ವಿಶ್ವಸಂಸ್ಥೆ ವರದಿ | ತೀವ್ರ ಬಡತನದಲ್ಲಿ ಬೇಯುತ್ತಿದ್ದಾರೆ 110 ಕೋಟಿ ಜನರು; ಭಾರತದಲ್ಲೇ ಹೆಚ್ಚು ಬಡವರು

Date:

ವಿಶ್ವಸಂಸ್ಥೆ (ಯುಎನ್‌) ತನ್ನ ನೂತನ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ. ಜಗತ್ತಿನ ಎಲ್ಲ ದೇಶಗಳಲ್ಲಿಯೂ ಒಟ್ಟು 110 ಕೋಟಿ ಜನರು ತೀವ್ರ ಬಡತನದಲ್ಲಿ ವಾಸುತ್ತಿದ್ದಾರೆ. ಅವರಲ್ಲಿ, ಅರ್ಧದಷ್ಟು ಜನರು ತಮ್ಮ ಬದುಕಿನ ಬವಣೆಗಾಗಿ ಸಂಘರ್ಷ ಅನುಭಿವಿಸುತ್ತಿದ್ದಾರೆ. ಈ ಒಟ್ಟು ಬಡವರಲ್ಲಿ ಸರಿಸುಮಾರು 22% ಬಡವರು ಭಾರತದಲ್ಲಿದ್ದಾರೆ.

ಯುಎನ್ ಡೆವಲಪ್‌ಮೆಂಟ್ ಪ್ರೋಗ್ರಾಂ (ಯುಎನ್‌ಡಿಪಿ) ಗುರುವಾರ ಪ್ರಕಟಿಸಿದ ಸೂಚ್ಯಂಕದ ಪ್ರಕಾರ, ‘ಬಹು ಆಯಾಮದ ಬಡತನ’ದ ಎಲ್ಲ ಸೂಚಕಗಳಲ್ಲಿ ಯುದ್ಧದ ಬಿಕ್ಕಟ್ಟನ್ನು ಎದುರಿಸುತ್ತಿರುವ ದೇಶಗಳ ಜನರು ಹೆಚ್ಚು ಅಭಾವವನ್ನು ಅನುಭವಿಸುತ್ತಿವೆ. ಎಲ್ಲ ದೇಶಗಳಲ್ಲಿಯೂ ಪೋಷಣೆ, ವಿದ್ಯುತ್ ಸಂಪರ್ಕ, ನೀರು ಹಾಗೂ ನೈರ್ಮಲ್ಯದಂತಹ ಮೂಲಭೂತ ಸೌಲಭ್ಯಗಳ ವಿಚಾರದಲ್ಲಿ ಹೆಚ್ಚು ತೀವ್ರವಾದ ಅಸಮಾನತೆ ಎದ್ದುಕಾಣುತ್ತಿದೆ.

ಬಹುಆಯಾಮದ ಬಡತನ ಸೂಚ್ಯಂಕದ ಪ್ರಕಾರ, 112 ದೇಶಗಳ 630 ಕೋಟಿ ಜನರಲ್ಲಿ 110 ಕೋಟಿ ಜನರು ತೀವ್ರ ಬಡತನವನ್ನು ಎದುರಿಸುತ್ತಿದ್ದಾರೆ. ಅವರಲ್ಲಿ, 45.5 ಕೋಟಿ ಜನರು ತಮ್ಮ ಬದುಕು, ಬವಣೆ, ಜೀವನ ದೂಡುವುದಕ್ಕೂ ಸಂಘರ್ಷ ನಡೆಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಇತ್ತೀಚಿನ ವರ್ಷಗಳಲ್ಲಿ ಯುದ್ಧ, ಘರ್ಷಣೆಗಳು ತೀವ್ರಗೊಂಡಿವೆ ಮತ್ತು ಹೆಚ್ಚುತ್ತಿವೆ. ಸಾವು-ನೋವುಗಳಿಂದ ಬಡತನದ ಪ್ರಮಾಣವು ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ಪರಿಣಾಮ, ಲಕ್ಷಾಂತರ ಜನರನ್ನು ಸ್ಥಳಾಂತರವಾಗುತ್ತಿದ್ದಾರೆ. ಅವರ ಜೀವನ ಮತ್ತು ಜೀವನೋಪಾಯಗಳಿಗೆ ವ್ಯಾಪಕ ಸಮಸ್ಯೆ, ಅಡ್ಡಿ-ಆತಂಕಗಳು ಎದುರಾಗುತ್ತಿವೆ” ಎಂದು ಯುಎನ್‌ಡಿಪಿ ತಂಡದಲ್ಲಿದ್ದ ಅಚಿಮ್ ಸ್ಟೈನರ್ ಹೇಳಿದ್ದಾರೆ.

