ದಾಳಿಗೂ ಮುನ್ನ ಇರಾನ್‌ಗೆ ಟ್ರಂಪ್ 74 ಬಾರಿ ಎಚ್ಚರಿಕೆ ನೀಡಿದ್ದರು: ಶ್ವೇತಭವನ

Date:

ಇರಾನ್ ವಿರುದ್ಧ ಮಿಲಿಟರಿ ದಾಳಿ ಆರಂಭವಾಗುವುದಕ್ಕೂ ಮೊದಲು, ‘ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕನಿಷ್ಠ 74 ಬಾರಿ ಎಚ್ಚರಿಕೆ ನೀಡಿದ್ದರು. ಅವರು ಭಾಷೆಯು ವಿರಳವಾಗಿ ಬದಲಾಗಿದೆ. ಆದರೆ, ಅವರ ಗುರಿ ಎಂದಿಗೂ ಬದಲಾಗಿಲ್ಲ ಎಂದು ಅಮೆರಿಕದ ಶ್ವೇತಭವನ ತಿಳಿಸಿದೆ.

ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಪಡೆಯಲು ಎಂದಿಗೂ ಅನುಮತಿಸುವುದಿಲ್ಲ ಎಂಬ ಟ್ರಂಪ್ ಅವರ ಎಚ್ಚರಿಕೆಯು ದಶಕಗಳಿಂದ ನಿಸ್ಸಂದಿಗ್ಧ ಮತ್ತು ಸ್ಥಿರವಾಗಿ ಬಂದಿವೆ. 2011ರ ನವೆಂಬರ್‌ನಿಂದ ಈವರೆಗೆ 15 ವರ್ಷಗಳ ಕಾಲ ಅವರ ಇರಾನ್‌ನ ಪರಣಾಮ ನೀತಿ ಕುರಿತು ಟ್ರಂಪ್ ನೀಡಿದ್ದ ಹೇಳಿಕೆಗಳ ಸಂಕಲನವನ್ನು ಶ್ವೇತಭವನ ಬಿಡುಗಡೆ ಮಾಡಿದೆ.

2026ರ ಫೆಬ್ರವರಿ 24 ರಂದು ಟ್ರಂಪ್ ಹೇಳಿಕೆಯು: “ಪರಮಾಣು ಶಸ್ತ್ರಾಸ್ತ್ರಗಳನ್ನು ಪುನರ್ನಿರ್ಮಿಸಲು ಭವಿಷ್ಯದಲ್ಲಿ ಯಾವುದೇ ಪ್ರಯತ್ನಗಳನ್ನು ಮಾಡಬಾರದೆಂದು ಅವರಿಗೆ ಎಚ್ಚರಿಕೆ ನೀಡಲಾಯಿತು, ಆದರೂ ಅವರು ಮುಂದುವರಿದಿದ್ದಾರೆ. ಅವರು ಅದನ್ನು ಮತ್ತೆ ಪ್ರಾರಂಭಿಸುತ್ತಿದ್ದಾರೆ… ಒಂದು ವಿಷಯ ಖಚಿತ: ಅವರು ಇಲ್ಲಿಯವರೆಗೆ ಇರುವ ವಿಶ್ವದ ನಂಬರ್ ಒನ್ ಭಯೋತ್ಪಾದನೆಯ ಪ್ರಾಯೋಜಕರಿಗೆ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ನಾನು ಎಂದಿಗೂ ಅನುಮತಿಸುವುದಿಲ್ಲ” ಎಂದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಹೇಳಿಕೆಗೂ ಐದು ದಿನಗಳ ಹಿಂದೆ, 2026ರ ಫೆಬ್ರವರಿ 1ರಂದು; “ಇದು ತುಂಬಾ ಸರಳ ವಿಚಾರ. ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿದರೆ, ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಅವರು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ. ಇದನ್ನು ಅವರಿಗೆ ಬಲವಾಗಿ ಹೇಳಲಾಗಿದೆ” ಎಂದು ಟ್ರಂಪ್ ಹೇಳಿದ್ದರು.

2026ರ ಫೆಬ್ರವರಿ 13ರಂದು, ಟ್ರಂಪ್, “ನಮಗೆ ಯಾವುದೇ ಪುಷ್ಟೀಕರಣ ಬೇಡ” ಎಂದಿದ್ದರು.

2026ರ ಫೆಬ್ರವರಿ 9ರಂದು: “ಪರಮಾಣು ಶಸ್ತ್ರಾಸ್ತ್ರ ಹೊಂದಲಾಗುವುದಿಲ್ಲ…”

2026ರ ಫೆಬ್ರವರಿ 6ರಂದು: “ಒಂದು ನೇರ ವಿಷಯ – ಪರಮಾಣು ಶಸ್ತ್ರಾಸ್ತ್ರ ಹೊಂದಲಾಗುವುದಿಲ್ಲ.”

