ಗ್ರೀನ್‌ಲ್ಯಾಂಡ್‌ ಕಿತ್ತುಕೊಳ್ಳಲು ಟ್ರಂಪ್ ಧಾವಂತ; NATO ಮಿತ್ರರಾಷ್ಟ್ರಗಳು ಹೇಳುವುದೇನು?

Date:

ವೆನೆಜುವೆಲಾ ಮೇಲೆ ದಾಳಿ ಮಾಡಿ, ಅದರ ಅಧ್ಯಕ್ಷರನ್ನು ಸೆರೆ ಹಿಡಿದಿರುವ ಅಮೆರಿಕ, ಈಗ ಇರಾನ್‌ ಮೇಲೆ ಯುದ್ಧ ಸಾರಲು ಹವಣಿಸುತ್ತಿದೆ. ಇದರ ನಡುವೆಯೇ, ಅಮೆರಿಕಗೆ ಗ್ರೀನ್‌ಲ್ಯಾಂಡ್‌ ಬೇಕೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮತ್ತೆ ಹೇಳಿಕೊಂಡಿದ್ದಾರೆ. ಆದರೆ, ಗ್ರೀನ್‌ಲ್ಯಾಂಡ್‌ ಡೆನ್ಮಾರ್ಕ್‌ನ ಭಾಗವಾಗಿದ್ದು, ಅದನ್ನು ಅಮೆರಿಕಗೆ ಬಿಟ್ಟುಕೊಡುವ ಮಾತೇ ಇಲ್ಲವೆಂದು ಡೆನ್ಮಾರ್ಕ್‌ ಹೇಳುತ್ತಿದೆ. ಆದರೂ, ಗ್ರೀನ್‌ಲ್ಯಾಂಡ್‌ಅನ್ನು ಪಡೆದುಕೊಳ್ಳಲು ಯಾವ ಹಂತಕ್ಕೆ ಬೇಕಿದ್ದರೂ ಹೋಗುವ ರೀತಿಯಲ್ಲಿ ಟ್ರಂಪ್ ಮಾತನಾಡುತ್ತಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ‘ಟ್ರುತ್‌’ನಲ್ಲಿ ಪೋಸ್ಟ್‌ ಬರೆದುಕೊಂಡಿರುವ ಟ್ರಂಪ್, “ರಾಷ್ಟ್ರೀಯ ಭದ್ರತೆಯ ಉದ್ದೇಶಕ್ಕಾಗಿ ಅಮೆರಿಕಗೆ ಗ್ರೀನ್‌ಲ್ಯಾಂಡ್‌ನ ಅಗತ್ಯವಿದೆ. ನಾವು ನಿರ್ಮಿಸುತ್ತಿರುವ ‘ಗೋಲ್ಡನ್ ಡೋಮ್’ (Golden Dome) ಗಾಗಿ ಇದು ಅತ್ಯಗತ್ಯವಾಗಿದೆ” ಎಂದು ಹೇಳಿಕೊಂಡಿದ್ದಾರೆ.

“ಗ್ರೀನ್‌ಲ್ಯಾಂಡ್‌ಅನ್ನು ಅಮೆರಿಕ ಪಡೆಯಲು NATO ಮುಂಚೂಣಿಯಲ್ಲಿರಬೇಕು. ಒಂದು ವೇಳೆ ನಾವು ಅದನ್ನು ಪಡೆಯದಿದ್ದರೆ, ರಷ್ಯಾ ಅಥವಾ ಚೀನಾ ಪಡೆಯುತ್ತವೆ. ಅದು ಆಗಲು ನಾವು ಬಿಡುವುದ್ದಿಲ್ಲಾ! ಮಿಲಿಟರಿ ದೃಷ್ಟಿಕೋನದಿಂದ ನೋಡುವುದಾದರೆ, ಅಮೆರಿಕದ ಅಗಾಧ ಶಕ್ತಿಯಿಲ್ಲದೆ (ಇದರಲ್ಲಿ ಹೆಚ್ಚಿನದನ್ನು ನಾನು ನನ್ನ ಮೊದಲ ಅವಧಿಯಲ್ಲಿ ನಿರ್ಮಿಸಿದೆ. ಈಗ ಅದನ್ನು ಹೊಸ ಮತ್ತು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದೇನೆ) NATO ಒಂದು ಪರಿಣಾಮಕಾರಿ ಶಕ್ತಿ ಅಥವಾ ಪ್ರತಿರೋಧ ಓಡ್ಡಲು ಸಾಧ್ಯವಿಲ್ಲ. ಹತ್ತಿರಕ್ಕೂ ಬರಲಾಗುವುದಿಲ್ಲ! ಅದು ಅವರಿಗೆ (ನ್ಯೂಟೋ) ಅದು ತಿಳಿದಿದೆ ಮತ್ತು ನನಗೂ ತಿಳಿದಿದೆ. ಗ್ರೀನ್‌ಲ್ಯಾಂಡ್ ಅಮೆರಿಕದ ಕೈಯಲ್ಲಿದ್ದರೆ NATO ಮತ್ತಷ್ಟು ಪ್ರಬಲ ಮತ್ತು ಪರಿಣಾಮಕಾರಿಯಾಗುತ್ತದೆ” ಎಂದು ಟ್ರಂಪ್ ಬರೆದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
image 88 4

