನ್ನು ಇರಾನ್‌ನ ಗಡಿಗಳನ್ನು ಮೀರಿ ವಿಸ್ತರಿಸಿಬಿಡುತ್ತದೆ. ಏಕೆಂದರೆ ನಾವು ಇಲ್ಲಿ ಅತ್ಯುನ್ನತ ಧಾರ್ಮಿಕ ನಾಯಕರ ಬಗ್ಗೆ ಮಾತನಾಡುತ್ತಿದ್ದೇವೆ. ಯುದ್ಧವು ಖಂಡಿತವಾಗಿಯೂ ಭೌಗೋಳಿಕವಾಗಿ ವಿಸ್ತರಿಸಲಿದೆ. ಇರಾಕ್‌ನ ಕತೈಬ್ ಹಿಜ್ಬುಲ್ಲಾ, ಯೆಮನ್‌ನ ಹೂತಿಗಳು ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಈ ಸಂಘರ್ಷದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂದು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಇಡೀ ಪ್ರದೇಶವು ಈ ಯುದ್ಧದಲ್ಲಿ ಭಾಗಿಯಾಗಲಿದೆ. ಹಾರ್ಮುಜ್ ಜಲಸಂಧಿಯ ಆಕಾಶ, ಮೇಲ್ಮೈ ಮತ್ತು ಸಮುದ್ರದಾಳದ ವಲಯಗಳ ಮೇಲೆ ನಾವು ಸಂಪೂರ್ಣ ನಿಯಂತ್ರಣ ಹೊಂದಿದ್ದೇವೆ. ಜಲಸಂಧಿಯ ವಾಯುಪ್ರದೇಶ, ಮೇಲ್ಮೈ ಮತ್ತು ನೀರಿನ ಅಡಿಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯ ನೈಜ ಸಮಯದ (real-time) ಗುಪ್ತಚರ ಮಾಹಿತಿಯನ್ನು ಇರಾನ್ ಪಡೆಯುತ್ತಿದೆ. ಈ ಆಯಕಟ್ಟಿನ ಮಾರ್ಗದ ಭದ್ರತೆಯು ಸಂಪೂರ್ಣವಾಗಿ ಟೆಹ್ರಾನ್‌ನ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ.

