ಡೊನಾಲ್ಡ್ ಟ್ರಂಪ್‌ ಪ್ರಪಂಚದ ಅತ್ಯಂತ ಕೆಟ್ಟ ಮನುಷ್ಯ: ಹಾಲಿವುಡ್‌ನ ಪ್ರಸಿದ್ಧ ನಟ ಮಾರ್ಕ್‌

Date:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಪಂಚದ ಅತ್ಯಂತ ಕೆಟ್ಟ ಮನುಷ್ಯ ಎಂದು ಹಾಲಿವುಡ್‌ನ ಪ್ರಸಿದ್ಧ ನಟ ಮಾರ್ಕ್‌ ರಫಲೋ ಹೇಳಿದ್ದಾರೆ. ಜನವರಿ 11ರಂದು ನಡೆದ 83ನೇ’ಗೋಲ್ಡನ್ ಗ್ಲೋಬ್ಸ್’ (Golden Globes) ಪ್ರಶಸ್ತಿ ಸಮಾರಂಭದಲ್ಲಿ ನಟ ಮಾರ್ಕ್ ನೀಡಿರುವ ಈ ಹೇಳಿಕೆಯ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಮಿನ್ನಿಯಾಪೋಲಿಸ್‌ನಲ್ಲಿ ಐಸಿಇ ಏಜೆಂಟ್‌ನ ಗುಂಡೇಟಿನಿಂದ ಸಾವನ್ನಪ್ಪಿದ ರೆನಿ ನಿಕೋಲ್ ಗುಡ್ ಎಂಬುವವರ ಸ್ಮರಣಾರ್ಥವಾಗಿ ರಫಲೋ ಅವರು ‘BE GOOD’ ಎಂಬ ಪಿನ್ ಧರಿಸಿ ಪ್ರತಿಭಟಿಸಿದರು. ಹಾಗೆಯೇ ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿಯನ್ನು ವಿರೋಧಿಸಿದರು. “ಟ್ರಂಪ್ ಆಡಳಿತವು ವಲಸಿಗರನ್ನು ಭಯಭೀತರನ್ನಾಗಿಸುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮಾರ್ಕ್ ಮಾತ್ರವಲ್ಲದೆ ವಂಡಾ ಸೈಕ್ಸ್, ನತಾಶಾ ಲಿಯೋನ್ ಮತ್ತು ಜೀನ್ ಸ್ಮಾರ್ಟ್ ಸೇರಿದಂತೆ ಹಲವಾರು ತಾರೆಗಳು ರೆಡ್ ಕಾರ್ಪೆಟ್ ಮೇಲೆ ಈ ಪಿನ್ ಧರಿಸಿ ನಡೆದರು.

ಇದನ್ನು ಓದಿದ್ದೀರಾ? ಅಮೆರಿಕದಲ್ಲಿ ಕೋಲಾಹಲವೆಬ್ಬಿಸಿದ ಎಪ್‌ಸ್ಟೀನ್ ಫೈಲ್ಸ್, ಇಕ್ಕಟ್ಟಿನಲ್ಲಿ ಡೊನಾಲ್ಡ್ ಟ್ರಂಪ್

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯುಎಸ್‌ಎ ಟುಡೇ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರಫಲೋ, “ಇದು ಕೊಲೆಯಾದ ರೆನಿ ನಿಕೋಲ್ ಗುಡ್ ಸ್ಮರಣಾರ್ಥವಾಗಿ” ಎಂದು ಹೇಳಿದರು. ಇನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ದೇಶಿಸಿ, “ಅಮೆರಿಕವು ವೆನೆಜುವೆಲಾವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ. ನಾವೀಗ ಯುದ್ಧದ ಮಧ್ಯದಲ್ಲಿದ್ದೇವೆ. ಟ್ರಂಪ್‌ಗೆ ಅಂತರಾಷ್ಟ್ರೀಯ ಕಾನೂನುಗಳ ಬಗ್ಗೆ ಗೌರವವಿಲ್ಲ” ಎಂದು ದೂರಿದರು.

