ವೆನಿಜುವೆಲಾ ತೈಲ ಟ್ಯಾಂಕರ್ ವಶಪಡಿಸಿಕೊಂಡು ಬೆದರಿಕೆ ಹಾಕಿದ ಟ್ರಂಪ್

Date:

ವೆನಿಜುವೆಲಾ ಕರಾವಳಿಯಲ್ಲಿ ತೈಲ ಟ್ಯಾಂಕರ್ ಅನ್ನು ಅಮೆರಿಕದ ಸೇನಾಪಡೆ ವಶಪಡಿಸಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದರ ಮೂಲಕ ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಆಡಳಿತದ ಮೇಲೆ ಒತ್ತಡ ಹೆಚ್ಚಿಸಲಾಗಿದೆ.

ಶ್ವೇತ ಭವನದಲ್ಲಿ ಮಾತನಾಡಿದ ಟ್ರಂಪ್ “ನಾವು ವೆನಿಜುವೆಲಾ ಕರಾವಳಿಯಲ್ಲಿ ಒಂದು ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದ್ದೇವೆ. ನಾವು ಹಿಂದೆ ವಶಪಡಿಸಿಕೊಂಡಿದ್ದಕ್ಕಿಂತ ದೊಡ್ಡದಾದ ಟ್ಯಾಂಕರ್ ಇದಾಗಿದೆ” ಎಂದು ಹೇಳಿದ್ದಾರೆ. ಅಮೆರಿಕದ ಕರಾವಳಿ ರಕ್ಷಣಾ ಪಡೆ ಹಾಗೂ ನೌಕಪಡೆಯು ಈ ಕಾರ್ಯಚರಣೆಯನ್ನು ನಡೆಸಿದೆ. ಅಮೆರಿಕ ಬಿಡುಗಡೆ ಮಾಡಿದ ವಿಡಿಯೋಗಳಲ್ಲಿ ಸಶಸ್ತ್ರ ಸೈನಿಕರು ವಿಮಾನದ ಮೂಲಕ ಹಡಗಿನ ಮೇಲೆ ಇಳಿದು, ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಳ್ಳುತ್ತಿರುವುದು ಕಾಣುತ್ತದೆ.

ವೆನಿಜುವೆಲಾ ಆಡಳಿತವು ಅಮೆರಿಕಕ್ಕೆ ಮಾದಕವಸ್ತುಗಳನ್ನು ಪೂರೈಸುತ್ತಿದೆ ಎಂದು ಆರೋಪಿಸಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜೊತೆಗೆ ಅಧ್ಯಕ್ಷ ಮಡುರೊಗೆ ಎದರಿಸುವ ಪ್ರಯತ್ನ ಇದಾಗಿದೆ. ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳಿರುವ ನೆಲಗಳಲ್ಲಿ ವೆನಿಜವೆಲಾ ಪ್ರಮುಖವಾದದ್ದು. ಈ ಬೆದರಿಕೆಯ ಮೂಲಕ ಅಮೆರಿಕವು ವೆನಿಜುವೆಲಾದಲ್ಲಿನ ಸಂಪನ್ಮೂಲವನ್ನು ತನ್ನ ವಶಕ್ಕೆ ಪಡೆಯುವ ಪ್ರಯತ್ನ ನಡೆಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವೆನಿಜುವೆಲಾದ ರಾಜಧಾನಿಯಾದ ಕ್ಯಾರಕಾಸ್ ಈ ಕ್ರಮವನ್ನು ತೀವ್ರವಾಗಿ ಖಂಡಿಸಿತು. ಇದನ್ನು “ಅಂತರರಾಷ್ಟ್ರೀಯ ಕಡಲ್ಗಳ್ಳತನ” ಎಂದು ಕರೆದಿದೆ.

ಒಂದು ದಿನದ ಹಿಂದೆಯಷ್ಟೇ ವೆನಿಜುವೆಲಾ ಕೊಲ್ಲಿಯ ಮೇಲೆ ಅಮೆರಿಕದ ಯುದ್ಧ ವಿಮಾನಗಳು ಹಾರಾಟ ನಡೆಸಿರುವುದು ಮತ್ತಷ್ಟು ಉದ್ವಿಗ್ನ ಬೆಳವಣಿಗೆಗೆ ಸಾಕ್ಷಿಯಾಗಿತ್ತು. ಈ ಪ್ರದೇಶದಲ್ಲಿ ಅಮೆರಿಕ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸಿದ್ದು, ಕೆರೆಬಿಯನ್ ಸಮುದ್ರ ಹಾಗೂ ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಸರಣಿ ದಾಳಿಯನ್ನು ನಡಸುತ್ತಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ವೆನಿಜುವೆಲಾ ಮತ್ತು ಇರಾನ್‌ನಿಂದ ಅನುಮೋದಿತ ತೈಲವನ್ನು ಸಾಗಿಸಲು ಬಳಸಲಾಗುವ ಕಚ್ಚಾ ಟ್ಯಾಂಕರ್ ಅನ್ನು ವಶಪಡಿಸಿಕೊಳ್ಳುವ ವಾರಂಟ್ ಅನ್ನು ಎಫ್‌ಬಿಐ, ಹೋಮ್‌ಲ್ಯಾಂಡ್ ಸೆಕ್ಯುರಿಟಿ ಮತ್ತು ಯುನೈಟೆಡ್ ಸ್ಟೇಟ್ಸ್ ಕೋಸ್ಟ್ ಗಾರ್ಡ್, ಯುಎಸ್ ಮಿಲಿಟರಿಯ ಬೆಂಬಲದೊಂದಿಗೆ ತೈಲ ಟ್ಯಾಂಕರ್ ವಶಪಡಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯುಎಸ್ ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕ್ಯಾರಕಾಸ್‌ನಲ್ಲಿರುವ ಇರಾನ್ ರಾಯಭಾರ ಕಚೇರಿಯು ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪೋಸ್ಟ್‌ನಲ್ಲಿ ಈ ಕ್ರಮವನ್ನು “ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಮಾನದಂಡಗಳ ಗಂಭೀರ ಉಲ್ಲಂಘನೆ” ಎಂದು ಖಂಡಿಸಿದೆ.