ಇರಾನ್ ಯುದ್ಧ ಬಯಸುವುದಿಲ್ಲ- ಹೇರಿದರೆ ಹಿಂದೆ ಸರಿಯುವುದಿಲ್ಲ

ಇರಾನ್ ಯುದ್ಧವನ್ನು ಬಯಸುತ್ತಿಲ್ಲ, ಆದರೆ ಅದಕ್ಕೆ ಸಂಪೂರ್ಣವಾಗಿ ಸಜ್ಜಾಗಿದೆ. ಒಂದು ವೇಳೆ ಯುದ್ಧವು ನಮ್ಮ ಮೇಲೆ ಹೇರಲ್ಪಟ್ಟರೆ, ನಾವು ಒಂದು ಮಿಲಿಮೀಟರ್ ಕೂಡ ಹಿಂದೆ ಸರಿಯುವುದಿಲ್ಲ; ಇರಾನ್‌ನ ನಡೆ ಕೇವಲ ಮುನ್ನಡೆಯಾಗಿರುತ್ತದೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ನೌಕಾಪಡೆಯ ಉಪ ಕಮಾಂಡರ್ “ಹಾರ್ಮುಜ್” ಜಲಸಂಧಿಯ ನಿರ್ವಹಣೆಯು ಈಗ ಸಾಂಪ್ರದಾಯಿಕ ವಿಧಾನಗಳನ್ನು ಮೀರಿ ನಿಂತಿದೆ ಮತ್ತು ಈಗ ಅದು ಸಂಪೂರ್ಣವಾಗಿ ಬುದ್ಧಿವಂತ (intelligent) ಮತ್ತು ಸಂಯೋಜಿತ ವ್ಯವಸ್ಥೆಯಾಗಿದೆ. ಸಮುದ್ರದ ಮೇಲ್ಮೈ ಮತ್ತು ಅಡಿಯಲ್ಲಿ ನಡೆಯುವ ಎಲ್ಲ ಚಲನವಲನಗಳ ಮೇಲೆ ಇರಾನ್ ನಿರಂತರ ಮತ್ತು ಸಮಗ್ರ ನಿಗಾ ಇರಿಸಿದೆ. ಯಾವುದೇ ಧ್ವಜದ ಹಡಗುಗಳಿಗೆ ಈ ಮಾರ್ಗದಲ್ಲಿ ಸಂಚರಿಸಲು ಅನುಮತಿ ನೀಡುವ ಅಥವಾ ನಿರಾಕರಿಸುವ ನಿರ್ಧಾರವು ಸಂಪೂರ್ಣವಾಗಿ ಇರಾನ್ ಕೈಯಲ್ಲಿದೆ. ನೆರೆಯ ದೇಶಗಳನ್ನು ನಾವು ಸ್ನೇಹಿತರೆಂದು ಪರಿಗಣಿಸುತ್ತೇವೆ; ಆದಾಗ್ಯೂ, ಅವರ ಭೂಮಿ, ವಾಯುಪ್ರದೇಶ ಅಥವಾ ಜಲಪ್ರದೇಶವನ್ನು ಇರಾನ್ ವಿರುದ್ಧ ಬಳಸಲು ಅವಕಾಶ ನೀಡಿದರೆ, ಅವರನ್ನು ಶತ್ರುಗಳೆಂದು ಪರಿಗಣಿಸಲಾಗುವುದು. ಈ ಸಂದೇಶವನ್ನು ಈಗಾಗಲೇ ಪ್ರಾದೇಶಿಕ ಪಕ್ಷಗಳಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಜಾಗತಿಕ ಆರ್ಥಿಕತೆಗೆ ಹಾನಿಯಾಗುವುದನ್ನು ಇರಾನ್ ಬಯಸುವುದಿಲ್ಲ, ಆದರೆ ಅಮೆರಿಕನ್ನರು ಮತ್ತು ಅವರ ಬೆಂಬಲಿಗರು ತಾವು ಆರಂಭಿಸಿದ ಯುದ್ಧದಿಂದ ಲಾಭ ಪಡೆಯುವುದು ನಮಗೆ ಒಪ್ಪಿಗೆಯಿಲ್ಲ. ಇಲ್ಲಿ ಹೇಳಿದ್ದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯಗಳು ನಮ್ಮ ಬಳಿಯಿದ್ದು, ಅವುಗಳನ್ನು ಸೂಕ್ತ ಸಮಯದಲ್ಲಿ ಪ್ರದರ್ಶಿಸಲಾಗುವುದು.

ಹಾರ್ಮುಜ್ ಜಲಸಂಧಿಯನ್ನು ಇರಾನ್‌ ಒಂದು ವಾರ ಮುಚ್ಚಿದರೆ ಏನಾಗುತ್ತದೆ?

