10 ಲಕ್ಷ ಡಾಲರ್‌ ಮೌಲ್ಯದ ‘ಗೋಲ್ಡ್ ಕಾರ್ಡ್’ ವೀಸಾ ಘೋಷಿಸಿದ ಟ್ರಂಪ್‌; ಅರ್ಜಿದಾರರಿಗೆ ಲಾಭಗಳೇನು?

Date:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಮ್ಮ ಬಹುನಿರೀಕ್ಷಿತ ‘ಗೋಲ್ಡ್ ಕಾರ್ಡ್’ ವೀಸಾವನ್ನು ಅನಾವರಣಗೊಳಿಸಿದ್ದಾರೆ. ಬರೋಬ್ಬರಿ 10 ಲಕ್ಷ ಡಾಲರ್ (89,85,000 ರೂ.) ಮೊತ್ತವನ್ನು ಪಾವತಿಸಲು ಸಿದ್ಧರಿರುವ ವ್ಯಕ್ತಿಗಳಿಗೆ ಈ ವೀಸಾ ದೊರೆಯಲಿದೆ.  ಅಮೆರಿಕ ಪೌರತ್ವವೂ ದೊರೆಯಲಿದೆ. ಅವರ ಕಂಪನಿಗಳಿಗೂ ಕಾನೂನು ಸ್ಥಾನಮಾನ ಸಿಗಲಿದೆ.

ಸುಮಾರು 30 ವರ್ಷಗಳಷ್ಟು ಹಳೆಯ EB-5 ಹೂಡಿಕೆದಾರರ ವೀಸಾಕ್ಕೆ ಬದಲಿಯಾಗಿ ಈ ‘ಗೋಲ್ಡ್‌ ಕಾರ್ಡ್‌’ ವೀಸಾವನ್ನು ರೂಪಿಸಲಾಗಿದೆ. ಈ ವೀಸಾವನ್ನು ವೈಯಕ್ತಿಕವಾಗಿ 10 ಲಕ್ಷ ಡಾಲರ್ ಅಥವಾ ತಮ್ಮ ಉದ್ಯೋಗದಾತರ ಮೂಲಕ 20 ಲಕ್ಷ ಡಾಲರ್ ಹೂಡಿಕೆ ಮಾಡಲು ಸಿದ್ಧರಿರುವ ವಿದೇಶಿ ಪ್ರಜೆಗಳಿಗೆ ಒದಗಿಸಲಾಗುತ್ತದೆ. ಈ ವೀಸಾ ಪಡೆಯುವವರು ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಅವಕಾಶ ಒದಗಿಸುತ್ತದೆ.

ಈ ‘ಗೋಲ್ಡ್‌ ಕಾರ್ಡ್‌’  ವೀಸಾ ವಿಶ್ವದ ಅತ್ಯುತ್ತಮ ಜನರನ್ನು ಅಮೆರಿಕಗೆ ಆಕರ್ಷಿಸುವ ಒಂದು ಮಾರ್ಗವಾಗಿದೆ ಎಂದು ಟ್ರಂಪ್ ಬಣ್ಣಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಟ್ರಂಪ್‌ ಅವರು ವಲಸೆ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಮತ್ತು ಸಾಮೂಜಿಕ ಗಡೀಪಾರುಗಳನ್ನು ನಡೆಸುತ್ತಿರುವ ಸಮಯದಲ್ಲಿ ವಿದೇಶಿ ಮೂಲದ ಪ್ರತಿಭೆಗಳನ್ನು ಅಮೆರಿಕದಲ್ಲಿ ಉಳಿಸಿಕೊಳ್ಳಲು ‘ಗೋಲ್ಡ್‌ ಕಾರ್ಡ್‌’ ನೆರವಾಗುತ್ತದೆ ಎಂದು ಭಾವಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಥೈಲ್ಯಾಂಡ್-ಕಾಂಬೋಡಿಯಾ ಘರ್ಷಣೆ; ಶತಮಾನದ ವಿವಾದಕ್ಕೆ ನಾಗರಿಕರ ಬಲಿ

“ಅಮೆರಿಕ ಸರ್ಕಾರದ ಟ್ರಂಪ್‌ ಗೋಲ್ಡ್‌ ಕಾರ್ಡ್‌ ವೀಸಾ ಅನಾವರಣಗೊಂಡಿದೆ! ಇದು ಎಲ್ಲ ಅರ್ಹ ಮತ್ತು ಪರಿಶೀಲನೆ ಪಡೆದ ಜನರಿಗೆ ಪೌರತ್ವಕ್ಕೆ ನೇರ ಮಾರ್ಗವಾಗಿದೆ. ಇದು ತುಂಬಾ ರೋಮಾಂಚನಕಾರಿ ಸಂಗತಿ! ನಮ್ಮ ಶ್ರೇಷ್ಠ ಅಮೇರಿಕನ್ ಕಂಪನಿಗಳು ಅಂತಿಮವಾಗಿ ತಮ್ಮ ಅಮೂಲ್ಯವಾದ ಪ್ರತಿಭೆಯನ್ನು ಉಳಿಸಿಕೊಳ್ಳಬಹುದು” ಎಂದು ಟ್ರಂಪ್ ತಮ್ಮ ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಗೋಲ್ಡ್ ಕಾರ್ಡ್’ನಿಂದ ಏನು ಸಿಗುತ್ತದೆ?