ವಶಪಡಿಸಿಕೊಂಡ ಸುದ್ದಿಗಳು ಬರುತ್ತಿದ್ದಂತೆ ಬ್ರೆಂಟ್ ಕಚ್ಚಾ ತೈಲದ ಬೆಲೆಗಳು ಏರಿಕೆಯಾಗಿದೆ. ಇದರಿಂದ ವೆನಿಜುವೆಲಾದ ತೈಲ ರಫ್ತಿಗೆ ಮತ್ತಷ್ಟು ಅಡ್ಡಿಯಾಗಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. ಇದರ ನಡುವೆಯೇ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಡುರೊ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನಿಜುವೆಲಾ ಅಧ್ಯಕ್ಷ ಮಡುರೊ ಅವರನ್ನು ಅಧಿಕಾರದಿಂದ ಹೊರಹೋಗುವಂತೆ ಬೆದರಿಕೆ ಹಾಕಿದ್ದಾರೆ. ಅಮೆರಿಕಕ್ಕೆ ಮಾದಕವಸ್ತುಗಳನ್ನು ವೆನಿಜುವೆಲಾ ಅಕ್ರಮವಾಗಿ ಸಾಗುತ್ತಿದೆ ಎಂದು ಟ್ರಂಪ್ ಆರೋಪ ಮಾಡಿದ್ದಾರೆ.

ಆದರೆ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರು ತಮ್ಮ ಸರ್ಕಾರವನ್ನು ಮಾದಕವಸ್ತು ಕಳ್ಳಸಾಗಣೆ ಮತ್ತು ಅಭದ್ರತೆಗೆ ಸಂಬಂಧಿಸಿದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ವೆನಿಜುವೆಲಾ ಬಲವಾದ ಸಾರ್ವಜನಿಕ ಸುರಕ್ಷತೆಯನ್ನು ಹೊಂದಿದೆ. ಆದರೆ ಅಮೆರಿಕ ನಮ್ಮ ದೇಶದ ನೈಸರ್ಗಿಕ ಸಂಪನ್ಮೂಲಗಳಿಗಾಗಿ ಗುರಿಯಾಗಿಸುತ್ತಿದೆ ಎಂದು ಹೇಳಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವೆನಿಜುವೆಲಾದ ಸರ್ಕಾರವು ಲಂಡನ್‌ನಲ್ಲಿರುವ ಅಂತರರಾಷ್ಟ್ರೀಯ ಕಡಲ ಸಂಸ್ಥೆ (IMO) ಗೆ ಅಮೆರಿಕದ ವಿರುದ್ಧ ದೂರು ದಾಖಲಿಸಿದೆ.

ಟ್ರಂಪ್ ನೀತಿ ಸರಿಯೇ?

ಡೊನಾಲ್ಡ್ ಟ್ರಂಪ್ ವೆನಿಜುವೆಲಾದ ಮೇಲೆ ಆಸಕ್ತಿ ಹೊಂದಲು ನೈಸರ್ಗಿಕ ಸಂಪತ್ತಾದ ಕಚ್ಚಾ ತೈಲವೇ ಮೊದಲ ಕಾರಣ. 2023 ರ ಹೊತ್ತಿಗೆ ಅಂದಾಜು 303 ಬಿಲಿಯನ್ ಬ್ಯಾರೆಲ್‌ಗಳು ಎಂದು ಅಂದಾಜಿಸಲಾಗಿದೆ. ಜಗತ್ತಿನ ಅತಿದೊಡ್ಡ ತೈಲ ನಿಕ್ಷೇಪಗಳಿಗೆ ವೆನಿಜುವೆಲಾ ಪ್ರಮುಖವಾದ ನೆಲೆಯಾಗಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಪ್ರತಿದಿನ ಕನಿಷ್ಠ 1 ಮಿಲಿಯನ್ ಬ್ಯಾರಲ್ ನಷ್ಟು ತೈಲದಷ್ಟು ಹೊರತೆಗೆಯುತ್ತದೆ.

ದಕ್ಷಿಣ ಅಮೆರಿಕದಲ್ಲಿರುವ ವೆನಿಜುವೆಲಾದಲ್ಲಿರುವ ನೈಸರ್ಗಿಕ ಸಂಪತ್ತಿನ ಮೇಲೆ ತನ್ನ ಸಂಪೂರ್ಣ ಅಧಿಕಾರವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಟ್ರಂಪ್ ಹೀಗೆ ಟ್ಯಾಂಕರ್ ಗಳನ್ನು ವಶಪಡಿಸಿಕೊಂಡಾಗಿಯೂ ನೇರವಾಗಿ ಬೆದರಿಕೆ ಹಾಕಿದ್ದು. ಇಲ್ಲಿಯವರೆಗೂ ವಶಪಡಿಸಿಕೊಂಡ ಟ್ಯಾಂಕರ್‌ಗಳಿಗಿಂತ ಇದು ದೊಡ್ಡದೆಂದು ಹೇಳಿದ್ದು, ಯಾರಿಗೂ ಹೆದರುವುದಿಲ್ಲ ಎಂಬ ಮಾತನ್ನು ಸೂಚಿಸುತ್ತದೆ.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...