ಹಾರ್ಮುಜ್ ಜಲಸಂಧಿಯು ಜಾಗತಿಕ ಇಂಧನ ಪೂರೈಕೆಯ ರಕ್ತನಾಳವಿದ್ದಂತೆ. ಇರಾನ್ ಒಂದು ವಾರ ಕಾಲ ಈ ಜಲಸಂಧಿಯನ್ನು ಮುಚ್ಚಿದರೆ ತೈಲದ ಬೆಲೆಯಲ್ಲಿ ಭಾರೀ ಸ್ಫೋಟವಾಗಲಿದೆ. ವಿಶ್ವದ ಒಟ್ಟು ತೈಲ ಬಳಕೆಯ ಸುಮಾರು ಶೇ. 25 ರಷ್ಟು (ದಿನಕ್ಕೆ 25 ಮಿಲಿಯನ್ ಬ್ಯಾರೆಲ್‌ಗಳು) ಈ ಮಾರ್ಗದ ಮೂಲಕವೇ ಸಾಗುತ್ತದೆ. ಒಂದು ವಾರ ದಿಗ್ಬಂಧನವಾದರೆ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ತಕ್ಷಣವೇ $150 ರಿಂದ $200 ದಾಟಬಹುದು. ಇದು ಇತಿಹಾಸದಲ್ಲೇ ಅತ್ಯಂತ ದೊಡ್ಡ ಬೆಲೆ ಏರಿಕೆ ಎನಿಸಲಿದೆ. ಕೇವಲ ತೈಲವಲ್ಲದೆ, ವಿಶ್ವದ ಅತಿ ದೊಡ್ಡ ಎಲ್‌ಎನ್‌ಜಿ ರಫ್ತುದಾರ ರಾಷ್ಟ್ರವಾದ ಕತಾರ್ ಕೂಡ ಇದೇ ಮಾರ್ಗವನ್ನು ಅವಲಂಬಿಸಿದೆ. ಜಲಸಂಧಿ ಮುಚ್ಚಿದರೆ ಏಷ್ಯಾ ಮತ್ತು ಯುರೋಪ್‌ಗೆ ಅನಿಲ ಪೂರೈಕೆ ಸ್ಥಗಿತಗೊಂಡು, ವಿದ್ಯುತ್ ಮತ್ತು ಕೈಗಾರಿಕಾ ಉತ್ಪಾದನೆ ಕುಸಿಯುತ್ತದೆ. ಹಡಗುಗಳ ವಿಮೆ (Insurance premiums) ಹತ್ತು ಪಟ್ಟು ಹೆಚ್ಚಾಗಬಹುದು. ಹಡಗುಗಳು ಸುದೀರ್ಘವಾದ ಸುತ್ತು ಮಾರ್ಗಗಳನ್ನು (ಆಫ್ರಿಕಾದ ಮೂಲಕ) ಬಳಸಬೇಕಾಗಿ ಬರುವುದರಿಂದ ಸರಕು ಸಾಗಣೆ ವೆಚ್ಚ ವಿಪರೀತವಾಗಿ ಹೆಚ್ಚುತ್ತದೆ. ಇದು ಆಹಾರ ಪದಾರ್ಥಗಳಿಂದ ಹಿಡಿದು ಎಲೆಕ್ಟ್ರಾನಿಕ್ ವಸ್ತುಗಳವರೆಗೆ ಎಲ್ಲದರ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಒಂದು ವಾರದ ದಿಗ್ಬಂಧನವು ಕೇವಲ ಆರ್ಥಿಕ ಬಿಕ್ಕಟ್ಟಲ್ಲ, ಅದು ಅಂತರಾಷ್ಟ್ರೀಯ ಮಿಲಿಟರಿ ಹಸ್ತಕ್ಷೇಪಕ್ಕೆ ನಾಂದಿ ಹಾಡುತ್ತದೆ. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಜಲಸಂಧಿಯನ್ನು ಬಲವಂತವಾಗಿ ತೆರೆಯಲು ಪೂರ್ಣ ಪ್ರಮಾಣದ ಯುದ್ಧಕ್ಕೆ ಮುಂದಾಗಬಹುದು.

WhatsApp Image 2026 01 29 at 2.29.43 PM3
WhatsApp Image 2026 01 29 at 2.29.43 PM2
WhatsApp Image 2026 01 29 at 2.29.43 PM4

