ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದಿರುವ ಅಮೆರಿಕ, ವೆನೆಜುವೆಲಾದಲ್ಲಿ ತನ್ನ ಸರ್ವಾಧಿಕಾರ ನಡೆಸಲು ಮುಂದಾಗಿದೆ. ಅಲ್ಲಿನ ತೈಲ ಗಣಿಗಾರಿಕೆಗೆ ಇಳಿದದೆ. ಮಾತ್ರವಲ್ಲದೆ, ವೆಜೆಜುವೆಲಾದಲ್ಲಿ ಹೊರತೆಗೆಯುವ ತೈಲವನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಸಿದ್ದವಾಗಿದೆ ಎಂದು ವರದಿಯಾಗಿದೆ.
ರಷ್ಯಾದಿಂದ ಕಚ್ಛಾ ತೈಲ ಖರೀದಿಯನ್ನು ನಿಲ್ಲಿಸುವಂತೆ ನಿರಂತರವಾಗಿ ಅಮೆರಿಕ ಒತ್ತಡ ಹೇಳುತ್ತಿದೆ. ಸುಂಕ ಏರಿಕೆ/ಹೇರಿಕೆಯ ಬೆದರಿಕೆಯನ್ನೂ ಹಾಕುತ್ತಿದೆ. ಇದೀಗ, ವೆನೆಜುವೆಲಾ ಮೇಲೆ ಆಕ್ರಮಣ ನಡೆಸಿ, ಅಲ್ಲಿನ ತೈಲವನ್ನು ಹೊತ್ತೋಯ್ದು, ಮಾರಾಟ ಮಾಡಲು ಅಮೆರಿಕ ಮುಂದಾಗಿದೆ. ಭಾರತದೊಂದಿಗೂ ತೈಲ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಿದ್ದುವಿದೆ ಎಂದು ವರದಿಯಾಗಿದೆ.
ಯುಎಸ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ವೆನೆಜುವೆಲಾದ ತೈಲವನ್ನು ಖರೀದಿಸಲು ಭಾರತವು ಮತ್ತೆ ಪ್ರವೇಶ ಪಡೆಯಬಹುದು. ವೆನೆಜುವೆಲಾದ ತೈಲ ಖರೀದಿ ಮಾಡಲು ಭಾರತಕ್ಕೆ ಅಮೆರಿಕ ಅವಕಾಶ ನೀಡುತ್ತದೆ ಎಂದು ಹೇಳಿರುವದಾಗಿ ವರದಿಗಳು ಉಲ್ಲೇಖಿಸಿವೆ.
ಗಮನಾರ್ಹವಾಗಿ, ಮೋದಿ ಅವರ ಅತ್ಯಾಪ್ತ, ಭಾರತದ ಅಗ್ರ ಶ್ರೀಮಂತ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆ ಕೋರಿದೆ ಎಂದೂ ವರದಿಗಳು ವಿವರಿಸಿವೆ.