18 ವರ್ಷದೊಳಗಿನ ಸುಮಾರು 58.4 ಕೋಟಿ ಅಪ್ರಾಪ್ತರು ತೀವ್ರ ಬಡತನದೊಳಗೆ ಬೆಳೆಯುತ್ತಿದ್ದಾರೆ. ಇದು ಪ್ರಪಂಚದಾದ್ಯಂತ ಇರುವ 27.9% ಮಕ್ಕಳ ಪೈಕಿ, 13.5% ಮಕ್ಕಳು ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ ಎಂದು ಸಮೀಕ್ಷೆ ಸೂಚಿಸುತ್ತಿದೆ. ಅಲ್ಲದೆ, ಯುದ್ಧ ಪೀಡಿತ ರಾಷ್ಟ್ರಗಳಲ್ಲಿ ಮಕ್ಕಳ ಮರಣ ಪ್ರಮಾಣವು 8% ಇದ್ದು, ಶಾಂತಿಯುತ ದೇಶಗಳಲ್ಲಿ 1.1% ಇದೆ.

ವಿಶ್ವದ ಬಡವರ ಪೈಕಿ 83.2% ಜನರು ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ (ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ರಾಷ್ಟ್ರಗಳು) ಭಾಗಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಗಮನ ಸೆಳೆದಿದೆ.

ಈ ವರದಿ ಓದಿದ್ದೀರಾ?: ಭಾರತ ಹಸಿವು ಮುಕ್ತ ಆಗೋದು ಯಾವಾಗ ಮೋದಿಜೀ?

‘ಆಕ್ಸ್‌ಫರ್ಡ್ ಪಾವರ್ಟಿ ಮತ್ತು ಹ್ಯೂಮನ್ ಡೆವಲಪ್‌ಮೆಂಟ್ ಇನಿಶಿಯೇಟಿವ್’ (OPHI) ಜೊತೆಗೂಡಿ ‘ಬಹು ಆಯಾಮದ ಬಡತನ’ ಮಟ್ಟವನ್ನು ಯುಎನ್‌ಡಿಪಿ ನಿರ್ಣಯಿಸಿದೆ. ಮೂಲ ಸೌಕರ್ಯಗಳಾದ ವಸತಿ, ನೈರ್ಮಲ್ಯ, ವಿದ್ಯುತ್, ಅಡುಗೆ ಇಂಧನ, ಪೋಷಣೆ ಹಾಗೂ ಮಕ್ಕಳ ಶಾಲಾ ಹಾಜರಾತಿಯಂತಹ ಹಲವಾರು ಸೂಚಕಗಳನ್ನು ಬಳಸಿಕೊಂಡು ಸಮೀಕ್ಷಾ ವರದಿಯನ್ನು ಸಿದ್ದಪಡಿಸಿದೆ.

“ಸಂಘರ್ಷ ಪೀಡಿತ ದೇಶಗಳಲ್ಲಿನ ಬಡವರು ಮೂಲಭೂತ ಅಗತ್ಯಗಳಿಗಾಗಿ ಹೆಚ್ಚು ಹೋರಾಟವು ನಡೆಸುವಂತಾಗಿದೆ. ಅಲ್ಲದೆ, ಅವರು ಹತಾಶರಾಗಿದ್ದಾರೆ” ಯುಎನ್‌ಡಿಪಿ ಮುಖ್ಯ ಅಂಕಿಅಂಶಶಾಸ್ತ್ರಜ್ಞ ಯಾಂಚುನ್ ಜಾಂಗ್ ಹೇಳಿದ್ದಾರೆ.

ಭಾರತದ 140 ಕೋಟಿ ಜನಸಂಖ್ಯೆಯ ಪೈಕಿ 23.4 ಕೋಟಿ ಜನರು ಅಂತ್ಯಂತ ಬಡತನದಲ್ಲಿ ಬದುಕುತ್ತಿದ್ದಾರೆ. ಅಂದರೆ, ಇಡೀ ಪ್ರಪಂಚದ ಒಟ್ಟು ಬಡವರಲ್ಲಿ 22% ಬಡವರು ಭಾರತದಲ್ಲಿಯೇ ಇದ್ದಾರೆ. ನಂತರದ ಸ್ಥಾನಗಳಲ್ಲಿ ಪಾಕಿಸ್ತಾನ, ಇಥಿಯೋಪಿಯಾ, ನೈಜೀರಿಯಾ ಹಾಗೂ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯಗಳಿವೆ. ಈ ಐದು ದೇಶಗಳಲ್ಲಿ ಸುಮಾರು 45 ಕೋಟಿ ಬಡವರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...