ʼನಾವು ಒಳ್ಳೆಯ ದಿನಗಳ ನಿರೀಕ್ಷಿಸುತ್ತಲೇ ಕೆಟ್ಟ ಗಳಿಗೆಗೂ ತಯಾರಿರಬೇಕುʼ: ಶ್ರೀಲಂಕಾ

Date:

ಶ್ರೀಲಂಕಾ ದೇಶದ ಎಲ್ಲಾ ಸಾರ್ವಜನಿಕ ಸಂಸ್ಥೆಗಳಿಗೂ ಬುಧವಾರ ಸಾರ್ವತ್ರಿಕ ರಜೆ ಘೋಷಿಸಿದೆ. ಅಮೆರಿಕಾ ಇಸ್ರೇಲ್‌ ಇರಾನ್‌ನ ವಿರುದ್ಧ ಹೂಡಿರುವ ಯುದ್ಧದಿಂದ ಸಂಭವಿಸಿರುವ ಇಂಧನ ಬಿಕ್ಕಟ್ಟಿನ ಬಿಸಿ ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾ ಈ ನಿರ್ಧಾರಕ್ಕೆ ಬರಲು ಕಾರಣ.

ಮಧ್ಯ ಪ್ರಾಚ್ಯ ಸಂಘರ್ಷದ ಹಿನ್ನೆಲೆ ಏಷ್ಯಾದ ಬಹುತೇಕ ರಾಷ್ಟ್ರಗಳು ಇಂಧನ ವ್ಯತ್ಯಯ ಸರಿದೂಗಿಸಲು ಹಲವು ತುರ್ತು ಕ್ರಮಗಳನ್ನು ಅನುಷ್ಟಾನಗೊಳಿಸಿವೆ. ಏಷ್ಯಾ ರಾಷ್ಟ್ರಗಳಿಗೆ ಬೇಕಾದ ತೈಲ ಬ್ಯಾರೆಲ್‌ಗಳು ಹಾರ್ಮುಜ್‌ ಜಲಸಂಧಿಯ ಮೂಲಕವೇ ಸಾಗಾಣೆಯಾಗುತ್ತಿತ್ತು. ಇರಾನ್‌ ಈ ಜಲಮಾರ್ಗಕ್ಕೆ ದಿಗ್ಭಂದನ ವಿಧಿಸಿದ ನಂತರ ಹಾರ್ಮುಜ್‌ ಮೂಲಕ ಇಂಧನ ಆಮದು ಮಾಡಿಕೊಳ್ಳುತ್ತಿದ್ದ ರಾಷ್ಟ್ರಗಳು ತೀವ್ರ ಸಂಕಷ್ಟಕ್ಕೆ ಒಳಗಾದವು.

ಈ ಸಮಸ್ಯೆಗೆ ಪರ್ಯಾಯ ಹುಡುಕುವ ದಿಸೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ್‌ ದಿಸ್ಸನಾಯಕೆ ಮೇಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮಾತನಾಡಿದ ಅವರು ಕೆಟ್ಟ ದಿನಗಳಿಗೆ ತಯಾರಿ ನಡೆಸುತ್ತಲೇ ಒಳ್ಳೆಯ ದಿನಗಳ ಕುರಿತು ನಿರೀಕ್ಷೆ ಇಟ್ಟುಕೊಳ್ಳಬೇಕು ಎಂದಿದ್ದಾರೆ. ಸಭೆಯಲ್ಲಿ ಪ್ರತಿ ಬುಧವಾರ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಇಂಧನ ಉಳಿತಾಯದ ದೃಷ್ಟಿಯಿಂದ ರಜೆ ಘೋಷಿಸಲಾಗುವುದು ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Anura Kumara Dissanaya 1

ಏಷ್ಯಾ ದೇಶಗಳು ಶೇಕಡ 90 ರಷ್ಟು ತೈಲ ಆಮದನ್ನು ಹಾರ್ಮುಜ್‌ ಜಲಮಾರ್ಗದ ಮುಖೇನ ಮಾಡಿಕೊಳ್ಳುತ್ತಿದ್ದವು. ಜಗತ್ತಿನ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಪ್ರದೇಶವು ಇದಾಗಿತ್ತು.

ವಾರದಲ್ಲಿ ನಾಲ್ಕು ದಿನ ಕೆಲಸ: ತೈಲ ಬಿಕ್ಕಟ್ಟಿನ ಪರಿಣಾಮದಿಂದ ಲಂಕಾದ ಉದ್ಯೋಗವಲಯದಲ್ಲಿ ನಾಲ್ಕು ದಿನ ಕೆಲಸ, ಸರ್ಕಾರಿ ವಲಯಗಳಂತೆ ಖಾಸಗಿ ವಲಯಗಳಲ್ಲೂ ಈ ನಿಯಮ.

ಇಂಧನ ಕೋಟಾ ವಿಸ್ತರಣೆ: ಸಾರ್ವಜನಿಕ ಸಾರಿಗೆ ವಾಹನಗಳಿಗೆ (ಬಸ್ ಇತ್ಯಾದಿ) ವಾರಕ್ಕೆ ಗರಿಷ್ಠ 200 ಲೀಟರ್ ಇಂಧನವನ್ನು ನಿಗದಿಪಡಿಸಲಾಗಿದೆ.

