‘ದುರುದ್ದೇಶದಿಂದ ನನ್ನ ಭಾಷಣ ತಿರುಚಿದ್ದಾರೆ’; ಬಿಬಿಸಿ ವಿರುದ್ಧ ಟ್ರಂಪ್ $1,000 ಕೋಟಿ ಮಾನನಷ್ಟ ಮೊಕದ್ದಮೆ  

Date:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಿಬಿಸಿ ವಿರುದ್ಧ 10 ಬಿಲಿಯನ್ ಡಾಲರ್ (1,000 ಕೋಟಿ ಡಾಲರ್) ಮಾನನಷ್ಟ ಮೊಕದ್ದಮೆಯನ್ನು ಸೋಮವಾರ ಹೂಡಿದ್ದಾರೆ. ಬ್ರಿಟನ್‌ನ ಸಾರ್ವಜನಿಕ ಪ್ರಸಾರ ಸಂಸ್ಥೆ ‘ಬಿಬಿಸಿ’ ತಮ್ಮ ಭಾಷಣವನ್ನು ತಿರುಚಿ, ಪ್ರಸಾರ ಮಾಡಿದೆ ಎಂದು ಆರೋಪಿಸಿದ್ದಾರೆ. ಮಿಯಾಮಿ ಫೆಡರಲ್ ನ್ಯಾಯಾಲಯದಲ್ಲಿ ಟ್ರಂಪ್ ಮೊಕದ್ದಮೆ ಹೂಡಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

2021ರ ಜನವರಿಯಲ್ಲಿ ಅಮೆರಿಕ ಕ್ಯಾಪಿಟಲ್ (ಸಂಸತ್ತು) ಮೇಲೆ ದಾಳಿ ನಡೆದಿತ್ತು. 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆಲುವನ್ನು ಪ್ರಮಾಣೀಕರಿಸದಂತೆ ಕಾಂಗ್ರೆಸ್‌ (ಅಮೆರಿಕ ಸದನ)ಅನ್ನು ತಡೆಯಲು ಯತ್ನಿಸಲಾಗಿತ್ತು. ಆ ದಾಳಿಗೆ. ಅದೇ ವರ್ಷದ ಜನವರಿ 6ರಂದು ವಾಷಿಂಗ್ಟನ್‌ನಲ್ಲಿ ಟ್ರಂಪ್ ಮಾಡಿದ ಭಾಷಣ ಪ್ರಚೋದನೆ ನೀಡಿತ್ತು ಎಂದು ಬಿಬಿಸಿ ವರದಿ ಪ್ರಕಟಿಸಿತ್ತು. ಟ್ರಂಪ್ ಭಾಷಣದ ಕೆಲವು ವಿಡಿಯೋ ತುಣುಕುಗಳನ್ನೂ ಪ್ರಸಾರ ಮಾಡಿತ್ತು. ಆ ದಾಳಿಯ ಹೊಣೆಹೊರಲು ಟ್ರಂಪ್ ಪದೇ-ಪದೇ ನಿರಾಕರಿಸಿದ್ದಾರೆ. ಮಾತ್ರವಲ್ಲದೆ, ತಮ್ಮ ಭಾಷಣದ ವಿಡಿಯೋವನ್ನು ಎಡಿಟ್‌ ಮಾಡಿ, ತಿರುಚಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಟ್ರಂಪ್ ದಾಖಲಿಸಿರುವ ಮೊಕದ್ದಮೆಯಲ್ಲಿ, “ಬಿಬಿಸಿ ಪ್ರಸಾರ ಮಾಡಿರುವ ಎಡಿಟ್ ಮಾಡಲಾದ ಕ್ಲಿಪ್‌ಗಳು ಕ್ಯಾಪಿಟಲ್‌ಗೆ ನುಗ್ಗಲು ತಮ್ಮ ಬೆಂಬಲಿಗರನ್ನು ನಾನು ಒತ್ತಾಯಿಸಿರುವುದಾಗಿ ಸುಳ್ಳು ಆರೋಪ ಮಾಡಿವೆ. ಇದರಿಂದ ತಮ್ಮ ಖ್ಯಾತಿಗೆ ಗಂಭೀರ ಧಕ್ಕೆಯಾಗಿದೆ” ಟ್ರಂಪ್ ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ತಮ್ಮ ಬೆಂಬಲಿಗರನ್ನು ಕ್ಯಾಪಿಟಲ್‌ವರೆಗೆ ಮೆರವಣಿಗೆ ಮಾಡಲು ಕರೆ ಕೊಟ್ಟ ಹೇಳಿಕೆಯನ್ನೂ ಮತ್ತು ‘ನರಕದಂತೆ ಹೋರಾಡಿ’ ಎಂಬ ಮತ್ತೊಂದು ಹೇಳಿಕೆಯನ್ನೂ ಒಟ್ಟುಗೂಡಿಸಿ, ತಪ್ಪಾಗಿ ಪ್ರಸಾರ ಮಾಡಲಾಗಿದೆ. ನಾನು ಶಾಂತಿಯುತ ಪ್ರತಿಭಟನೆಗೆ ಕರೆ ನೀಡುವ ವಾಕ್ಯವನ್ನು ಹೊರತುಪಡಿಸಿ, ಹಿಂಸಾಚಾರಕ್ಕೆ ನೇರ ಕರೆ ನೀಡಿಲ್ಲ. ನನ್ನ ಭಾಷಣವನ್ನು ತಿರುಚಿ ತಪ್ಪು ಅಭಿಪ್ರಾಯ ಸೃಷ್ಟಿಸಲಾಗಿದೆ” ಎಂದು ಟ್ರಂಪ್ ವಾದಿಸಿದ್ದಾರೆ.