“ಟ್ರಂಪ್‌ಗೆ ಮುಖ್ಯವಾದುದು ಸ್ವಂತ ನೈತಿಕತೆ ಮಾತ್ರ. ಆದರೆ ಆ ವ್ಯಕ್ತಿ ಶಿಕ್ಷೆಗೊಳಗಾದ ಅಪರಾಧಿ. ಶಿಕ್ಷೆಗೊಳಗಾದ ಅತ್ಯಾಚಾರಿ. ಅವನು ಶಿಶುಕಾಮಿ. ಅವನು ಜಗತ್ತಿನ ಅತ್ಯಂತ ಕೆಟ್ಟ ಮನುಷ್ಯ. ವಿಶ್ವದ ಅತ್ಯಂತ ಶಕ್ತಿಶಾಲಿ ದೇಶದ ನೈತಿಕತೆಗಾಗಿ ನಾವು ಈ ವ್ಯಕ್ತಿಯನ್ನು ಅವಲಂಬಿಸಿ, ನಾವೆಲ್ಲರೂ ದೊಡ್ಡ ಸಂಕಷ್ಟದಲ್ಲಿದ್ದೇವೆ” ಎಂದರು.

“ಇಂದು ಜನರು ಭಯಭೀತರಾಗಿದ್ದಾರೆ. ನಾನೂ ಅವರಲ್ಲಿ ಒಬ್ಬ. ನಾನು ಈ ದೇಶವನ್ನು ಪ್ರೀತಿಸುತ್ತೇನೆ. ಸದ್ಯ ನಾವು ನೋಡುತ್ತಿರುವುದು ಅಮೆರಿಕವಲ್ಲ” ಎಂದೂ ಹೇಳಿದ್ದಾರೆ.

ಸದ್ಯ ಎಕ್ಸ್, ಇನ್‌ಸ್ಟಾಗ್ರಾಂ ಮೊದಲಾದವುಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ನಟ ಮಾರ್ಕ್‌ ರಫಲೋ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ.

ಇನ್ನು ಈ ಹಿಂದೆಯೂ ನಟ ಮಾರ್ಕ್‌ ರಫಲೋ ಟ್ರಂಪ್ ಅವರನ್ನು ಬಹಿರಂಗವಾಗಿ ಟೀಕಿಸಿದ್ದಾರೆ. 2020ರಲ್ಲಿ ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ, ರಫಲೋ, “ಟ್ರಂಪ್ ‘ಸಾರ್ವಜನಿಕರ ನಂಬರ್ ಒನ್ ಶತ್ರು’ ಎಂದು ಹೇಳಿದ್ದರು. ಟ್ರಂಪ್ ಅಂತಹ ನಾಯಕರಿಂದ ಜಗತ್ತಿಗೆ ಅಪಾಯವಿದೆ ಎಂದು ಅಭಿಪ್ರಾಯಿಸಿದ್ದರು. ಹಾಗೆಯೇ 2023ರಲ್ಲಿ, “ಟ್ರಂಪ್ ಪ್ರಜಾಪ್ರಭುತ್ವಕ್ಕೆ ಮಾರಕವಾದ ಭಾಷೆ ಬಳಸುತ್ತಿದ್ದಾರೆ. ಟ್ರಂಪ್ ‘ಅಮೆರಿಕದ ಒಳಗಿರುವ ಶತ್ರು’ ಎಂದು ಕರೆದಿದ್ದರು. ಹಾಗೆಯೇ ಇತರೆ ಸಂದರ್ಭಗಳಲ್ಲಿ ಟ್ರಂಪ್ “ರಾಜ, ಸರ್ವಾಧಿಕಾರಿ, ಮೋಸಗಾರ” ಎಂದೂ ಹೇಳಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...