ಟ್ರಂಪ್ ದಾಳಿಕೋರನಿಗೆ ಅಪರಾಧ ಹಿನ್ನೆಲೆಯಿಲ್ಲ; ಸದಾ ಏಕಾಂಗಿ, ಮೌನಿಯಾಗಿರುತ್ತಿದ್ದ

Date:

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲೆ ದಾಳಿ ಮಾಡಿ ಭದ್ರತಾ ಪಡೆಗಳಿಂದ ಹತ್ಯೆಗೊಳಗಾದ 20 ವರ್ಷದ ಪೆನ್ಸಿಲ್ವೇನಿಯಾದ ಥಾಮಸ್‌ ಮ್ಯಾಥ್ಯೂ ಕ್ರುಕ್ಸ್ ಹಿನ್ನೆಲೆಯ ಬಗ್ಗೆ ಎಫ್‌ಬಿಐ ಹಾಗೂ ಆರೋಪಿಯ ಸಹಪಾಠಿಗಳು ಮಾಹಿತಿ ನೀಡಿದ್ದಾರೆ.

ಕ್ರುಕ್ಸ್‌ 2022ರಲ್ಲಿ ಬೇತಲ್‌ ಪಾರ್ಕ್‌ ಹೈಸ್ಕೂಲ್‌ನಲ್ಲಿ ಪದವಿ ಪೂರ್ಣಗೊಳಿಸಿ ರಾಷ್ಟ್ರೀಯ ವಿಜ್ಞಾನ ಹಾಗೂ ಗಣಿತ ಸ್ಪರ್ಧೆಯಲ್ಲಿ 500 ಡಾಲರ್‌ಗಳ ಸ್ಟಾರ್‌ ಅವಾರ್ಡ್‌ ಪುರಸ್ಕಾರವನ್ನು ಪಡೆದಿದ್ದ. ಶಾಲೆಯಲ್ಲಿ ಸದಾ ಮೌನಿ ಹಾಗೂ ಏಕಾಂಗಿಯಾಗಿರುತ್ತಿದ್ದ.

ನವೆಂಬರ್‌ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಲು ರಿಪಬ್ಲಿಕನ್‌ ಆಗಿ ಮೊದಲ ಬಾರಿ ನೋಂದಾಯಿಸಿದ್ದ ಎಂದು ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಮಾಹಿತಿ ನೀಡಿದೆ. ಆತನಿಗೆ ಯಾವುದೇ ಅಪರಾಧ ಹಿನ್ನೆಲೆ ಇರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕ್ರುಕ್ಸ್‌ನನ್ನು ಆತನ ಸಹಪಾಠಿಗಳು ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳುವವನು ಎಂದು ರೇಗಿಸುತ್ತಿದ್ದರು.ರಾಜಕೀಯದ ಬಗ್ಗೆ ಅಥವಾ ಟ್ರಂಪ್‌ ಬಗ್ಗೆ ಶಾಲೆಯಲ್ಲಿ ಹೆಚ್ಚು ಮಾತನಾಡಿದ ನೆನಪು ಆತನ ಸಹಪಾಠಿಗಳಿಗಿಲ್ಲ. ಆತ ಹೆಚ್ಚು ಹೆದರಿಕೊಳ್ಳುತ್ತಿದ್ದ. ವಿದ್ಯಾರ್ಥಿಗಳು ಕೂಡ ಈತನನ್ನು ಬೆದರಿಸುತ್ತಿದ್ದರು ಎಂದು ಸಹಪಾಠಿಗಳು ತಿಳಿಸಿದ್ದಾರೆ.

ಪದವಿ ಪೂರೈಸಿದ ನಂತರ ಒಂದು ನರ್ಸಿಂಗ್ ಹೋಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ದಾಳಿಯ ನಂತರ ಆತನ ಕಾರಿನಲ್ಲಿ ಅನುಮಾಸ್ಪದ ಸಾಧನವೊಂದು ದೊರಕಿದೆ. ಈ ಸಾಧನವು ಬಾಂಬ್‌ ತಂತ್ರಜ್ಞರು ಪರಿಶೀಲಿಸುವ ಸಾಧನವಾಗಿದೆ. ಅಧಿಕಾರಿಗಳು ಈತನ ಫೋನ್‌ನಲ್ಲಿ ಮತ್ತಷ್ಟು ಪರಿಶೋಧಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ನೇಪಾಳದಲ್ಲಿ ಭೂಕುಸಿತದಿಂದ ನದಿಗೆ ಉರುಳಿದ ಬಸ್: 65 ಮಂದಿ ನಾಪತ್ತೆ, 7 ಭಾರತೀಯರು ಸಾವು

ಕ್ರುಕ್ಸ್‌ ಕುಟುಂಬವು ಶ್ರೀಮಂತ ಹಿನ್ನೆಲೆಯನ್ನು ಹೊಂದಿರದಿದ್ದರೂ ಅನುಕೂಲಸ್ಥರಾಗಿದ್ದರು. ಆತನ ನಡವಳಿಕೆಯ ಬಗ್ಗೆ ನಿತ್ಯ ಗಮನಿಸುತ್ತಿದ್ದ ನರ್ಸಿಂಗ್‌ ಸಂಸ್ಥೆ ಕೂಡ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದೆ. ಕೃತ್ಯಕ್ಕೆ ಬಳಸಿದ ಗನ್‌ ಆತನ ತಂದೆ ಖರೀದಿಸಿದ್ದರು ಎಂದು ಎಫ್‌ಬಿಐ ತಿಳಿಸಿದೆ.

ಭಾನುವಾರ ಸಂಜೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಅಧ್ಯಕ್ಷ ಸ್ಥಾನದ ‘ರಿಪಬ್ಲಿಕನ್’ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (78) ಅವರ ಮೇಲೆ ಶನಿವಾರ ಗುಂಡಿನ ದಾಳಿ ನಡೆದು ಅವರು ಕೂದಲೆಳೆ ಅಂತರದಿಂದ ಪಾರಾಗಿದ್ದರು.

ಗುಂಡು ಹಾರಿಸಿದ್ದರಿಂದ 50 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇಬ್ಬರಿಗೆ ತೀವ್ರ ಗಾಯಗಳಾಗಿವೆ. ಅಮೆರಿಕದ ಸೀಕ್ರೆಟ್‌ ಸರ್ವೀಸ್‌ನ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ ಥಾಮಸ್‌ ಮ್ಯಾಥ್ಯೂ ಕ್ರುಕ್ಸ್ ಎಂಬಾತನನ್ನು ಹತ್ಯೆ ಮಾಡಿದ್ದರು.

ಈ ವೇಳೆ ಟ್ರಂಪ್‌ ಅವರ ಬಲ ಕಿವಿಯ ಭಾಗಕ್ಕೆ ಗುಂಡೇಟು ತಗುಲಿತು. ಕೂಡಲೇ ಅವರು ವೇದಿಕೆಯ ಕೆಳಗಡೆ ಕುಳಿತುಕೊಳ್ಳುವ ಮೂಲಕ, ಮತ್ತಷ್ಟು ದಾಳಿಯಿಂದ ಪಾರಾದರು. ತಕ್ಷಣವೇ ಭದ್ರತಾ ಸಿಬ್ಬಂದಿಯು ಗಾಯಗೊಂಡ ಟ್ರಂಪ್‌ ಅವರನ್ನು ಸುತ್ತುವರಿದು, ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...