ಆದಾಗ್ಯೂ, ಬಿಬಿಸಿ ಈ ಹಿಂದೆಯೇ ಕ್ಷಮೆಯಾಚಿಸಿದೆ. ‘ತೀರ್ಪಿನ ದೋಷ’ ಎಂದು ಒಪ್ಪಿಕೊಂಡಿದೆ. ಮಾತ್ರವಲ್ಲದೆ, ಎಡಿಟ್‌ ಮಾಡಲಾದ ವಿಡಿಯೋ ತಪ್ಪು ಅಭಿಪ್ರಾಯವನ್ನು ನೀಡಿದೆ ಎಂಬುದಾಗಿಯೂ ಒಪ್ಪಿಕೊಂಡಿದೆ. ಜೊತೆಗೆ, ಮಾನನಷ್ಟ ಮೊಕದ್ದಮೆ ಹೂಡಲು ಈಗ ಯಾವುದೇ ಕಾನೂನು ಆಧಾರವಿಲ್ಲ ಎಂದು ಬಿಬಿಸಿ ಹೇಳಿಕೊಂಡಿದೆ.

ಇತ್ತೀಚೆಗೆ, ಬಿಬಿಸಿ ವಕ್ತಾರರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಟ್ರಂಪ್ ಅವರ ಕಾನೂನು ನೋಟಿಸ್‌ಗೆ ಉತ್ತರಿಸಿದ್ದಾರೆ. “ವಿಡಿಯೋ ಕ್ಲಿಪ್ ಅನ್ನು ಸಂಪಾದಿಸಿದ ರೀತಿಗೆ ಬಿಬಿಸಿ ಪ್ರಾಮಾಣಿಕವಾಗಿ ವಿಷಾದಿಸುತ್ತಿದೆ. ಆದರೆ, ಮಾನನಷ್ಟ ಮೊಕದ್ದಮೆ ಹೂಡಲು ಆಧಾರವಿದೆ ಎಂಬುದನ್ನು ನಾವು ಒಪ್ಪುವುದಿಲ್ಲ” ಎಂದು ಹೇಳಿದ್ದಾರೆ.

ವಿವಾದಿತ ಕ್ಲಿಪ್ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಕೆಲವು ದಿನಗಳ ಮೊದಲು ಪನೋರಮಾ ಪ್ರಸಾರದ ಒಂದು ಸಂಚಿಕೆಯಲ್ಲಿ ಕಾಣಿಸಿಕೊಂಡಿತು. ಈ ವಿವಾದವು ಬಿಬಿಸಿಯ 103 ವರ್ಷಗಳ ಇತಿಹಾಸದಲ್ಲಿ ಅತಿದೊಡ್ಡ ಸವಾಲಾಗಿ ಕಾಣಿಸಿಕೊಂಡಿತು. ಕಳೆದ ತಿಂಗಳು ಬಿಬಿಸಿ ಮಹಾನಿರ್ದೇಶಕ ಟಿಮ್ ಡೇವಿ ಮತ್ತು ಬಿಬಿಸಿ ನ್ಯೂಸ್ ಮುಖ್ಯಸ್ಥೆ ಡೆಬೊರಾ ಟರ್ನೆಸ್ ಅವರ ರಾಜೀನಾಮೆಗೂ ಕಾರಣವಾಯಿತು.