ಆದಾಗ್ಯೂ, ಟ್ರಂಪ್ ಅವರ ಹೇಳಿಕೆಗಳನ್ನು ಡೆನ್ಮಾರ್ಕ್‌ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರು ‘ಅಸಂಬದ್ದ’ ಎಂದು ಕರೆದಿದ್ದಾರೆ. “ಗ್ರೀನ್‌ಲ್ಯಾಂಡ್ ಮಾರಾಟಕ್ಕಿಲ್ಲ. ಅಲ್ಲದೆ, ಅಮೆರಿಕವು ಮಿಲಿಟರಿ ಶಕ್ತಿಯನ್ನು ಬಳಸಲು ಮುಂದಾದರೆ ಅದು ‘NATO’ ಮೈತ್ರಿಕೂಟದ ಅಂತ್ಯಕ್ಕೆ ನಾಂದಿಯಾಗಬಹುದು” ಎಂದು ಎಚ್ಚರಿಸಿದ್ದಾರೆ. ಗ್ರೀನ್‌ಲ್ಯಾಂಡ್ ಪ್ರಧಾನಿ ಜೆನ್ಸ್-ಫ್ರೆಡೆರಿಕ್ ನೀಲ್ಸೆನ್ ಅವರು, “ನಾವು ಅಮೆರಿಕನ್ನರಾಗಲು ಇಷ್ಟಪಡುವುದಿಲ್ಲ. ನಾವು ಗ್ರೀನ್‌ಲ್ಯಾಂಡ್‌ನವರಾಗಿಯೇ ಇರಲು ಬಯಸುತ್ತೇವೆ. ಒಂದುವೇಳೆ, ಅಮೆರಿಕ ಮತ್ತು ಡೆನ್ಮಾರ್ಕ್ ನಡುವೆ ಆಯ್ಕೆ ಮಾಡಬೇಕಾಗಿ ಬಂದರೆ ನಾವು ಡೆನ್ಮಾರ್ಕ್ ಮತ್ತು ಯುರೋಪಿಯನ್ ಯೂನಿಯನ್ (EU) ಅನ್ನೇ ಆರಿಸಿಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಅವರು, “ಗ್ರೀನ್‌ಲ್ಯಾಂಡ್‌ನ ಭವಿಷ್ಯವನ್ನು ನಿರ್ಧರಿಸುವ ಹಕ್ಕು ಅಲ್ಲಿನ ಜನರಿಗೆ ಮಾತ್ರ ಇದೆ. ಯುರೋಪಿಯನ್ ಒಕ್ಕೂಟವು ಡೆನ್ಮಾರ್ಕ್‌ನ ಸಾರ್ವಭೌಮತ್ವದ ಪರವಾಗಿ ನಿಲ್ಲುತ್ತದೆ” ಎಂದ್ದಿದ್ದಾರೆ.

ಇನ್ನು, ಜರ್ಮನ್ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಜಂಟಿ ಹೇಳಿಕೆ ನೀಡಿದ್ದು, “ಆರ್ಕ್ಟಿಕ್ ಪ್ರದೇಶದ ಭದ್ರತೆಯು ಅಂತರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಇರಬೇಕೇ ಹೊರತು ಬಲವಂತದ ಸ್ವಾಧೀನದಿಂದಲ್ಲ” ಎಂದಿದ್ದಾರೆ. ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರು, “ಅಮೆರಿಕದ ಬೆದರಿಕೆಯ ಭಾಷೆ ಸರಿಯಲ್ಲ. ಅಮೆರಿಕವು ತನ್ನ ಮಿತ್ರರಾಷ್ಟ್ರವಾದ ಡೆನ್ಮಾರ್ಕ್‌ಗೆ ಗೌರವ ಕೊಡಬೇಕು” ಎಂದು ಆಗ್ರಹಿಸಿದ್ದಾರೆ.

NATOದ ಸದಸ್ಯ ರಾಷ್ಟ್ರಗಳಾದ ಬ್ರಿಟನ್, ಪೋಲೆಂಡ್ ಹಾಗೂ ಇಟಲಿ ಕೂಡ ಟ್ರಂಪ್ ಅವರ ನಿಲುವಿನ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಒಂದು ಮಿತ್ರ ರಾಷ್ಟ್ರವು ಮತ್ತೊಂದು ಮಿತ್ರ ರಾಷ್ಟ್ರದ ಭೂಭಾಗವನ್ನು ವಶಪಡಿಸಿಕೊಳ್ಳಲು ಯತ್ನಿಸುವುದು NATO ತತ್ವಗಳಿಗೆ ವಿರುದ್ಧವಾಗಿದೆ ಎಂದು ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟುಸ್ಕ್ ಅಭಿಪ್ರಾಯಪಟ್ಟಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...