ಒಂದು ವೇಳೆ ನೌಕಾ ದಿಗ್ಬಂಧನ ಹಾಕಿ ಇರಾನಿನ ಕಚ್ಚಾ ತೈಲದ ಹಡಗುಗಳನ್ನು ವಶಪಡಿಸಿಕೊಂಡರೆ, ವಶಪಡಿಸಿಕೊಳ್ಳಲಾದ ಪ್ರತಿಯೊಂದು ಇರಾನಿನ ಹಡಗಿಗೆ ಪ್ರತಿಯಾಗಿ, ನಾವು ಅಮೆರಿಕದ ಒಂದು ಹಡಗನ್ನು ವಶಪಡಿಸಿಕೊಳ್ಳುತ್ತೇವೆ. ಇದು ಹಿಂದೆ ಕೂಡ ಸಂಭವಿಸಿದೆ ಮತ್ತು ಇದನ್ನು ತಡೆಯಲು ಅಮೆರಿಕದ ಬಳಿ ಪ್ರಾಯೋಗಿಕವಾಗಿ ಯಾವುದೇ ದಾರಿಯಿಲ್ಲ. ಒಂದು ವೇಳೆ ಪರಿಸ್ಥಿತಿ ಹಡಗುಗಳನ್ನು ಮುಳುಗಿಸುವ ಹಂತಕ್ಕೆ ತಲುಪಿದರೆ, ಅದಕ್ಕೂ ನಮ್ಮ ಬಳಿ ಸಾಕಷ್ಟು ಆಯ್ಕೆಗಳಿವೆ. ಯುದ್ಧದ ಸಮಯದಲ್ಲಿ ಅಮೆರಿಕದ ನೌಕಾಪಡೆಗೆ ಪರ್ಷಿಯನ್ ಕೊಲ್ಲಿಯನ್ನು ಪ್ರವೇಶಿಸಲು ನಿಜವಾಗಿಯೂ ಸಾಧ್ಯವಿಲ್ಲ; ಅಲ್ಲಿ ಅವರು ನೌಕಾ ವಿರೋಧಿ ಕ್ಷಿಪಣಿಗಳು (anti-ship missiles) ಮತ್ತು ವೇಗದ ದಾಳಿ ನೌಕೆಗಳಿಗೆ (fast attack crafts) ಸುಲಭಕ್ಕೆ ತುತ್ತಾಗುತ್ತಾರೆ. ಅಷ್ಟೇ ಅಲ್ಲದೆ, ಆತ್ಮಹತ್ಯಾ ಡ್ರೋನ್‌ಗಳನ್ನು (suicide drones) ಬಳಸಿ ದೊಡ್ಡ ಮಟ್ಟದ ಹಾನಿ ಮಾಡಬಲ್ಲೆವು ಎಂದಿದ್ದಾರೆ

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ (Abbas Araghchi) ಅವರ ಇತ್ತೀಚಿನ ಹೇಳಿಕೆಯು ಇರಾನ್‌ನ ಕಟ್ಟುನಿಟ್ಟಾದ ನಿಲುವನ್ನು ಸ್ಪಷ್ಟಪಡಿಸಿದೆ. ನಾವು ಇತ್ತೀಚೆಗೆ ವಿಟ್ಕಾಫ್ (Witkoff) ಅವರನ್ನು ಸಂಪರ್ಕಿಸಿಲ್ಲ ಮತ್ತು ಯಾವುದೇ ಮಾತುಕತೆಗಾಗಿ ವಿನಂತಿಸಿಲ್ಲ. ಖಂಡಿತವಾಗಿಯೂ, ಕೆಲವು ದೇಶಗಳು ಮಧ್ಯಸ್ಥಿಕೆದಾರರಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸಲಹೆ-ಸಮಾಲೋಚನೆಗಳನ್ನು ನಡೆಸುತ್ತಿವೆ. ನಾವು ಆ ದೇಶಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಬೆದರಿಕೆಗಳ ವಾತಾವರಣದಲ್ಲಿ ಮಾತುಕತೆ ನಡೆಸಲು ಸಾಧ್ಯವೇ ಇಲ್ಲ, ಇದನ್ನು ಅಮೆರಿಕ ಅರ್ಥಮಾಡಿಕೊಳ್ಳಬೇಕು. ಮಾತುಕತೆಗೆ ತನ್ನದೇ ಆದ ನಿಯಮಗಳಿವೆ; ಅದು ಸಮಾನತೆ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ನಡೆಯಬೇಕು ಎಂದಿದ್ದಾರೆ.

ಅರಬ್‌ ದೇಶಗಳು ಇರಾನ್ ವಿರುದ್ಧದ ದಾಳಿಯನ್ನು ಬೆಂಬಲಿಸುತ್ತವೆಯೇ?

ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (MBS) ಇತ್ತೀಚೆಗೆ ಇರಾನ್ ಅಧ್ಯಕ್ಷರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ ಈ ಕೆಳಗಿನಂತೆ ಸ್ಪಷ್ಟಪಡಿಸಿದ್ದಾರೆ. ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗೆ ಸೌದಿ ಅರೇಬಿಯಾದ ವಾಯುಪ್ರದೇಶ ಅಥವಾ ಭೂಪ್ರದೇಶವನ್ನು ಬಳಸಲು ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಜನವರಿ 26, 2026 ರಂದು ಯುಎಇ ವಿದೇಶಾಂಗ ಸಚಿವಾಲಯವು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಇರಾನ್ ಮೇಲಿನ ಯಾವುದೇ ಆಕ್ರಮಣಕಾರಿ ಮಿಲಿಟರಿ ಕ್ರಮಗಳಿಗೆ ಯುಎಇ ತನ್ನ ವಾಯುಪ್ರದೇಶ, ಭೂಮಿ ಅಥವಾ ಜಲಪ್ರದೇಶವನ್ನು ಬಳಸಲು ಬಿಡುವುದಿಲ್ಲ. ಅಷ್ಟೇ ಅಲ್ಲದೆ, ಅಂತಹ ದಾಳಿಗಳಿಗೆ ಯಾವುದೇ ರೀತಿಯ ಲಾಜಿಸ್ಟಿಕ್ ಬೆಂಬಲವನ್ನು (Logistical support) ನೀಡುವುದಿಲ್ಲ ಎಂದು ಯುಎಇ ಸ್ಪಷ್ಟವಾಗಿ ತಿಳಿಸಿದೆ. ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅವರು ಶಾಂತಿಯುತ ಪರಿಹಾರಗಳಿಗಾಗಿ ನಡೆಯುವ ಎಲ್ಲ ಪ್ರಯತ್ನಗಳಿಗೆ ದೋಹಾ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ. ಯುದ್ಧವು ಇಡೀ ಪ್ರದೇಶದ ಅರ್ಥವ್ಯವಸ್ಥೆಯನ್ನು ನಾಶಪಡಿಸುತ್ತದೆ ಎಂದು ಕತಾರ್ ಆತಂಕ ವ್ಯಕ್ತಪಡಿಸಿದೆ.

ಮೊದಲ ವರ್ಷ ಪೂರೈಸಿದ ಟ್ರಂಪ್: ಮುಂದುವರೆದ ಯುದ್ಧಗಳು ಮತ್ತು ಸುಂಕ ಸಮರಗಳು

ಅಮೆರಿಕ ಮತ್ತು ಇರಾನ್ ನಡುವೆ ಸಂಧಾನಕಾರನಾಗಿ ಕೆಲಸ ಮಾಡುತ್ತಿರುವ ಒಮಾನ್, ಯಾವುದೇ ದಾಳಿಯು ಪ್ರತಿರೋಧಕ್ಕೆ ಕಾರಣವಾಗಿ ದೊಡ್ಡ ಯುದ್ಧಕ್ಕೆ ನಾಂದಿ ಹಾಡಬಹುದು. ಆದ್ದರಿಂದ ಮಿಲಿಟರಿ ಆಯ್ಕೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದೆ. ನಮ್ಮ ನೆಲವನ್ನು ನೆರೆಯ ರಾಷ್ಟ್ರಗಳ (ಇರಾನ್) ಮೇಲೆ ದಾಳಿ ಮಾಡಲು ಬಳಸಲು ಬಿಡುವುದಿಲ್ಲ ಎಂದು ಇರಾಕ್ ಸರ್ಕಾರ ಈಗಾಗಲೇ ಘೋಷಿಸಿದೆ. ತನ್ನ ವಾಯುಪ್ರದೇಶವು ಯಾವುದೇ ಯುದ್ಧದ ಅಖಾಡವಾಗಲು ಬಯಸುವುದಿಲ್ಲ ಎಂದು ಜೋರ್ಡಾನ್ ಹೇಳಿದೆ.

697fc35af132c13001b587afc883b3c4
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...