ದಿ ಗಾರ್ಡಿಯನ್ ಪ್ರಕಾರ, ಟ್ರಂಪ್ ಅವರು ಸುಮಾರು ಒಂದು ಗಂಟೆ ಸುದೀರ್ಘ ಭಾಷಣದ ಕೆಲವು ಭಾಗಗಳನ್ನು ಎಡಿಟ್‌ ಮಾಡಿ, “ನಾವು ಕ್ಯಾಪಿಟಲ್‌ಗೆ ನಡೆದುಕೊಂಡು ಹೋಗುತ್ತೇವೆ ಮತ್ತು ನಾನು ನಿಮ್ಮೊಂದಿಗೆ ಇರುತ್ತೇನೆ. ನಾವು ಹೋರಾಡುತ್ತೇವೆ. ನಾವು ನರಕದಂತೆ ಹೋರಾಡುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆಂದು ಪ್ರಸಾರ ಮಾಡಲಾಗಿತ್ತು.

ಈ ಲೇಖನ ಓದಿದ್ದೀರಾ?:ಆರೆಸ್ಸೆಸ್- ಬಿಜೆಪಿಯ ಮುಸ್ಲಿಮ್ ದ್ವೇಷದ ರೂಪಕ ‘ಬುಲ್ಡೋಜರ್ ಅನ್ಯಾಯ’ ಕರ್ನಾಟಕಕ್ಕೆ ಕಾಲಿಡುವುದೇ?

ಈ ಎಡಿಟ್ ಮಾಡಲಾದ ವಿಡಿಯೋ ಪ್ರಸಾರವನ್ನು ಟ್ರಂಪ್, 2024ರ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ‘ಲಜ್ಜೆಗೆಟ್ಟ ಪ್ರಯತ್ನ’ವೆಂದು ಟ್ರಂಪ್ ವಕ್ತಾರರು ಹೇಳಿದ್ದಾರೆ.

“ಬಿಬಿಸಿ ಉದ್ದೇಶಪೂರ್ವಕವಾಗಿ, ದುರುದ್ದೇಶಪೂರಿತವಾಗಿ ಹಾಗೂ ವಂಚಿಸುವ ರೀತಿಯಲ್ಲಿ ವರ್ತಿಸಿದೆ. ಟ್ರಂಪ್ ಅವರು ಕನಿಷ್ಠ 10 ಬಿಲಿಯನ್ ಡಾಲರ್ ಪರಿಹಾರವನ್ನು ಕೋರಿದ್ದಾರೆ” ಎಂದು ಟ್ರಂಪ್ ವಕೀಲರು ಹೇಳಿದ್ದಾರೆ.

ಈ ಹಿಂದೆ ವರದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಮುಂದಿನ ವಾರದಲ್ಲಿ ನಾವು ಅವರ (ಬಿಬಿಸಿ) ಮೇಲೆ 1 ಬಿಲಿಯನ್ ಡಾಲರ್‌ನಿಂದ 5 ಬಿಲಿಯನ್ ಡಾಲರ್‌ವರೆಗೆ ಮೊಕದ್ದಮೆ ಹೂಡುತ್ತೇವೆ. ಅವರು ಮೋಸ ಮಾಡಿದ್ದಾರೆ. ಅವರು ನನ್ನ ಬಾಯಿಂದ ಹೊರಬರುವ ಮಾತುಗಳನ್ನು ತಿರುಚಿದ್ದಾರೆ. ನಾವು ಈಗ ಮೊಕದ್ದಮೆ ಹೂಡದಿದ್ದರೆ, ಅವರು ಇತರರಿಗೂ ಇದೇ ರೀತಿ ಮಾಡುತ್ತಾರೆ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...