2026ರ ಜನವರಿ 29ರಂದು: “ನಂಬರ್ ಒನ್, ಪರಮಾಣು ಹೊಂದಲು ಅವಕಾಶ ಇಲ್ಲ.”

ಈ ಲೇಖನ ಓದಿದ್ದೀರಾ?: ಇರಾನ್-ರಷ್ಯಾ ಸಂಬಂಧವೇನು; ಪರಸ್ಪರ ಬೆಂಬಲ ಯಾಕೆ ಮುಖ್ಯ?

2025ರ ಜೂನ್‌ 25ರಂದು, ಟ್ರಂಪ್ ಹೇಳಿದ್ದು; “ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ ಎಂದು ನಾನು ಹೇಳಿದ್ದೇನೆ – ನಾನು ರಾಜಕೀಯ ಕೆಲಸವನ್ನು ಮಾಡಲು ನಿರ್ಧರಿಸುವ ಬಹಳ ಹಿಂದೆಯೇ 15 ವರ್ಷಗಳ ಕಾಲ ಅದನ್ನು ಹೇಳಿದ್ದೇನೆ.”

2024 ನವೆಂಬರ್ 3ರಂದು ಟ್ರಂಪ್, “ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ. ಪರಮಾಣು ಶಸ್ತ್ರಾಸ್ತ್ರಗಳು ನಮ್ಮ ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ದೊಡ್ಡ ಏಕೈಕ ಬೆದರಿಕೆಯಾಗಿದೆ.”

2024ರ ಅಕ್ಟೋಬರ್ 7ರಂದು; “ನನಗೆ ಒಂದೇ ಒಂದು ವಿಷಯ ಬೇಕಿತ್ತು. ನೀವು ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ. ನೀವು ಅವರಿಗೆ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡಬಾರದು” ಎಂದು ಟ್ರಂಪ್ ಹೇಳಿದ್ದರು.

2024ರ ಆಗಸ್ಟ್ 27ರಂದು; “ಅವರು ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ. ನಾವು ಅವರಿಗೆ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡಬಾರದು. ನಾನು ಇದನ್ನೇ ಹೇಳುತ್ತೇನೆ. ಅವರು ನಿಜವಾಗಿಯೂ ಪರಮಾಣು ಶಸ್ತ್ರಾಸ್ತ್ರ ಹೊಂದಿದ್ದರೆ, ಇಸ್ರೇಲ್ ಇಲ್ಲವಾಗುತ್ತದೆ” ಎಂದಿದ್ದರು.

2020ರ ಜನವರಿ 6ರಂದು; “ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿರುವುದಿಲ್ಲ!” ಎಂದು ಟ್ರಂಪ್ ಘೋಷಿಇದ್ದರು.

2029ರ ಜೂನ್ 22ರಂದು ಹೇಳಿಕೆ ನೀಡಿದ್ದ ಟ್ರಂಪ್; “ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ!” ಎಂದಿದ್ದರು.

2011ರ ನವೆಂಬರ್ 4ರಂದು (ಟ್ರಂಪ್‌ ಶ್ವೇತಭವನವನ್ನು ಪ್ರವೇಶಿಸುವ ವರ್ಷಗಳ ಮೊದಲು) ನೀಡಿದ್ದ ಹೇಳಿಕೆಯಲ್ಲಿ: “ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ನಾವು ಅನುಮತಿಸುವುದಿಲ್ಲ” ಎಂದಿದ್ದರು.

ಇದೇ ರೀತಿ 2011ರಿಂದ ಈವರೆಗೆ ಹಲವಾರು ರ್‍ಯಾಲಿಗಳು, ಸಂದರ್ಶನಗಳು ಹಾಗೂ ಅಧಿಕೃತ ಹೇಳಿಕೆಗಳಲ್ಲಿ ಟ್ರಂಪ್ ಪದೇ ಪದೇ ಇರಾನ್‌ ಪರಮಾಣ ಶಸ್ತ್ರಾಸ್ತ್ರ ಹೊಂದಬಾರದು ಎಂಬುದನ್ನು ಹೇಳಿದ್ದಾರೆ. ಸುದೀರ್ಘ ಅವಧಿಯಲ್ಲಿ ಅವರ ಮೂಲ ಬೇಡಿಕೆ ಬದಲಾಗಲಿಲ್ಲ. ಇರಾನ್ ಪರಮಾಣು ಬಾಂಬ್ ಅನ್ನು ಹೊಂದುವುದನ್ನು ತಡೆಯುವ ದೀರ್ಘಕಾಲದ ಅಮೇರಿಕನ್ ನೀತಿಯಲ್ಲಿ ಈ ನಿಲುವು ಬೇರೂರಿದೆ ಎಂದು ಶ್ವೇತಭವನ ವಿವರಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....