  • ಕಾನೂನು ಮಾನ್ಯತೆಯೊಂದಿಗೆ ನಿವಾಸ ಮತ್ತು ಅಮೆರಿಕ ಪೌರತ್ವ
  • ‘ಗೋಲ್ಡ್ ಕಾರ್ಡ್’ ಮೂಲಭೂತವಾಗಿ ಪರಿಷ್ಕೃತ ‘ಗ್ರೀನ್‌ ಕಾರ್ಡ್’ ಆಗಿದೆ.  ಅಮೆರಿಕದಲ್ಲಿ ಶಾತ್ವತವಾಗಿ ನೆಲೆಸಲು ಅವಕಾಶ ದೊರೆಯುತ್ತದೆ.
  • ಗೋಲ್ಡ್ ಕಾರ್ಡ್‌ಗಳಿಗೆ ಕಂಪನಿಗಳು 50 ಲಕ್ಷ ಡಾಲರ್ ನೇರ ಪಾವತಿ (ಅಥವಾ ಕೆಲವೊಮ್ಮೆ ಮೂಲ ಆವೃತ್ತಿಗೆ 10 ಲಕ್ಷ ಡಾಲರ್) ಮಾಡುವುದರಿಂದ, ತ್ವರಿತ ಅನುಮೋದನೆ ದೊರೆಯುತ್ತದೆ. ಹಿಂದಿನ ಸಾಂಪ್ರದಾಯಿಕ ಪ್ರಕ್ರಿಯೆಗಳನ್ನು ಕಡಿತಗೊಳಿಸುತ್ತದೆ.
  • ಗೋಲ್ಡ್ ಕಾರ್ಡ್ ಅಡಿಯಲ್ಲಿ, ವಲಸಿಗರು EB-1 ಅಥವಾ EB-2 ವೀಸಾ ವರ್ಗಗಳ ಅಡಿಯಲ್ಲಿ ಕಾನೂನುಬದ್ಧ ಶಾಶ್ವತ ನಿವಾಸಿ ಸ್ಥಾನಮಾನ ಪಡೆಯುತ್ತಾರೆ. ಇದನ್ನು US ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ನಿರ್ಧರಿಸುತ್ತದೆ.
  • ಉನ್ನತ ಶ್ರೇಣಿಯ ಪದವೀಧರರು ಮತ್ತು ಕೌಶಲ್ಯಭರಿತ ನೌಕರರಿಗೆ ಪ್ರವೇಶ ಒದಗಿಸುತ್ತದೆ. ಹೊಸ ವೀಸಾ ಯೋಜನೆಯು US ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗಕ್ಕೆ ಬರುವ, ವಿಶೇಷವಾಗಿ ಚೀನಾ, ಭಾರತ ಹಾಗೂ ಫ್ರಾನ್ಸ್‌ನಿಂದ ಬರುವ ಹೆಚ್ಚು ಕೌಶಲ್ಯಪೂರ್ಣ ಪದವೀಧರರನ್ನು ಅಮೆರಿಕದಲ್ಲಿಯೇ ಉಳಿಸಿಕೊಳ್ಳಲು ಅವಕಾಶ ಒದಗಿಸುತ್ತದೆ ಎಂದು ಟ್ರಂಪ್ ವಾದಿಸಿದ್ದಾರೆ.
  • ಕಂಪನಿಗಳು ತಮ್ಮ ಸಿಬ್ಬಂದಿಗಳ ವೀಸಾ ಸ್ಥಿತಿ ಅನಿಶ್ಚಿತವಾಗಿರುವುದರಿಂದ ವಿಶ್ವ ದರ್ಜೆಯ ನೌಕರರನ್ನು ಆಗ್ಗಾಗ್ಗೆ ಕಳೆದುಕೊಳ್ಳುತ್ತವೆ. ಅಂತಹ ಪರಿಸ್ಥಿತಿಗಳಿಗೆ ಹೊಸ ಕಾರ್ಡ್‌ಗಳು ತಡೆಗೋಡೆಯಾಗಿ ನಿಲ್ಲುತ್ತವೆ ಎಂದು ಟ್ರಂಪ್ ಹೇಳುತ್ತಾರೆ.

15,000 ಡಾಲರ್ ಪರಿಶೀಲನಾ ಶುಲ್ಕ

ಪ್ರತಿ ಅರ್ಜಿಯು ಅರ್ಜಿದಾರರ ಸಂಪೂರ್ಣ ಹಿನ್ನೆಲೆ ಪರಿಶೀಲನೆಗಾಗಿ ಹಣ ಒದಗಿಸಲು 15,000 ಡಾಲರ್ ಪರಿಶೀಲನಾ ಶುಲ್ಕವನ್ನು ಒಳಗೊಂಡಿರುತ್ತದೆ ಎಂದು ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.

ಉನ್ನತ ಅರ್ಹತೆ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ವೀಸಾ ಮತ್ತು ನಿವಾಸ ನೀಡಲು ಆಡಳಿತವು ಈ ಪರಿಶೀಲನೆ ರೂಪಿಸಿದೆ ಎಂದು ಅವರು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...