  • ಬೆಲೆ ಏರಿಕೆ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ, ಶ್ರೀಲಂಕಾದಲ್ಲಿ ಇಂಧನ ಮತ್ತು ಅಡುಗೆ ಅನಿಲದ (LPG) ಬೆಲೆಯನ್ನು ಸುಮಾರು 8% ರಷ್ಟು ಹೆಚ್ಚಿಸಲಾಗಿದೆ.
  • ತುರ್ತು ಆಮದು: ಕಲ್ಲಿದ್ದಲು ಮತ್ತು ಇಂಧನದ ನಿರಂತರ ಪೂರೈಕೆಗಾಗಿ ಶ್ರೀಲಂಕಾ ಸರ್ಕಾರವು ಭಾರತ ಮತ್ತು ರಷ್ಯಾದೊಂದಿಗೆ ತುರ್ತು ಮಾತುಕತೆ ನಡೆಸುತ್ತಿದೆ.
  • ಸದ್ಯಕ್ಕೆ ಲಂಕಾದಲ್ಲಿರುವ ಇಂಧನ ದಾಸ್ತಾನು ಕೇವಲ 6 ವಾರಗಳಿಗೆ ಮಾತ್ರ ಸಾಕಾಗಬಹುದು ಎಂದು ಅಂದಾಜಿಸಲಾಗಿದೆ.

ಉಳಿದ ಏಷ್ಯಾ ರಾಷ್ಟ್ರಗಳು ಈ ಬಿಕ್ಕಟ್ಟನ್ನು ನಿಭಾಯಿಸಲು ಯಾವ ಕ್ರಮಗಳನ್ನು ಕೈಗೊಂಡಿವೆ?

  • ಥೈಲ್ಯಾಂಡ್‌ ತನ್ನ ದೇಶದ ಪ್ರಜೆಗಳಿಗೆ ಗಿಡ್ಡ ತೋಳೀನ  ಉಡುಪು ಧರಿಸಲು ಹೇಳಿದೆ, ಇದರಿಂದ ಹವಾ ನಿಯಂತ್ರಕಗಳ ಮೇಲೆ ಅವಲಂಬಿತರಾಗುವುದನ್ನು ಕಡಿ ಮಾಡಬಹುದು ಎನ್ನುವುದು ಥೈಲಾಂಡ್‌ ಸರ್ಕಾರದ ಆಲೋಚನೆ.
  • ಮಯನ್ಮಾರ್‌ ಖಾಸಗಿ ವಾಹನಗಳನ್ನು ಪರ್ಯಾಯ ದಿನಗಳಲ್ಲಿ ಬಳಸುವುವಂತೆ ಆದೇಶಿಸಲಾಗಿದೆ.ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಲು ವಾಹನ ಪರವಾನಗಿ, ಹಾಗೂ ಗಾಡಿ ಸಂಖ್ಯೆಯನ್ನು ಪರಿಶೀಲಿಸಲಾಗುತ್ತಿದೆ.
  • ಬಾಂಗ್ಲಾದೇಶವು ವಿಶ್ವವಿದ್ಯಾಲಯಗಳ ಬಾಗಿಲು ಮುಚ್ಚಿಸಿ ರಂಜಾನ್‌ ರಜೆಯನ್ನು ಘೋಷಿಸಿದೆ. ಜೊತೆಗೆ ಯೋಜಿತ ಬಂದ್‌ ರೂಪಿಸಿದೆ .
  • ಫಿಲಿಪೈನ್ಸ್‌ ರಾಷ್ಟ್ರದ ಹಲವು ಕಡೆಗಳಲ್ಲಿ ದೀನನಿತ್ಯ ಕಚೇರಿಗೆ ಹೋಗುವ ಬದಲು ವಾರದಲ್ಲಿ ಒಂದು ದಿನ ವರ್ಕ್‌ ಫ್ರಂ ಹೋಮ್‌ ತೆಗೆದು ಕೊಳ್ಳೂವಂತೆ ಸೂಚನೆ ನೀಡಿದೆ. ವಿನಾಕಾರಣ ಪ್ರಯಾಣಿಸುವುದನ್ನು ಅಧ್ಯಕ್ಷ ಮಾರ್ಕಸ್‌ ನಿರ್ಬಂಧಿಸಿದ್ದಾರೆ. ಜೊತೆಗೆ  ಫಿಲಿಫೈನ್ಸ್‌ನ ಮೀನುಗರು ರೈತರು ಹಾಗೂ ತ್ರಿಚಕ್ರ ವಾಹನ ಸವಾರರಿಗೆ ನೆರವಾಗಲೆಂದು 3000 ದಿಂದ 5000 ಪೆಸೊಸ್‌( ಫಿಲಿಪೈನ್‌ ಕರೆನ್ಸಿ) ಹಣವನ್ನು ನೀಡಲು ಮುಂದಾಗಿದೆ.
  • ವಿಯೆಟ್ನಾಂ ತನ್ನ ನಾಗರಿಕರನ್ನು ಆದಷ್ಟು ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದು ಅಗತ್ಯ ಕೆಲಸಗಳಿಗೆ ಸಾರ್ವಜನಿಕ ಸಾರಿಗೆ ಬಳಸುವಂತೆ ಆದೇಶಿಸಿದೆ. ಆದಷ್ಟು ಖಾಸಗಿ ವಾಹನಗಳನ್ನು ಬಳಸದಿರುವಂತೆ ಸೂಚನೆ ನೀಡಿದೆ.
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...